ಪದಬಂಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಪದಬಂಧ ಚೌಕ
A Bengali crossword grid
An American-style crossword grid layout
Recreation of Arthur Wynne's original crossword puzzle from December 21, 1913.
Person solving a Finnish crossword puzzle.

ಪದಬಂಧಗಳು ಮನೋರಂಜನೆಗಾಗಿ ರಚಿಸಲ್ಪಡುವ ಒಂದು ಬಗೆಯ ಪದ ಸಮಸ್ಯೆಗಳು. ಒಂದು ದೊಡ್ಡ ಚೌಕದಲ್ಲಿ ಅನೇಕ ಚಿಕ್ಕ ಕಪ್ಪು ಮತ್ತು ಬಿಳಿಯ ಚೌಕಗಳಿದ್ದು, ಬಿಳಿ ಚೌಕಗಳಲ್ಲಿ ಅಕ್ಷರಗಳನ್ನು ತುಂಬುವಂತೆ ಸುಳುಹುಗಳನ್ನು ನೀಡಲಾಗುತ್ತದೆ.

ಪದಬಂಧ

ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ `ಪದಬಂಧ`. ಒಂದೆಡೆ ಭಾಷಾ ಪ್ರೌಢಮೆಗಳಿಸಲು ನೆರವಾಗುವ, ಮತ್ತೊಂದೆಡೆ ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ ಪದಬಂಧಗಳ ಇತಿಹಾಸ ಇಂದು ನಿನ್ನೆಯದಲ್ಲ. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ, ಪದರಚನೆ ಮಾಡಿದನೆಂದೂ ಹಾಗೂ ನಂತರ ಇದು ಪದಬಂಧ ಆಟ ತಾಳಲು ಕಾರಣವಾಯಿತೆಂದೂ ಹೇಳಲಾಗುತ್ತದೆ. ಆದರೆ, ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 23ರ ಸಂಚಿಕೆಯಲ್ಲಿ. ಕ್ರಿಸ್‍ಮಸ್ ವಿಶೇóಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ `ದಿ ನ್ಯೂಯರ್ಕ್ ಟೈಂಸ್` ಪತ್ರಿಕೆಯ ಸಂಪಾದಕ ಆರ್ಥರ್ ವೈನ್ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು ವರ್ಡ್ ಕ್ರಾಸ್ ಎಂಬ ಅಂಕಣವನ್ನು ಪ್ರಕಟಿಸಿದ. ನಂತರ, ಆ ಆಂಕಣ ಎಷ್ಟು ಜನಪ್ರಿಯತೆ ಗಳಿಸಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ವಾರದ ಪುರವಣಿಗಳಲ್ಲಿ ಪ್ರಕಟಿಸುವುದು ಅನಿವಾರ್ಯವಾಯಿತು.

ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಪದಬಂಧಗಳ ಜನಪ್ರಿಯತೆಯ ಗಮನಿಸಿ-ಗ್ರಹಿಸಿದ ಅಮೆರಿಕದ ಸೈಮನ್ ಮತ್ತು ಪುಸ್ಟೆರ್ ಎಂಬ ಯುವಕರು 1924ರಲ್ಲಿ ಪದಬಂಧಗಳ ಸಂಕಲವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರು. ಅವರ ಪುಸ್ತಕಕ್ಕೆ ಆರಂಭದಲ್ಲಿ ಬೇಡಿಕೆ ಇಲ್ಲದಂತೆ ಕಂಡರೂ, ಆ ಪದಬಂಧ ಪುಸ್ತಕದಲ್ಲಿನ ಸೃಜನಶೀಲತೆಗೆ ಮನಸೋತ ಜನರು ಅವುಗಳ ಎಲ್ಲಾ ಪ್ರತಿಗಳನ್ನು ಖರೀದಿಸಿದರು. ತಮ್ಮ ಕೃತಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಸೈಮನ್ ಮತ್ತು ಪುಸ್ಟೆರ್ ಪದಬಂಧಗಳ ಮತ್ತೆರಡು ಪುಸ್ತಕಗಳನ್ನು ಪ್ರಕಟಿಸಿದರು. ಎಂಟು ದಶಕಗಳ ಹಿಂದೆಯೇ, ಆ ಪುಸ್ತಕಗಳ ಮೂರೂವರೆ ಲಕ್ಷ ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿದವು ಎಂದರೆ ಪದಬಂಧದ ಪ್ರಭಾವ ಎಷ್ಟಿತ್ತು”ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಪದಬಂಧಗಳ ಪುಸ್ತಕಗಳಿಂದ ಪ್ರಭಾವಿತರಾದ ಜನರು ಪದಬಂಧಗಳ ಕೂಟ ಮತ್ತು ಒಕ್ಕೂಟಗಳನ್ನು ರಚಿಸಿಕೊಂಡು ಪದಬಂಧಗಳ ಸ್ಪರ್ಧೆಗಳನ್ನು ಏರ್ಪಡಿಸಿದರು. ಆ ಸಂದರ್ಭದಲ್ಲಿ ಅಮೆರಿಕಾದಲ್ಲಿ ಭಾರೀ ಸಂಖ್ಯೆಯಲ್ಲಿ ನಿಘಂಟುಗಳು ಮಾರಾಟವಾಗಿ ರಾಷ್ಟ್ರವಿಡಿ ಚಿಂತನಾ ಕಾರಂಜಿಯನ್ನು ಪುಟಿಸಿತು. ಆಂಗ್ಲ ಪತ್ರಿಕೋದ್ಯಮವನ್ನು ಆವರಿಸಿದ ನಂತರ, ಪದಬಂಧಗಳು ವಿವಿಧ ದೇಶ-ಪ್ರದೇಶಗಳಲ್ಲಿನ ಸ್ಥಳೀಯ ಭಾಷಾ ಪತ್ರಿಕೋದ್ಯಮವನ್ನೂ ಪ್ರವೇಶಿಸಿತು. ಅಂತೆಯೇ, ಕನ್ನಡ ಪತ್ರಿಕೋದ್ಯಮವನ್ನೂ ಪದಾರ್ಪಣೆ ಮಾಡಿದ ಪದಬಂಧಗಳು ಮೊದಲು ಪ್ರಮುಖ ದಿನಪತ್ರಿಕೆಗಳ ವಾರದ ವಿಶೇಷ ಪುರವಣಿಗಳಲ್ಲಿ ವಿಜೃಂಭಿಸತೊಡಗಿದವು. ಕೆಲವು ಪತ್ರಿಕೆಗಳು ಪದಬಂಧಗಳು ನಿಖರವಾಗಿ ಭರ್ತಿಮಾಡಿ ಕಳುಹಿಸಿದ ಓದುಗರಿಗೆ ಬಹುಮಾನಗಳನ್ನು ನೀಡುವುದಾಗಿ ಘೋಷಿಸಿ ತಮ್ಮ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಪದಬಂಧಗಳನ್ನು ಬಳಸಿಕೊಂಡವು. ಇದೀಗ ಪದಬಂಧಗಳು ಪ್ರಮುಖ ದಿನಪತ್ರಿಕೆಗಳಲ್ಲಿ ದಿನ ನಿತ್ಯದ ಅಂಕಣವಾಗಿ ಪ್ರಕಟಗೊಳ್ಳುತ್ತಿವೆ.

  ಕನ್ನಡ ಪತ್ರಿಕೊದ್ಯಮದಲ್ಲಿ ಪದಬಂಧಗಳು ರಚಿಸುವಲ್ಲಿ ಅತ್ಯಂತ ಹಿರಿಯರು ಹಾಗೂ ವಿಚಾರ ಪ್ರಚೋದಕರೂ ಆಗಿರುವ ಕೆ.ಎಸ್.ನಾಗಭೂಷಣ `ಪ್ರಜಾವಾಣಿ` ಪತ್ರಿಕೆಯ ವಾರದ ಪುರವಣಿಯಲ್ಲಿ ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಪದಬಂಧ ರಚಿಸಿ ಓದುಗರಿಗೆ ಪರಿಚಿತರಾಗಿದ್ದಾರೆ. ನಂತರ ಮೈಸೂರಿನ ಸತ್ಯನಾರಾಯಣ ಅವರು ಸಂಯುಕ್ತ ಕರ್ನಾಟಕ ಹಾಗೂ `ಮುಂಜಾನೆ` ಪತ್ರಿಕೆಗಳಲ್ಲಿ ಪದಬಂಧ ಬರೆದರು. ಈ ಇಬ್ಬರು ಮಹನೀಯರ ನಂತರ ಕನ್ನಡ ಪದಬಂಧ ಬರೆಯಲಾರಂಭಿಸಿದವರು ಅ.ನಾ.ಪ್ರಹ್ಲಾದರಾವ್.

ಪದಬಂಧಗಳ ಪ್ರಕಟಣೆ[ಬದಲಾಯಿಸಿ]

  • ಕನ್ನಡದಲ್ಲಿ ಅ.ನಾ.ಪ್ರಹ್ಲಾದರಾವ್ ಅವರು ೩೫,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಪ್ರತಿ ನಿತ್ಯ ವಿಜಯಕನಾ೯ಟಕ ಹಾಗೂ ಸಂಯುಕ್ತಕನಾಟಕ ಪತ್ರಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಳ್ಳುತ್ತಿವೆ. ೧೯೮೪ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿದ ಇವರು, ಚಲನಚಿತ್ರ, ಕ್ರೀಡೆ, ಸಾಮಾನ್ಯ ಜ್ಞಾನ, ಪೌರಾಣಿಕ ಹಾಗು ವಿಜ್ಞಾನ ವಿಷಯಗಳಲ್ಲಿ ಪದಬಂಧಗಳನ್ನು ರಚಿಸಿದರು.
  • ಇವರು ರಚಿಸಿದ ಪದಬಂಧಗಳು, ಕರ್ನಾಟಕದ ಪ್ರಮುಖ ಪತ್ರಿಕೆಗಳಾದ, ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಮಂಗಳ, ಬಾಲಮಂಗಳ, ಪ್ರಿಯಾಂಕ, ಚಿತ್ರ, ತರಂಗ, ಈ ಸಂಜೆ, ಅರಗಿಣಿ, ಪ್ರಿಯಾಂಕ, ಚಿತ್ರ, ಕಂದಾಯವಾತೆ೯ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭಾರತದ ಭಾಷೆಗಳಲ್ಲಿ ಅತಿ ಹೆಚ್ಚು ಪದಬಂಧ ರಚಿಸಿರುವ ಅ.ನಾ.ಪ್ರಹ್ಲಾದರಾವ್ ಹೆಸರು 2015ರ ಲಿಮ್ಕಾ ಬುಕ್ ಆಫ್ ರೆಕಾರ್ಡಿನಲ್ಲಿ ಸ್ಥಾನ ಪಡೆದಿದೆ.
  • ಅ.ನಾ.ಪ್ರಹ್ಲಾದ ರಾವ್ ವಿವಿಧ ಪತ್ರಿಕೆಗಳಿಗೆ ರಚಿಸಿದ ಪದಬಂಧಗಳನ್ನು ಆಧರಿಸಿದ ೫ ಪದಬಂಧ ಪುಸ್ತಕಗಳು ಒಂದೇ ಬಾರಿ ಬಿಡುಗಡೆಗೊಂಡವು. ಪದ್ಮಶ್ರೀ ಪುರಸ್ಕೃತ ಹಿರಿಯ ಕವಿ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಈ ಪದಬಂಧ ಪುಸ್ತಕಗಳನ್ನು ಲೋಕಾಪ೯ಣೆ ಮಾಡಿ ದರು. ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಪದಬಂಧ ಪುಸ್ತಕಗಳು ಇವಾಗಿವೆ. ಕನ್ನಡ ಭಾಷೆಯ ಮಟ್ಟಿಗೆ ಇದೊಂದು ದಾಖಲೆ.
  • ೫ ಪುಸ್ತಕಗಳಲ್ಲಿ ೨ ಸಾಮಾನ್ಯ, ೧ ಕನ್ನಡ ಸಿನಿಮಾ ಹಾಗೂ ಮತ್ತೊಂದು ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ಡಪಡಿಸಿದ ಪದಬಂಧ ಪುಸ್ತಕಗಳಾಗಿವೆ. ಇಂಗ್ಲಿಷ್ ಭಾಷೆಯಲ್ಫ್ಲಿ ಪದಬಂಧ ಪುಸ್ತಕ ಪ್ರಕಟಗೊಂಡ ೮೮ ವಷ೯ಗಳ ನಂತರ ಕನ್ನಡ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡಿರುವುದು ವಿಶೇಷವಾಗಿದೆ. ಅ.ನಾ.ಪ್ರಹ್ಲಾದ ರಾವ್ ಅವರು ಕನ್ನಡದಲ್ಲಿ ೩೫,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇದಕ್ಕಾಗಿ ಈವರೆವಿಗೂ ಅ.ನಾ.ಪ್ರಹ್ಲಾದ ರಾವ್ ಅವರು ಎಂಟು ಲಕ್ಷ ಸುಳುಹುಗಳನ್ನು ನೀಡಿದ್ದಾರೆ.

https://www.youtube.com/watch?v=lEScwxfL_nY

ಲಿಮ್ಕಾ ಬುಕ್ ಆಫ್ ರೆಕಾರ್ಡಿನಲ್ಲಿ ಹೆಸರು[ಬದಲಾಯಿಸಿ]

ಭಾರತೀಯ ಭಾಷೆಗಳಲ್ಲಿಯೇ ಅತಿ ಹೆಚ್ಚು ಪದಬಂಧಗಳನ್ನು ರಚಿಸಿದ ಅ.ನಾ.ಪ್ರಹ್ಲಾದರಾವ್ ಅವರ ಹೆಸರು 2015 ಹಾಗೂ 2016ರ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕದಲ್ಲಿ ದಾಖಲಾಗಿದೆ. ಭಾರತದ ಪ್ರಾದೇಶಿಕ ಭಾಷೆಗಳ ಪೈಕಿ ಅತಿ ಹೆಚ್ಚು ಪದಬಂಧ ರಚಿಸಿದ ಕಾರಣಕ್ಕಾಗಿ ಇವರ ಹೆಸರು ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲೆಯಾಗಿದೆ. 1984ರಲ್ಲಿ ಅರಗಿಣಿ ಪತ್ರಿಕೆಗೆ ಪದಬಂಧ ರಚಿಸಲಾರಂಭಿಸಿದ ಅ.ನಾ.ಪ್ರಹ್ಲಾದರಾವ್ ಅವರು 2015ರ ಜೂನ್ 30ರವರೆಗೆ 31,600 ಪದಬಂಧಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. http://www.limcabookofrecords.in/recordDetail.aspx?rid=616 Archived 2015-03-19 ವೇಬ್ಯಾಕ್ ಮೆಷಿನ್ ನಲ್ಲಿ.

ಜಿ.ವೆಂಕಟಸುಬ್ಬಯ್ಯನವರ ಮುನ್ನುಡಿ[ಬದಲಾಯಿಸಿ]

  • ಕನ್ನಡದಲ್ಲಿ 35,000 ಪದಬಂಧಗಳನ್ನು ರಚಿಸುವ ಮೂಲಕ ಭಾರತದಲ್ಲಿಯೇ ಅತ್ಯಂತ ಹೆಚ್ಚು ಪದಬಂಧ ರಚಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಅ.ನಾ.ಪ್ರಹ್ಲಾದರಾವ್ ಕನ್ನಡ ಪತ್ರಿಕೆಗಳಿಗೆ ಕಳೆದ 27 ವರ್ಷಗಳಿಂದ ನಿರಂತರವಾಗಿ ಪದಬಂಧಗಳನ್ನು ಬರೆದುಕೊಡುತ್ತಿದ್ದಾರೆ. ಇವರು ರಚಿಸಿದ ಪದಬಂಧಗಳಿಗಾಗಿ ಸುಮಾರು 12 ಲಕ್ಷ ಸುಳುಹುಗಳನ್ನು ಬರೆದ ಹೆಗ್ಗಳಿಕೆ ಇವರದಾಗಿದೆ. ಕನ್ನಡದ ಸುಮಾರು 30ಕ್ಕೂ ಹೆಚ್ಚು ನಿಯತಕಾಲಿಕೆಗಳು ಹಾಗೂ ಹಲವಾರು ದಿನ ಪತ್ರಿಕೆಗಳಲ್ಲಿ ಪದಬಂಧಗಳು ಪ್ರಕಟಗೊಳ್ಳುತ್ತಿವೆ.
  • ಕನ್ನಡಡಲ್ಲಿ ಮೊದಲ ಬಾರಿಗೆ ಪದಬಂಧ ಪುಸ್ತಕಗಳನ್ನು ಪ್ರಕಟಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ಒಂದೇ ಬಾರಿಗೆ 2008ರಲ್ಲಿ ಐದು `ಕನ್ನಡ ಪದಬಂಧ` ಪುಸ್ತಕಗಳನ್ನು ಹೊರ ತಂದಿದ್ದಾರೆ. ಪದಬಂಧ ಪುಸ್ತಕಗಳಿಗೆ ಹಿರಿಯ ಲೇಖಕರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಮುನ್ನುಡಿ ಬರೆದಿದ್ದಾರೆ. ಪುನಃ 2013ರಲ್ಲಿ ತಲಾ 200 ಪದಬಂಧಗಳನ್ನು ಹೊಂದಿದ `ಪದಲೋಕ` ಹಾಗೂ `ಪದಕ್ರೀಡೆ` ಮತ್ತೆರಡು ಪದಬಂಧ ಪುಸ್ತಕಗಳನ್ನು ಹೊತಂದರು.
  • ಟಿ.ವೆಂಕಟೇಶ್ ಅವರು ಪ್ರಕಟಿಸಲು ಆರಂಭಿಸಿದ `ಅಭಿಮಾನಿ` ಪತ್ರಿಕೆಗೆ 1984ರಲ್ಲಿ ಪದಬಂಧ ಬರೆಯಲು ಆರಂಭಿಸಿದ ಅ.ನಾ.ಪ್ರಹ್ಲಾದರಾವ್ ಜೊತೆ ಜೊತೆಯಲ್ಲಿ ಅವರದೇ ಪ್ರಕಟಣೆಯಾದ `ಅರಗಿಣಿ` ಪತ್ರಿಕೆಗೆ ಸಿನಿಮಾ ಪದಬಂಧ ಬರೆಯತೊಡಗಿದರು. 30 ವರ್ಷಗಳ ನಂತರವೂ `ಅರಗಿಣಿ` ಪತ್ರಿಕೆಗಾಗಿ ಸಿನಿಮಾ ವಿಷಯ ಆಧರಿಸಿದ `ಗಿಣಿಬಂಧ` ರಚಿಸಿಕೊಂಡು ಬಂದಿರುವುದು ಹೆಗ್ಗಳಿಕೆಯಾಗಿದೆ.
  • 1984ರಲ್ಲಿ ಆರಂಭಗೊಂಡ `ಮಂಗಳ` ವಾರಪತ್ರಿಕೆಗಾಗಿ ಮಂಗಳ ಪದಬಂಧ ಬರೆಯತೊಡಗಿದ ಅ.ನಾ.ಪ್ರ ಅವರು ಪದಬಂಧ ಮಾತ್ರವಲ್ಲದೆ ಚಲನಚಿತ್ರ ಕುರಿತ ಚಿತ್ರಾನ್ವೇಷಣೆ ಅಂಕಣವನ್ನು 30 ವರ್ಷಗಳ ನಂತರವೂ ಬರೆಯುತ್ತಿದ್ದಾರೆ. ಕನ್ನಡದ ಕಾದಂಬರಿಗಳನ್ನು ಆಧರಿಸಿದ ಸಾಹಿತ್ಯ ಪದಬಂಧಗಳನ್ನು ಮಂಗಳ ಪತ್ರಿಕೆಗಾಗಿ ಬರೆದುಕೊಟ್ಟಿದ್ದಾರೆ.
  • ಇವರದೆ ಪ್ರಕಟಣೆಯಾದ `ಬಾಲಮಂಗಳ` ಪಾಕ್ಷಿಕಕ್ಕಾಗಿ ಸುಮಾರು 15 ವರ್ಷ ಕಾಲ ಪದಬಂಧ ಹಾಗೂ ಪದಾನ್ವೇಷಣೆ ಅಂಕಣಗಳನ್ನು ಬರೆದಿದ್ದಾರೆ. `ಬಾಲಮಂಗಳ` ಪತ್ರಿಕೆಗಾಗಿ ಕನ್ನಡ ಸುಳುಹುಗಳನ್ನು ಆಧರಿಸಿ ಸರಳ ಇಂಗ್ಲಿಷ್ ಪದಗಳನ್ನು ತುಂಬುವ `ಸಮ್ಮಿಶ್ರಬಂಧ` ರಚಿಸಿದ್ದಾರೆ. ರಾಜನ್ಸ್ ಸಂಸ್ಥೆ ಹೊರ ತರುತ್ತಿರುವ `ಪ್ರಿಯಾಂಕ` ಹಾಗೂ `ಚಿತ್ರ` ಸಿನಿಮಾ ಪತ್ರಿಕೆಗೆ ಆ ಎರಡೂ ಮಾಸಿಕಗಳು ಆರಂಭಗೊಂಡ ಮೊದಲ ಸಂಚಿಕೆಯಿಂದಲೂ ಪದಬಂಧಗಳನ್ನು ರಚಿಸುತ್ತಿದ್ದಾರೆ.

ಪ್ರೊ.ಜಿ.ವೆಂಕಟಸುಬ್ಬಯ್ಯನವರು ಬರೆದ ಮುನ್ನುಡಿಯ ಪೂರ್ಣಪಾಠ[ಬದಲಾಯಿಸಿ]

ಮುನ್ನುಡಿ:

  • ಇಂಗ್ಲಿಷ್ ಭಾಷೆಯಲ್ಲಿ ಉಪಯೋಗದಲ್ಲಿರುವ Crossword puzzle ಎಂಬ ಶಬ್ದಕ್ಕೆ ಕನ್ನಡದಲ್ಲಿ ಮಾಡಿಕೊಂಡಿರುವ ‘`ಪದಬಂಧ`’ಎಂಬ ಮಾತು ಈಗ ತುಂಬಾ ಪ್ರಚಾರದಲ್ಲಿದೆ. ನಿಜವಾಗಿ ಇದು ಒಂದು ಸಮಸ್ಯೆಯ ಪ್ರಪಂಚ. ಇದರಲ್ಲಿ ಮೇಲಿನಿಂದ ಕೆಳಕ್ಕೆ 9, 10 ಅಥವಾ 11 ಮನೆಗಳು, ಅಡ್ಡಡ್ಡಲಾಗಿ ಅಷ್ಟೇ ಸಂಖ್ಯೆಯ ಮನೆಗಳು ಇರುತ್ತವೆ. ಆ ಮನೆಗಳಲ್ಲಿ ನಿಯಮಬದ್ಧವಾಗಿ ಕೆಲವು ಮನೆಗಳನ್ನು ಬಿಟ್ಟು ಮಿಕ್ಕ ಮನೆಗಳಲ್ಲಿ ಮೇಲಿನಿಂದ ಕೆಳಕ್ಕೂ, ಅಡ್ಡಡ್ಡಲಾಗಿಯೂ ಶಬ್ದಗಳನ್ನು ಸೇರಿಸಬೇಕು.
  • ಈ ಶಬ್ದಗಳನ್ನು ಆರಿಸಿಕೊಳ್ಳಲು ಎರಡು ಕಡೆಗಳಿಗೂ ಸೂಕ್ತವಾದ ಸೂಚನೆಗಳಿರುತ್ತವೆ. ಆ ಸೂಚನೆಯ ಬೆನ್ನು ಹತ್ತಿ ಓದುಗರು ಸರಿಯಾದ ಪದಗಳನ್ನು ಹುಡುಕಿ ಆ ಮನೆಗಳಿಗೆ ತುಂಬ ಬೇಕು. ಹೀಗೆ ಮಾಡುವಾಗ ಓದುಗರಿಗೆ ಆಶ್ಚರ್ಯವಾಗುವ ಹಾಗೆ ಅನೇಕ ಹೊಸ ಹೊಸ ಪದಗಳ ಪರಿಚಯವಾಗುತ್ತದೆ. ಕೆಲವು ವೇಳೆ ಒಂದೊಂದು ಸೂಚನೆಗೂ ಉಚಿತವಾಗುವ ಅನೇಕ ಪದಗಳು ಇರುತ್ತವೆ. ಪದಬಂಧಕಾರರು ತಮ್ಮ ಉತ್ತರದಲ್ಲಿ ಆರಿಸಿಕೊಂಡಿರುವ ಪದಗಳಿಗೆ ಸರಿಹೊಂದುವ ಪದವನ್ನು ನೀವೂ ಆರಿಸಿದರೆ ಅದೃಷ್ಟ ಫಲಿಸುತ್ತದೆ.
  • ಇದೇ ಸಮಸ್ಯೆಯಲ್ಲಿರುವ ಸೊಗಸು. ನಿಜವಾಗಿ ಈ ಸಮಸ್ಯೆಗಳನ್ನು ಬಿಡಿಸುವಾಗ ಓದುಗರಿಗೆ ಗೊತ್ತಿಲ್ಲದಂತೆಯೇ ಅವರು ಅನೇಕ ನಿಘಂಟುಗಳನ್ನು ಉಪಯೋಗಿಸಬೇಕಾಗುತ್ತದೆ. ಇಂಗ್ಲಿಷ್‍ನಲ್ಲಿ ಈ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕಾಗಿಯೇ ರಚಿಸಿರುವ ನಿಘಂಟಗಳಿರುತ್ತವೆ. ಕನ್ನಡದಲ್ಲಿ ಆ ಅನುಕೂಲವಿಲ್ಲ. ಆದುದರಿಂದ ಪದಬಂಧವನ್ನು ತುಂಬಲು ಪ್ರಯತ್ನಪಡುವವರಿಗೆ ಅನೇಕ ಶಬ್ದಗಳು ಹೊಳೆದರೂ ಸರಿಯಾದವು ಯಾವುದು ಎಂಬುದು ತಕ್ಷಣ ಗೊತ್ತಾಗುವುದಿಲ್ಲ.
  • ಇದೇ ಇರುವ ತೊಂದರೆ, ಆದರೂ ಓದುಗರಲ್ಲಿ ಎಷ್ಟೊಂದು ಜನ ಈ ಪದಬಂಧಗಳನ್ನು ತುಂಬಲು ಪ್ರಯತ್ನ ಪಡುತ್ತಾರೆ ನೋಡಿ! ಅವರ ಸಂಖ್ಯೆ ಅಪಾರವಾಗಿದೆ. ನಾನು ಇನ್ನೂ ಸ್ವಲ್ಪ ಕಡಿಮೆ ವಯಸ್ಸಿನವನಾಗಿದ್ದರೆ ನಾನೇ ಒಂದು ಪದಬಂಧ ನಿಘಂಟನ್ನು ತಯಾರಿಸಿ ಬಿಡುತ್ತಿದ್ದೆ. ಈಗ ಯಾರಾದರೂ ಯುವ ವಿದ್ವಾಂಸರು ದೊರೆತರೆ ಅವರ ಸಹಾಯದಿಂದ ಅಂಥದೊಂದನ್ನು ಸಿದ್ಧಪಡಿಸಬೇಕು.
  • ಅ.ನಾ. ಪ್ರಹ್ಲಾದರಾವ್ ಅವರು ಸಿದ್ಧಪಡಿಸಿರುವ ಈ ಪುಸ್ತಕದಲ್ಲಿ 220 ಪುಟಗಳಿದ್ದು, ಸುಮಾರು 170 ಪದಬಂಧಗಳು ಅಡಕಗೊಂಡಿವೆ. ಪ್ರತಿಯೊಂದರಲ್ಲಿಯೂ ಓದುಗರಿಗೆ ಆಸಕ್ತಿ ಹುಟ್ಟಿಸುವ ಸಮಸ್ಯೆಗಳಿವೆ. ಇಲ್ಲಿಯವರೆಗೂ ಕನ್ನಡದಲ್ಲಿ ಇಂಥ ಒಂದು ಪುಸ್ತಕ ಬಂದಿರಲಿಲ್ಲ. ಇದೇ ಮೊದಲ ಪುಸ್ತಕ. ಇದನ್ನು ಸಿದ್ಧಪಡಿಸಿರುವ ಶ್ರೀಅ.ನಾ. ಪ್ರಹ್ಲಾದರಾವ್ ಅವರು ಕನ್ನಡದ ಬಹುಪಾಲು ಪತ್ರಿಕೆಗಳಿಗೆ ಕಳೆದ 23 ವರ್ಷಗಳಿಂದ ಪದಬಂಧಗಳನ್ನು ರಚಿಸುತ್ತಾ ಬಂದಿದ್ದಾರೆ.
  • ಇವರು ಬಹಳ ಶ್ರಮವಹಿಸಿ ಈ ಸುಂದರ ಸಮಸ್ಯಾ ಪ್ರಪಂಚವನ್ನು ಸಿದ್ಧಪಡಿಸಿದ್ದಾರೆ. ಅವರ ಕಾರ್ಯ ಯಶಸ್ವಿಯಾಗಿದೆ. ನಾನು ಅವರನ್ನು ಅಭಿನಂದಿಸುತ್ತೇನೆ. ಪದಬಂಧ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಪಡುವವರೆಲ್ಲರೂ ಅವರಿಗೆ ಕೃತಜ್ಞರಾಗಿರಬೇಕು. ನಾನು ಶ್ರೀ ಅ.ನಾ. ಪ್ರಹ್ಲಾದ ರಾಯರನ್ನು ಅಭಿನಂದಿಸಿ, ಇತರ ಇಂಥ ಸಮಸ್ಯಾಪೂರ್ಣ ಪುಸ್ತಕಗಳನ್ನು ಅವರು ರಚಿಸಲಿ ಎಂದು ಹಾರೈಸುತ್ತೇನೆ. ಬಿಡುವಿನ ವೇಳೆ ಈ ಕಾರ್ಯದಲ್ಲಿ ಆಸಕ್ತಿ ತೋರಿಸುವವರಿಗೆಲ್ಲ ಭಾಷಾಸಾಮಾಥ್ರ್ಯ ಹೆಚ್ಚುತ್ತದೆ. ಆದ್ದರಿಂದ ಹೆಚ್ಚು ಹೆಚ್ಚಾಗಿ ಜನ ಈ ಪುಸ್ತಕದ ಪ್ರಯೋಜನವನ್ನು ಪಡೆಯಲಿ ಎಂದು ಹಾರೈಸುತ್ತೇನೆ.

- ಪ್ರೊ. ಜಿ. ವೆಂಕಟಸುಬ್ಬಯ್ಯ ದಿನಾಂಕ: 10.02.2008 ನಂ. 58, 31ನೇ ಕ್ರಾಸು, 7ನೇ ಬ್ಲಾಕು, ಜಯನಗರ, ಬೆಂಗಳೂರು - 70

ವಿಜಯಕರ್ನಾಟಕ[ಬದಲಾಯಿಸಿ]

  • ವಿಜಯಕರ್ನಾಟಕ ಪತ್ರಿಕೆಯಲ್ಲಿ ಆ ಪತ್ರಿಕೆ ಆರಂಭಗೊಂಡ 1998ರಿಂದ ಇಂದಿನವರೆಗೂ ಸತತವಾಗಿ ಇವರ ಪದಬಂಧ ಅಂಕಣ ಮೂಡಿಬರುತ್ತಿದೆ. ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ 1985ರಿಂದ 2004ರವರೆಗೆ 18 ವರ್ಷಗಳ ಕಾಲ ಭಾನುವಾರದ ಪುರವಣಿಯಲ್ಲಿ ಸಂಯುಕ್ತಬಂಧ ಪ್ರಕಟಗೊಂಡಿದೆ. ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ನಿತ್ಯ 2006ರಿಂದ ನಿರಂತರವಾಗಿ ಪದಬಂಧ ಪ್ರಕಟಗೊಳ್ಳುತ್ತಿದೆ.
  • ಪ್ರಜಾವಾಣಿ ಪತ್ರಿಕೆಯಲ್ಲಿ 1992ರಿಂದ 2008ರವರೆಗೆ ಸುಮಾರು 16 ವರ್ಷಗಳ ಕಾಲ ಶುಕ್ರವಾರದ ಸಿನಿಮಾ ಪುರವಣಿಯಲ್ಲಿ ಚಿತ್ರಬಂಧ ಪ್ರಕಟಗೊಂಡಿದೆ. ಕನ್ನಡದಲ್ಲಿ ಪ್ರತಿ ನಿತ್ಯ ಪದಬಂಧ ಆರಂಭಿಸಿದ ಕೀರ್ತಿ ಕನ್ನಡಪ್ರಭ ಪತ್ರಿಕೆಯದು. ವೈ.ಎನ್.ಕೆ ಅವರು ಈ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ 2001ರಲ್ಲಿ ಅ.ನಾ.ಪ್ರ ಕನ್ನಡಪ್ರಭ ಪತ್ರಿಕೆಗೆ ನಿತ್ಯ ಪದಪ್ರಭ ಬರೆಯಲು ಆರಂಭಿಸಿದರು.
  • ಐದು ವರ್ಷಗಳ ಕಾಲ ನಿರಂತರವಾಗಿ ಈ ಪತ್ರಿಕೆಗೆ ಪದಬಂಧ ರಚಿಸಿಕೊಟ್ಟರು. ಪುನಃ ವೆಂಕಟನಾರಾಯಣ ಅವರು ಸಂಪಾದಕರಾದ ಸಮಯದಲ್ಲಿ ಕನ್ನಡಪ್ರಭಕ್ಕಾಗಿ 2007ರಲ್ಲಿ ಪದಪ್ರಭ ಮುಂದುವರೆಸಿದರು. ಈಸಂಜೆ, ಮಂಗಳ, ಅರಗಿಣಿ, ಕಂದಾಯವಾರ್ತೆ, ಪ್ರ್ರಿಯಾಂಕ, ಚಿತ್ರ, ಬಾಲಮಂಗಳ, ವಿಜಯಚಿತ್ರ, ವನಿತಾ, ತರಂಗ ಮುಂತಾದ ಪತ್ರಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಂಡಿವೆ.

`ವಿಜ್ಞಾನಸಂಗಾತಿ` ಮಾಸಪತ್ರಿಕೆಗಾಗಿ[ಬದಲಾಯಿಸಿ]

  • ಹಂಪಿ ಕನ್ನಡ ವಿಶ್ವವಿದಾಲಯ ಪ್ರಕಟಿಸುತ್ತಿದ್ದ ಪತ್ರಕರ್ತ ವಾಸುಕಿ ಅವರ ಸಂಪಾದಕತ್ವದಲ್ಲಿ ಹೊರ ಬಂದ `ವಿಜ್ಞಾನಸಂಗಾತಿ` ಮಾಸಪತ್ರಿಕೆಗಾಗಿ 1986ರಿಂದ ಸುಮಾರು 5 ವರ್ಷ ಕಾಲ ವಿಜ್ಞಾನ ಆಧರಿಸಿದ ವಿಜ್ಞಾನಬಂಧ ಹಾಗೂ ವಿಶೇಷ ಪದ ಅನ್ವೇಷಣ ಅಂಕಣಗಳನ್ನು ಬರೆದು ಕೊಟ್ಟಿದ್ದಾರೆ. ಪತ್ರಕರ್ತ, ಸಾಹಿತಿ ರವಿಬೆಳಗೆರೆ ಅವರ ಸಂಪಾದಕತ್ವದಲ್ಲಿ 1992ರಲ್ಲಿ ಪುನರ್ಜೀವ ಪಡೆದ `ಕರ್ಮವೀರ` ಪತ್ರಿಕೆಗಾಗಿ ಪ್ರಥಮ ಸಂಚಿಕೆಯಿಂದ ಸುಮಾರು 15 ವರ್ಷಗಳ ಕಾಲ `ಪದಸಂಪದ` ಎಂಬ ಹೊಸ ನಾಮಧೇಯವನ್ನು ತಾವೇ ನೀಡಿ ಪದಬಂಧ ರಚಿಸಿಕೊಟ್ಟರು. * ಅಷ್ಟೇ ಕಾಲ `ಕರ್ಮವೀರ` ಪತ್ರಿಕೆಗಾಗಿ ಸಿನಿಮಾ ಆಧರಿಸಿದ `ಚಿತ್ರಜ್ಞಾನ` ಬಂಧವನ್ನು ಬರೆದರು. ಮದರಾಸ್ ನಗರದಿಂದ ಹೊರ ಬರುತ್ತಿದ್ದ, ನಾಗಿರೆಡ್ಡಿ-ಚಕ್ರಪಾಣಿ ಅವರ ಪ್ರತಿಷ್ಠಿತ ಪ್ರಕಟಣ ಸಂಸ್ಥೆ `ಡಾಲ್ಫಿನ್ ಪಬ್ಲಿಕೇಷನ್ಸ್` ಸಂಸ್ಥೆ ಪ್ರಕಟಿಸುತ್ತಿದ್ದ `ಚಂದಮಾಮ` ಪತ್ರಿಕೆಯ ಸೋದರ ಪತ್ರಿಕೆಗಳಾದ `ವನಿತಾ` ಹಾಗು `ವಿಜಯಚಿತ್ರ` ಮಾಸ ಪತ್ರಿಕೆಗಳಿಗೆ ಸುಮಾರು 8 ವರ್ಷ ಪದಬಂಧಗಳನ್ನು ಬರೆದುಕೊಟ್ಟ ವಿಶೇಷ ಅನಾಪ್ರ ಅವರದಾಗಿದೆ.

ಕ್ರೀಡೆ ವಿಜ್ಞಾನ ಅಪರಾಧ ಸಿನಿಮಾ ಪದಬಂಧ[ಬದಲಾಯಿಸಿ]

  • ಮಲ್ಲಿಕಾರ್ಜುನಯ್ಯ ಅವರು ಹೊರ ತರುತ್ತಿದ್ದ `ಪೊಲೀಸ್ ನ್ಯೂಸ್` ವಾರಪತ್ರಿಕೆಗಾಗಿ 8 ವರ್ಷ ಅಪರಾಧ ವಿಷಯಗಳನ್ನು ಆಧರಿಸಿದ ಪೊಲೀಸ್ ಬಂಧ ರಚಿಸಿದ್ದಾರೆ. ಅದೇ ರೀತಿ ಟಿ.ವೆಂಕಟೇಶ್ ಅವರಿಗಾಗಿ ರವಿಬೆಳಗೆರೆ ಸಂಪಾದಿಸಿದ `ಪೊಲೀಸ್ ಫೈಲ್` ವಾರಪತ್ರಿಕೆಗಾಗಿ ಸುಮಾರು 2 ವರ್ಷ ಕಾಲ ಅಪರಾಧ ಬಂಧಗಳನ್ನು ರಚಿಸಿದರು. ಅಭಿಮಾನಿ ಸಂಸ್ಥೆಗಾಗಿ ಗಣೇಶ್ ಕಾಸರಗೋಡು ಸಂಪಾದಿಸುತ್ತದ್ದ `ಸಂಚು` ಅಪರಾಧ ಪತ್ರಿಕೆ ಹಾಗೂ `ತಾಯಿ` ಮಹಿಳಾ ಪತ್ರಿಕೆ ಮತ್ತು `ಕ್ರೀಡಾಭಿಮಾನಿ` ಕ್ರೀಡಾ ಪತ್ರಿಕೆಗಳಿಗಾಗಿ ಪದಬಂಧಗಳನ್ನು ಬರೆದಿದ್ದಾರೆ.
  • ಬಾಲಕೃಷ್ಣ ಕಾಕತ್ಕರ್ ಹೊರ ತಂದ `ರಂಗವಲ್ಲಿ` ಸಿನಿಮಾ ಪತ್ರಿಕೆ, ವಿ.ಎನ್.ಸುಬ್ಬರಾವ್ ಹಾಗೂ ವಿಜಯಾ ಹೊರ ತಂದ `ನಕ್ಷತ್ರಲೋಕ` ಸಿನಿಮಾ ಪತ್ರಿಕೆಗಳಿಗಾಗಿ ಸಿನಿಮಾ ಪದಬಂಧಗಳು, ಕೆ.ರಾಜರಾವ್ ಸಂಪಾದಕತ್ವದಲ್ಲಿ ಪ್ರಕಟಗೊಂಡ `ಹೋಟೆಲ್ ಪತ್ರಿಕೆ`ಗಾಗಿ ತಿಂಡಿ-ತಿನಿಸು ಆಧರಿಸಿದ ಪದಬಂಧಗಳನ್ನು ಅ.ನಾ.ಪ್ರ ರಚಿಸಿದ್ದಾರೆ. `ಚೆಲುವೆ`, `ರಾಜಧಾನಿ` ಮುಂತಾದ ಪತ್ರಿಕೆಗಳಿಗೂ ಪದಬಂಧ ರಚಿಸಿದ್ದಾರೆ.
  • ಇಸ್ಕಾನ್ ಸಂಸ್ಥೆ ಹೊರತರುತ್ತಿರುವ ಮಾಸ ಪತ್ರಿಕೆಗಾಗಿ ಕೃಷ್ಣಬಂಧ ರಚಿಸಿದ್ದಾರೆ. ಶಾ.ಅಶೋಕಬಾಬು ನಡೆಸುತ್ತಿದ್ದ `ಕರ್ನಾಟಕ ನ್ಯೂಸ್‍ನೆಟ್` ಸುದ್ದಿ ಸಂಸ್ಥೆಗಾಗಿ ಹಲವು ವರ್ಷ ಪ್ರತಿ ನಿತ್ಯ ಪದಬಂಧ ರಚಿಸಿಕೊಡುತ್ತಿದ್ದು, ಈ ಪದಬಂಧಗಳು ನಾಡಿನ ಹತ್ತಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗಂಡಿವೆ. ಇದೇ ಸಂಸ್ಥೆ ಪದಬಂಧಗಳಿಗಾಗಿಯೇ ಮೀಸಲಿರಿಸಿ ಹೊರ ತಂದ `ಶ್ರುತಿ` ಮಾಸ ಪತ್ರಿಕೆಗಾಗಿ ಪ್ರತಿ ಸಂಚಿಕೆಗೂ 50ಕ್ಕಿಂತಲೂ ಹೆಚ್ಚು ಬಂಧಗಳನ್ನು ಬರೆದುಕೊಟ್ಟಿದ್ದಾರೆ.
  • ಅಭಿಮಾನಿ ಪ್ರಕಾಶನ ಸಂಸ್ಥೆ `ಅಭಿಮಾನ` ದಿನ ಪತ್ರಿಕೆ ಆರಂಭಿಸಿದಾಗ ಆ ಪತ್ರಿಕೆಗಾಗಿ ನಿತ್ಯ ಪದಬಂದಗಳನ್ನು ರಚಿಸಿಕೊಟ್ಟರು. ಈ ಸಂಸ್ಥೆ 1989ರಲ್ಲಿ ಆರಂಭಿಸಿದ `ಈಸಂಜೆ` ಸಂಜೆ ದಿನ ಪತ್ರಿಕೆಗಾಗಿ ಸುಮಾರು 15 ವರ್ಷ ಕಾಲ ಪ್ರತಿ ನಿತ್ಯ ನಿತ್ಯಬಂಧ ಸಿದ್ಧಪಡಿಸದರು. ಅಲ್ಲದೆ, ಈಸಂಜೆ ಪತ್ರಿಕೆಗಾಗಿ ಪ್ರತಿ ಶುಕ್ರವಾರ ಚಲನಚಿತ್ರ ಆಧರಿಸಿದ ಪದಬಂಧಗಳನ್ನು ರಚಿಸಿಕೊಟ್ಟರು.
  • ನವದೆಹಲಿಯಿಂದ ಕೆ.ಆರ್.ರೇಣು ಅವರು ಹೊರ ತರುತ್ತಿರುವ `ದೆಹಲಿ ಕನ್ನಡಿಗ` ಪತ್ರಿಕೆಗಾಗಿ ಹಾಗೂ ಮುಂಬಯಿನಿಂದ ಮುಂಜಾನೆ ಸತ್ಯ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ `ಉದಯರಾಗ` ದಿನ ಪತ್ರಿಕೆಗಳಿಗೆ ಹಲವು ವರ್ಷಗಳ ಕಾಲ ನಿತ್ಯ ಪದಬಂಧ ಬರೆದುಕೊಟ್ಟರು. ಬೆಳಗಾವಿಯ `ಕನ್ನಡಮ್ಮ` ಬೆಂಗಳೂರಿನಿಂದ ಹೊರ ಬರುತ್ತಿದ್ದ `ಜನವಾಹಿನಿ` ಪತ್ರಿಕೆಗಳಿಗೆ ವಾರಕ್ಕೊಮ್ಮೆ ಪದಬಂಧ ರಚಿಸಿದರು.
  • ಕನಾಟಕ ಸರ್ಕಾರದ ಮಾಸಿಕ ಪ್ರಕಟಣೆಗಳಾದ `ಜನಪದ` `ಯುವಕರ್ನಾಟಕ` ಹಾಗೂ `ಕಂದಾಯವಾರ್ತೆ` ಪತ್ರಿಕೆಗಳಿಗೆ ಕೆಲವಾರು ವರ್ಷ ಇವರು ಪದಬಂಧ ರಚಿಸಿದ್ದಾರೆ. ಮಣಿಪಾಲದಿಂದ ಹೊರ ಬರುತ್ತಿರುವ ಜನಪ್ರಿಯ ಸಾಪ್ತಾಹಿಕ `ತರಂಗ` ಪತ್ರಿಕೆಯ ಮಕ್ಕಳ ವಿಭಾಗಕ್ಕಾಗಿ ಪದಬಂಧ ರಚಿಸಿಕೊಟ್ಟಿದ್ದಾರೆ.

ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು[ಬದಲಾಯಿಸಿ]

ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು:

  1. ವಿಜಯ ಕರ್ನಾಟಕ (ಪ್ರತಿನಿತ್ಯ),
  2. ಸಂಯುಕ್ತ ಕರ್ನಾಟಕ (ಪ್ರತಿ ನಿತ್ಯ),
  3. ಮಂಗಳ (ಪ್ರತಿವಾರ),
  4. ಅರಗಿಣಿ (ಚಲನಚಿತ್ರ),
  5. ಪ್ರಿಯಾಂಕ (ಮಾಸಿಕ),
  6. ಚಿತ್ರ (ಚಲನಚಿತ್ರ ಮಾಸಿಕ).

ಪದಬಂಧ ಪ್ರಕಟಗೊಂಡ ಪತ್ರಿಕೆಗಳು[ಬದಲಾಯಿಸಿ]

ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಂಡ ಪತ್ರಿಕೆಗಳು:

  1. ಕನ್ನಡಪ್ರಭ (ಪ್ರತಿನಿತ್ಯ),
  2. ಈಸಂಜೆ (ಪ್ರತಿನಿತ್ಯ),
  3. ಪ್ರಜಾವಾಣಿ (ಚಲನಚಿತ್ರ-ಪ್ರತಿವಾರ),
  4. ಬಾಲಮಂಗಳ (ಪಾಕ್ಷಿಕ),
  5. ದೆಹಲಿವಾರ್ತೆ (ನವದೆಹಲಿ-ಪ್ರತಿನಿತ್ಯ),
  6. ಉದಯರಾಗ (ಮುಂಬಯಿ-ಪ್ರತಿನಿತ್ಯ),
  7. ರಂಗವಲ್ಲಿ (ವಾಪ),
  8. ಚೆಲುವೆ (ವಾರ ಪತ್ರಿಕೆ),
  9. ಹೋಟೆಲ್ ಪತ್ರಿಕೆ (ಪಾಕ್ಷಿಕ ತಿಂಡಿ ತಿನಿಸು),
  10. ರಾಜಕೀಯಸುದ್ದಿ (ವಾರ ಪತ್ರಿಕೆ),
  11. ಮಾರ್ಚ್ ಆಫ್ ಕರ್ನಾಟಕ (ಮಾಸಿಕ-ವಾರ್ತಾ ಇಲಾಖೆ),
  12. ಜನಪದ (ಮಾಸಿಕ-ವಾರ್ತಾಇಲಾಖೆ),
  13. ಯುವ ಕರ್ನಾಟಕ (ಮಾಸಿಕ-ಯುವಜನಸೇವಾ ಇಲಾಖೆ),
  14. ವಿಜ್ಞಾನ ಸಂಗಾತಿ (ಮಾಸಿಕ-ಕನ್ನಡ ವಿ.ವಿ, ಹಂಪೆ),
  15. ವಿಜಯಚಿತ್ರ (ಮಾಸಿಕ-ಚಲನಚಿತ್ರ, ಚಂದಮಾಮ ಪ್ರಕಟಣೆ),
  16. ವನಿತಾ (ಮಾಸಿಕ-ಚಂದಮಾಮ ಪ್ರಕಟಣೆ),
  17. ಪೆಲೀಸ್ ನ್ಯೂಸ್ (ವಾರ ಪತ್ರಿಕೆ-ಅಪರಾಧ),
  18. ಪೆಲಿಸ್ ಫೈಲ್ (ವಾರ ಪತ್ರಿಕೆ-ಅಪರಾಧ),
  19. ಸಂಚು (ಮಾಸಿಕ-ಅಪರಾಧ),
  20. ತಾಯಿ (ಮಾಸಿಕ-ಗೃಹ),
  21. ಕ್ರೀಡಾಭಿಮಾನಿ (ಮಾಸಿಕ-ಕ್ರೀಡೆ),
  22. ಅಭಿಮಾನಿ-(ವಾರ ಪತ್ರಿಕೆ),
  23. ಅಭಿಮಾನ (ಪ್ರತಿನಿತ್ಯ),
  24. ತರಂಗ (ಮಕ್ಕಳಿಗಾಗಿ),
  25. ಕನ್ನಡಮ್ಮ (ವಾರಕ್ಕೊಮ್ಮೆ),
  26. ಕೆ.ಎನ್.ಎನ್ ನ್ಯೂಸ್‍ನೆಟ್ ಮೂಲಕ ಹಲವಾರು ಜಿಲ್ಲಾಪತ್ರಿಕೆಗಳು,
  27. ಶೃತಿ (ಪದಬಂಧ ಮಾಸಿಕ),
  28. ಜನವಾಹಿನಿ (ಪ್ರತಿ ವಾರ),
  29. ಕರ್ಮವೀರ (ವಾರ ಪತ್ರಿಕೆ),
  30. ಈಸಂಜೆ (ಪ್ರತಿ ವಾರ-ಸಿನಿಮಾ),
  31. ಕಂದಾಯ ವಾರ್ತೆ (ಕಂದಾಯ ಇಲಾಖೆ ಮಾಸಿಕ),
  32. ಸಂಯುಕ್ತ ಕರ್ನಾಟಕ (ಪ್ರತಿ ವಾರ),
  33. ಕೃಷ್ಣವೇದಾಂತ ದರ್ಶನ (ಮಾಸಿಕ-ಇಸ್ಕಾನ್),
  34. ಇಂಡಿಕ್ರಾಸ್ ಆನ್‍ಲೈನ್ ಪದಬಂಧಗಳು ಮತ್ತು ಒಂಬತ್ತು ಪದಬಂಧ ಪುಸ್ತಕಗಳು.

ಕನ್ನಡದ ಮೊದಲ ಪದಬಂಧ ಪುಸ್ತಕಗಳು[ಬದಲಾಯಿಸಿ]

೨೦೦೮ರ ಫಬ್ರವರಿಯಲ್ಲಿ ಇವರು ವಿವಿಧ ಪತ್ರಿಕೆಗಳಿಗೆ ರಚಿಸಿದ ಪದಬಂಧಗಳನ್ನು ಆಧರಿಸಿದ ೫ ಪದಬಂಧ ಪುಸ್ತಕಗಳು ಬಿಡುಗಡೆಯಾದವು. ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಪದಬಂಧ ಪುಸ್ತಕಗಳು ಇವಾಗಿವೆ. ಕನ್ನಡ ಭಾಷೆಯ ಮಟ್ಟಿಗೆ ಇದೊಂದು ದಾಖಲೆ. ೫ ಪುಸ್ತಕಗಳಲ್ಲಿ ೨ ಸಾಮಾನ್ಯ, ೧ ಕನ್ನಡ ಸಿನಿಮಾ ಹಾಗೂ ಮತ್ತೊಂದು ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ಡಪಡಿಸಿದ ಪದಬಂಧ ಪುಸ್ತಕಗಳಾಗಿವೆ. ಇಂಗ್ಲಿಷ್ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡ ೮೮ ವಷ೯ಗಳ ನಂತರ ಕನ್ನಡ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟ ಗೊಂಡಿರುವುದು ವಿಶೇಷವಾಗಿದೆ.

ಪದಲೋಕ ಮತ್ತು ಪದಕ್ರೀಡೆ[ಬದಲಾಯಿಸಿ]

  • 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಮತ್ತೆರಡು ಪದಬಂಧ ಪುಸ್ತಕಗಳು. ವಿಶ್ವ ಪದಬಂಧ ಶತಮಾನೋತ್ಸವದ ಅಂಗವಾಗಿ ಅ.ನಾ.ಪ್ರಹ್ಲಾದರಾವ್ ಅವರು ಈ ಎರಡು ಪದಬಂಧ ಪುಸ್ತಕಗಳನ್ನು ಹೊರತಂದರು. ವಸಂತ ಪ್ರಕಾಶನ ಪ್ರಕಾಶನಗೊಳಿಸಿದ ಈ ಪುಸ್ತಕಗಳಲ್ಲಿ ತಲಾ 160 ಪದಬಂಧಗಳನ್ನು ಅಡಕಗೊಳಿಸಲಾಗಿದೆ. ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ `ಪದಬಂಧ`. ಭಾಷಾ ಪ್ರೌಢಿಮೆ, ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ `ಪದಬಂಧ`ದ ಇತಿಹಾಸ ಒಂದು ಶತಮಾನದ್ದ್ಲು.
  • ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ ಮಾಡಿದ ಪದರಚನೆಯೇ ಪದಬಂಧದ ಉಗಮವಾಗಲು ಕಾರಣ. ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 21ರ ಸಂಚಿಕೆಯಲ್ಲಿ. ಕ್ರಿಸ್‍ಮಸ್ ವಿಶೇóಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ `ದಿ ನ್ಯೂಯಾರ್ಕ್ ವರ್ಡ್` ಪತ್ರಿಕೆಯ ಸಂಪಾದಕ ಆರ್ಥರ್ ವಿನ್ನೆ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು `ವರ್ಡ್‍ಕ್ರಾಸ್` ಎಂಬ ಅಂಕಣವನ್ನು ಸೃಷ್ಟಿಸಿದ.
  • ನಂತರ, ಆ ಆಂಕಣ ಎಷ್ಟು ಜನಪ್ರಿಯವಾಯಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ಪುರವಣಿಗಳಲ್ಲಿ ಪ್ರಕಟಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಅ.ನಾ.ಪ್ರಹ್ಲಾದರಾವ್ ಅವರ ಪದಬಂಧಗಳು ಪ್ರತಿ ನಿತ್ಯ `ವಿಜಯಕರ್ನಾಟಕ` ಹಾಗೂ `ಸಂಯುಕ್ತ ಕರ್ನಾಟಕ` ದಿನ ಪತ್ರಿಕೆಗಳಲ್ಲಿ, `ಮಂಗಳ` ಮತ್ತು `ಅರಗಿಣಿ` ವಾರ ಪತ್ರಿಕೆಗಳು, 'ಪ್ರಿಯಾಂಕ` `ಚಿತ್ರ` `ಕಂದಾಯವಾರ್ತೆ` ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.
  • `ಪ್ರಜಾವಾಣಿ` ಸಿನಿಮಾರಂಜನೆ, `ಕರ್ಮವೀರ`, `ಸಂಯುಕ್ತಕರ್ನಾಟಕ ಸಾಪ್ತಾಹಿಕ, `ಕನ್ನಡಪ್ರಭ` ಸೇರಿದಂತೆ 40ಕ್ಕೂ ಹೆಚ್ಚು ನಿಯತಕಾಲಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಂಡಿವೆ. ಆನ್‍ಲೈನ್‍ನಲ್ಲಿ ಪ್ರತಿ ನಿತ್ಯ ಅನಾವರಣಗೊಳ್ಳುತ್ತಿರುವ `ಇಂಡಿಕ್ರಾಸ್.ಕಾಮ್`ಗಾಗಿಯೂ ಪದಬಂಧಗಳನ್ನು ರಚಿಸಿಕೊಡುತ್ತಿದ್ದಾರೆ.
"https://kn.wikipedia.org/w/index.php?title=ಪದಬಂಧ&oldid=1080576" ಇಂದ ಪಡೆಯಲ್ಪಟ್ಟಿದೆ