ಪುತ್ತೂರು
| Puttur | |
| — city — | |
| Location in Karnataka, India | |
| ರೇಖಾಂಶ: | |
| Country | |
|---|---|
| State | Karnataka |
| Region | Tulu Nadu |
| District | Dakshina Kannada |
| ಸರ್ಕಾರ | |
| - MLA | Mallika Prasad |
| ಎತ್ತರ | ೮೭ ಮೀ (೨೮೫ ಅಡಿ) |
| ಜನಸಂಖ್ಯೆ (2011) | |
| - ಒಟ್ಟು | ೫೨,೦೦೦ |
| - ಸಾಂದ್ರತೆ | ./ಚದರ ಕಿಮಿ (./ಚದರ ಮೈಲಿ) |
| PIN | 574203 |
| ದೂರವಾಣಿ ಕೋಡ್ | 8251 |
ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪಟ್ಟಣ. ಇದು ಪುತ್ತೂರು ತಾಲೂಕಿನ ಪ್ರಧಾನ ಕೇಂದ್ರ. ಈ ನಗರ ಮಂಗಳೂರಿನಿಂದ 52 ಕಿ.ಮೀ. ದೂರದಲ್ಲಿದೆ. ಮೈಸೂರು-ಮಂಗಳೂರು ಹೆದ್ದಾರಿಯ ನಡುವಿನ ಕರಾವಳಿ ಮತ್ತು ಪಶ್ಚಿಮ ಘಟ್ಟದ ಗುಡ್ಡಬೆಟ್ಟಗಳ ನಡುವಿದೆ. 2006ಕ್ಕೆ ಇಲ್ಲಿನ ಜನಸಂಖ್ಯೆ 48.063 ಇತ್ತು. ಇಲ್ಲಿನ ನಿವಾಸಿಗಳ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಗೋಡಂಬಿಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಮತ್ತು ಕ್ಯಾಂಪ್ಕೊ ಪ್ರಧಾನ ಕಾರ್ಖಾನೆ ಪುತ್ತೂರಿನಲ್ಲಿದೆ.
ಪುತ್ತೂರಿಗೆ ಸನಿಹದಲ್ಲಿರುವ ಇತರ ಪಟ್ಟಣಗಳು:ಸುಳ್ಯ (35 ಕಿಮೀ), ಉಪ್ಪಿನಂಗಡಿ (12 ಕಿಮೀ), ಬೆಳ್ಳಾರೆ(25 ಕಿಮೀ) ಮತ್ತು ವಿಟ್ಲ (15 ಕಿಮೀ).
ಪುತ್ತೂರು - ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ. ಇದು ದಕ್ಷಿಣ ಕನ್ನಡದ ಎರಡನೆ ದೊಡ್ಡ ಪಟ್ಟಣ ಹಾಗೂ ಪ್ರಮುಖ ವ್ಯಾಪಾರೀ ಕೇಂದ್ರ. ಈ ಪಟ್ಟಣಕ್ಕೆ ಪುತ್ತೂರು ಎಂದು ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಮುಖ ದೇವಾಲಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಈ ಪಟ್ಟಣದ ಹೆಸರಿಗೂ ನಂಟಿದೆ. ಪುತ್ತೂರು ಹಿಂದೆ "ಬಂಗ" ವಂಶದ ಅರಸರ ರಾಜಧಾನಿಯಾಗಿತ್ತು. ಹಿಂದೆ ಈ ದೇವಾಲಯ ಹಿಂಭಾಗದಲ್ಲಿ ಭಾರೀ ದೊಡ್ಡ ಕೆರೆಯನ್ನು ಮಾಡಲಾಯ್ತು. ಆದರೆ, ಅದರ ಆಳ ಎಷ್ಟೇ ಆದರೂ ನೀರು ದೊರಕಲೇ ಇಲ್ಲ. ಇದಕ್ಕಾಗಿ ದೇವಾಲಯದ ಆಡಳಿತ ವರ್ಗ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದರು. ಜನರೆಲ್ಲರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ. ಸೇರಿದ ಜನರೆಲ್ಲ ಎದ್ದು ಹೊರಗೆ ಓಡಿದರು. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳೇ ಮುತ್ತುಗಳಾಗಿ ಬೆಳೆದವಂತೆ. ಮುತ್ತುಗಳು ಬೆಳೆದ ಊರು -"ಮುತ್ತೂರು" ಎಂದಾಗಿ, ಕ್ರಮೇಣ ಜನರ ಬಾಯಲ್ಲಿ "ಪುತ್ತೂರು" ಎಂದಾಯಿತೆಂದು ಪ್ರತೀತಿ. ಪುತ್ತೂರಿನ ವಿಶೇಷಗಳಲ್ಲಿ "ಬೆಂದ್ರ್‌ತೀರ್ಥ" ಮೊದಲನೆಯದು. "ಬೆಂದ್ರ್" ಎಂದರೆ ತುಳುವಿನಲ್ಲಿ "ಬಿಸಿನೀರು" ಎಂದರ್ಥ. ಪುತ್ತೂರು ಸಮೀಪದ ಇರ್ದೆ ಎಂಬಲ್ಲಿ ಇರುವ ಈ ಕೊಳದ ನೀರು ಸದಾಕಾಲ ಬೆಚ್ಚಗಿದ್ದು, ಕೊಳದ ತಳದಿಂದ ಬಿಸಿನೀರಿನ ಬುಗ್ಗೆ ಏಳುತ್ತಿರುತ್ತದೆ. ಈ ರೀತಿಯ ಪ್ರಕೃತಿ ವೈಚಿತ್ರ ಭಾರತದೇಶದಲ್ಲಿ ಒಟ್ಟು ೩ ಕಡೆ ಇದ್ದು, ದಕ್ಷಿಣ ಭಾರತದಲ್ಲಿ ಇದೊಂದೇ ಎನ್ನಲಾಗಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ ಡಾ|ಕೆ. ಶಿವರಾಮ ಕಾರಂತರ ಹಲವಾರು ಪ್ರಯೋಗಗಳಿಗೆ ಆಡುಂಬೊಲವಾಗಿದ್ದ ಪುತ್ತೂರಿನಲ್ಲಿ ಅವರು ವಾಸವಾಗಿದ್ದ ಮನೆಯನ್ನು ಇದೀಗ ಕರ್ನಾಟಕ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡು ಅಲ್ಲಿ ಅವರ ಸ್ಮರಣಾರ್ಥವಾಗಿ "ಬಾಲವನ"ವನ್ನಾಗಿ ಇನ್ನೊಂದು ಮುಖ್ಯ ಪ್ರೇಕ್ಷಣೀಯ ಸ್ಥಳವನ್ನಾಗಿಸಿದೆ. ತುಳು ಜಾನಪದ ವೀರರಾದ ಕೋಟಿ-ಚೆನ್ನಯರ ಹುಟ್ಟಿದ ಸ್ಥಳ ಪಡುಮಲೆ ಪುತ್ತೂರಿನ ಸಮೀಪದಲ್ಲಿದೆ. ಅಲ್ಲಿ ಅವರ ಸಮಾಧಿಗಳೂ ಇವೆ. ದಕ್ಷಿಣ ಕನ್ನಡದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪುತ್ತೂರಿನ ಸಮೀಪದ ಕೊಡಿಪಾಡಿ ಜನಾರ್ದನ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಮಾಯಿ ದೆ ದೇವೂಸ್ ಇಗರ್ಜಿ -ಇವೂ ಸೇರಿವೆ.
ಪರಿವಿಡಿ |
ಭೌಗೋಲಿಕ ವಿವರಗಳು [ಬದಲಾಯಿಸಿ]
ಪುತ್ತೂರು ನಲ್ಲಿ ಇದೆ . [೧] ಇದು 87 ಮೀಟರ್ ಗಳು (285 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.
ಪಟ್ಟಣದ ಪುರಸಭಾ ಪ್ರದೇಶಗಳು- ಬಲ್ನಾಡು, ಪಡ್ನೂರು, ಕಬಕ ಬನ್ನೂರು, ಚಿಕ್ಕಮೂಡ್ನೂರು, ಕೆಮ್ಮಿಂಜೆ, ಆರ್ಯಾಪು ಗ್ರಾಮಗಳನ್ನು ಹೊಂದಿದೆ. ಇದರಲ್ಲಿ ಪುತ್ತೂರು ಕಸಬಾ ದಟ್ಟವಾದ ಜನಸಂಖ್ಯೆಯನ್ನು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ನಗರವೆಂಬ ಖ್ಯಾತಿಯನ್ನೂ ಪುತ್ತೂರು ಪಡೆದಿದೆ.
ನಾಗರಿಕ ಆಡಳಿತ [ಬದಲಾಯಿಸಿ]
ಪಟ್ಟಣ ಪಂಚಾಯತ್ ಆಗಿದ್ದ ಪುತ್ತೂರು ನಗರಾಡಳಿತವನ್ನು 1973ರಲ್ಲಿ ಪುತ್ತೂರು ನಗರ ಮುನ್ಸಿಪಲ್ ಕೌನ್ಸಿಲ್ ಎಂದು ಮಾಡಲಾಯಿತು. ಆರಂಭದಲ್ಲಿ ಟಿಎಂಸಿ ಆವರಿಸಿರುವ ಕ್ಷೇತ್ರವು 11 ಕಿ.ಮೀ. ದೂರದ ಕಸಬದವರೆಗೆ ಮಾತ್ರವಿತ್ತು. ನಂತರ 1996 ಇಸವಿಯಲ್ಲಿ ನಗರದಿಂದ 34 ಕಿ.ಮೀ. ವ್ಯಾಪ್ತಿಯಲ್ಲಿ ಪಕ್ಕದ ಹಳ್ಳಿಗಳನ್ನು 27 ಕೌನ್ಸಿಲರ್ ವಾರ್ಡ್ ಮೂಲಕ ನಗರ ಮುನ್ಸಿಪಾಲಿಟಿ ಜೊತೆ ವಿಲೀನಗೊಳಿಸಲಾಯಿತು.
ಪುತ್ತೂರು ನಗರವು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ದೊಡ್ಡ ಪಟ್ಟಣ ಆಗಿದೆ. ಮಂಗಳೂರು - ಮೈಸೂರು ಹೆದ್ದಾರಿ (ಬಂಟ್ವಾಳ -ಮೈಸೂರು ರಾಜ್ಯ ಹೆದ್ದಾರಿ 88)ಯಲ್ಲಿರುವ ಇದು ಮಂಗಳೂರು, ಜಿಲ್ಲಾ ಹೆಡ್ ಕ್ವಾರ್ಟರ್ ನಿಂದ 52 ಕಿಮೀ ದೂರದಲ್ಲಿದೆ. ಈಗಿನ ಸುಳ್ಯ ತಾಲ್ಲೂಕು, ಬೆಳ್ತಂಗಡಿ ತಾಲ್ಲೂಕು ಮತ್ತು ಬಂಟ್ವಾಳl ತಾಲ್ಲೂಕು, ಬಂಟ್ವಾಳ ತಾಲೂಕಿನ ವಿಟ್ಲಕ್ಕೆ ಪ್ರಧಾನ ತಾಲೂಕು ಕೇಂದ್ರವಾಗಿತ್ತು. ತಾಲೂಕಿನ ಪುನರ್ ಸಂಘಟನೆ ನಂತರ 68 ಹಳ್ಳಿಗಳನ್ನು ಒಳಗೊಂಡ 37 ಗ್ರಾಮ ಪಂಚಾಯತುಗಳಿಗೆಪುತ್ತೂರು ಪ್ರಧಾನ ಕಾರ್ಯಸ್ಥಾನವಾಗಿದೆ. ತಾಲೂಕುಗಳ ಪುನರ್ ಸಂಘಟನೆಯ ನಂತರ ಸುತ್ತಮುತ್ತಲಿನ ತಾಲೂಕುಗಳಿಗೆ ಪುತ್ತೂರು ನಗರವು ಆರ್ಥಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗಳ ಮುಖ್ಯ ಕೇಂದ್ರವಾಗಿ ಮುಂದುವರಿದಿದೆ. ಈ ತಾಲೂಕಿನ ದಕ್ಷಿಣ ಭಾಗಗಳನ್ನು ಕೇರಳ ರಾಜ್ಯದ ಹಳ್ಳಿಗಳು ಸುತ್ತುವರೆದಿವೆ.
ಆರ್ಥಿಕತೆ [ಬದಲಾಯಿಸಿ]
ಕೃಷಿ [ಬದಲಾಯಿಸಿ]
ಭಾರಿ ಮಳೆ ಸುರಿಯುವ ಪಶ್ಚಿಮ ಘಟ್ಟದ ಸಮೃದ್ಧ ಹಸಿರು ಕಾಡುಗಳಿಂದ ಆವೃತ್ತವಾದ ಪುತ್ತೂರು ಕರಾವಳಿ ಪ್ರದೇಶದ ಒಂದು ಕೃಷಿ ಆಧಾರಿತ ಪಟ್ಟಣವಾಗಿದೆ. ಇಲ್ಲಿನ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಇಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆಗಳು: ಬತ್ತ, ಅಡಿಕೆ, ತೆಂಗು, ಗೋಡಂಬಿ, ರಬ್ಬರ್, ಕೋಕೋ ಬೀಜ, ಮೆಣಸಿನಕಾಯಿ, ವೆನಿಲಾ, ಮೆಣಸು ಮತ್ತು ಬಾಳೆ. ಜೊತೆಗೆ ಹೈನುಗಾರಿಕೆ, ರೇಷ್ಮೆ ವ್ಯವಸಾಯ ಮತ್ತು ತೋಟಗಾರಿಕೆ ಚಟುವಟಿಕೆಗಳು ಕೆಲವು ಜನರ ಗಳಿಕೆಗೆ ನೆರವಾಗಿದೆ.
ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ [ಬದಲಾಯಿಸಿ]
ಇದು [[ಕೇರಳ|ಕೇರಳ{/ ಸರಕಾರ ಮತ್ತು ಕರ್ನಾಟಕ]] ಜಂಟಿ ಉದ್ಯಮವಾಗಿದೆ. ಎರಡೂ ರಾಜ್ಯಗಳ ಕೊಕೊ ಬೀಜ ಬೆಳೆಗಾರರ ಕಲ್ಯಾಣ ಪ್ರೋತ್ಸಾಹಿಸುವ ಉದ್ಯಮ ಇದಾಗಿದೆ. ಹಾಲೆಂಡ್ ಆಮದು ಯಂತ್ರೋಪಕರಣ ಹೊಂದಿರುವ ಇದು ಏಷ್ಯಾ ಖಂಡದಲ್ಲೇ ಅತಿದೊಡ್ಡ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ. ಈ ಕಾರ್ಖಾನೆಯಲ್ಲಿ ಉತ್ಪಾದಿಸುವ ಕೋಕಾ ಬಟರ್ ಹೆಚ್ಚಿನ ಭಾಗವು ರಫ್ತಾಗುತ್ತಿದೆ. ಇಲ್ಲಿ ತಯಾರಿಸುವ ವಿಭಿನ್ನ, ಬಗೆಬಗೆಯ ಚಾಕೊಲೇಟ್ಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಂಡಿದೆ ಮತ್ತು ಕೆಲವು ಚಾಕೊಲೇಟ್ ಗಳು ರಫ್ತಾಗುತ್ತಿವೆ. ನೆಸ್ಲೆ ಕಂಪನಿಯು ಕ್ಯಾಂಪ್ಕೊ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಅದರ ಬ್ರಾಂಡ್ ಹೆಸರಿನಲ್ಲಿ ಚಾಕೊಲೇಟ್ ಉತ್ಪಾದಿಸುತ್ತದೆ. ಈ ಚಾಕೊಲೇಟ್ ಕೊಕೊ ಬೆಳೆಗಾರರಿಗೆ ಹೊಸ ಜೀವನ ನೀಡಿದೆ. ಇದರ ಕಾರ್ಯಾರಂಭ ಆರಂಭವಾದ ಸಮಯದಲ್ಲಿ ದೇಶದ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಇದಾಗಿತ್ತು.
ಜನಸಂಖ್ಯಾ ವಿವರ [ಬದಲಾಯಿಸಿ]
As of 2011[update] ಭಾರತದ ಜನಗಣತಿ, ಪ್ರಕಾರ [೨] ಪುತ್ತೂರು 52000 ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು 50:50 ಇದ್ದಾರೆ. ಸರಾಸರಿ ಸಾಕ್ಷರತೆಯ ಪ್ರಮಾಣವು 79% ಇದೆ. ರಾಷ್ಟ್ರೀಯ ಸಾಕ್ಷರತೆ ಸರಾಸರಿ 59.5%ಕ್ಕಿಂತ ಇದು ಅಧಿಕ. ಇಲ್ಲಿ ಪುರುಷರ ಸಾಕ್ಷರತೆ 83% ಮತ್ತು ಮಹಿಳೆಯರ ಸಾಕ್ಷರತೆ 75% ಇದೆ. ಒಟ್ಟು ಜನಸಂಖ್ಯೆಯ 11% ರಷ್ಟು 6 ವರ್ಷ ವಯೋಮಿತಿಗಿಂತ ಕೆಳಗಿನವರು.ತುಳು, ಕನ್ನಡ, ಕೊಂಕಣಿ ಮತ್ತು ಮಲಯಾಳಂ ಇಲ್ಲಿನ ಜನರು ಮಾತನಾಡುವ ಭಾಷೆಗಳು.
ಇತಿಹಾಸ [ಬದಲಾಯಿಸಿ]
ಒಂದು ಸಿದ್ಧಾಂತದ ಪ್ರಕಾರ, ಪುತ್ತೂರು ಹೆಸರು ಕನ್ನಡ ಭಾಷೆಯ "ಮುತ್ತು" ಮುತ್ತೂರು ಎಂದಾಗಿತ್ತು ಮತ್ತು ನಂತರ ನಿಧಾನವಾಗಿ ಇದು ತಾನಾಗಿಯೇ ಪುತ್ತೂರು ಎಂಬ ಹೆಸರಾಗಿ ಪ್ರಚಲಿತಕ್ಕೆ ಬಂದಿದೆ.ಶತಮಾನಗಳ ಹಿಂದೆ ಬರದ ಸಮಯದಲ್ಲಿ ಆರ್ಚಕರಿಗೆ ಮಹಾಲಿಂಗೇಶ್ವರ ದೇಗುಲದ ಪವಿತ್ರ ಕೊಳದಲ್ಲಿ ಅಕ್ಕಿಯು ಪ್ರಸಾದ ರೂಪದಲ್ಲಿ ದೊರಕಿತ್ತು ಮತ್ತು ಇದಕ್ಕಿದ್ದಂತೆ ಎಲ್ಲಾ ಮೂಲೆಯಿಂದ ನೀರು ಬರಲು ಆರಂಭಿಸಿ ಈ ಅಕ್ಕಿ ಮುತ್ತಾಗಿ ಪರಿವರ್ತನೆಯಾಯಿತು ಎಂಬ ನಂಬಿಕೆ ಇಲ್ಲಿದೆ. ಇತರ ಸಿದ್ಧಾಂತದ ಪ್ರಕಾರ ತುಳು ಭಾಷೆಯ ಪುತ್ತದಿಂದ ಪುತ್ತೂರು ಹೆಸರು ಬಂತು. ಪುತ್ತ ಎಂದರೆ ಕನ್ನಡದ ಹುತ್ತ, ಅಂದರೆ ಹಾವುಗಳು/ಇರುವೆಗಳು ಇರುವ ಮಣ್ಣಿನ ಗೂಡು. ಪುತ್ತೂರು ತಾಲೂಕು ಗೌರವಾನ್ವಿತ ವನ್ಯಜೀವಿ ಸಂರಕ್ಷಕ ಕೆ ಉಲ್ಲಾಸ್ ಕಾರಂತರ ಹುಟ್ಟೂರಾಗಿದೆ.
ಸಾರಿಗೆ [ಬದಲಾಯಿಸಿ]
ರೈಲು ಸಾರಿಗೆ ಪುತ್ತೂರು ರೈಲ್ವೆ ನಿಲ್ದಾಣವು ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ರೈಲುಮಾರ್ಗದಲ್ಲಿದೆ. ಇದು ಪುತ್ತೂರು ನಗರ ಕೇಂದ್ರದಿಂದ ಸುಮಾರು 1 ಕಿಮಿ ದೂರದಲ್ಲಿದೆ.
ವಾಯುಸಾರಿಗೆ ಪುತ್ತೂರಿಗೆ ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಪುತ್ತೂರುನಿಂದ 55 ಕಿ.ಮೀ. ದೂರದಲ್ಲಿದೆ.
ರಸ್ತೆ: ಮಂಗಳೂರು - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಇದೆ ಮತ್ತು ಮಂಗಳೂರುನಿಂದ ಪುತ್ತೂರಿಗೆ 52 ಕಿಮೀ ದೂರವಿದೆ. ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಎನ್ಎಚ್-48 (ಮಂಗಳೂರು-ಬೆಂಗಳೂರು) ಪುತ್ತೂರು ನಗರದಿಂದ 12 ಕಿಮೀ ದೂರದಲ್ಲಿದೆ.
ಪ್ರವಾಸೋದ್ಯಮ [ಬದಲಾಯಿಸಿ]
|
|
ಈ ವಿಭಾಗವು ಯಾವುದೇ ಆಧಾರ ಅಥವಾ ಮೂಲಗಳನ್ನು ಉಲ್ಲೇಖಿಸಿಲ್ಲ . ನಂಬಲರ್ಹವಾದ ಆಧಾರಗಳನ್ನು. ಇಲ್ಲಿ ಸೇರಿಸಿರುವ ಲೇಖನದ ಸುಧಾರಣೆಯಲ್ಲಿ ಸಹಾಯ ಮಾಡಿ. ಆಧಾರವಿಲ್ಲದ ವಿಷಯಗಳನ್ನು ಪರಿಶೀಲಿಸಿ ಆಕ್ಷೇಪಣೆ ಸೇರಿಸುವ ಮೂಲಕ ತೆಗೆದುಹಾಕಬಹುದು. |
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ವನ್ನು ೧೧-೧೨ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ ಪುರಾತನ ದೇವಸ್ಥಾನ, ಶಿವ (ಪುತ್ತೂರು ಮಹಾಲಿಂಗೇಶ್ವರ ಎಂದೆ ಜನಪ್ರಿಯ) ಈ ದೇವಸ್ಥಾನದ ಮುಖ್ಯ ದೇವರು. ನೀವು ಈ ದೇವರ ಫೋಟೋ ಇಲ್ಲವೇ ವಿಗ್ರಹವನ್ನು ಇಡಿ ತಾಲೂಕಿನಾದ್ಯಂತ ಹೆಚ್ಚಿನ ಮನೆ ಅಂಗಡಿಗಳಲ್ಲಿ ಕಾಣಬಹುದು. ಈ ದೇವರನ್ನು ಪುತ್ತೂರು ತಾಲ್ಲೂಕಿನ ರಕ್ಷಕನೆಂದೇ ನಂಬಲಾಗಿದೆ. ಈ ದೇವಸ್ಥಾನದ ಆವರಣದ ಪಶ್ಚಿಮ ಬದಿಯಲ್ಲಿ ನೀರಿನ ಕೊಳವೊಂದನ್ನು ನೋಡಬಹುದು. ಇದೇ ಕೊಳದಲ್ಲಿ ಪುರಾತನ ಕಾಲದಲ್ಲಿ ಮುತ್ತುಗಳು ಸಿಕ್ಕಿದ್ದವು ಎಂದು ಹೇಳಲಾಗುತ್ತದೆ. ಸ್ಥಳೀಯ ಉಪಭಾಷೆಯಲ್ಲಿ ಕನ್ನಡದ ಮುತ್ತು ಕ್ರಮೇಣ ಮುತ್ತೂರು ಆಗಿ ನಂತರ ಪುತ್ತೂರು ಎಂಬ ಹೆಸರು ಬಂತು. ಏಪ್ರಿಲ್ ತಿಂಗಳಲ್ಲಿ ಇಲ್ಲಿ ಮಹಾಲಿಂಗೇಶ್ವರ ದೇವರ ರಥೋತ್ಸವವನ್ನು10 ದಿನಗಳ ಕಾಲ ಅತ್ಯುತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪುತ್ತೂರಿನಲ್ಲಿ ಪ್ರಶಿದ್ಧ ಬೆಡಿ(ಪಟಾಕಿ)ಯ ವರ್ಣರಂಜಿತ, ಅದ್ಭುತ ಪ್ರದರ್ಶನವಿರುತ್ತದೆ. ಪುತ್ತೂರಿನ ಬೆಡಿ ಹತ್ತೂರಿನಲ್ಲಿ ಜನಪ್ರಿಯವಾಗಿದೆ. ಜಾತ್ರೆಯ ಸಮಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಪುತ್ತೂರಿಗೆ ಭೇಟಿ ನೀಡುತ್ತಾರೆ. ಪುತ್ತೂರು ಮಹಾಲಿಂಗೇಶ್ವರ ದೇಗುಲದ ಮತ್ತೊಂದು ವಿಶೇಷತೆಯೆಂದರೆ ಆನೆಗಳು ದೇವಾಲಯದ ಆವರಣಕ್ಕೆ ಎಂದಿಗೂ ಪ್ರವೇಶ ಪಡೆಯಲು ಅವಕಾಶವಿಲ್ಲ.. ಇದರ ಹಿಂದೆಯೂ ಸ್ವಾರಸ್ಯಕರ ಕಥೆಯೊಂದಿದೆ. ಒಮ್ಮೆ ಕಳ್ಳನೊಬ್ಬ ದೇವಾಲಯ ಪ್ರವೇಶಿಸಿ ಪ್ರಮುಖ ವಿಗ್ರಹವನ್ನು ಕದ್ದು ಪಾರಾಗಲೂ ಸಾಧ್ಯವಾಗದೇ ಕೊಳದೊಳಗೆ ಈ ವಿಗ್ರಹವನ್ನು ಎಸೆದಿದ್ದ. ಕೊಳದ ಆಳಕ್ಕೆ ಬಿದ್ದಿದ್ದ ಆ ವಿಗ್ರಹವನ್ನು ಮೇಲೆತ್ತಲು ಆನೆಯೊಂದನ್ನು ತರಲಾಯಿತು. ಹಗ್ಗವೊಂದನ್ನು ವಿಗ್ರಹಕ್ಕೆ ಕಟ್ಟಿ ಎಳೆಯಲಾಯಿತು. ಆದರೆ ಆನೆಯು ಮಹಾಲಿಂಗೇಶ್ವರ ವಿಗ್ರಹವನ್ನು ಗಟ್ಟಿಯಾಗಿ ಎಳೆದದ್ದು ಮಹಾಲಿಂಗೇಶ್ವರನಿಗೆ ಕೋಪ ತರಿಸಿತು. ನಂತರ ಆನೆಯು ಈ ದೇವಾಲಯಕ್ಕೆ ಶಾಪಗ್ರಸ್ತವಾಗಿದ್ದು, ಯಾವುದೇ ಆನೆ ದೇಗುಲದ ಆವರಣಕ್ಕೆ ಪ್ರವೇಶಿಸಬಾರದು ಮತ್ತು ಪ್ರವೇಶಿಸಿದರೆ ಆನೆ ಸಾವನ್ನಪುತ್ತದೆ ಎನ್ನುವುದು ಇಲ್ಲಿನ ನಂಬಿಕೆ.
ಜುಮಾ ಮಸೀದಿ ಕಲ್ಲೇಗಾ: 300 ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಮೈಸೂರು ಆಡಳಿತಗಾರ ಟಿಪ್ಪು ಸುಲ್ತಾನ್ ಇದನ್ನು ಪುತ್ತೂರಿನಲ್ಲಿ ಕಟ್ಟಿಸಿದ್ದ. ಈ ಮಸೀದಿಯನ್ನು ಪುತ್ತೂರು ಬಳಿಯ ಕಲ್ಲೇ ಎಂಬಲ್ಲಿ ನಿರ್ಮಿಸಲಾಯಿತು. ನಂತರ ಕಲ್ಲೆ {/} ಎನ್ನುವುದನ್ನು ಸ್ಥಳೀಯ ಜನರ ಬಾಯಲ್ಲಿ ಕಲ್ಲೇಗಾ ಎಂದು ಕರೆಯಲ್ಪಟ್ಟಿತ್ತು. ಇದು ಪಟ್ಟಣದ ಹಳೆಯ ಮಸೀದಿಯಾಗಿದೆ.
ಬೆಂದ್ರ್ ತೀರ್ಥ (ಬಿಸಿನೀರ ಬುಗ್ಗೆ ): ಪುತ್ತೂರಿಗೆ ೧೫ ಕಿ. ಮಿ ದೂರದಲ್ಲಿ ಒಂದು ನೈಸರ್ಗಿಕ ಬಿಸಿನೀರಿನ ಬುಗ್ಗೆಯಿದೆ. ( ತುಳು ಭಾಷೆಯಲ್ಲಿ ಬೆಂದ್ರು ತೀರ್ಥ) ಈ ನೀರಿನಲ್ಲಿ ಮಿಂದರೆ ಮಂಗಳಕರ ಅಷ್ಟೇ ಅಲ್ಲ ಎಸ್ಜಿಮಾ, ಅಲರ್ಜಿ ರೋಗಗಳಿಗು ರಾಮಬಾಣವೆಂದು ಸ್ಥಳಿಯರು ನಂಬುತ್ತಾರೆ. ನಯನ ಮನೋಹರವಾದ ಪ್ರದೇಶದಲ್ಲಿರುವ ಈ ಬುಗ್ಗೆಯು ದಕ್ಷಿಣ ಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಸೀರೆ ಹೊಳೆಯ ದಡದಲ್ಲಿದೆ. ದಕ್ಷಿಣ ಭಾರತ ಏಕೈಕ ಬಿಸಿ ನೀರಿನ ಬುಗ್ಗೆ ಇದು.
ಬೀರಮಲೆಬೆಟ್ಟ: ಬೀರಮಲೆ ಪುತ್ತೂರಿನ ಒಂದು ಆಕರ್ಷಕ ಪ್ರವಾಸೀ ತಾಣವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1000 ಅಡಿ ಎತ್ತರದಲ್ಲಿದೆ. ದೂರದರ್ಶನದ ಟಿವಿ ಪ್ರಸಾರ ಕೇಂದ್ರವನ್ನು ಈ ಬೆಟ್ಟದ ಮೇಲೆ ಸ್ಥಾಪಿಸಲಾಗಿದೆ. ಇಲ್ಲಿ ಒಂದು ಸಭಾಂಗಣ, ಗ್ರಂಥಾಲಯಗಳಿದ್ದು ಸಾರ್ವಜನಿಕರಿಗೆ ಮುಕ್ತವಾಗಿವೆ. ಬೆಟ್ಟದ ಒಂದು ಬದಿಯಲ್ಲಿ ಶ್ರೀ ವಿಶ್ವಕರ್ಮ ದೇವಸ್ಥಾನವಿದೆ.
ಡಾ ಶಿವರಾಮ ಕಾರಂತರ ಬಾಲವನ: ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ.ಕೆ ಶಿವರಾಮ ಕಾರಂತರು, ಸುಮಾರು 40 ವರ್ಷಗಳ ಕಾಲ ಇಲ್ಲಿ ವಾಸವಿದ್ದರು. ಶಿವರಾಮ ಕಾರಂತರು ಹೆಚ್ಚಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳು ಇಲ್ಲಿವೆ. ಅವರೊಬ್ಬರು ಸಾಹಿತ್ಯದ ಕ್ಷೇತ್ರದ ದೈತ್ಯ ಪ್ರತಿಭೆ. ಅವರ ಬಹುತೇಕ ಕೊಡುಗೆಗಳು ಇಲ್ಲೇ ಪ್ರಕಟಣೆಗೊಂಡಿರುವುದು. ಅವರ ಪುಸ್ತಕಗಳು ಗಳಿಸಿದ ಖ್ಯಾತಿಯಿಂದ ಕಾರಂತರಿಗೆ ಮತ್ತು ಪುತ್ತೂರಿಗೆ ಹೆಸರು ಬಂದಿತು. ಈಗ ಬಾಲವನವು ಕರ್ನಾಟಕ ಸರ್ಕಾರದ ಅಧೀನದಲ್ಲಿದೆ ಮತ್ತು ಈ ಕೆಂದ್ರವನ್ನು ನಿರ್ವಹಿಸಲು ಸರ್ಕಾರವು ಒಂದು ಸಮಿತಿಯನ್ನು ರಚಿಸಿದೆ. ಬಾಲವನವು ಪುತ್ತೂರಿನಿಂದ 2 ಕಿಮೀ ದೂರದಲ್ಲಿರುವ ಪರ್ಲಡ್ಕದಲ್ಲಿದೆ.
ಕಾರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಒಂದು ಆಕರ್ಷಕ ಮ್ಯೂಸಿಯಂ ಸ್ಥಾಪಿಸಿಲಾಗಿದೆ. ಇಲ್ಲಿ ಮಕ್ಕಳಿಗೆ ಈಜು ಕಲಿಸಲು ಈಜು ಕೊಳ ನಿರ್ಮಿಸಲಾಗಿದೆ. ಬೇಸಿಗೆ ಶಿಬಿರಗಳು ಪಟ್ಟಣ ಮತ್ತು ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಸಲುವಾಗಿ ಬೇಸಿಗೆ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಆ ಮೂಲಕ ಅವರಲ್ಲಿರುವ ಕಲೆ ಮತ್ತು ಸಾಂಸ್ಕೃತಿಕ ಸುಪ್ತ ಪ್ರತಿಭೆಯನ್ನು ಹೊರತರಲಾಗುತ್ತದೆ.
ಡಿ ಡೀಯುಸ್ ಚರ್ಚ್: ಇದು ಗೋಥಿಕ್ ಶೈಲಿಯಲ್ಲಿ ಗೋವಾದ ರೋಮನ್ ಕ್ಯಾಥೊಲಿಕ್ ಪಾದ್ರಿಗಳಿಂದ 1830 ರಲ್ಲಿ ನಿರ್ಮಿಸಿದ ಪ್ರಾಚೀನ ಚರ್ಚ್ ಗಳಲ್ಲಿ ಒಂದಾಗಿದೆ. ಸೊಗಸಾದ ವಾಸ್ತುಶಿಲ್ಪ ವಿನ್ಯಾಸಕ್ಕೆ ಈ ಪವಿತ್ರ ಚರ್ಚನ್ನು ನವೀಕರಿಸಲಾಗಿದೆ.
ಮರೀಲ್ ಚರ್ಚ್: 1999 ರಲ್ಲಿ ನಿರ್ಮಾಣ
ಪೀರ್ ಮೊಹಲ್ಲಾಜುಮಾ ಮಸೀದಿ, ಕೂರ್ನಡ್ಕ: ಟಿಪ್ಪು ಸುಲ್ತಾನ್ ಆಳ್ವಿಕೆಯಿಂದ ಕೂರ್ನಡ್ಕವು ಐತಿಹಾಸಿಕ ಸ್ಥಳವಾಗಿ ಮಹತ್ವ ಪಡೆದಿದೆ.ಕೆಲವು ಸೈನಿಕ ಕುಟುಂಬಗಳು ಈ ಸ್ಥಳದಲ್ಲಿ ನೆಲೆಸಿದ್ದರು ಮತ್ತು ಅವರು ಈ ಸ್ಥಳಕ್ಕೆ ಕೂರ್ ಎಂದು ಹೆಸರಿಟ್ಟಿದ್ದರು. ಕೂರ್ ಎನ್ನುವುದು ಅಫ್ಘಾನಿಸ್ತಾನ ಮೂಲದ ಹೆಸರು(ಅಬು ಖಾನ್, ಸಯ್ಯದ್, ಶೇಕ್ ಸಾಹೇಬ್, ಪತ್ನಿ ವಾಲಾ, ಮೊಯ್ದಿನ್ ಪಠಾನ್, ಮತ್ತು ಕೂರ್ಗ್ ಸಾಹೇಬ್ ಕುಟುಂಬಗಳು ಅಫ್ಗಾನಿಸ್ತಾನ ಮೂಲದವರು). ಇವರೆಲ್ಲರು ಸೂಫಿ ಸಂತರು ಮತ್ತು ಇಮಾಮ್ ಅಬು ಹನೀಫಾ ಅನುಯಾಯಿಗಳು. 1899ರಲ್ಲಿ "ಪೀರ್ ಝದೆ ಮುಸ್ತಾದ್ ಹಬಿದುಲ್ಲಾ ಶಾ ಮುಸ್ತಾನ್' ಒಂದು ಮಹಾನ್ ಶಕ್ತಿಶಾಲಿ ಸೂಫಿ ಸಂತರಾಗಿದ್ದರು. ಅವರು ಕೂರ್ನಡ್ಕಕ್ಕೆ ಬಂದು ಇಸ್ಲಾಂ ಧರ್ಮ ಬೋಧಿಸಿದ್ದರು. ಅವರ ಸಾವಿನ ನಂತರ ಅನುಯಾಯಿಯೊಬ್ಬರುಕೂರ್ ನಲ್ಲಿ ಮಸೀದಿ ನಿರ್ಮಾಣಕ್ಕೆ ಸ್ಥಳ ನೀಡಿದ್ದರು. ಈಗ ಈ ಸ್ಥಳವು ಕೂರ್ನಡ್ಕ[clarification needed]ವಾಗಿ ಪ್ರಶಿದ್ಧಿ ಪಡೆದಿದೆ.
ಶಿಕ್ಷಣ [ಬದಲಾಯಿಸಿ]
|
|
ಈ ವಿಭಾಗವು ಯಾವುದೇ ಆಧಾರ ಅಥವಾ ಮೂಲಗಳನ್ನು ಉಲ್ಲೇಖಿಸಿಲ್ಲ . ನಂಬಲರ್ಹವಾದ ಆಧಾರಗಳನ್ನು. ಇಲ್ಲಿ ಸೇರಿಸಿರುವ ಲೇಖನದ ಸುಧಾರಣೆಯಲ್ಲಿ ಸಹಾಯ ಮಾಡಿ. ಆಧಾರವಿಲ್ಲದ ವಿಷಯಗಳನ್ನು ಪರಿಶೀಲಿಸಿ ಆಕ್ಷೇಪಣೆ ಸೇರಿಸುವ ಮೂಲಕ ತೆಗೆದುಹಾಕಬಹುದು. |
ಇಂಜಿನಿಯರಿಂಗ್ ಕಾಲೇಜ್‌ಗಳು
** ಜನರಲ್ ಕೋರ್ಸ್ ಕಾಲೇಜುಗಳು
-
- ಸೇಂಟ್ ಪಿಲೊಮಿನಾ ಕಾಲೇಜ್, ದರ್ಬೆ, ಪುತ್ತೂರು.
- ಸೇಂಟ್ ಪಿಲೊಮಿನಾ ಪದವಿಪೂರ್ವ ಕಾಲೇಜು, ದರ್ಬೆ, ಪುತ್ತೂರು
- ಸೇಂಟ್ ಪಿಲೊಮಿನಾ ಬಾಲಕರ ಪ್ರೌಢಶಾಲೆ, ದರ್ಬೆ, ಪುತ್ತೂರು
- ಶ್ರೀ ವಿವೇಕಾನಂದ ಕಾಲೇಜ್,ಕಲಾ ವಿಭಾಗ, ವಿಜ್ಞಾನ ಮತ್ತು ವಾಣಿಜ್ಯ, ಪುತ್ತೂರು.
- ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು
- ವಿವೇಕಾನಂದ ಕಾಲೇಜ್ ಆಫ್ ಎಜ್ಯುಕೇಷನ್, ಪುತ್ತೂರು.
- ಸರ್ಕಾರಿ ಜೂನಿಯರ್ ಕಾಲೇಜು, ಪುತ್ತೂರು.
- ಮಾರ್ ಇವೊನಿಯೊಸ್ ಕಾಲೇಜ್ ಆಫ್ ಎಜ್ಯುಕೇಷನ್, ಪೆರಬೆ, ಪುತ್ತೂರು
- ಸಾಂದೀಪಿನಿ, ಹೈಯರ್ ಪ್ರೈಮರಿ ಸ್ಕೂಲ್
- ವಿವೇಕಾನಂದ ಕಾನೂನು ಕಾಲೇಜು, ಪುತ್ತೂರು.
- ಇಂಡಸ್ ಕಾಲೇಜು ಪುತ್ತೂರು
- ಇಂಡಸ್ ನ್ಯಾಷನಲ್ ಕಾಲೇಜು ಪುತ್ತೂರು
- ಶ್ರೀ ಮಹಾಲಿಂಗೇಶ್ವರ ಐಟಿಐ, ಕೊಂಬೆಟ್ಟು, ಪುತ್ತೂರು
- ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ ಪುತ್ತೂರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪಟ್ಟಿ
-
- ಸೇಂಟ್ ವಿಕ್ಟರ್ಸ್ ಬಾಲಕಿಯರ ಪ್ರೌಢಶಾಲೆ, ಪುತ್ತೂರು.
- ಸೇಂಟ್ ವಿಕ್ಟರ್ಸ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್,ಪುತ್ತೂರು.
- ಮೈ ಡಿ ಡೀಯುಸ್ ಉನ್ನತ ಪ್ರಾಥಮಿಕ ಶಾಲೆ, ಪುತ್ತೂರು.
- ಲಿಟಲ್ ಫ್ಲವರ್ ಉನ್ನತ ಪ್ರಾಥಮಿಕ ಶಾಲೆ, ಪುತ್ತೂರು.
- ಬೆಥಾನಿ. ಇಂಗ್ಲಿಷ್ ಮಾಧ್ಯಮ ಶಾಲೆ
- ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಶಾಲೆ
- ಮೌಂಟೇನ್ ವ್ಯೂ ಸಾಲ್ಮರ, ಪುತ್ತೂರು
- ಬೂಸ್ರಾ ಇಂಗ್ಲಿಷ್ ಮಾಧ್ಯಮ ಶಾಲೆ, ಕಾವು
- ಸುದಾನ ವಸತಿ ಶಾಲೆ, ನೆಹರು ನಗರ.
- ಸರ್ಕಾರಿ ಜೂನಿಯರ್ ಕಾಲೇಜ್ ಹೈ ಸ್ಕೂಲ್, ಪುತ್ತೂರು
- ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು
- ಸರಕಾರಿ ಪ್ರಾಥಮಿಕ ಶಾಲೆ, ಮಹಾಲಿಂಗೇಶ್ವರ ದೇವಸ್ಥಾನ ಸಮೀಪ
- ಸರಕಾರಿ ಪ್ರಾಥಮಿಕ ಶಾಲೆ, ಮುಕ್ವೆ
ಆರೋಗ್ಯರಕ್ಷಣೆ [ಬದಲಾಯಿಸಿ]
ಟೆಂಪ್ಲೇಟು:Empty section ಸರಕಾರಿ ಮತ್ತು ಖಾಸಾಗಿ ಆಸ್ಪತ್ರೆಗಳ ಮೂಲಕ ಪುತ್ತೂರ ಪುತ್ತೂರು ನಗರದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತದೆ. ಒಂದು ತಾಲ್ಲೂಕು ಕೇಂದ್ರವು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ (ಒಂದು ಉಲ್ಲೇಖಿತ ಆಸ್ಪತ್ರೆ) ಹೊಂದಿದೆ. ಇದು ವಿಶೇಷ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೂ ಇಲ್ಲಿ ಖಾಸಾಗಿ ವ್ಯದ್ಯರು ಮತ್ತು ಆಸ್ಪತ್ರೆಗಳು ವೈದ್ಯಕೀಯ ಸೇವೆಯಲ್ಲಿ ಪ್ರಮುಖ ಪಾತ್ರವಿದೆ. ಸಾಕಷ್ಟು ಒಳ್ಳೆಯ ಮತ್ತು ಆಧುನಿಕ ಕೈಗೆಟುಕುವ ಮತ್ತು ಆಯುರ್ವೇದ ಆರೋಗ್ಯ ಕೇಂದ್ರಗಳು, ದಂತ ಚಿಕಿತ್ಸಾಲಯಗಳು, ಹೋಮಿಯೋಪತಿ ಕ್ಲಿನಿಕ್ ಆರೋಗ್ಯ ಸೌಲಭ್ಯಗಳು ಇವೆ..
ಆಸ್ಪತ್ರೆಗಳು ಪಟ್ಟಿ [ಬದಲಾಯಿಸಿ]
- ಆದರ್ಶ ಆಸ್ಪತ್ರೆ
- ಅಶ್ವಿನಿ ಆಸ್ಪತ್ರೆ, ನೆಲ್ಯಾಡಿ, ಪುತ್ತೂರು ನಿಂದ 35 ಕಿ.ಮೀ
- ಚೇತನ ಆಸ್ಪತ್ರೆ
- ಧನ್ವಂತರಿ ಆಸ್ಪತ್ರೆ
- ಸರಕಾರಿ ಆಸ್ಪತ್ರೆ ಪುತ್ತೂರು.
- ಮಹಾವೀರ ಆಸ್ಪತ್ರೆ
- ಪುತ್ತೂರು ಸಿಟಿ ಹಾಸ್ಪಿಟಲ್
- ಶ್ರೀನಿವಾಸ ನರ್ಸಿಂಗ್ ಹೋಂ.
- ಶ್ರೀ ಸತ್ಯ ಸಾಯಿ ಆಸ್ಪತ್ರೆ
- ಸಿಟಿ ಹಾಸ್ಪಿಟಲ್
- ಗಿರಿಜಾ ಕ್ಲಿನಿಕ್
- ಸುಶೃಥ ಆಯುರ್ವೇದ ಆಸ್ಪತ್ರೆ
ಹತ್ತಿರದ ಸ್ಥಳಗಳು / ನಗರಗಳು / ಪಟ್ಟಣಗಳು [ಬದಲಾಯಿಸಿ]
- ಬೆಳ್ಳಾರೆ
- ಬೆಳ್ತಂಗಡಿ
- ಮಂಗಳೂರು
- ಮಡಿಕೇರಿ
- ಕಾಸರಗೋಡು
- ಸಿದ್ದಾಪುರ
- ಸುಬ್ರಹ್ಮಣ್ಯ
- ಸುಳ್ಯ
- ಬಂಟ್ವಾಳ- ಬಿಸಿ ರೋಡ್
- ವಿಟ್ಲ
- ಉಪ್ಪಿನಂಗಡಿ
- ಧರ್ಮಸ್ಥಳ
- ಮೂಡಬಿದ್ರೆ
ಉಲ್ಲೇಖಗಳು [ಬದಲಾಯಿಸಿ]
ಬಾಹ್ಯ ಕೊಂಡಿಗಳು [ಬದಲಾಯಿಸಿ]
- Articles containing potentially dated statements from 2011
- Articles with invalid date parameter in template
- All articles containing potentially dated statements
- All pages needing cleanup
- Wikipedia articles needing clarification from July 2012
- ಭಾರತದ ಬಿಸಿನೀರಿನ ಬುಗ್ಗೆಗಳು
- ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು