ಬಬಲಾದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಬಲಾದಿ
ಬಬಲಾದಿ
village
Population
 (೨೦೧೨)
 • Total೨೦೦೦
Websitewww.babaladi.in
ಶ್ರೀ ವೇದಮೂರ್ತಿ ಶಿವಯ್ಯ ಮಹಾಸ್ವಾಮಿಜಿಗಳು, ಬಬಲಾದಿ

ಬಬಲಾದಿ ಒಂದು ಚಿಕ್ಕ ಹಳ್ಳಿ ಹಾಗು ಪುಣ್ಯಕ್ಷೇತ್ರ. ಬಬಲಾದಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ. ಬಬಲಾದಿ ಗ್ರಾಮವು ವಿಜಯಪುರ - ಗಲಗಲಿ ರಾಜ್ಯ ಹೆದ್ದಾರಿ - 55 ರಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 50 ಕಿ. ಮಿ. ದೂರವಿದೆ.

ಇತಿಹಾಸ[ಬದಲಾಯಿಸಿ]

ಕಾಲಜ್ಞಾನದಿಂದಲೇ ಪ್ರಸಿದ್ಧಿ ಪಡೆದಿರುವ ಬಬಲಾದಿ ಮಠ ವಿಶೇಷ ಸಂಪ್ರದಾಯವನ್ನು ಹೊಂದಿದೆ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಜರುಗುವ ಜಾತ್ರೆಗೆ ಚಂದ್ರಗಿರಿ ತಾಯಿಯ ಜಾತ್ರೆಯೆಂದು ಕರೆಯಲಾಗುತ್ತದೆ. ಬಬಲಿ ಎಂಬ ಗಿಡಗಳು ಆವರಿಸಿ ದಟ್ಟ ಅರಣ್ಯಪ್ರದೇಶವಾಗಿದ್ದ ಗ್ರಾಮವು, ಕಾಲಾನಂತರ ಬಬಲಾದಿ ಎಂದು ಕರೆಯಲ್ಪಟ್ಟಿತು. ದಟ್ಟಡವಿಯಲ್ಲಿ ಗೊಲ್ಲರ, ಬೇಟೆಗಾರರ ಉಪಟಳ ಅಧಿಕವಾಗಿತ್ತು. ಇಂಥ ಸಂದರ್ಭದಲ್ಲಿ ಲೋಕಜ್ಞಾನಿ ಸಾರವಾಡದ ಚಿಕ್ಕಪ್ಪಯ್ಯನವರು ಬಬಲಾದಿಗೆ ಆಗಮಿಸಿ ಚಂದ್ರಗಿರಿಯ ಚಂದ್ರಮ್ಮ ತಾಯಿಯನ್ನು ಬಬಲಾದಿಗೆ ಕರೆತಂದು ಗೊಲ್ಲರನ್ನು ಸದೆಬಡೆದು ಇಲ್ಲಿಯೇ ಮಠವನ್ನು ಸ್ಥಾಪಿಸಲು ಕಾರಣೀಕರ್ತರಾದರು. ಆದರೆ ಚಿಕ್ಕಪ್ಪಯ್ಯನವರು ತಾವು ಮಠದ ಪೀಠವೇರದೆ ಷಣ್ಮುಖಸಿದ್ಧರನ್ನು ಪೀಠಾಧಿಪತಿಗಳನ್ನಾಗಿ ಮಾಡಿ ಲೋಕ ಸಂಚಾರಿಗಳಾದರು. ಮಠದ ಪರಂಪರೆಯಲ್ಲಿ 10 ಸ್ವಾಮೀಜಿಗಳು ಆಗಿಹೋಗಿದ್ದಾರೆ. ಅವರಲ್ಲಿ 18ನೇ ಶತಮಾನದಲ್ಲಿ ಸದಾಶಿವ ಸ್ವಾಮಿಗಳು ಪವಾಡ ಪುರುಷರಾಗಿ ನೂರಾರು ಲೋಕೋದ್ಧಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಮಠವು ಸರ್ವಧರ್ಮ ಸಮನ್ವಯದ ಕೇಂದ್ರವಾಗಿ ಮಾರ್ಪಟ್ಟಿತು. ಸ್ವಾಮಿಗಳು ಹಸಿರು ರುಮಾಲು, ಬೆಳ್ಳಿ ಕಾಲಡಗಿತೋಡೆ, ಬೆತ್ತ ಹಾಗೂ ಕುದುರೆ ಇವುಗಳನ್ನು ಬಳಕೆ ಮಾಡುವುದು ಮಠದ ಸಂಪ್ರದಾಯ. ಸರ್ವಧರ್ಮ ಸಮನ್ವಯ ಕೇಂದ್ರ: ಜಾತ್ರೆಯಲ್ಲಿ ಮುಸ್ಲಿಮರು ಪಾತೆ ಕೊಡುವುದರೊಂದಿಗೆ ಜಾತ್ರೆ ಪ್ರಾರಂಭವಾಗುತ್ತದೆ. ಮುಂದೆ ಘಟಿಸಬಹುದಾದ ಸಂಗತಿಗಳ ಬಗ್ಗೆ ತಮ್ಮ ನೀತಿಪದಗಳಲ್ಲಿ ಹೇಳಿದ ಚಿಕ್ಕಪ್ಪಯ್ಯನವರ ನುಡಿಗಳನ್ನು ಜನರ ಮಾತಿನಲ್ಲಿ ಈಗಲೂ ಕೇಳಬಹುದು. ಚಂದ್ರಮ್ಮ ತಾಯಿ ಇಲ್ಲಿ ಜೀವಂತ ಸಮಾಧಿಯಾಗಿದ್ದಾಳೆಂಬ ಪ್ರತೀತಿ ಇದೆ. ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ಭಕ್ತರಿಗೆ ಬೇಡಿದ ವರವನ್ನು ದಯಪಾಲಿಸುತ್ತಾಳೆ. ತಾಯಿಯ ಆಶೀರ್ವಾದದಿಂದ ಸದಾಶಿವ ಸ್ವಾಮಿಗಳಿಗೆ ವಾಕ್‌ಸಿದ್ಧಿ ಆಗಿತ್ತು ಎಂಬ ನಂಬಿಕೆಯಿದೆ.

ದೇವಾಲಯದಲ್ಲಿ ಸಿದ್ದರಾಮೇಶ್ವರರು, ಚಂದ್ರಗಿರಿದೇವಿ, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು, ಶಂಕ್ರಯ್ಯ ಸ್ವಾಮಿಗಳು, ಸದಾಶಿವ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು ಹಾಗೂ ಶಿವರುದ್ರಯ್ಯ ಸ್ವಾಮಿಗಳು ಹೀಗೆ 10 ಪವಾಡ ಪುರುಷರ ಗದ್ದುಗೆಗಳು ಸಾಲಾಗಿ ಪೂಜೆಗೊಳ್ಳುತ್ತವೆ. ಒಂದೇ ಸ್ಥಳದಲ್ಲಿ ಸರ್ವ ಸ್ವಾಮಿಗಳ ಮೂರ್ತಿಗಳು ಭಕ್ತರಿಗೆ ದರ್ಶನವಾಗುತ್ತವೆ.

ಅಲ್ಲಿರುವ ಚಂದ್ರಗಿರಿ ದೇವಿ ಮಠದಲ್ಲಿ. ಈ ಮಠದಲ್ಲಿರುವ ತ್ರಿಕಾಲ ಜ್ಞಾನಿ ಚಿಕ್ಕಪ್ಪಯ್ಯ ಮತ್ತು ಸದಾಶಿವ ಮುತ್ಯಾ ಅವರು ಚಂದ್ರಗಿರಿ ದೇವಿಯ ಆರಾಧಕರು. ಈ ಇಬ್ಬರು ಪವಾಡ ಪುರುಷರು ಸೇರಿ ಒಟ್ಟು 10 ಗದ್ದುಗೆಗಳು ಇಲ್ಲಿದ್ದು, ಈ ಗದ್ದುಗೆಗಳ ಮೇಲೆ ಭಕ್ತರು ಮದ್ಯವನ್ನು ಹಾಕುವ ಮೂಲಕ ನೈವೇದ್ಯ ಅರ್ಪಿಸುತ್ತಾರೆ.

ಸಾರವಾಡ ಗ್ರಾಮದಿಂದ ಬಂದ ಚಿಕ್ಕಪ್ಪಯ್ಯ ಇಲ್ಲಿಗೆ ಬಂದು ನೆಲೆಸಿದ್ದರು. ಅಂದು ಈಗಿರುವ ಸಮಾಧಿ ಸ್ಥಳದಲ್ಲೇ ಹಾವು-ಮುಂಗಸಿ, ಇಲಿ-ಬೆಕ್ಕು, ಆಡು-ತೋಳ, ಮೊಲ-ನಾಯಿ ತುಂಬಾ ಅನ್ಯೋನ್ಯವಾಗಿ ಬದುಕಿದ್ದವು. ಸುಮಾರು 400 ವರ್ಷಗಳ ಹಿಂದೆಯೇ ತ್ರಿಕಾಲ ಜ್ಞಾನದ ಬಗ್ಗೆ ಇಲ್ಲಿ ಭವಿಷ್ಯ ಬರೆಯಲಾಗಿತ್ತು. ಇಲ್ಲಿಗೆ ಚಿಕ್ಕಪ್ಪಯ್ಯ ಸ್ವಾಮೀಜಿ ನೆಲಸಿದ ಮೇಲೆ ಅವರ ಬಳಿಕ ಸದಾಶಿವ ಮುತ್ಯಾ ಸೇರಿದಂತೆ ಇತರ ಎಂಟು ಜನ ಸಿದ್ಧಿ ಪುರುಷರು ಬಂದು ನೆಲೆಸಿದ್ದರು. ಈ ಸತ್ಪುರಷರು ಆಡಿದ, ಮಾಡಿದ ಪವಾಡಗಳಿಗೆ ಲೆಕ್ಕವಿಲ್ಲ. ಇವರು ಆಡುವ ಮಾತುಗಳು ನಿಜವಾಗುತ್ತಿದ್ದವು. ಹಾಕುವ ಶಾಪಗಳು ತಟ್ಟುತ್ತಿದ್ದವು.

ಕಾಲಜ್ಞಾನದಿಂದಲೇ ಪ್ರಸಿದ್ಧಿ ಪಡೆದಿರುವ ಬಬಲಾದಿ ಮಠ ವಿಶೇಷ ಸಂಪ್ರದಾಯವನ್ನು ಹೊಂದಿದೆ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಜರುಗುವ ಜಾತ್ರೆಗೆ ಚಂದ್ರಗಿರಿ ತಾಯಿಯ ಜಾತ್ರೆಯೆಂದು ಕರೆಯಲಾಗುತ್ತದೆ. ಬಬಲಿ ಎಂಬ ಗಿಡಗಳು ಆವರಿಸಿ ದಟ್ಟ ಅರಣ್ಯಪ್ರದೇಶವಾಗಿದ್ದ ಗ್ರಾಮವು, ಕಾಲಾನಂತರ ಬಬಲಾದಿ ಎಂದು ಕರೆಯಲ್ಪಟ್ಟಿತು. ದಟ್ಟಡವಿಯಲ್ಲಿ ಗೊಲ್ಲರ, ಬೇಟೆಗಾರರ ಉಪಟಳ ಅಧಿಕವಾಗಿತ್ತು. ಇಂಥ ಸಂದರ್ಭದಲ್ಲಿ ಲೋಕಜ್ಞಾನಿ ಸಾರವಾಡದ ಚಿಕ್ಕಪ್ಪಯ್ಯನವರು ಬಬಲಾದಿಗೆ ಆಗಮಿಸಿ ಚಂದ್ರಗಿರಿಯ ಚಂದ್ರಮ್ಮ ತಾಯಿಯನ್ನು ಬಬಲಾದಿಗೆ ಕರೆತಂದು ಗೊಲ್ಲರನ್ನು ಸದೆಬಡೆದು ಇಲ್ಲಿಯೇ ಮಠವನ್ನು ಸ್ಥಾಪಿಸಲು ಕಾರಣೀಕರ್ತರಾದರು. ಆದರೆ ಚಿಕ್ಕಪ್ಪಯ್ಯನವರು ತಾವು ಮಠದ ಪೀಠವೇರದೆ ಷಣ್ಮುಖಸಿದ್ಧರನ್ನು ಪೀಠಾಧಿಪತಿಗಳನ್ನಾಗಿ ಮಾಡಿ ಲೋಕ ಸಂಚಾರಿಗಳಾದರು. ಮಠದ ಪರಂಪರೆಯಲ್ಲಿ 10 ಸ್ವಾಮೀಜಿಗಳು ಆಗಿಹೋಗಿದ್ದಾರೆ. ಅವರಲ್ಲಿ 18ನೇ ಶತಮಾನದಲ್ಲಿ ಸದಾಶಿವ ಸ್ವಾಮಿಗಳು ಪವಾಡ ಪುರುಷರಾಗಿ ನೂರಾರು ಲೋಕೋದ್ಧಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮಠವು ಸರ್ವಧರ್ಮ ಸಮನ್ವಯದ ಕೇಂದ್ರವಾಗಿ ಮಾರ್ಪಟ್ಟಿತು. ಸ್ವಾಮಿಗಳು ಹಸಿರು ರುಮಾಲು, ಬೆಳ್ಳಿ ಕಾಲಡಗಿತೋಡೆ, ಬೆತ್ತ ಹಾಗೂ ಕುದುರೆ ಇವುಗಳನ್ನು ಬಳಕೆ ಮಾಡುವುದು ಮಠದ ಸಂಪ್ರದಾಯ.[೧]

ಭವಿಷ್ಯವಾಣಿ

ಇವರು ಹೇಳಿದ ಭವಿಷ್ಯಗಳು ಇಂದಿಗೂ ನಿಜವಾಗುತ್ತ ಬಂದಿವೆ. ಮಠದ ಗುರುವನ್ನು ಕೃಷ್ಣಾ ನದಿಯಿಂದ ಮಠವರೆಗೆ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ. ಕೃಷ್ಣಾ ನದಿಯಿಂದ ಮಠದ ವರೆಗೆ ನಾಲ್ಕು ಬಾರಿ ಭವಿಷ್ಯ ಹೇಳಲಾಗುತ್ತದೆ. ಐದನೇ ಬಾರಿ ಮಠದ ಗುರುಮಾತೆಯ ಎದುರು ಶಿಶುಮಗ ಭವಿಷ್ಯ ಹೇಳುತ್ತಾನೆ. ಜಗತ್ತಿನಲ್ಲಿ ಭವಿಷ್ಯದಲ್ಲಿ ನಡೆಯುವ, ಘಟಿಸಬಹುದಾದ ದುರಂತಗಳು, ಮಳೆ, ಬೆಳೆ, ಪ್ರಳಯ ಮತ್ತಿತರ ಸುಖ-ದುಃಖದ ಘಟನೆಗಳನ್ನು ಇಲ್ಲಿ ಹೇಳುವುದು ಗಮನಾರ್ಹವಾಗಿದೆ. ಇಲ್ಲಿ ನುಡಿಯುವ ಭವಿಷ್ಯ ಕರಿ ಕಲ್ಲಿನ ಮೇಲೆ ಬಿಳಿಗೆರೆ ಹೇಳಿದಷ್ಟೇ ನಿಖರವಾಗಿರುತ್ತದೆ. ರೇಡಿಯೋ, ರೈಲು ಬರಲಿವೆ ಎಂದು ಇಲ್ಲಿ ಹಲವಾರು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ.

ಮದ್ಯದ ನೈವೇದ್ಯ

ಇಲ್ಲಿ ಮದ್ಯದ ನೈವೇದ್ಯ ಅರ್ಪಿಸಲೂ ಒಂದು ಕಾರಣವಿದೆ. ಇಲ್ಲಿನ ಸಿದ್ಧಿ ಪುರುಷ ಚಿಕ್ಕಪ್ಪಯ್ಯ ತಮ್ಮ ಸಿದ್ಧಿಗಾಗಿ ಬಿಂದುವಿನ ಪ್ರಮಾಣದಲ್ಲಿ ಮದ್ಯವನ್ನು ಸೇವಿಸಿ ಸಾಧನೆಗೆ ಕುಳಿತುಕೊಳ್ಳುತ್ತಿದ್ದರು. ಆದರೆ, ಕಾಲಾಂತರದಲ್ಲಿ ಇದನ್ನೇ ಪ್ರಮುಖವಾಗಿ ಪರಿಗಣಿಸಿರದ ಭಕ್ತರು ಈ ಗದ್ದುಗೆಗೆ ಮದ್ಯದ ನವೈದ್ಯ ಅರ್ಪಿಸಲಾರಂಭಿಸಿದರು. ಈ ಕುರಿತು ಮಠದ ಆಡಳಿತ ಮಂಡಳಿಯವರು ಎಷ್ಟೇ ತಿಳುವಳಿಕೆ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಮದ್ಯದ ನೈವೇದ್ಯ ಸಾಂಗವಾಗಿ ಮುಂದುವರೆದುಕೊಂಡು ಬಂದಿದೆ.

ಜುಟ್ಟು ಇಲ್ಲದ ತೆಂಗಿನಕಾಯಿ

ಈ ಮಠದಲ್ಲಿ ಇನ್ನೋಂದು ವಿಶಿಷ್ಠ ಸಂಪ್ರದಾಯವಿದೆ. ಬಹುತೇಕ ಎಲ್ಲ ಮಠ ಮಂದಿರಗಳಲ್ಲಿ ಟೆಂಗಿನಕಾಯಿ ಒಡೆಯುವುದು ಸಾಮಾನ್ಯ. ಜನರೂ ಸಾಮಾನ್ಯವಾಗಿ ಜುಟ್ಟು ಇರುವ ತೆಂಗಿನಕಾಯಿಯನ್ನೇ ಒಡೆಯುತ್ತಾರೆ. ಆದರೆ, ಇಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ. ಇಲ್ಲಿ ಜುಟ್ಟು ಇಲ್ಲದ ಬೋಳ ಟೆಂಗಿನಕಾಯಿ ಒಡೆಯುತ್ತಾರೆ. ಇದು ಯಾಕೆ ಗೊತ್ತಾ? ಹೊಳೆ ಬಬಲಾದಿ ಮಠದವರ ಜುಟ್ಟು ಯಾರ ಕೈಗೂ ಸಿಕ್ಕಿಲ್ಲ ಎಂಬುದರ ಪ್ರತೀಕ ಇದಾಗಿದೆ.

ಸರ್ವಧರ್ಮ ಸಮನ್ವಯ ಕೇಂದ್ರ

ಜಾತ್ರೆಯಲ್ಲಿ ಮುಸ್ಲಿಮರು ಪಾತೆ ಕೊಡುವುದರೊಂದಿಗೆ ಜಾತ್ರೆ ಪ್ರಾರಂಭವಾಗುತ್ತದೆ. ಮುಂದೆ ಘಟಿಸಬಹುದಾದ ಸಂಗತಿಗಳ ಬಗ್ಗೆ ತಮ್ಮ ನೀತಿಪದಗಳಲ್ಲಿ ಹೇಳಿದ ಚಿಕ್ಕಪ್ಪಯ್ಯನವರ ನುಡಿಗಳನ್ನು ಜನರ ಮಾತಿನಲ್ಲಿ ಈಗಲೂ ಕೇಳಬಹುದು. ಚಂದ್ರಮ್ಮ ತಾಯಿ ಇಲ್ಲಿ ಜೀವಂತ ಸಮಾಧಿಯಾಗಿದ್ದಾಳೆಂಬ ಪ್ರತೀತಿ ಇದೆ. ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ಭಕ್ತರಿಗೆ ಬೇಡಿದ ವರವನ್ನು ದಯಪಾಲಿಸುತ್ತಾಳೆ. ತಾಯಿಯ ಆಶೀರ್ವಾದದಿಂದ ಸದಾಶಿವ ಸ್ವಾಮಿಗಳಿಗೆ ವಾಕ್‌ಸಿದ್ಧಿ ಆಗಿತ್ತು ಎಂಬ ನಂಬಿಕೆಯಿದೆ. ದೇವಾಲಯದಲ್ಲಿ ಸಿದ್ದರಾಮೇಶ್ವರರು, ಚಂದ್ರಗಿರಿದೇವಿ, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು, ಶಂಕ್ರಯ್ಯ ಸ್ವಾಮಿಗಳು, ಸದಾಶಿವ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು ಹಾಗೂ ಶಿವರುದ್ರಯ್ಯ ಸ್ವಾಮಿಗಳು ಹೀಗೆ 10 ಪವಾಡ ಪುರುಷರ ಗದ್ದುಗೆಗಳು ಸಾಲಾಗಿ ಪೂಜೆಗೊಳ್ಳುತ್ತವೆ. ಒಂದೇ ಸ್ಥಳದಲ್ಲಿ ಸರ್ವ ಸ್ವಾಮಿಗಳ ಮೂರ್ತಿಗಳು ಭಕ್ತರಿಗೆ ದರ್ಶನವಾಗುತ್ತವೆ. ಸದ್ಯ ಮಠದ ಪೀಠಾಧಿಕಾರಿಗಳಾಗಿರುವ ದ್ರಾಕ್ಷಾಯಣಿದೇವಿ ಶಿವರುದ್ರಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಜಾತ್ರೆ ನೆರವೇರುತ್ತದೆ. ಮಠದ ಗುರುಗಳು ಮುಂದೆ ಮಳೆ- ಬೆಳೆ ಬಗ್ಗೆ ಹೇಳಿಕೆ ನುಡಿಯುತ್ತಾರೆ.

ಭೌಗೋಳಿಕ[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ 16*°30'8" N ಉತ್ತರ ಅಕ್ಷಾಂಶ ಮತ್ತು 75*27'51" E ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ[ಬದಲಾಯಿಸಿ]

  • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ[ಬದಲಾಯಿಸಿ]

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 3000 ಇದೆ. ಅದರಲ್ಲಿ 1600 ಪುರುಷರು ಮತ್ತು 1400 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ[ಬದಲಾಯಿಸಿ]

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ[ಬದಲಾಯಿಸಿ]

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳು[ಬದಲಾಯಿಸಿ]

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು[ಬದಲಾಯಿಸಿ]

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ಪುಣ್ಯಕ್ಷೇತ್ರ[ಬದಲಾಯಿಸಿ]

ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ ಮಠ, ಬಬಲಾದಿ

ದೇವಾಲಯಗಳು[ಬದಲಾಯಿಸಿ]

  • ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ ಮಠ
  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ಕಾಳಿಕಾ ದೇವಾಲಯ
  • ಶ್ರೀ ಯಲ್ಲಮ್ಮ ದೇವಿ ದೇವಾಲಯ
  • ಶ್ರೀ ರಾಮ ದೇವಾಲಯ

ಮಸೀದಿಗಳು[ಬದಲಾಯಿಸಿ]

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಸಂಘಟನೆಗಳು[ಬದಲಾಯಿಸಿ]

ಶ್ರೀ ಸದಾಶಿವ ಯುವಕ ಮಂಡಳಿ, ಬಬಲಾದಿ

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು[ಬದಲಾಯಿಸಿ]

ಪ್ರತಿವರ್ಷ ಬಬಲಾದಿ ಜಾತ್ರೆ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಕಲೆ[ಬದಲಾಯಿಸಿ]

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವುಗಳು ಗ್ರಾಮದ ಕಲೆಯಾಗಿದೆ.

ಶಿಕ್ಷಣ[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

ನದಿ[ಬದಲಾಯಿಸಿ]

ಗ್ರಾಮದ ಹತ್ತಿರ ಪವಿತ್ರವಾದ ಕೃಷ್ಣ ನದಿ ಹರಿದಿದೆ.

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ನದಿ, ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆಗಳು[ಬದಲಾಯಿಸಿ]

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗ[ಬದಲಾಯಿಸಿ]

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಸಸ್ಯ[ಬದಲಾಯಿಸಿ]

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಬೆಳೆಗಳು[ಬದಲಾಯಿಸಿ]

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು , ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಾಕ್ಷರತೆ[ಬದಲಾಯಿಸಿ]

ಬಬಲಾದಿ ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ[ಬದಲಾಯಿಸಿ]

ಗ್ರಾಮವು ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಬಬಲೇಶ್ವರ ಹೋಬಳಿ ಮತ್ತು ಗುಣದಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುತ್ತದೆ.

ಹಾಲು ಉತ್ಪಾದಕ ಸಹಕಾರಿ ಸಂಘ[ಬದಲಾಯಿಸಿ]

ಗ್ರಾಮದಲ್ಲಿ ಕೆ.ಎಮ್.ಎಫ್.(ನಂದಿನಿ)(ಕರ್ನಾಟಕ ಹಾಲು ಒಕ್ಕೂಟ)ನ ಸಹಾಯದೊಂದಿಗೆ ಹಾಲು ಉತ್ಪಾದಕ ಸಹಕಾರಿ ಸಂಘ ಸ್ಥಾಪಿತವಾಗಿದೆ.

ದೂರವಾಣಿ ಸಂಕೇತ[ಬದಲಾಯಿಸಿ]

ಮುಖ್ಯ ದೂರವಾಣಿ ಕೇಂದ್ರವು ಬಬಲೇಶ್ವರ ಗ್ರಾಮದಲ್ಲಿದೆ.

  • ಬಬಲೇಶ್ವರ - 08355

ಅಂಚೆ ಸೂಚ್ಯಂಕ ಸಂಖ್ಯೆ[ಬದಲಾಯಿಸಿ]

ಮುಖ್ಯ ಅಂಚೆ ಕಚೇರಿಯು ಸಾರವಾಡ ಗ್ರಾಮದಲ್ಲಿದೆ.

  • ಸಾರವಾಡ - 586125

ಸಾರಿಗೆ[ಬದಲಾಯಿಸಿ]

ಗ್ರಾಮವು ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 50 ಕಿ.ಮೀ. ದೂರವಿದ್ದು, ಗ್ರಾಮದ ರಸ್ತೆಯು ಬಬಲೇಶ್ವರ ಮಾರ್ಗವಾಗಿ ವಿಜಯಪುರ ನಗರವನ್ನು ಸೇರುತ್ತದೆ.

ರಾಜ್ಯ ಹೆದ್ದಾರಿ[ಬದಲಾಯಿಸಿ]

ಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿ ರಾಜ್ಯ ಹೆದ್ದಾರಿ - 55 ಹಾದೂಹೋಗಿದೆ.

ರಾಜ್ಯ ಹೆದ್ದಾರಿ - 55 => ಬಬಲೇಶ್ವರ - ಕಾಖಂಡಕಿ - ಮಮದಾಪುರ - ಕಂಬಾಗಿ - ಗಲಗಲಿ - ಮುಧೋಳ - ಯಾದವಾಡ - ಯರಗಟ್ಟಿ

ದಿಕ್ಕುಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://kannada.news18.com/news/state/vijayapura-babaladi-chandragiri-devi-temple-secrets-11727.html

ವಿಜಯಪುರ ಕರ್ನಾಟಕ

"https://kn.wikipedia.org/w/index.php?title=ಬಬಲಾದಿ&oldid=1199725" ಇಂದ ಪಡೆಯಲ್ಪಟ್ಟಿದೆ