ಪದ್ಮಾವತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪದ್ಮಾವತಿ ದೇವಿ

ಜೈನ ಧರ್ಮದ ಪ್ರಕಾರ ಪದ್ಮಾವತಿ ದೇವಿಯು ೨೩ನೇ ತೀರ್ಥಂಕರ ಪಾಶ್ವ೯ನಾಥರ ಯಕ್ಷಿ.

ಒಮ್ಮೆ ಗಂಗಾ ನದಿಯ ತೀರದಲ್ಲಿ ಪಾಶ್ವ೯ನಾಥರು ವಾಯುವಿಹಾರ ಮಾಡುತ್ತಿರುವಾಗ ಕೆಲವುಮಂದಿ ತಾಪಸಿಗಳು ಬೆಂಕಿಯನ್ನುರಿಸಿ ತಪಸ್ಸನ್ನಾಚರಿಸುತ್ತಿದ್ದರು. ಇವರು ಅವರನ್ನು ಕಟ್ಟಿಗೆಗಳನ್ನುರಿಸಿ ಏಕೆ ಜೀವ ಹಿಂಸೆ ಮಾಡುತ್ತಿರುವರೆಂದು ಕೇಳಿದರು. ರಾಜಕುಮಾರರ ಮಾತನ್ನು ಸಂಪೂರ್ಣವಾಗಿ ತಿರಸ್ಕರಿಸಿದ ತಾಪಸಿಗಳು 'ಜೀವ ಎಲ್ಲಿದೆ?'ಎಂದು ಕೇಳಿದರು. ಪಾರ್ಶ್ವನಾಥರು ತಾಪಸಿಗಳ ಬಳಿಯಿದ್ದ ಕೊಡಲಿಯಿಂದ ಒಂದು ಕಟ್ಟಿಗೆಯನ್ನು ಸೀಳಲು ಸರ್ಪ ಮತ್ತು ಸರ್ಪಿಣಿಯ ಸುಡುತ್ತಿರುವ ಜೊತೆಯೊಂದು ಕಾಣಿಸಿತು.ಇನ್ನು ಅವು ಬದುಕಲಾರವೆಂದು ತಿಳಿದು ಅವುಗಳಿಗೆ ಪಂಚನಮಸ್ಕಾರ ಮಂತ್ರವನ್ನು ಉಪದೇಶಿಸಿದರು. ಈ ಘಟನೆಯಿಂದ ಅವರಿಗೆ ಬಹಳ ದುಃಖವಾಯಿತು. ಜೀವನದ ನಶ್ವರತೆಯನ್ನು ತಿಳಿದು ವೈರಾಗ್ಯ ಹೊಂದಿ ಕೊಡಲೇ ದೀಕ್ಷೆಯನ್ನು ಸ್ವೀಕರಿಸಿದರು. ಸರ್ಪ ಮತ್ತು ಸರ್ಪಿಣಿಯ ಮರಣಹೊಂದಿ ಪಾತಾಳ ಲೋಕದಲ್ಲಿ ಧರಣೀಂದ್ರ ಹಾಗೂ ಪದ್ಮಾವತಿಯರಾಗಿ ಹುಟ್ಟಿದರು.

ಪಾಶ್ವ೯ನಾಥರ ಪೂರ್ವಜನ್ಮ್ಸದ ನೈರಿ ಕಮಟನು ಅವರು ತಪಸ್ಸಿನಲ್ಲಿರುವಾಗ ಘೋರ ಉಪಸರ್ಗವನ್ನೀಡಿದಾಗ ಧರಣೀಂದ್ರ ಹಾಗೂ ಪದ್ಮಾವತಿಯರು ಅದನ್ನು ನಿವಾರಿಸುತ್ತಾರೆ.

"http://kn.wikipedia.org/w/index.php?title=ಪದ್ಮಾವತಿ&oldid=324500" ಇಂದ ಪಡೆಯಲ್ಪಟ್ಟಿದೆ