ಬನ್ನಂಜೆ ಗೋವಿಂದಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬನ್ನಂಜೆ ಗೋವಿಂದಾಚಾರ್ಯ
ಇತರ ಹೆಸರುಗಳುಬನ್ನಂಜೆ
ಜನನ೧೯೩೬ august 3
ಉಡುಪಿ, ಕರ್ನಾಟಕ
ಕಾಲಮಾನ20th and 21st Century
ಪ್ರದೇಶಕರ್ನಾಟಕ, ಭಾರತ
ಪರಂಪರೆತತ್ವವಾದ
ಅಂತರ್‍ಜಾಲ ತಾಣanandamala.org

ಬನ್ನಂಜೆ ಗೋವಿಂದಾಚಾರ್ಯರು [೧೯೩೬ - ೧೩ ಡಿಸೆಂಬರ್ ೨೦೨೦] ,[೧] ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ೧೯೩೬ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರು ಪ್ರಸಿದ್ಧ ವಾಗ್ಮಿಗಳು, ಆಧ್ಯಾತ್ಮಿಕ ಪ್ರವಚನಕಾರರು ಹಾಗೂ ಚಿಂತಕರೂ ಆಗಿದ್ದರು. ಶ್ರೀಯುತರು ಶಿವಳ್ಳಿಯ ಮಾಧ್ವಬ್ರಾಹ್ಮಣ ಸಂಪ್ರದಾಯಿಗಳು.[೨].

ಕೃತಿರಚನೆಗಳು

ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

  1. ಬಾಣಭಟ್ಟನ ಕಾದಂಬರಿ,
  2. ಕಾಳೀದಾಸನ ಶಾಕುಂತಲಾ,
  3. ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು.

ಟಿಪ್ಪಣಿಗಳು

  1. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ’ಆನ೦ದಮಾಲಾ’,
  2. ತ್ರಿವಿಕ್ರಮ ಪ೦ಡಿತರ ’ವಾಯುಸ್ತುತಿ’,
  3. ’ವಿಷ್ಣುಸ್ತುತಿ’ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ.
  4. ಆರು ಉಪನಿಷತ್ತುಗಳಿಗೆ ಟೀಕೆಯನ್ನು ಬರೆದಿದ್ದಾರೆ.
  5. ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ’ಯಮಕ ಭಾರತ’ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ.
  6. ’ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ ಬರೆದಿದ್ದಾರೆ.

ಕನ್ನಡಕ್ಕೆ ಅನುವಾದ

ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.

  • ಪುರುಷಸೂಕ್ತ,
  • ಶ್ರೀ ಮದ್ಭಗವದ್ಗೀತೆ,
  • ಶ್ರೀ ಸೂಕ್ತ ,
  • ಶಿವಸೂಕ್ತ,
  • ನರಸಿಂಹ ಸ್ತುತಿ,
  • ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡೀಕರಿಸಿದ್ದಾರೆ.
  • ಮಧ್ವಾಚಾರ್ಯರ ’ಮಾಧ್ವರಾಮಾಯಣ’,
  • ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕನ್ನಡ ಚಲನಚಿತ್ರಗಳಿಗೆ ಸಂಭಾಷಣೆ

ಚಲನಚಿತ್ರ ಲೋಕಕ್ಕೂ ಬನ್ನಂಜೆಯವರು ಕೆಲಸ ಮಾಡಿದ್ದಾರೆ.

  1. ಜಿ.ವಿ. ಅಯ್ಯರ್ ಅವರಸಂಸ್ಕೃತ ಚಲನಚಿತ್ರ ’ಶ್ರೀ ಶಂಕರಾಚಾರ್ಯ’, ’ಶ್ರೀ ಮಧ್ವಾಚಾರ್ಯ’, ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ.
  2. ಇವರು ಕನ್ನಡದ ಖ್ಯಾತ ನಟ ವಿಷ್ಣುವರ್ಧನರ ಆಧ್ಯಾತ್ಮಿಕ ಗುರುವಾಗಿದ್ದರು.[೩]

ನಿಧನ

ಡಾ.ಬನ್ನಂಜೆ ಗೋವಿಂದಾಚಾರ್ಯ ೧೩/೧೨/೨೦೨೦ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನರಾದರು[೪]. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿಯೇ ಕೊನೆಯುಸಿರೆಳೆದರು.

ಉಲ್ಲೇಖಗಳು

  1. ""ಆನಂದ ಮಾಲಾ, ಡಾ.ಬನ್ನಂಜೆ : ಬದುಕು "ಹುಟ್ಟು ಋಷಿಯಲ್ಲದವನ ಕಬ್ಬ ಹಬ್ಬವೇ ಜಗಕೆ ?"". Archived from the original on 2016-09-29. Retrieved 2016-10-29.
  2. http://shivallibrahmins.com/kn/profiles/shri-bannanje-govindacharya/
  3. ವಿಷ್ಣುವರ್ಧನ್
  4. https://www.kannadaprabha.com/karnataka/2020/dec/13/renowned-sanksrit-scholar-bannanje-govindacharya-passes-away-434797.html

ಬಾಹ್ಯ ಸಂಪರ್ಕಗಳು