ಬಾಬ್ರಿ ಮಸೀದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಾಬ್ರಿ ಮಸೀದಿ
ಬಾಬ್ರಿ ಮಸೀದಿ

ಬಾಬ್ರಿ ಮಸೀದಿಯ ಒಂದು ನೋಟ

ನಿರ್ದೇಶಾಂಕಗಳು: 26°47′44″N 82°11′40″E / 26.7956, 82.1945ನಿರ್ದೇಶಾಂಕಗಳು: 26°47′44″N 82°11′40″E / 26.7956, 82.1945
ಸ್ಥಳ ಅಯೋಧ್ಯ , ಭಾರತ
ಸ್ಥಾಪನೆ Constructed - 1527
Destroyed - 1992
ವಾಸ್ತುಶಿಲ್ಪಿದ ಮಾಹಿತಿ
ಶೈಲಿ ತೊಘಲಕ್

ಅಯೋಧ್ಯ ಯಲ್ಲಿ ಬಾಬರನು ಬಾಬ್ರಿ ಮಸ್ಜಿದ್ ಅನ್ನು ನಿರ್ಮಿಸುವ ನಂಬಿಕೆ ಹೊಂದಿದ್ದನು. ಆ ಸ್ಥಳದಲ್ಲಿಯೇ ದೇವಸ್ಥಾನ ಇದ್ದಿದ್ದು ಹಿಂದೂ ಮತ್ತು ಮುಸ್ಲಿಮರ ಮನಸ್ತಾಪಕ್ಕೆ ಕಾರಣವಾಗಿದೆ. ವರದಿಗಳು ಹೇಳುವಂತೆ , ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. [ಉಲ್ಲೇಖದ ಅಗತ್ಯವಿದೆ]ಮಸೀದಯನ್ನು ೧೮೫೦ ರ ಮಧ್ಯದ ಸುಮಾರಿಗೆ ಮುಚ್ಚಲಾಗಿದೆ.(ಹಿಂದೂಗಳ ಪ್ರಾರ್ಥನೆ ಈ ದಿನದವರೆಗೂ ಮುಂದುವರಿದಿದೆ.)ಕೋಮು ಗಲಭೆಗೆ ಹಾಗು ಅಲ್ಲಹಾಬಾದ್ ಹೈಕೋರ್ಟ್ ನ ತೀರ್ಮಾನ ತಡೆಯಾಗಿ ಉಳಿದಿರುವುದರಿಂದ, ಮಸೀದಿಯನ್ನು ಅಯೋಧ್ಯೆಯಲ್ಲಿ ೬ ನೇ ಡಿಸೆಂಬರ್ ೧೯೯೨ ರಂದು ಕರ ಸೇವಕರು ಭಾರತದ ಎಲ್ಲಾ ಕಡೆಯಿಂದ ಬಂದು ಅವ್ಯವಸ್ಥೆಗೊಳಿಸಿ ನಾಶ ಮಾಡಿರುತ್ತಾರೆ.

ಬಾಬ್ರಿ ಮಸೀದಿಯ ಒಂದು ನೋಟ, ಮೊದಲು ಇದು ಅಯೋಧ್ಯ ಆಗಿದ್ದು, ಹಿಂದೂ ರಾಷ್ಟ್ರೀಯವಾದಿಗಳ ವಿವಾದಕ್ಕೊಳಗಾಗಿತ್ತು. ಬಾಬರನಿಂದ ಮಸೀದಿಯ ನಿರ್ಮಾಣದ ನಂಬಿಕೆ, ಬಾಬರನ ಅಧಿಕಾರ ನಿಯೋಗದಿಂದ.

ಇದೇ ಅಯೋಧ್ಯೆಯಲ್ಲಿ ಐತಿಹಾಸಿಕ ಬಾಬ್ರಿ ಮಸೀದಿ ಇತ್ತು. ಈ ಬಾಬ್ರಿ ಮಸೀದಿಗೆ ಹಲವಾರು ವಿಶೇಷ ಹೆಸರುಗಳಿಂದ ಕರೆಯುತ್ತಾರೆ. ಮಸ್ಜೀದ್-ಇ-ಜನ್ಮಸ್ತಾನ್, ಜಾಮಿ ಮಸೀದಿ ಮತ್ತು ಸೀತಾ ರಸೋಯಿ ಮಸ್ಜೀದ್ ಎಂದು ಹೆಸರುಗಳಿಂದಲೂ ಕರೆಯಲಾಗುತ್ತದೆ. ಆದರೆ, ಪ್ರಸಿದ್ಧಿಗೆ ಬಂದಿದ್ದು ಮಾತ್ರ ಬಾಬ್ರಿ ಮಸೀದಿಯೆಂದು.

ಅಲಹಾಬಾದ್ ಹೈಕೋರ್ಟಿನ ಐತಿಹಾಸಿಕ ತೀರ್ಪು ೩೦.೦೯.೨೦೧೦ರಂದು ಲಖನೌ ಅಲಹಾಬಾದ್ ಹೈಕೋರ್ಟಿ ಐತಿಹಾಸಿಕ ತೀರ್ಪನ್ನುನೀಡಿದೆ, ಅತ್ಯಂತ ಕುತೂಹಲ ಮತ್ತು ಕಾತರದಿಂದ ನಿರೀಕ್ಷಿಸಲಾಗುತ್ತಿದ್ದ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಕುರಿತ ಅಲಹಾಬಾದ್ ಹೈಕೋರ್ಟಿನ ತೀರ್ಪು ಹೊರಬಿದ್ದಿದೆ. ವಿವಾದಿತ ೨.೭ ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ ಹಂಚಿ ಸಾಮಾಜಿಕ ನ್ಯಾಯ ಮೆರೆದಿದೆ.

ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಮತ್ತು ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪನ್ನು ಲಖನೌ ಪೀಠದ ೨೧ನೇ ಕೋಣೆಯಿಂದ ನೀಡಿದೆ [೧]