ಫಕೀರ ಮಹಮದ್ ಕಟ್ಪಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫಕೀರ ಮಹಮದ್ ಕಟ್ಪಾಡಿಯವರು ತಮ್ಮ ಕನ್ನಡ ‍ಸಾಹಿತ್ಯದಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಂಪ್ರದಾಯಗಳನ್ನು ಹಾಗು ನೋವು ನಲಿವುಗಳನ್ನು ನೈಜವಾಗಿ ವ್ಯಕ್ತಪಡಿಸಿದ್ದಾರೆ.ಇವರ ಕಥೆಗಳು ಭಾರತ‍ದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಕಟ್ಪಾಡಿಯವರ ಕೃತಿಗಳು.

ಜೀವನ ವಿವರ[ಬದಲಾಯಿಸಿ]

  • ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಸಾಹಿತ್ಯ[ಬದಲಾಯಿಸಿ]

’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ’ಸೂಫಿ ಮಹಿಳೆಯರು’, ’ಉತ್ತರ ಕರ್ನಾಟಕದ ಸೂಫಿಸಂತರು’ ಕೃತಿಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ[ಬದಲಾಯಿಸಿ]

  • ಕಟ್ಪಾಡಿ ಅವರು ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿಗಳು ದೊರೆತಿವೆ.

.

ಕಥಾಸಂಕಲನಗಳು[ಬದಲಾಯಿಸಿ]

  • ಗೋರಿ ಕಟ್ಟಿಕೊಂಡವರು
  • ನೋಂಬು.
  • ದಜ್ಜಾಲ
  • ಸರಕುಗಳು.(ಕಾದಂಬರಿ)
  • ಕಚ್ಚಾದ [೧] [೨]

ಉಲ್ಲೇಖ[ಬದಲಾಯಿಸಿ]

  1. ;Deepa Ganesh;AUGUST 13, 2015 UPDATED: MARCH 29, 2016
  2. ABOUT THE AUTHOR