ಪಾಂಡವಪುರ
| ಪಾಂಡವಪುರ ಪಾಂಡವಪುರ |
|
| — city — | |
| Location in Karnataka, India | |
| ರೇಖಾಂಶ: | |
| Country | |
|---|---|
| ರಾಜ್ಯ | ಕರ್ನಾಟಕ |
| ಜಿಲ್ಲೆ | ಮಂಡ್ಯ |
| ಜನಸಂಖ್ಯೆ (2001) | |
| - ಒಟ್ಟು | ೧೮,೨೩೬ |
| - ಸಾಂದ್ರತೆ | ./ಚದರ ಕಿಮಿ (./ಚದರ ಮೈಲಿ) |
| ಅಂತರ್ಜಾಲ ತಾಣ: www.pandavapuratown.gov.in | |
ಪಾಂಡವಪುರಮಂಡ್ಯ ಜಿಲ್ಲೆಯ ನೈಋತ್ಯ ಭಾಗದಲ್ಲಿರುವ ಈ ತಾಲ್ಲೂಕು ಏರಿಳಿತಗಳಿಂದ ಕೂಡಿದೆ. ಪೂರ್ವ ಮತ್ತು ಉತ್ತರ ಭಾಗಗಳು ಹಿರೋಡೆ (ಕುಂತಿ ಬೆಟ್ಟ)ಮತ್ತು ಮೇಲುಕೋಟೆ ಬೆಟ್ಟಗಳಿಂದ ಕೊಡಿದೆ. ಲೋಕಪಾವನಿ ನದಿ ಉತ್ತರದಿಂದ ದಕ್ಷಿಣಕ್ಕೆ ಹರಿದು ಮುಂದೆ ಕರೀಘಟ್ಟದ ಬಳಿ ಕಾವೇರಿನದಿಯನ್ನು ಸೇರಿಕೊಳ್ಳುತ್ತದೆ. ಈ ತಾಲ್ಲೂಕಿನ ಹೆಚ್ಚು ಭಾಗ ಕಾವೇರಿ ಮತ್ತು ಲೋಕಪಾವನಿ ನದಿಗಳ ಬಯಲನ್ನು ಒಳಗೊಂಡಿದೆ. ಕೆಂಪು ಜೇಡಿಮಣ್ಣು ಹಾಗು ಮರಳು ಮಿಶ್ರಿತ ಭೂಮಿ ಕಾಣಬರುತ್ತದೆ.ಪಾಂಡವಪುರ, ಮೇಲುಕೋಟೆ ಮತ್ತು ಚಿನಕುರಳಿ ಎಂಬ ಮೂರು ಹೋಬಳಿಗಳಿದ್ದು ಸುಮಾರು ೧೭೫ ಗ್ರಾಮಗಳಿವೆ.
ಪಾಂಡವಪುರಕ್ಕೆ ಪೂರ್ವದಲ್ಲಿ 'ಹಿರೋಡೆ' ಎಂದು ಹೆಸರಾಗಿತ್ತು.ಐತಿಹ್ಯವಾಗಿ, ಕುಂತಿಬೆಟ್ಟದಲ್ಲಿ ಬಕಾಸುರ ಎಂಬ ರಾಕ್ಷಸನಿದ್ದ. ಅವನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆ (ಆಹಾರ, ಹಿರೋಡೆ (ಈಗಿನ ಪಾಂಡವಪ್ರುರ)ಯಿಂದ ಹಿರಿಎಡೆ (ದೊಡ್ಡ ಆಹಾರ) ಹೋಗುತ್ತಿತ್ತು. ಕಡೆಗೆ ಭೀಮ ಬಕಾಸುರನನ್ನು ಕೊಂದ ಕಥೆ ಕೇಳಿಬರುತ್ತದೆ. ಇನ್ನು ಐತಿಹಾಸಿಕವಾಗಿ ಹೈದರ್ ಮತ್ತು ಟಪ್ಪುಸುಲ್ತಾನರ ಆಡಳಿತ ಕಾಲದಲ್ಲಿ ಫ್ರೆಂಚ್ ಸೈನ್ಯವನ್ನು ಇಲ್ಲಿ ಇರಿಸಿದ್ದರಿಂದ ಫ್ರೆಂಚ್ ರಾಕ್ಸ ಎಂಬ ಹೆಸರಿನಿಂದ ಕರೆಯಲಾಯಿತು. ನಂತರದಲ್ಲಿ ಕ್ರಿ.ಶ. ೧೯೪೭ರ ಸುಮಾರಿಗೆ ಪಾಂಡವರ ಹಿನ್ನೆಲೆಯಲ್ಲಿ ಪಾಂಡವಪುರ ಎಂದು ಹೆಸರಿಸಲಾಯಿತು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |