ಪ್ರಾಧ್ಯಾಪಕನ ಪೀಠದಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಧ್ಯಾಪಕನ ಪೀಠದಲ್ಲಿ ಡಾ. ಬಿ. ಜಿ. ಎಲ್ ಸ್ವಾಮಿಯವರು ಒಂದು ಕೃತಿ. ಇದರಲ್ಲಿ ಅವರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹುದ್ದೆಯಲ್ಲಿನ ತಮ್ಮ ಅನುಭವಗಳನ್ನು ಹೇಳಿದ್ದಾರೆ.

ಇದರ ಮೊದಲ ಅಧ್ಯಾಯದ ಹೆಸರು "ಸಮ್ - ಹೌ" - ಕಾಲೇಜಿನಲ್ಲಿ ಪೀಠೋಪಕರಣಗಳ ಆಭಾವವಿದ್ದರೂ ಹೆಚ್ಚು ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸೇರಿಸಿಕೊಳ್ಳಲು ಇವರ ಮೇಲೆ ಒತ್ತಡವಿತ್ತು. ಇವರು ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ದೈರೆಕ್ಟರಲ್ಲಿ ತಮ್ಮ ಕಷ್ಟವನ್ನು ಹೇಳಿದಾಗೆಲ್ಲವೂ "ಸಮ್ ಹೌ ಮ್ಯಾನೆಜ್" ಎಂಬ ಸಮಜಾಯಿಷಿಯ ಉತ್ತರ ಸಿಗುತ್ತಿತ್ತಂತೆ. ಆ ವರ್ಷದ ಪ್ರಾಕ್ಟಿಕಲ್ ಪರೀಕ್ಷಯ ಸಮಯ ಸ್ವಾಮಿಯವರು ಕೆಲವು ವಿದ್ಯಾರ್ಥಿಗಳನ್ನು ಪ್ರಯೋಗಾಲಯದ ಒಳಗೆ, ಮಿಕ್ಕವರನ್ನು ಹೊರಗೆ ಸ್ಥಳಾವಕಾಶ ಮಾಡಿದ್ದರಂತೆ. ಈ ವೇಳೆ ಪ್ರಿನ್ಸಿಪಾಲ್ ಬಂದು ಸ್ವಾಮಿಯವರನ್ನು ಕೇಳಿದನಂತೆ. ಅದಕ್ಕೆ ಸ್ವಾಮಿಯವರು ಕೊಟ್ಟ ಬದಲು ಏನು ಗೊತ್ತೆ? ಒಳಗಿರುವವರು "ಸಮ್ ", ಹೊರಗೆ ಕುಳಿತಿರುವವರು "ಹೌ". ಇದನ್ನು ಕೇಳಿಸಿಕೊಂಡವರೆಲ್ಲರೂ ಘೊಳ್ಳೆಂದು ನಕ್ಕರಂತೆ. ಸ್ವಲ್ಪ ಸಮಯದ ನಂತರ ಸ್ವಾಮಿಯವರಿಗೆ ಪ್ರಿನ್ಸಿಪಾಲಿನಿಂದ ಬಂದ ಮೆಮೊ ಹೀಗಿತ್ತು "ನೀವು ಇಂಗ್ಲಿಷ್ ಭಾಶೆಯನ್ನು ಗೌರವದಿಂದ ಕಾಣಬೇಕು. ಇಷ್ಟ ಬಂದಂತೆ ಈ ರೀತಿಯ ಪದವಿಭಾಗ ಮಾಡಿ ಭಾಷೆಗೆ ಅವಮಾನ ಮಾಡಬಾರದು!"

ಇನ್ನೊಂದು ಪ್ರಸಂಗ - ವಿಭಾಗದ ಪರೀಕ್ಷಕರಾಗಿ, "ಪೂನಾವಾಲಾ" ಹಾಗೂ "ವಾರಾಣಸಿವಾಲಾ"ರೊಂದಿಗೆ ಉತ್ತರಪತ್ರಿಕೆಯ ಮೌಲ್ಯಮಾಪನಾ ಸಮಯದಲ್ಲಿ ಏನೇನು ತಮಾಷೆ ನಡೆದವೆಂದು ವಿವರಿಸಿದ್ದಾರೆ.

ಮತ್ತೊಂದು ಪ್ರಸಂಗ - ಪಬ್ಲಿಕ್ ಸರ್ವಿಸ್ ಕಮಿಷನ್ ನೇಮಿಸಿದ ಕನ್ನಡ ಪತ್ರಿಕೆಯ ಮೌಲ್ಯಮಾಪಕರಾಗಿ ಒಬ್ಬ ತಮಿಳ ಬರೆದ ಕನ್ನಡ ಪತ್ರಿಕೆಯನ್ನು ಮೌಲ್ಯ ಮಾಡುವಾಗ ಅವರ ಅನುಭವವನ್ನು ಹೇಲಿದ್ದಾರೆ -

ಪ್ರಶ್ನೆ: ಭೀಮ - ದುರ್ಯೋಧನರ ಯುದ್ಧವನ್ನು ನಿಮ್ಮ ವಾಕ್ಯಗಲ್ಸ್ಲ್ಲಿ ಬರೆಯಿರಿ:

ತಮಿಳ ಬರೆದ ಉತ್ತರ: "ಒ6ದಾ ಊರಿನಾಕೆ ಒಬ್ಬ ಇರಾಶಾ ಇದ್ದ. ಅವನ ಎಚರು ಪೀಮ. ಮಆ ಮೇತಾವಿ. ಒಂತು ತಿನ ಇವನು ತುರೋತ್ನಿಗೆ ಕಾಲ್ಕೆರೆತ, ಗತೆ ಪಿಟಿತ್ಕೊಂಡ್ ಒಬ್ರಿಗೊಬ್ರು ಶಂಡೈ ಮಾಡಿದ್ರು. ಆಮೇಲಿಂದ ಮರತ್ ಓಯ್ತು."