ಫಿರೋಜಾಬಾದ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಸುಹಾಗ್ ನಗರಿ(ವಿವಾಹ ನಗರಿ) ಎಂದೇ ಕರೆಯಲ್ಪಡುವ ಆಗ್ರದ ಸಮೀಪದಲ್ಲಿರುವ ಫಿರೋಜಾಬಾದ್ ಮೊಘಲರ ಕಾಲದಿಂದಲೂ ಗಾಜಿನ ಬಳೆಗಳಿಗೆ ಮತ್ತು ಗಾಜಿನ ಕಲಾಕೃತಿಗಳಿಗೆ ಹೆಸರಾಗಿದೆ. ಉತ್ತರ ಭಾರತೀಯರ ಮದುವೆ ಮುಂತಾದ ಸಾಮಾಜಿಕ ಸಂಪ್ರದಾಯಗಳಲ್ಲಿ ಸಮಾರಂಭಕ್ಕೆ ತಕ್ಕ 'ಕಂಗನ್', 'ಕಡಾ,' ಮೊದಲಾದ ವರ್ಣ ರಂಜಿತ ಬಳೆಗಳು ಫಿರೋಜಾಬಾದ್‌ನಲ್ಲಿ ತಯಾರಾಗುತ್ತವೆ.

ಫಿರೋಜಾಬಾದ್‌ನ ಗಾಜಿನ ಕಾರ್ಖಾನೆಗಳು [ಬದಲಾಯಿಸಿ]

ಫಿರೋಜಾಬಾದ್‌ನಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಗಾಜಿನ ಕಾರ್ಖಾನೆಗಳಿವೆ. ಇಲ್ಲಿ ತರಹಾವರಿ ಬಣ್ಣ-ಬಣ್ಣದ ಗಾಜಿನ ಮೊಂಬತ್ತಿ ಸ್ಟಾಂಡ್‌ಗಳು, ಹೂದಾನಿಗಳು ತಯಾರಿಸಲ್ಪಡುತ್ತವೆ. ಸನ್ ೧೯೮೯ ರಿಂದ ಈಚೆಗೆ ವಿದೇಶಿ ಮಾರುಕಟ್ಟೆಯ ಬೇಡಿಕೆಗಳಿಗೆ ಸರಿಹೊಂದುವಂತಹ ಗಾಜಿನ ಸುಂದರ ತೂಗು ದೀಪಗಳು ತಯಾರಾಗುತ್ತಿವೆ. ಈಗೀಗ ಹೊಸಹೊಸ ವಿನ್ಯಾಸಗಳ ಸಾಮಾನುಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಗಾಜಿನ ಕ್ರಿಸ್ ಮಸ್ ಮರಗಳು, ಮಣಿಗಳು, ಪಶು-ಪಕ್ಷಿಗಳ ಪುಟ್ಟ ಗೊಂಬೆಗಳು ಮತ್ತು ಮಕ್ಕಳ ಆಟಿಕೆಯ ವಸ್ತುಗಳು ವಿದೇಶಕ್ಕೆ ಕೊಂಡೊಯಲ್ಪಡುತ್ತವೆ. ಸೋವಿಯಾಗಿಯೂ ಸುಂದರವಾಗಿಯೂ ಬಾಳಿಕೆಬರುವಂತೆ ವಿನ್ಯಾಸಮಾಡಿದ ಕಲಾವಸ್ತುಗಳಿಗೆ ಸ್ವಾಭಾವಿಕವಾಗಿಯೇ ಬೇಡಿಕೆ ಹೆಚ್ಚು.