ಪಾಣಿನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪಾಣಿನಿ ಸಂಸ್ಕೃತದ ಪ್ರಖ್ಯಾತ ವೈಯಾಕರಣಿ.ವ್ಯಾಕರಣಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವನ ಗ್ರಂಥದ ಹೆಸರು "ಅಷ್ಟಾಧ್ಯಾಯಿ".ಇವನು ಶಿವಭಕ್ತನಾದ ಕಾರಣ ಸೂತ್ರಗಳನ್ನು ಭವ,ರುದ್ರ,ಶರ್ವ ಮುಂತಾದ ಈಶ್ವರನ ಹೆಸರುಗಳಲ್ಲಿ ಕರೆದಿದ್ದಾನೆ.

ಪಾಣಿನಿಯು ಸಂಸ್ಕೃತದ ವರ್ಣಗಳನ್ನು 14 ಗುಂಪುಗಳಾಗಿ ವರ್ಗೀಕರಿಸಿದ್ದಾನೆ. ಮಹೇಶ್ವರನ ಢಕ್ಕೆಯ ನಿನಾದದಿಂದ ಈ ವರ್ಣಗಳು ಆವಿರ್ಭವಿಸಿದವೆಂದು ಪ್ರತೀತಿಯಿದ್ದು, ಇವಕ್ಕೆ ಮಾಹೇಶ್ವರ ಸೂತ್ರಗಳು ಎಂಬ ಹೆಸರಿದೆ. ಪಾಣಿನಿಯ ಕಾಲ ಸುಮಾರು ಕ್ರಿ.ಪೂ.೪ನೆಯ ಶತಮಾನವಿರಬಹುದೆಂದು ವಿದ್ವಾಂಸರು ಅಂದಾಜು ಮಾಡಿದ್ದಾರೆ."http://kn.wikipedia.org/w/index.php?title=ಪಾಣಿನಿ&oldid=405063" ಇಂದ ಪಡೆಯಲ್ಪಟ್ಟಿದೆ