ಪಾರ್ವತಿ ಜಿ.ಐತಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾರ್ವತಿ ಗಂಗಾಧರ ಐತಾಳ ಇವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎನ್ನುವ ಹಳ್ಳಿಯಲ್ಲಿ ೧೯೫೭ ಜುಲೈ ೨೩ರಂದು ಜನಿಸಿದರು. ೧೯೮೧ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ೨೦೧೨ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು.

ವೃತ್ತಿ[ಬದಲಾಯಿಸಿ]

ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ ೧೯೮೮ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಶ್ರೀಮತಿ ಪಾರ್ವತಿ ಗಂಗಾಧರ ಐತಾಳರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉಧ್ಯೋಗದೊಂದಿಗೆ ಉದಯವಾಣಿ, ಮುಂಗಾರು ಇತ್ಯಾದಿ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳ ಭಾಷೆಯನ್ನು ಕಲಿತು, ಕನ್ನಡದೊಂದಿಗೆ ಹಿಂದಿ, ಇಂಗ್ಲಿಷ್, ಮಲಯಾಳ, ತುಳು ಭಾಷೆಗಳನ್ನು ಕಲಿತು ಪಂಚಭಾಷಾಪ್ರವೀಣೆಯಾಗಿದ್ದಾರೆ.

ಸ್ವತಂತ್ರ ಸಾಹಿತ್ಯ[ಬದಲಾಯಿಸಿ]

  • ಹೊನ್ನ ಬೆಳಕೆ ಬಾ (ಕವನ ಸಂಕಲನ)
  • ನಾನು ಗೃಹಲಕ್ಷ್ಮಿ
  • ನಾನೇನು ಮಾಡಲಿ
  • ಹೆಣ್ಣು ಮಗಳು
  • ವನಮಾಲ ಕೀಲುಗೊಂಬೆ
  • ಮೂಕ ಹಕ್ಕಿ[೧]

ಸ್ತ್ರೀ ಪ್ರಧಾನ ಕೃತಿ[ಬದಲಾಯಿಸಿ]

'ಜೀವಿಕ್ಯಾನ ಮರನ್ನು ಪೋಯ ಸ್ತ್ರೀ' ಕಾದಂಬರಿ ಕನ್ನಡಕ್ಕೆ ಪಟ ತೆರೆಯುವ ಮುನ್ನ ಕೃತಿಯಾಗಿ

ಪ್ರಕಟಣೆಗಳು[ಬದಲಾಯಿಸಿ]

ಕನಸು ಮತ್ತು ವಾಸ್ತವ

ಅನುವಾದಿತ ಸಾಹಿತ್ಯ[ಬದಲಾಯಿಸಿ]

  • ದುರ್ಬೀಜ (ಮಲೆಯಾಳಂ ಮೂಲ ಕಾದಂಬರಿ : ಎಂ.ಟಿ.ವಾಸುದೇವನ್ ನಾಯರ್)
  • ಮಂಜು (ಮಲೆಯಾಳಂ ಮೂಲ ಕಾದಂಬರಿ : ಎಂ.ಟಿ.ವಾಸುದೇವನ್ ನಾಯರ್)
  • ಯುಗಾಂತ ಮತ್ತು ಇತರ ಕತೆಗಳು (ಸಣ್ಣ ಕತೆಗಳು ,ಮಲೆಯಾಳಂ ಮೂಲ  : ಎಂ.ಟಿ.ವಾಸುದೇವನ್ ನಾಯರ್)
  • ಬದುಕಲು ಮರೆತ ಸ್ತ್ರೀ (ಮಲೆಯಾಳಂ ಮೂಲ  : ವೆಟ್ಟೂರು ರಾಮನ್ ನಾಯರ್)
  • ಮಲಯಾಳದ ೧೦ ಕಥೆಗಾರ್ತಿಯರು (ಮಲೆಯಾಳಂ ಮೂಲ  : ಡಾ|ಶ್ರೀದೇವಿ ಕೆ.ನಾಯರ್)
  • ಅಶ್ಕರ ಕಥೆಗಳು (ಹಿಂದಿ ಮೂಲ: ಉಪೇಂದ್ರನಾಥ ಅಶ್ಕ
  • ಬರುವೆ ನಾ ಮತ್ತೊಮ್ಮೆ ಎಂದಾದರೂ... (ಹಿಂದಿ ಮೂಲ ಕಾದಂಬರಿ:ಡಾ| ಧರ್ಮೇಂದ್ರ ಗುಪ್ತ)
  • ಪ್ರಿನ್ಸಿಪಾಲ್ ಪರಶುರಾಮ (ಹಿಂದಿ ಮೂಲ ನಾಟಕ: ಜಿ.ಜೆ.ಹರಿಜಿತ)
  • ಇದು ಯೂನಿವರ್ಸಿಟಿ (ಇಂಗ್ಲಿಶ್ ಮೂಲ ನಾಟಕ:ಜಿ.ಜೆ.ಹರಿಜಿತ)
  • ಬಿನ್ನೆ (ತುಳು)(ಇಂಗ್ಲಿಶ್ ಮೂಲ ನಾಟಕ:ಜಿ.ಜೆ.ಹರಿಜಿತ)

ಪ್ರಶಸ್ತಿಗಳು[ಬದಲಾಯಿಸಿ]

  1. ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ
  2. ಗೋವಿಂದರಾವ್ ಸ್ಮಾರಕ ಕಾದಂಬರಿ ವಿಮರ್ಶಾ ಬಹುಮಾನ
  3. ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ[೨]



ಉಲ್ಲೇಖ[ಬದಲಾಯಿಸಿ]

  1. ಚಂದ್ರಗಿರಿ, ನಾಡೋಜ ಡಾ. ಸಾರಾ ಅಬೂಬಕ್ಕರ್, ಅಭಿನಂದನ ಗ್ರಂಥ, ಸಂಪಾದಕರು ಡಾ. ಸಬಿಹಾ, ಸಿರಿವರ ಪ್ರಕಾಶನ ಬೆಂಗಳೂರು, ಮೊದಲ ಮುದ್ರಣ ೨೦೦೯.
  2. "ಆರ್ಕೈವ್ ನಕಲು". Archived from the original on 2016-03-05. Retrieved 2016-03-10.