ಬೀಜಗಣಿತ
ವಿಕಿಪೀಡಿಯ ಇಂದ
(ಪ್ರಾಥಮಿಕ ಬೀಜಗಣಿತ ಇಂದ ಪುನರ್ನಿರ್ದೇಶಿತ)
ಬೀಜಗಣಿತ(algebra)ವು ಗಣಿತಶಾಸ್ತ್ರದ ಒಂದು ಪ್ರಮುಖ ಅಂಗ.ಬೀಜಗಣಿತದ ಜ್ಞಾನವಿಲ್ಲದೆ ಗಣಿತದ ಪರಿಪೂರ್ಣ ಅರಿವಾಗಲು ಸಾದ್ಯವಿಲ್ಲ.ವಿಜ್ಞಾನಿಗಳು,ತಂತ್ರಜ್ಞರು ದಿನನಿತ್ಯ ಬೀಜಗಣಿತವನ್ನು ಉಪಯೋಗಿಸುತ್ತಾರೆ.ವಾಣಿಜ್ಯ ಹಾಗೂ ಕೈಗಾರಿಕೋದ್ಯಮದಲ್ಲಿಯೂ ಬೀಜಗಣಿತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಬಳಕೆಯಾಗುತ್ತದೆ.ಇದರ ಪ್ರಾಮುಖ್ಯತೆಯಿಂದ ಪ್ರಪಂಚದಾದ್ಯಂತ ಶಾಲಾ ಕಾಲೇಜುಗಳಲ್ಲಿ ಬೀಜಗಣಿತವನ್ನು ಕಲಿಸಲಾಗುತ್ತಿದೆ.
ಬೀಜಗಣಿತದ ವರ್ಗೀಕರಣ [ಬದಲಾಯಿಸಿ]
ಬೀಜಗಣಿತವನ್ನು ಸ್ಥೂಲವಾಗಿ ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ.
- ಪ್ರಾಥಮಿಕ ಬೀಜಗಣಿತ
- ಸಂಕೀರ್ಣ ಬೀಜಗಣಿತ
- ರೇಖೀಯ ಬೀಜಗಣಿತ (Linear algebra)
- ಸಾರ್ವತ್ರಿಕ ಬೀಜಗಣಿತ
- ಬೀಜಗಣಿತೀಯ ಸಂಖ್ಯಾ ಸಿದ್ಧಾಂತ
- ಬೀಜಗಣಿತೀಯ ಜ್ಯಾಮಿತಿ
- ಸಂಯೋಜನಾತ್ಮಕ ಬೀಜಗಣಿತ (Algebraic combinatorics)
ಬಾಹ್ಯ ಸಂಪರ್ಕಗಳು [ಬದಲಾಯಿಸಿ]
- 4000 Years of Algebra, lecture by Robin Wilson, at Gresham College, 17th October 2007 (available for MP3 and MP4 download, as well as a text file).