ಪ್ರಿನ್ಸ್‌ ಆಫ್‌ ಪರ್ಷಿಯಾ (2008ರ ವಿಡಿಯೋ ಆಟ )

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Prince of Persia
ಅಭಿವರ್ಧಕ(ರು) Ubisoft Montreal
ಪ್ರಕಟಣಕಾರ(ರು) Ubisoft
ವಿನ್ಯಾಸಕಾರ(ರು) Jean-Christophe Guyot
Composer(s) Inon Zur, Stuart Chatwood[೧]
ಸರಣಿ Prince of Persia
ತಂತ್ರಾಂಶ ಚೌಕಟ್ಟು Scimitar
ಕಾರ್ಯಕಾರಿ ಪರಿಸರ(ಗಳು) ಟೆಂಪ್ಲೇಟು:Nowraplinks
ಬಿಡುಗಡೆ ದಿನಾಂಕ(ಗಳು) PS3, Xbox 360
ಟೆಂಪ್ಲೇಟು:Vgreleaseಟೆಂಪ್ಲೇಟು:Vgrelease

Microsoft Windows
ಟೆಂಪ್ಲೇಟು:Vgrelease ಟೆಂಪ್ಲೇಟು:Vgrelease Mac OS X
ಟೆಂಪ್ಲೇಟು:Vgrelease

ಪ್ರಕಾರ(ಗಳು) Action-adventure, platform
ಬಗೆ(ಗಳು) Single-player
ಹಂಚಿಕೆ Blu-ray disc, DVD-9, digital download[೨]

ಪ್ರಿನ್ಸ್‌ ಆಫ್‌ ಪರ್ಷಿಯಾ ಎಂಬುದೊಂದು ಹೋರಾಟ-ಸಾಹಸಗಳನ್ನು ಹೊಂದಿರುವ ಹಾಗೂ ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಅಳವಡಿಸಬಲ್ಲಂತಹಾ ಸೌಲಭ್ಯವಿರುವ ಯೂಬಿಸಾಫ್ಟ್‌ ಮಾಂಟ್ರಿಯಲ್‌ರಿಂದ ಸಿದ್ಧಪಡಿಸಲ್ಪಟ್ಟ ಹಾಗೂ ಯೂಬಿಸಾಫ್ಟ್‌ನಿಂದ ಪ್ರಕಾಶಗೊಳಿಸಲ್ಪಟ್ಟ ವಿಡಿಯೋ ಆಟವಾಗಿದೆ. ಡಿಸೆಂಬರ್‌ 2008ರಲ್ಲಿ ಬಿಡುಗಡೆಯಾದ ಇದನ್ನು ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆಂದು ಸಿದ್ಧಪಡಿಸಿದ್ದು, ನಂತರ ಮಾರ್ಚ್‌ 2009ರಲ್ಲಿ ಸೈಡರ್‌ ಎಂಜಿನ್‌ ತಂತ್ರಾಂಶದ ಸಹಾಯದಿಂದ Mac OS Xಗೆ ಹೊಂದುವಂತೆ ಸಿದ್ಧಪಡಿಸಲಾಯಿತು.

ಈ ಆಟದ ಸನ್ನಿವೇಶವು ಪ್ರಾಚೀನ ಪರ್ಷಿಯಾಗೆ ಸಂಬಂಧಿಸಿರುವುದಾದರೂ ನಿರ್ದಿಷ್ಟ ಶತಮಾನವನ್ನು ತಿಳಿಸಲಾಗಿಲ್ಲ. ಆಟದಲ್ಲಿ, ಆಟಗಾರನು ಓರ್ವ ಅನಾಮಧೇಯ ರಾಜಕುಮಾರನ ಪಾತ್ರವನ್ನು ವಹಿಸುತ್ತಾನೆ. ಮರಳಿನ ಬೃಹತ್‌ ಬಿರುಗಾಳಿಯೆದ್ದು ಆತನನ್ನು ದಾರಿತಪ್ಪಿ ನಿಗೂಢ ಸ್ಥಳವೊಂದಕ್ಕೆ ಬಂದಾಗ ಭೇಟಿಯಾದ ಎಲಿಕಾ ಎಂಬ ಹೆಸರಿನ ಮಹಿಳೆಯು ರಾಜಕುಮಾರನೊಂದಿಗೆ ಇರುತ್ತಾಳೆ. ರಾಜಕುಮಾರನಿಗಿರುವ ಗೋಡೆಗಳನ್ನು ಏರುವ ಹಾಗೂ ಛಾವಣಿಗಳಲ್ಲಿ ತೆವಳಬಲ್ಲ ಚಮತ್ಕಾರಿಕ ಸಾಮರ್ಥ್ಯಗಳನ್ನು ಬಳಸಿಕೊಂಡು ಆಟಗಾರರು ಅನೇಕ ಪ್ರತ್ಯೇಕ ಪರಿಸರಗಳ ಮೂಲಕ ಹಾದುಹೋಗುತ್ತಾರೆ. ಪ್ರಯಾಣದುದ್ದಕ್ಕೂ ಕಳಂಕಿತ ಪ್ರದೇಶವನ್ನು ಶುದ್ಧೀಕರಿಸುವ ಪ್ರಯತ್ನದಲ್ಲಿ ವಿವಿಧ ಶತೃಗಳೊಂದಿಗೆ ಆಟಗಾರರು ಹೋರಾಡುತ್ತಾರೆ. ಆಟದ ಕಥಾಭಾಗವು ಹಾಗೂ ದೃಶ್ಯಸನ್ನಾಹಗಳು ಜರಾತೃಷ್ಟ್ರ/ಪಾರಸಿ ಧರ್ಮವ್ಯವಸ್ಥೆಯನ್ನು ಬಹಳ ಮಟ್ಟಿಗೆ ಅನುಕರಿಸುತ್ತದೆ.[೩]

ಆಟದ ರೀತಿ[ಬದಲಾಯಿಸಿ]

ಚಮತ್ಕಾರ, ಹೋರಾಟ ಹಾಗೂ ತೊಡಕು-ಭೇದಿಸುವಿಕೆ[೪] ಗಳ ಹದವರಿತ ಮಿಶ್ರಣದೊಂದಿಗೆ ಪರ್ಷಿಯನ್‌ ಪರಿಸರವನ್ನು ಪರಿಶೋಧನೆಯನ್ನು ಮಾಡುವ ಚಮತ್ಕಾರಿಕ ನಾಯಕನಿರುವ ಪ್ರಿನ್ಸ್‌ ಆಫ್‌ ಪರ್ಷಿಯಾ ನಿರ್ಮಾಪಕ ಬೆನ್‌ ಮ್ಯಾಟ್ಟೆಸ್‌ರಿಂದ ಪ್ರಿನ್ಸ್‌ ಆಫ್‌ ಪರ್ಷಿಯಾ ಸರಣಿಯ "ಆಧಾರಸ್ತಂಭಗಳೆಂದು" ಕರೆಯಲ್ಪಟ್ಟ ವಿಡಿಯೋಆಟ ತಂತ್ರಶಾಸ್ತ್ರದ ಸುತ್ತಲೇ ತಿರುಗುತ್ತದೆ. ಪ್ರಿನ್ಸ್‌ ಆಫ್‌ ಪರ್ಷಿಯಾ ವು ಆಟದ ಪ್ರಪಂಚದಲ್ಲಿ ಪರ್ಯಟನೆ ಮಾಡುತ್ತಿರುವಾಗ ವಿಶೇಷವಾಗಿ ನಿರ್ದೇಶಿತವಾದ ಸ್ಥಳಗಳನ್ನು ಪರಿಹರಿಸುವ/ಸುಧಾರಿಸುವ ಪರಿಸರವನ್ನು ಹೊಂದಿದೆ. ಆಟವನ್ನು ಕೇವಲ ಒಬ್ಬ ಆಟಗಾರ ಮಾತ್ರವೇ ಆಡಬಹುದಾಗಿದೆ. ಆಟಗಾರನು ರಾಜಕುಮಾರನ ಪಾತ್ರವನ್ನು ವಹಿಸಿಕೊಂಡು, AI-ನಿಯಂತ್ರಿತ ಎಲಿಕಾಳನ್ನು ಜೊತೆಗಾತಿಯಾಗಿ ಹೊಂದಿರುತ್ತಾನೆ. ಆಟಗಾರನು ರಾಜಕುಮಾರ ಪಾತ್ರದ ಚಮತ್ಕಾರಿಕ ಸಾಮರ್ಥ್ಯ, ಖಡ್ಗ ಮತ್ತು ರಕ್ಷಾಕವಚಗಳನ್ನು ಹಾಗೂ ಎಲಿಕಾಳ ಮಾಯಾಶಕ್ತಿಯನ್ನು ಬಳಸಿಕೊಂಡು ಆಟದುದ್ದಕ್ಕೂ ಹೋರಾಟಗಳನ್ನು ಹಾಗೂ ಚಮತ್ಕಾರಿಕ ಸಾಹಸಗಳನ್ನು ಮಾಡಬಹುದಾಗಿದೆ.

ಪ್ರಿನ್ಸ್‌ ಆಫ್‌ ಪರ್ಷಿಯಾ ಆಟವು ಮುಕ್ತ ಶೋಧದ ವ್ಯವಸ್ಥೆಯನ್ನು ಹೊಂದಿದ್ದು, ಆಟಗಾರರಿಗೆ ಆಟ-ವಿಶ್ವದ ಯಾವುದೇ ಸ್ಥಳಕ್ಕೆ ಯಾವುದೇ ಸಮಯದಲ್ಲಿ ಹೋಗಲು, ಹಾಗೂ ಆಟದ ಕಥಾಭಾಗದಲ್ಲಿ ತಮಗೆ ಬೇಕಾದ ಹಾಗೆ ವ್ಯವಹರಿಸಲು ಅವಕಾಶ ನೀಡುತ್ತದೆ. ಆಟಗಾರರ ಪ್ರಗತಿಗೆ ಅನುಸಾರವಾಗಿ, ಆಟದಲ್ಲಿ ಹಿಂದೆ ಭೇಟಿ ನೀಡಿದ್ದ ಪ್ರದೇಶಗಳನ್ನು ಪುನಃ ಹಾದುಹೋಗಬೇಕಾದರೆ ಮತ್ತಷ್ಟು ಕ್ಲಿಷ್ಟತೆಗಳನ್ನು ಎದುರಿಸಬೇಕಾಗಿರುತ್ತದೆ.[೫] ಆದಾಗ್ಯೂ, ಆಟಗಾರನು ಪರಿಸರದ ಒಂದು ಸ್ಥಳವನ್ನು ಪರಿಹರಿಸಿ/ಸುಧಾರಿಸಿದಾಗ, ಆ ಸ್ಥಳವು ಸಮಸ್ಯಾರಹಿತವಾಗಿಬಿಡುತ್ತದೆ. ಕಳಂಕಿತ ಅಹ್ರಿಮನ್‌ನ ಸಮಸ್ಯಾವ್ಯೂಹಗಳು ವಿವಿಧ ರೀತಿಯದಾಗಿದ್ದು; ಮುಟ್ಟಿದರೆ ಕಬಳಿಸುವ ನೆಲದಲ್ಲಿ ಚೆಲ್ಲಿರುವ ಕಪ್ಪು-ಬಣ್ಣದ ನೀರಿನ ಹನಿಗಳ ರೂಪವೂ ಅದರಲ್ಲಿ ಒಂದು.[೫] ಆಟಗಾರನು ಕುಶಲ ಚಮತ್ಕಾರಿಕ ಚಲನೆಗಳ ಮೂಲಕ ಈ ವ್ಯೂಹಗಳಿಂದ ಪಾರಾಗಬಹುದು.

ತಮಗೆ ಲಭ್ಯವಿರುವ ಅನೇಕ ಕುಶಲ ಚಮತ್ಕಾರಿಕ ನಡೆಗಳನ್ನು ಆಟಗಾರರು ಬಳಸಿಕೊಳ್ಳಬಹುದು. ಚಮತ್ಕಾರದ ನಡೆಗಳನ್ನು ಶತೃಗಳ ಮೇಲೆ ಜಿಗಿದು ಹೋರಾಡುವುದಕ್ಕೆ ಅಥವಾ ಗಾಳಿಯಲ್ಲಿದ್ದು ಅವರಿಗೆ ಹೊಡೆಯಲು ಬಳಸಿಕೊಳ್ಳಬಹುದು. ಕೆಲವೊಮ್ಮೆ ಈ ಚಮತ್ಕಾರಿಕ ಕಾರ್ಯಾಚರಣೆಗಳಲ್ಲಿ ಆಟಗಾರನಿಗೆ ಎಲಿಕಾಳ ಸಹಾಯವೂ ಸಿಗುತ್ತದೆ. ಕೆಲವೊಂದು ಮಾಂತ್ರಿಕ ತಟ್ಟೆಗಳಿದ್ದು, ಅವುಗಳ ಮೂಲಕ ಆಟಗಾರನು ಮತ್ತಷ್ಟು ಹೆಚ್ಚಿನ ಸಂಕೀರ್ಣ ಚಮತ್ಕಾರಿಕ ಸಾಹಸಕಾರ್ಯಗಳನ್ನು ಎಲಿಕಾಳ ಮೂಲಕ ಮಾಡಬಹುದಾಗಿದೆ. ಆಟಗಾರನು ಎಲಿಕಾಳ ಮಾಂತ್ರಿಕ ನಡೆಗೆ ಸರಿಯಾಗಿ ಸಂಜ್ಞೆ ನೀಡದಿದ್ದಲ್ಲಿ ಅವು ತಟ್ಟೆಯಿಂದ ಹೊರಬೀಳುವುದಲ್ಲದೇ ಕೆಲವೊಮ್ಮೆ ಸಾಯುತ್ತವೆ ಕೂಡ.

ಪ್ರಿನ್ಸ್‌ ಆಫ್‌ ಪರ್ಷಿಯಾ ದಲ್ಲಿ ಸಾಂಪ್ರದಾಯಿಕವಾಗಿ ಆಟಗಾರನು "ಸಾಯು"ವುದಿಲ್ಲ. ಬದಲಿಗೆ, ಶತೃವು ಕೊನೆಯ ಪ್ರಹಾರವನ್ನು ಮಾಡುವಾಗ ಅಥವಾ ರಾಜಕುಮಾರ ಸಾಯುವ ಸಂಭವವಿದ್ದಾಗ ಎಲಿಕಾ ಅವನನ್ನು ಉಳಿಸುತ್ತಾಳೆ. ಎಲಿಕಾಳು ಆಟಗಾರನನ್ನು ಎಷ್ಟು ಬಾರಿ ಉಳಿಸಬಹುದು ಎಂಬ ಬಗ್ಗೆ ಯಾವುದೇ ಮಿತಿ ಇಲ್ಲ.[೬] ಆಟಗಾರನನ್ನು ಉಳಿಸುವುದರೊಂದಿಗೆ, ಎಲಿಕಾ ಅನೇಕ ಚಮತ್ಕಾರಿಕ ಸಾಹಸಗಳನ್ನು ಅಥವಾ ಹೋರಾಟ ಸಾಹಸಗಳನ್ನು ಆಟಗಾರ ಜೊತೆಜೊತೆಗೆ ಮಾಡಬಲ್ಲಳು. ಎಪಿಲೋಗ್‌ ಎಂಬ ಇಳಿಸಿಕೊಳ್ಳಬಹುದಾದ ಅಂಶವು ಎಲಿಕಾಳಿಗೆ ನಾಶಗೊಂಡ ವಸ್ತುಗಳನ್ನು ಪುನರ್ನಿಮಿಸಬಲ್ಲ ಸಾಮರ್ಥ್ಯ ನೀಡಬಲ್ಲ ಹೊಸದೊಂದು ಮಾಯಾ ತಟ್ಟೆಯೊಂದನ್ನು ಸೇರಿಸಿದೆ. ಆಟಗಾರನಿಗೆ ಹೊಸದೊಂದು ಹೋರಾಟ ಕುಶಲತೆಯೊಂದನ್ನು ಸಹಾ ಸೇರಿಸಲಾಗಿದೆ.[೭]

ಕಥಾಭಾಗದ ಸಾರಾಂಶ[ಬದಲಾಯಿಸಿ]

ಸನ್ನಿವೇಶ[ಬದಲಾಯಿಸಿ]

ಪ್ರಿನ್ಸ್‌ ಆಫ್‌ ಪರ್ಷಿಯಾ ವು ನಿರೂಪಿತಗೊಳ್ಳದ ಜರಾತೃಷ್ಟ್ರ/ಪಾರಸಿ ಧರ್ಮವ್ಯವಸ್ಥೆ[೩] ಯನ್ನು ಬಹಳ ಮಟ್ಟಿಗೆ ಅನುಕರಿಸುವ ಪ್ರಾಚೀನ ಪರ್ಷಿಯನ್‌ ನಗರ-ರಾಜ್ಯ[೮] ದಲ್ಲಿ ನಡೆಯುತ್ತದೆ. ಆಟದ ಘಟನೆಗಳು ಆರಂಭಗೊಳ್ಳುವ ಸಾವಿರ ವರ್ಷಗಳ ಮುಂಚೆ ಅಹ್ರಿಮಾನ್‌ ಹಾಗೂ ಓರ್ಮಾಜ್ಡ್‌ ಎಂಬ ದೇವತೆಗಳ ಮಧ್ಯೆ ಅಧಿಕಾರಕ್ಕಾಗಿ ಹೋರಾಟ ನಡೆದಿರುತ್ತದೆ. ಈ ಹೋರಾಟದ ಪರಿಣಾಮವಾಗಿ ಓರ್ಮಾಜ್ಡ್‌ ಮತ್ತು ಆತನ ಕಡೆಯವರಾದ ಅಹುರಾಗಳು, ಅಹ್ರಿಮಾನ್‌ ಹಾಗೂ ಆತನ ಅಡಿಯಾಳುಗಳಾದ ಕರಪ್ಟೆಡ್‌/ಕಳಂಕಿತರನ್ನು ಮರವೊಂದರಲ್ಲಿ ಬಂಧಿಸಿಡಲು ಯಶಸ್ವಿಯಾಗುತ್ತಾರೆ. ಅದಾದ ನಂತರ ಅಹುರಾರನ್ನು ಅಹ್ರಿಮಾನ್‌ ಬಂಧನದಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಬಿಟ್ಟು ಓರ್ಮಾಜ್ಡ್‌ ವಿಶ್ವದಿಂದ ಹೊರಡುತ್ತಾನೆ. ಅಹುರಾಗಳು ಸಾವಿರ ವರ್ಷಗಳ ಕಾಲ ಅದರಲ್ಲಿ ಯಶಸ್ವಿಯಾಗಿರುತ್ತಾರೆ, ಆದರೆ ಆ ಹೊತ್ತಿಗೆ ಅಹ್ರಿಮಾನ್‌ ಮತ್ತು ಓರ್ಮಾಜ್ಡ್‌ಗಳ ಚಟುವಟಿಕೆಯಿಲ್ಲದ ಕಾರಣ ಅವರ ವಿಚಾರ ಕೇವಲ ಕಟ್ಟುಕಥೆಗಳೆಂದು ಭಾವಿಸಿ ಅವರಲ್ಲಿ ಬಹಳಷ್ಟು ಜನ ಲೋಕವನ್ನು ತೊರೆಯುತ್ತಾರೆ. ಆಟದ ಘಟನೆಗಳಿಗೆ ಸ್ವಲ್ಪ ಮುಂಚೆ, ಅಹ್ರಿಮಾನ್‌ ಮತ್ತೆ ಬಿಡುಗಡೆಗೊಳ್ಳುವ ಹಾಗಾಗಿರುತ್ತದೆ.[೮]

ಪಾತ್ರಗಳು[ಬದಲಾಯಿಸಿ]

ಪ್ರಿನ್ಸ್‌ ಆಫ್‌ ಪರ್ಷಿಯಾ'ದ ನಾಯಕನೆಂದರೆ ರಾಜಕುಮಾರನ ಪಾತ್ರ ಅದೃಷ್ಟವನ್ನರಸಿ ಹೊರಟ ಓರ್ವ ಅನಾಮಧೇಯ ಸಾಹಸಿ. ರಾಜಕುಮಾರನ ಜೊತೆಗೆ ಎಲಿಕಾ ಎಂಬ ಹೆಸರಿನ ಅಹುರಾ ಇರುತ್ತಾಳೆ, ಆಕೆಯ ವಂಶಜರು ಪ್ರಮುಖ ವೈರಿಯಾದ, ಅಹ್ರಿಮಾನ್‌[೯] ನನ್ನು ಬಿಡುಗಡೆಗೊಳಿಸುವ ಮೂಲಕ ಬೆಳಕಿನ ದೇವತೆ, ಓರ್ಮಾಜ್ಡ್‌ನಿಂದ ತಮಗೆ ವಹಿಸಲ್ಪಟ್ಟ ಜವಾಬ್ದಾರಿಯನ್ನು ತೊರೆದಿರುತ್ತಾರೆ. ಓರ್ಮಾಜ್ಡ್‌ನಿಂದ ಬಂಧಿಸಲ್ಪಟ್ಟ ಅಹ್ರಿಮಾನ್‌ ಕತ್ತಲೆಯ ದೇವತೆಯಾಗಿರುತ್ತಾನೆ. ತನ್ನ ಬಿಡುಗಡೆಯಾದ ಕೂಡಲೇ ಇಡೀ ಬ್ರಹ್ಮಾಂಡವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಆತನ ಉದ್ದೇಶವಾಗಿರುತ್ತದೆ.[೧೦] ದುಃಖಿತನಾಗಿದ್ದ ರಾಜನು ತನ್ನ ಮಗಳಾದ, ಎಲಿಕಾಳ ಪುನರುತ್ಥಾನದ ಬದಲಿಗೆ ಅಹ್ರಿಮಾನ್‌ನ ಇಚ್ಛೆಯನ್ನು ಪೂರೈಸುವ ಉದ್ದೇಶದೊಂದಿಗೆ ಓರ್ವ ವೈರಿಯಾಗಿ ಕಾಣಿಸಿಕೊಳ್ಳುತ್ತಾನೆ. ಓರ್ಮಾಜ್ಡ್‌ನನ್ನು ಸೋಲಿಸಲು ಸಹಾಯವಾಗುವಂತೆ ಅಹ್ರಿಮಾನ್‌ ಆಯ್ದುಕೊಂಡ ಕಳಂಕಿತರೆಂದು/ಕರಪ್ಟೆಡ್‌ಗಳೆಂದು ಕರೆಸಿಕೊಳ್ಳುವ ನಾಲ್ವರು ರಾಜರು ಸಹಾ ವೈರಿಗಳಾಗುತ್ತಾರೆ. ಅವರುಗಳೂ ಸಹಾ ಆತನೊಂದಿಗೆ ಸಾವಿರ ವರ್ಷಗಳ ಕಾಲ ಬಂಧಿತರಾಗಿರುತ್ತಾರೆ.

ಹಂಟರ್ ಎಂಬಾತ‌/ಬೇಟೆಗಾರನು ಕರಪ್ಟೆಡ್‌ಗಳ/ಕಳಂಕಿತರಲ್ಲಿ ಒಬ್ಬ. ಈತನು ಬೇಟೆಯಾಡುವುದನ್ನು ಆನಂದಿಸುತ್ತಿದ್ದ ರಾಜಕುಮಾರನಾಗಿದ್ದು, ಕೆಲವೇ ಸಮಯದಲ್ಲಿ ಬೇಟೆಯಲ್ಲಿ ನಿಪುಣನಾದ. ಹಂಟರ್/ಬೇಟೆಗಾರನೊಂದಿಗೆ, ಅಹ್ರಿಮಾನ್‌ ಆತನ ಜೀವದ ಬದಲಿಗೆ, ಇದುವರೆಗೆ ಆತ ಬೇಟೆಯಾಡಿದ್ದ ಎಲ್ಲವುಗಳಿಗಿಂತ ತೃಪ್ತಿ ಕೊಡುವ ಜೀವಿಯೊಂದನ್ನು ಬೇಟೆಯಾಡಲು ಅವಕಾಶ ನೀಡುವ ಆಮಿಷ ತೋರಿಸಿ ಆತನೊಂದಿಗೆ ಅಹ್ರಿಮಾನ್‌ ಯಶಸ್ವಿಯಾಗಿ ಗುಪ್ತಕರಾರು ಮಾಡಿಕೊಂಡಿದ್ದ.[೧೧] ಕರಪ್ಟೆಡ್‌ಗಳ/ಕಳಂಕಿತರಲ್ಲಿ ಮತ್ತೋರ್ವ ಆಲ್ಕೆಮಿಸ್ಟ್‌/ರಸಸಿದ್ಧಾಂತಿ. ಆತನೊಬ್ಬ ಅಹುರಾ ವಿಜ್ಞಾನಿಯಾಗಿದ್ದು, ಅಮರತ್ವ ಪಡೆದುಕೊಳ್ಳುವ ಪ್ರಯತ್ನದಲ್ಲಿ ಗೆಲುವಿಗೆ ಸಮೀಪದಲ್ಲಿದ್ದೇನೆ ಎಂದು ತಿಳಿದುಕೊಂಡಿದ್ದಾಗ ಆತನ ಆರೋಗ್ಯವು ಕುಸಿಯತೊಡಗಿತು. ಆಲ್ಕೆಮಿಸ್ಟ್‌/ರಸಸಿದ್ಧಾಂತಿ‌ ತನ್ನ ಸಂಶೋಧನೆಯನ್ನು ಪೂರ್ಣಗೊಳಿಸಲು ದೀರ್ಘಾಯು ನೀಡುವಂತೆ ಓರ್ಮಾಜ್ಡ್‌ನನ್ನು ಕೇಳಿಕೊಂಡು, ಆ ಕೋರಿಕೆ ತಿರಸ್ಕೃತಗೊಂಡಾಗ ಆತನ ಜೀವದ ಬದಲಿಗೆ, ಅಹ್ರಿಮಾನ್‌ ಅಮರತ್ವ ನೀಡುವ ಪ್ರಸ್ತಾಪ ಮುಂದಿಟ್ಟ. ಮೂರನೆಯ ಕರಪ್ಟೆಡ್‌/ಕಳಂಕಿತಳನ್ನು ಕಂಕ್ಯುಬೈನ್‌/ಮಿಂಡಗಾತಿ/ಉಪಪತ್ನಿ ಎಂದು ಕರೆಯಲಾಗುತ್ತದೆ. ಆಕೆಯು ಅಧಿಕಾರಸ್ಥರಿಗೆ ಮಣೆ ಹಾಕುತ್ತಿದ್ದವಳಲ್ಲದೇ ರಾಜಕೀಯದಲ್ಲಿ ನಿಷ್ಣಾತಳಾಗಿದ್ದ ಮಹಿಳೆಯಾಗಿದ್ದಳು. ಆಕೆಯು ಓರ್ವ ವ್ಯಕ್ತಿಯೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಗ, ಮತ್ತೋರ್ವ ಮಹಿಳೆಯು ತನ್ನ ಸೌಂದರ್ಯ ಹಾಗೂ ಪ್ರಭಾವದಿಂದ ಆಕೆಯನ್ನು ಹೆದರಿಸಿ ಅಂತಿಮವಾಗಿ ಆತನನ್ನು ತನ್ನೆಡೆಗೆ ಸೆಳೆದುಕೊಂಡಿರುತ್ತಾಳೆ. ಆಗ ಕಂಕ್ಯುಬೈನ್‌/ಮಿಂಡಗಾತಿ/ಉಪಪತ್ನಿಯು ಮಾಯಾಶಕ್ತಿಯ ಬದಲಿಗೆ ತನ್ನ ಜೀವವನ್ನು ಅಹ್ರಿಮಾನ್‌ನೊಂದಿಗೆ ವಿನಿಮಯ ಮಾಡಿಕೊಂಡಿದ್ದಳು.[೧೨] ಕೊನೆಯ ಕರಪ್ಟೆಡ್‌/ಕಳಂಕಿತ ಎಂದರೆ ವಾರಿಯರ್‌ ಎಂಬಾತ/ಹೋರಾಟಗಾರ. ಆತನೊಬ್ಬ ಮುತ್ತಿಗೆಗೊಳಗಾದ ರಾಷ್ಟ್ರದ ರಾಜನಾಗಿದ್ದ. ಶಾಂತಿಗೆಂದು ಹೆಣಗುತ್ತಿದ್ದ ರಾಜನು, ಅಹ್ರಿಮಾನ್‌ನಿಂದ ಶಕ್ತಿಯನ್ನು ಪಡೆದುಕೊಂಡು ತನ್ನ ವೈರಿಗಳನ್ನು ಜಯಿಸಿ ತನ್ನ ಜನರಿಗೆ ಶಾಂತಿ ಹಾಗೂ ಸುರಕ್ಷತೆಯನ್ನು ಕೊಟ್ಟನು. ಆದಾಗ್ಯೂ ಯುದ್ಧ ಕೊನೆಗೊಂಡಾಗ, ಶಾಂತಿ-ಪ್ರಿಯ ನಾಗರಿಕರು ಯುದ್ಧದ ಸಾಧನವಾಗಿ ಮಾರ್ಪಟ್ಟಿದ್ದ ವಾರಿಯರ್‌/ಹೋರಾಟಗಾರನನ್ನು ತಿರಸ್ಕರಿಸಿದರು.[೧೩]

ಕಥಾವಸ್ತು[ಬದಲಾಯಿಸಿ]

ರಾಜಕುಮಾರ ಪಾತ್ರವು ಮರಳಿನ ಬೃಹತ್‌ ಬಿರುಗಾಳಿಯ ಸಮಯದಲ್ಲಿ ಮರಳುಗಾಡಿನಲ್ಲಿ ಹಾದುಹೋಗುವ ಸಮಯದಲ್ಲಿ ಪ್ರಿನ್ಸ್‌ ಆಫ್‌ ಪರ್ಷಿಯಾ ವು ಆರಂಭವಾಗುತ್ತದೆ. ರಾಜಕುಮಾರನು ಓಡಿಹೋಗುತ್ತಿದ್ದ ಎಲಿಕಾಳ ಬಳಿ ಹೋಗುತ್ತಾನೆ. ಅಹ್ರಿಮಾನ್‌ ಹಾಗೂ ಆತನ ಅಡಿಯಾಳುಗಳನ್ನು ಬಂಧಿಸಿಟ್ಟಿರುವ ಮರದ ಬಳಿಗೆ ಆಕೆಯೊಂದಿಗೆ ಬರುತ್ತಾನೆ. ಎಲಿಕಾ ಅಹ್ರಿಮಾನ್‌ನನ್ನು ಭದ್ರಪಡಿಸಲು ಪ್ರಯತ್ನಿಸುತ್ತಿದ್ದರೂ, ಅಂತಿಮವಾಗಿ ದುಃಖಿತ ರಾಜ ಆತನನ್ನು ಬಿಡುಗಡೆ ಮಾಡುತ್ತಾನೆ. ರಾಜಕುಮಾರನ ಪಾತ್ರ ಹಾಗೂ ಎಲಿಕಾರು ನಂತರ ಪ್ರದೇಶದಲ್ಲಿ ಸಂಚರಿಸಿ ಅಹ್ರಿಮಾನ್‌ ಅಧಿಕಾರವನ್ನು ಪಡೆಯದಿರಲೆಂದು ಫಲವತ್ತಾದ ಪ್ರದೇಶವೆಂದು ಕರೆಯಲ್ಪಡುತ್ತಿದ್ದ ಓರ್ಮಾಜ್ಡ್‌ನ ವಿಶೇಷ ಶಕ್ತಿಗಳ ಸ್ಥಳಗಳನ್ನು ಪರಿಹರಿಸುತ್ತಾರೆ. ಇಬ್ಬರೂ ಪ್ರದೇಶವನ್ನು ಪರಿಹರಿಸಿದ ನಂತರ, ಮರದ ಬಳಿಗೆ ಮರಳುತ್ತಾರೆ. ಆಗ ಎಲಿಕಾ ತನ್ನ ಜೀವವನ್ನು ಬಲಿಕೊಟ್ಟು ಅಹ್ರಿಮಾನ್‌ನನ್ನು ಮತ್ತೆ ಮರದಲ್ಲಿ ಬಂಧಿಸಿಡುತ್ತಾಳೆ. ರಾಜಕುಮಾರನು ಆಗ ಎಲಿಕಾಳನ್ನು ಪುನರುತ್ಥಾನಗೊಳ್ಳುವಂತೆ ಮಾಡುವ ಶಕ್ತಿ ಪಡೆಯಲು ಮರವನ್ನು ನಾಶಗೊಳಿಸುತ್ತಾನೆ, ಈ ಪ್ರಕ್ರಿಯೆಯಲ್ಲಿ ಅಹ್ರಿಮಾನ್‌ ಬಂಧಮುಕ್ತಗೊಳ್ಳುತ್ತಾನೆ.

ಅಭಿವೃದ್ಧಿ[ಬದಲಾಯಿಸಿ]

ಆಟದ ಬಗ್ಗೆ,[೧೪] ಕಲ್ಪನಾ ಚಿತ್ರಗಳನ್ನು ಹೊಂದಿದ್ದ ಕಡತವೊಂದು ಅಂತರ್ಜಾಲದಲ್ಲಿ ಸೋರಿಕೆಯಾದಾಗ ಪ್ರಿನ್ಸ್‌ ಆಫ್‌ ಪರ್ಷಿಯಾ ದ ಕಲ್ಪನಾ ಕರಡು ಸೆಪ್ಟೆಂಬರ್‌ 2006ರಲ್ಲಿ ಜಾಹೀರಾಯಿತು, ಆದಾಗ್ಯೂ ಯೂಬಿಸಾಫ್ಟ್‌ ಮೇ 2008ರವರೆಗೂ ಆಟವನ್ನು ಘೋಷಿಸಿರಲಿಲ್ಲ. ಅವರು ಆಟವನ್ನು 2008ರ ನಾಲ್ಕನೇ ತ್ರೈಮಾಸಿಕದ ಹೊತ್ತಿಗೆ ಬಿಡುಗಡೆ ಮಾಡಲು ಆಶಿಸಿದ್ದೇವೆ ಎಂದು ತಿಳಿಸಿದರಲ್ಲದೇ, ಕಥಾವಸ್ತು ಹಾಗೂ ಆಟದ ರೀತಿಗಳ ಬಗ್ಗೆ ವಿವರಗಳನ್ನು ನೀಡಿದರು. ಆಟದ ಅಂತಹಾ ಒಂದು ಮುನ್ನೋಟದಲ್ಲಿ, ಆಟದ ರೀತಿಯ ಸಾಮಾನ್ಯ ಘಟಕಗಳು ಹಾಗೆಯೇ ಉಳಿದಿದ್ದರೂ, ಒಟ್ಟಾರೆಯಾಗಿ ಬಹಳಷ್ಟು ಬದಲಾವಣೆಗಳಾಗಿವೆ ಎಂದು ಬಹಿರಂಗಪಡಿಸಿದರು. ಈ ಘಟಕಗಳೆಂದರೆ ವಿವಿಧ ಪ್ಲಾಟ್‌ಫಾರ್ಮ್‌ಗಳ ಲಭ್ಯತೆ, ಹೋರಾಟ ಹಾಗೂ ತೊಡಕು-ಭೇದಿಸುವಿಕೆಗಳು. ಆಟದ ಹೋರಾಟಗಳು ಮೂಲ ಪ್ರಿನ್ಸ್‌ ಆಫ್‌ ಪರ್ಷಿಯಾ ಮೂರು ಕಾದಂಬರಿಗಳ ಸರಣಿಯಂತೆಯೇ, ಒಮ್ಮೆಗೆ ಕೇವಲ ಒಬ್ಬರೊಂದಿಗೆ ಹೋರಾಡುವಂತೆ ಇರುತ್ತವೆಯೇ ಹೊರತು, ಸ್ಯಾಂಡ್ಸ್‌ ಆಫ್‌ ಟೈಮ್‌ ಸರಣಿಯಂತೆ ಯಾವುದೇ ಸಮಯದಲ್ಲಿ ವೈರಿಗಳ ಗುಂಪುಗಳೊಂದಿಗೆ ಹೋರಾಡುವ ಹಾಗಿರುವುದಿಲ್ಲ ಎಂದೂ ತಿಳಿಸಿದರು. Producerನಿರ್ಮಾಪಕರಾದ ಬೆನ್‌ ಮ್ಯಾಟ್ಟೆಸ್‌ರು ಹೋರಾಟದ ಶೈಲಿಯನ್ನು ಹೀಗೆ ಬದಲಿಸಿದ್ದರ ಉದ್ದೇಶವು ಆಟಗಾರರಿಗೆ ಪ್ರತಿ ಶತೃವು ಓರ್ವ ಪ್ರತ್ಯೇಕ ವ್ಯಕ್ತಿ ಹಾಗೂ ಆತನೊಂದಿಗಿನ ನಾಟಕೀಯ ಹೋರಾಟದ ಅನುಭವವನ್ನು ಮೂಡಿಸುವುದಾಗಿತ್ತು ಎಂದು ತಿಳಿಸಿದರು.[೪] ಪ್ರಿನ್ಸ್‌ ಆಫ್‌ ಪರ್ಷಿಯಾ ಅಸಾಸಿನ್‌'ಸ್‌ ಕ್ರೀಡ್‌ ನಲ್ಲೂ ಬಳಸಲಾಗಿರುವ ಸ್ಕಿಮಿಟರ್‌ ಎಂಜಿನ್‌ನ ಬಹಳಷ್ಟು ಸುಧಾರಿತ ಆವೃತ್ತಿಯನ್ನು ಬಳಸುತ್ತದೆ. ತಂತ್ರಾಂಶ ರಚನಾಕಾರರು ಈ ಎಂಜಿನ್‌ ಬಳಸುವುದರ ಮೂಲಕ ಆಟವನ್ನು ಹೆಚ್ಚು ವಿಸ್ತೃತ ವಿಶ್ವಗಳನ್ನು ಅಳವಡಿಸಲು ಹಾಗೂ ರೇಖೀಯತೆಯನ್ನು ಕಡಿಮೆಗೊಳಿಸಲು ಸಾಧ್ಯವಾದುದರಿಂದ ಇದನ್ನು ಆಯ್ಕೆ ಮಾಡಿದರು.[೪] ಮೇ 2008ರಲ್ಲಿ, ಯೂಬಿಸಾಫ್ಟ್‌ ಸಂಸ್ಥೆಯು ಕಲ್ಪನಾ ಚಿತ್ರಕಾರರು ರಾಜಕುಮಾರನ ಪಾತ್ರ ಹಾಗೂ ಎಲಿಕಾಳನ್ನು ವಿನ್ಯಾ ಮಾಡುತ್ತಿರುವ ಎರಡು ಅಧಿಕೃತ ವಿಡಿಯೋಗಳನ್ನು ಬಿಡುಗಡೆಗೊಳಿಸಿತು.[೧೫] ಒಂದು ವಿಡಿಯೋ ರಾಜಕುಮಾರ ಪಾತ್ರವನ್ನು ಚಿತ್ರಿಸುವುದನ್ನು ತೋರಿಸಿದರೆ, ಮತ್ತೊಂದು ಎಲಿಕಾಳ ಚಿತ್ರಣವನ್ನು ವಿಷದವಾಗಿ ತೋರಿಸುತ್ತದೆ.[೧೬] ಜುಲೈ 2008ರಲ್ಲಿ ಮತ್ತೊಂದು ವೇಗದ ಕಲ್ಪನಾ ಕಲೆಯು, ಈ ಬಾರಿ ಓರ್ವ ವೈರಿಯನ್ನು ಹಂಟರ್‌‌/ಬೇಟೆಗಾರನನ್ನು ಚಿತ್ರಿಸುವುದರೊಂದಿಗೆ ಹೊರಹೊಮ್ಮಿತು.[೧೭] ಅಸಾಸಿನ್‌'ಸ್‌ ಕ್ರೀಡ್‌‌ ನಂತಹಾ ಹಿಂದಿನ ಯೂಬಿಸಾಫ್ಟ್‌ ಆಟಗಳ ಹಾಗಲ್ಲದೇ ಪ್ರಿನ್ಸ್‌ ಆಫ್‌ ಪರ್ಷಿಯಾ ದ PC ಆವೃತ್ತಿಯು ಯಾವುದೇ ಸಾಂಖ್ಯಿಕ ಹಕ್ಕುಗಳ ರಕ್ಷಣೆಯನ್ನು ಹೊಂದಿಲ್ಲ.[೧೮]

ಯೂಬಿಸಾಫ್ಟ್‌ ಮೊದಲಿಗೆ ಆಟವನ್ನು ಸಿದ್ಧಪಡಿಸಬೇಕಾದರೆ, AI-ನಿಯಂತ್ರಿತ ಜೊತೆಗಾರನೊಂದಿಗೆ ಸಹಕಾರಿ ಆಟದ ರೀತಿಯು ತಾವು ಪ್ರಮುಖವಾಗಿ ನೀಡಬೇಕೆಂದಿದ್ದ ಸೌಲಭ್ಯವಾಗಿತ್ತು ಎಂದು ಮ್ಯಾಟ್ಟೆಸ್‌ ತಿಳಿಸಿದರು. ಮ್ಯಾಟ್ಟೆಸ್‌ರು "ಪ್ರಥಮ ದಿನದಿಂದಲೇ ನಮಗೆ ಮೂಲತಃ [ಸಹಕಾರಿ ಆಟದ ರೀತಿ] ಸ್ಯಾಂಡ್ಸ್‌ ಆಫ್‌ ಟೈಮ್‌‌ಅನ್ನು ಬದಲಿಸುವ ತಿರುವಾಗಲಿದೆ ಎಂಬುದು ಗೊತ್ತಿತ್ತು...ನಮಗೆ ಈ ಪಾತ್ರವು ಎಲಿಕಾ ಆಗಬಹುದು ಎಂಬುದರ ಬಗ್ಗೆ ಮೊದಲಿಗೆ ಕಲ್ಪನೆಯೇ ಇರಲಿಲ್ಲ...ನಾವು ಅದೊಂದು ಮಗು ಅಥವಾ ಅಪ್ಪನ ಪಾತ್ರ ಅಥವಾ ಸಹೋದರ ಅಥವಾ ಆ ತರಹದ್ದನ್ನು ಮಾಡುವ ಆಲೋಚನೆಗಳನ್ನು ವಿಷದವಾಗಿ ಗಮನಿಸಿದೆವು." ಎಂದು ವಿವರಿಸಿದರು[೧೯] ಆಟವನ್ನು AI-ನಿಯಂತ್ರಿತ ಸೌಲಭ್ಯಗಳ ಮೇಲೆ ಆಧರಿಸುವುದರ ಆಲೋಚನೆಯು Prince of Persia: The Sands of Time ರಿಂದ ಬಂದಿತು. ತಂಡಕ್ಕೆ ಫರಾಹ್‌ ಮತ್ತು ರಾಜಕುಮಾರ ಪಾತ್ರಗಳ ನಡುವಿನ ಸಂಬಂಧವು ಕಥೆಯನ್ನು ಹೇಳುವ ದೃಷ್ಟಿಯಲ್ಲಿ ಪ್ರಿನ್ಸ್‌ ಆಫ್‌ ಪರ್ಷಿಯಾ: ದ ಸ್ಯಾಂಡ್ಸ್‌ ಆಫ್‌ ಟೈಮ್‌‌ ನಲ್ಲಿ ಅನುಕೂಲಕರವೆನಿಸಿತು, ಹಾಗಾಗಿ ಅವರು ಅದೇ ಕಲ್ಪನೆಯಲ್ಲಿ ಮುಂದುವರೆಸಲು ನಿರ್ಧರಿಸಿದರು ಎಂದು ಮ್ಯಾಟ್ಟೆಸ್‌ ವಿವರಿಸಿದರು.[೧೯]

ಇಳಿಸಿಕೊಳ್ಳಬಲ್ಲ ಅಂಶ[ಬದಲಾಯಿಸಿ]

ಪ್ರಿನ್ಸ್‌ ಆಫ್‌ ಪರ್ಷಿಯಾ ಗೆಂದು ಸಿದ್ಧಪಡಿಸಲಾದ, ಎಪಿಲೋಗ್‌ ಎಂಬ ಹೆಸರಿನ ಇಳಿಸಿಕೊಳ್ಳಬಲ್ಲ ಅಂಶವೊಂದರ ಲಭ್ಯತೆಯನ್ನು, ಬೆನ್‌ ಮ್ಯಾಟ್ಟೆಸ್‌ IGNನೊಂದಿಗಿನ ಸಂದರ್ಶನದಲ್ಲಿ ದೃಢಪಡಿಸಿದರು. ನವೀನ ಅಂಶವು ಹೊಸ ಪ್ರದೇಶಗಳನ್ನು, ಹೊಸ ವೈರಿಗಳನ್ನು, ಹೊಸದಾದ ಹೋರಾಟದ ಕುಶಲತೆಗಳನ್ನು ಹಾಗೂ ಎಲಿಕಾಳಿಗೆ ಹೊಸದೊಂದು ಶಕ್ತಿಯನ್ನು ಸೇರಿಸುತ್ತದೆ ಎಂದು ಮ್ಯಾಟ್ಟೆಸ್‌ ಹೇಳಿದರು.[೨೦] ಫೆಬ್ರವರಿ 26, 2009ರಂದು ಈ ಅಂಶವನ್ನು Xbox 360 ಹಾಗೂ PlayStation 3 ವಿಡಿಯೋ ಆಟದ ಸಾಧನಗಳಿಗೆಂದು ಬಿಡುಗಡೆ ಮಾಡಲುದ್ದೇಶಿಸಿತ್ತಾದರೂ ,[೨೧] ಒಂದು ವಾರ ತಡವಾಗಿ ಮಾರ್ಚ್‌ 5, 2009ರಂದು ಬಿಡುಗಡೆಯಾಯಿತು.[೨೨] ವ್ಯಾವಹಾರಿಕ ಕಾರಣಗಳಿಗೋಸ್ಕರ, ಯೂಬಿಸಾಫ್ಟ್‌ ಎಪಿಲೋಗ್‌ ಅಂಶವನ್ನು ಆಟದ PC ಆವೃತ್ತಿಗೆ ಬಿಡುಗಡೆ ಮಾಡಿಲ್ಲ.[೨೩]

ಸ್ವೀಕೃತಿ[ಬದಲಾಯಿಸಿ]

 Reception
Aggregate scores
Aggregator Score
Metacritic Xbox 360: 81% (based on 70 reviews)[೨೪]
PlayStation 3: 84% (based on 58 reviews)[೨೫]
PC: 82% (based on 24 reviews)[೨೬]
Review scores
Publication Score
1UP.com Xbox 360: B+[೨೭]
Edge 5/10[೨೮]
Eurogamer 6/10[೨೯]
Game Informer Xbox 360/PS3: 8.75/10
Game Revolution Xbox 360: B[೩೦]
GameSpot Xbox 360/PS3/PC: 8.0/10[೩೧]
IGN Xbox 360/PS3: 9.3/10[೩೨]

Xbox 360, PlayStation 3, ಮತ್ತು PCಗಳಿಗೆ ಮೆಟಾಕ್ರಿಟಿಕ್‌ ಸಂಸ್ಥೆಯ ಮಾನಕದಲ್ಲಿ ಅನುಕ್ರಮವಾಗಿ 81%, 85%, ಮತ್ತು 82% ಪಡೆದುಕೊಂಡು ವಿಮರ್ಶಕರಿಂದ ಉತ್ತಮ ರೀತಿಯಲ್ಲಿ ಸ್ವೀಕೃತವಾಗಿದೆ.[೨೪][೨೫][೨೬] IGN ಲೇಖಕ ಹಿಲರಿ ಗೋಲ್ಡ್‌ಸ್ಟೇನ್‌ರು ಪ್ರೇಕ್ಷಣೀಯ ಚಮತ್ಕಾರಗಳು ಹಾಗೂ ಹೋರಾಟಗಳೊಂದಿಗೆ ಆಟದ ಸರಳತೆಯನ್ನು ಹಾಡಿಹೊಗಳಿದರೂ "[ಇದನ್ನು] ಇಷ್ಟಪಡಬೇಕೆಂದರೆ" "[ಸರಣಿಯಲ್ಲಿನ] ಬದಲಾವಣೆಯನ್ನು ಆದರಿಸಬೇಕು" ಎಂದು ಸೂಚಿಸಿದ್ದರು.[೩೨] ಗೋಲ್ಡ್‌ಸ್ಟೇನ್‌ ಆಟದ ರೀತಿಯಲ್ಲಿ ಪ್ರಯೋಜನಕಾರಿ ಸೌಲಭ್ಯ ಹಾಗೂ ಇಷ್ಟಪಡುವಂತಹಾ ಪಾತ್ರ ಎಂದು ಆಟದ ಪ್ರಮುಖ ದ್ವಿತೀಯ ಪಾತ್ರವಾದ ಎಲಿಕಾಳನ್ನು ಕೂಡಾ ಹೊಗಳಿದರು.[೩೨] ಗೇಮ್‌ಸ್ಪಾಟ್‌ನ ವಿಮರ್ಶಕರು ಸಹಾ ಇದೇ ರೀತಿಯ ಅಭಿಪ್ರಾಯವನ್ನು ಹಂಚಿಕೊಂಡರಲ್ಲದೇ ಅತ್ಯುತ್ತಮ ಕಲಾ ವಿನ್ಯಾಸಕ್ಕಾಗಿ ಹೊಗಳಿದರು.[೩೧] ಆದಾಗ್ಯೂ, ಅನೇಕರು ಆಟವನ್ನು ಸರಳ ಪ್ಲಾಟ್‌ಫಾರ್ಮ್‌ ಸೌಲಭ್ಯ ಹಾಗೂ ಹೋರಾಟದ ವಿಭಾಗಗಳಿಗೆ ಸಂಬಂಧಪಟ್ಟಂತೆ ವಿಪರೀತ ಸುಲಭ ಅಥವಾ "ಗ್ರಾಹಕ-ಸ್ನೇಹಿ," ಆಗಿರುವುದರ ಬಗ್ಗೆ ಟೀಕಿಸಿದ್ದಾರೆ.[೩೨][೨೯][೩೧] ಯೂರೋಗೇಮರ್‌ ಇದನ್ನು "ವಿಪರೀತ ಪುನರಾವರ್ತನೆ"ಯೊಂದಿಗೆ "ತೀರ ಸಾಧಾರಣ ಆಟ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೂ "ಅದ್ಭುತ ತಂತ್ರಜ್ಞಾನ ಹಾಗೂ ಆಸಕ್ತಿದಾಯಕ ತಂತ್ರಗಳ ಲಭ್ಯತೆ"ಗಳ ಬಗ್ಗೆ ಉತ್ತಮ ಅಭಿಪ್ರಾಯ ತೋರಿದರು.[೨೯] 1UP.com ಪ್ಲಾಟ್‌ಫಾರ್ಮ್‌ ಆಟದ ಪ್ರಾಪ್ತಿಪರ್ಯಂತ ಪ್ರಯತ್ನದ ರೀತಿಯ ಬಗ್ಗೆ ಟೀಕೆ ವ್ಯಕ್ತಪಡಿಸಿದರು.[೨೭]

ಕಲಾ ವಿನ್ಯಾಸ ಹಾಗೂ ಆಟದ ರೀತಿಯ ಬಗ್ಗೆ ಇತರೆ ವಿಡಿಯೋ ಆಟಗಳೊಂದಿಗೆ ಅನೇಕ ಹೋಲಿಕೆಗಳು ನಡೆದಿವೆ. ಮಿರರ್‌'ಸ್‌ ಎಡ್ಜ್‌‌ [೨೭] ಮತ್ತು ಯೂಬಿಸಾಫ್ಟ್‌ನದೇ ಆದ ಏಕೈಕ ಪ್ಲಾಟ್‌ಫಾರ್ಮ್‌ ಸೌಲಭ್ಯ ಹಾಗೂ ಅವಧಿ-ಆಧಾರಿತ ಹೋರಾಟದೊಂದಿಗಿನ ಅಸಾಸಿನ್‌'ಸ್‌ ಕ್ರೀಡ್‌‌ ಇದಕ್ಕೆ ಉದಾಹರಣೆಗಳು.[೨೯][೩೧] ತೀವ್ರತರ ಹೋರಾಟ ಹಾಗೂ ವ್ಯಾಪಕ ಮುಕ್ತ-ವಿಶ್ವದ ಪರಿಸರಗಳನ್ನು ಐಕೋ ಮತ್ತು ಷಾಡೋ ಆಫ್‌ ದ ಕೊಲೋಸಸ್‌ ,[೨೭] ಮತ್ತು ಒಕಾಮಿಜಲವರ್ಣದ ನೋಟಗಳಿಗೆ ಹೋಲಿಸಲಾಗಿದೆ.[೩೦]

ಮಾರಾಟಗಳು[ಬದಲಾಯಿಸಿ]

ಪ್ರಿನ್ಸ್‌ ಆಫ್‌ ಪರ್ಷಿಯಾ ಆಟವು Playstation 3ನಲ್ಲಿ ಆಡುವ ಡಿಸೆಂಬರ್‌ 2008ರಲ್ಲಿ ನಾಲ್ಕನೇ ಅತಿ ಹೆಚ್ಚು ಮಾರಾಟವಾದ ಆಟವಾಗಿದ್ದರೂ, Playstation 3 ಮತ್ತು Xbox 360ಗಳ ಒಟ್ಟಾರೆ ಮಾರಾಟವು ಕೇವಲ 483,000 ಘಟಕಗಳಷ್ಟಿತ್ತು .[೩೩] ಪ್ರಿನ್ಸ್‌ ಆಫ್‌ ಪರ್ಷಿಯಾ ದ 2.2 ದಶಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ ಎಂಬ ಮಾರಾಟದ ಅಂಕಿಅಂಶಗಳನ್ನು ಜನವರಿ 2009ರ ಹಾಗೆ ಯೂಬಿಸಾಫ್ಟ್‌ ನಂತರ ಬಿಡುಗಡೆ ಮಾಡಿತು.[೩೪]

ಪ್ರಶಸ್ತಿಗಳು[ಬದಲಾಯಿಸಿ]

ಫೆಬ್ರವರಿ 19, 2009ರಂದು ಪ್ರಿನ್ಸ್‌ ಆಫ್‌ ಪರ್ಷಿಯಾ ಹನ್ನೆರಡನೇ ವಾರ್ಷಿಕ ಪರಸ್ಪರ-ವರ್ತಿತ ಸಾಧನೆ ಪ್ರಶಸ್ತಿಗಳು/ವಾರ್ಷಿಕ ಇಂಟರ್‌ಆಕ್ಟೀವ್‌ ಸಾಧನೆ ಪ್ರಶಸ್ತಿಗಳುನಲ್ಲಿ "ಸಜೀವಚಿತ್ರಿಕೆಯಲ್ಲಿ ಅತ್ಯುತ್ತಮ ಸಾಧನೆ" ಎಂದ ಪ್ರಶಸ್ತಿ ಪಡೆಯಿತು.[೩೫]

ಆಕರಗಳು[ಬದಲಾಯಿಸಿ]

  1. "Prince of Persia Soundtrack composed by Inon Zur and Stuart Chatwood". Music 4 Games.net. 2008-10-30. Archived from the original on 2008-12-19. Retrieved 2009-07-27.
  2. "Ubisoft Announces New Mac Titles". TransGaming. 2009-02-19.
  3. ೩.೦ ೩.೧ "Questions & Answers with Ben Mattes (Producer)".
  4. ೪.೦ ೪.೧ ೪.೨ "Ubidays 2008: Interview Part 1 HD". Gametrailers.com. 2008-05-29. Retrieved 2009-07-27.
  5. ೫.೦ ೫.೧ "Prince of Persia Heir Apparent" (182). Game Informer. 2008: 58–63. {{cite journal}}: |access-date= requires |url= (help); Cite journal requires |journal= (help); Italic or bold markup not allowed in: |publisher= (help); Unknown parameter |month= ignored (help)
  6. "Prince of Persia E3 2008 Stage Show Demo". GameSpot UK. 2008-07-15. Archived from the original on 2012-06-30. Retrieved 2009-07-27.
  7. Burnes, Andrew (2009-01-29). "Prince of Persia Epilogue DLC screenshots". IGN. Archived from the original on 2011-07-21. Retrieved 2009-07-27.
  8. ೮.೦ ೮.೧ Prince of Persia. Ubisoft Montreal. 2008. p. 4. {{cite book}}: |access-date= requires |url= (help)
  9. Browne, Catherine (2008). Prince of Persia: Prima Official Game Guide. Roseville, CA: Prima Games. p. 4. ISBN 978-0-7615-6116-3. {{cite book}}: |access-date= requires |url= (help)
  10. Prince of Persia. Ubisoft Montreal. 2008. p. 7. {{cite book}}: |access-date= requires |url= (help)
  11. Browne, Catherine (2008). Prince of Persia: Prima Official Game Guide. Roseville, CA: Prima Games. p. 5. ISBN 978-0-7615-6116-3. {{cite book}}: |access-date= requires |url= (help)
  12. Prince of Persia. Ubisoft Montreal. 2008. p. 8. {{cite book}}: |access-date= requires |url= (help)
  13. Browne, Catherine (2008). Prince of Persia: Prima Official Game Guide. Roseville, CA: Prima Games. p. 7. ISBN 978-0-7615-6116-3. {{cite book}}: |access-date= requires |url= (help)
  14. Wales, Matt (2006-09-21). "Ubi's Booby: New Games Leaked". IGN UK. Archived from the original on 2012-02-12. Retrieved 2009-07-27.
  15. "First Look - Speed Art Trailer". Gametrailers.com. 2008-05-07. Retrieved 2009-07-27.
  16. "Speed Art Trailer 2: Elika". Gametrailers.com. 2008-05-22. Retrieved 2009-07-27.
  17. "Speed Art Trailer 3: The Hunter". Gametrailers.com. 2008-07-13. Retrieved 2009-07-27.
  18. Kuchera, Ben (2008-12-12). "PC Prince of Persia contains no DRM. It's a trap!". ars technica.com. Retrieved 2009-07-27.
  19. ೧೯.೦ ೧೯.೧ Browne, Catherine (2008). Prince of Persia: Prima Official Game Guide. Roseville, CA: Prima Games. pp. 194–201. ISBN 978-0-7615-6116-3. {{cite book}}: |access-date= requires |url= (help)
  20. Brudvig, Erik (2008-12-22). "IGN: Prince of Persia afterthoughts". IGN. Retrieved 2009-07-27.
  21. Goldstein, Hilary (2009-02-18). "Prince of Persia: Epilogue hands-on". IGN. Archived from the original on 2011-07-21. Retrieved 2009-02-22.
  22. Ubisoft (2008-02-25). "Twitter - Ubisoft: announces new release date ..." Retrieved 2009-07-27.
  23. Breckon, Nick (2009-02-02). "Prince of Persia DLC not coming to PC". Shacknews.com. Retrieved 2009-07-27.
  24. ೨೪.೦ ೨೪.೧ "Prince of Persia at Metacritic (Xbox 360)". Metacritic. Archived from the original on 2012-04-16. Retrieved 2009-01-06.
  25. ೨೫.೦ ೨೫.೧ "Prince of Persia at Metacritic (Playstation 3)". Metacritic. Archived from the original on 2012-03-02. Retrieved 2009-01-06.
  26. ೨೬.೦ ೨೬.೧ "Prince of Persia at Metacritic (PC)". Metacritic. Archived from the original on 2012-03-14. Retrieved 2009-01-06.
  27. ೨೭.೦ ೨೭.೧ ೨೭.೨ ೨೭.೩ Varanini, Giancarlo (2008-12-02). "Prince of Persia review at 1UP". 1UP.com. Archived from the original on 2012-03-21. Retrieved 2009-01-02.
  28. E197 p84-85
  29. ೨೯.೦ ೨೯.೧ ೨೯.೨ ೨೯.೩ Tom Bramwell (2008-12-05). "Prince of Persia Review // Xbox 360 /// Eurogamer". Eurogamer. Retrieved 2009-01-02.
  30. ೩೦.೦ ೩೦.೧ Ferris, Duke (2008-12-03). ""Prince of Persia" review at GameRevolution". Game Revolution. Archived from the original on 2012-03-21. Retrieved 2009-01-02.
  31. ೩೧.೦ ೩೧.೧ ೩೧.೨ ೩೧.೩ VanOrd, Kevin (2008-12-02). "Prince of Persia (2008) for PC Review". GameSpot. Archived from the original on 2008-12-18. Retrieved 2009-01-02.
  32. ೩೨.೦ ೩೨.೧ ೩೨.೨ ೩೨.೩ Goldstein, Hilary (2008-11-26). "Prince of Persia review at IGN". IGN. Retrieved 2009-01-02.
  33. Matthews, Matt (2009-01-21). "NPD Exclusive: U.S. Sales For LBP, MGS4, More Revealed". Gamasutra.com. Retrieved 2009-07-27.
  34. "Ubisoft reports third quarter 2008-09 sales" (PDF). Retrieved 2009-07-27.
  35. "The 12th Annual Interactive Achievement Awards". Academy of Interactive Arts & Sciences. 2009. Archived from the original on 2009-02-23. Retrieved 2009-07-27.

ಹೊರಗಿನ ಕೊಂಡಿಗಳು[ಬದಲಾಯಿಸಿ]

  1. REDIRECT Template:Prince of Persia