ಪರಮಾಣು ಭೌತಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರಮಾಣು ಭೌತಶಾಸ್ತ್ರ

'ಪರಮಾಣು ಭೌತಶಾಸ್ತ್ರ' ಎಂದರೆ ಅಣು ಮತ್ತು ಪರಮಾಣುಗಳ ರಚನೆಯ ಬಗ್ಗೆ ಇರುವ ಭೌತಶಾಸ್ತ್ರದ ವಿಭಾಗ. ನಿರ್ದಿಷ್ಟವಾಗಿ ಪರಮಾಣುವಿನ ರಚನೆ, ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್‍ಗಳ ಚಲನೆ, ಪಥಗಳ ಅಧ್ಯಯನ, ಶಕ್ತಿಯ ಅಧ್ಯಯನಗಳನ್ನೊಳಗೊಂಡಿದೆ.

ಪರಮಾಣು ಭೌತಶಾಸ್ತ್ರವು ಪರಮಾಣುವನ್ನು, ಎಲೆಕ್ಟ್ರಾನುಗಳು ಹಾಗು ಪರಮಾಣು ಬೀಜ - ಇವುಗಳ ವಿಶಿಷ್ೞ ವ್ಯವಸ್ಥೆಯಂತೆ ಅಭ್ಯಾಸ ಮಾಡುತ್ತದೆ. ಅದು ಮುಖ್ಯವಾಗಿ ಪರಮಾಣು ಬೀಜದ ಸುತ್ತ ಎಲೆಕ್ಟ್ರಾನುಗಳ ಜೋಡಣೆಯನ್ನು ಹಾಗೂ ಈ ಜೋಡಣೆಗಳು ಬದಲಾಗುವ ಪ್ರಕ್ರಿಯೆಗಳನ್ನು ಅಭ್ಯಾಸಮಾದುತ್ತದೆ. ಇದು ಅಯಾನುಗಳು ಹಾಗೂ ವಿದ್ಯುತ್ ತಟಸ್ಥ ಪರಮಾಣುಗಳನ್ನು ಪರಿಗಣಿಸುತ್ತದೆ ಮತ್ತು ಬೇರೆಯಾಗಿ ಸೂಚಿಸದಿದ್ದರೆ ಈ ವಿವರಣೆಯಲ್ಲಿ ಅಯಾನುಗಳನ್ನು ಪರಮಾಣುಗಳೆಂದೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

ಪರಮಾಣು ಭೌತಶಾಸ್ತ್ರವು ಪರಮಾಣು ಶಕ್ತಿ ಮತ್ತು ಪರಮಾಣು ಸ್ಫೋಟಕಗಳ ಜೊತೆಜೊತೆಗೆ ಹೊಂದಿಕೊಂಡಿರುತ್ತದೆ.ಇದಕ್ಕೆ ಕಾರಣವೆಂದರೆ ಅಣು ಮತ್ತು ಪರಮಾಣು ಪದಗಳನ್ನು ಆಗಾಗ್ಗೆ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ.ಆದರೂ ಭೌತಶಾಸ್ತ್ರ ವಿದ್ವಾಂಸರು ಪರಮಾಣು ಬೀಜ ಹಾಗೂ ಎಲೆಕ್ಟ್ರಾನುಗಳು ಸೇರಿದ ವ್ಯವಸ್ಥೆಯನ್ನು ಪರಮಾಣು ಭೌತಶಾಸ್ತ್ರ ಎಂದು ಹಾಗೂ ಪರಮಾಣು ಬೀಜವನ್ನು ಅಭ್ಯಸಿಸುವುದನ್ನು ಪರಮಾಣು ಬೀಜ ಭೌತಶಾಸ್ತ್ರ ಎಂದು ವಿಭಜಿಸುತ್ತಾರೆ.