ಪ್ರಾಣ ಪ್ರತಿಷ್ಠೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಣ ಪ್ರತಿಷ್ಠೆಯು ಒಂದು ಮೂರ್ತಿಯಲ್ಲಿ ನೆಲೆಸಲು ಒಬ್ಬ ದೇವತೆಯನ್ನು ತುಂಬುವ ಅಥವಾ ತರುವ ವಿಧಿ ಅಥವಾ ಸಮಾರಂಭಕ್ಕೆ ಹಿಂದೂ ದೇವತಾಶಾಸ್ತ್ರೀಯ ಪದ. ಗ್ಯಾವಿನ್ ಫ಼್ಲಡ್ ಪ್ರಕಾರ, "ದೇವತೆಯ ಪ್ರಜ್ಞೆ ಅಥವಾ ಶಕ್ತಿಯನ್ನು ತಂದು ದೇವಾಲಯದಲ್ಲಿನ ಮೂರ್ತಿಯನ್ನು ಜಾಗೃತಗೊಳಿಸುವ ಪವಿತ್ರೀಕರಣದ ಒಂದು ಕ್ರಿಯಾವಿಧಿ." ಸಾಂಪ್ರದಾಯಿಕ ಹಿಂದೂ ಧರ್ಮದ ಪ್ರಕಾರ, ಈ ವಿಧಿಯನ್ನು ಸರಿಯಾಗಿ ನಡೆಸಿದ ನಂತರವಷ್ಟೇ ಮೂರ್ತಿಗೆ ಪೂಜೆಯನ್ನು ಮಾಡಬೇಕು.