ಪಥೇರ್ ಪಾಂಚಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಥೇರ್ ಪಾಂಚಾಲಿ
Poster
ಪಥೇರ್ ಪಾಂಚಾಲಿಯ ದೃಶ್ಯ
ನಿರ್ದೇಶನಸತ್ಯಜಿತ್ ರೇ
ಚಿತ್ರಕಥೆಸತ್ಯಜಿತ್ ರೇ
ಆಧಾರಬಿಭೂತಿಭೂಷಣ್ ಬಂದೋಪಾಧ್ಯಾಯರ ಪಥೇರ್ ಪಾಂಚಾಲಿ ಕಾದಂಬರಿ ಆಧಾರಿತ
ಸಂಗೀತರವಿ ಶಂಕರ್
ಛಾಯಾಗ್ರಹಣಸುಬ್ರತಾ ಮಿತ್ರ
ಸಂಕಲನದುಲಾಲ್ ದತ್ತ
ಸ್ಟುಡಿಯೋಪಶ್ಚಿಮ ಬಂಗಾಳದ ಸರ್ಕಾರ
ವಿತರಕರುಅರೋರಾ ಫಿಲ್ಮ್ ಕಾರ್ಪೋರೇಶನ್ (೧೯೫೫)
ಎಡ್ವರ್ಡ ಹ್ಯಾರಿಸನ್ (೧೯೫೮)
ಮರ್ಚೆಂಟ್ ಐವರಿ ಪ್ರೊಡಕ್ಶನ್ಸ್
ಸೋನಿ ಪಿಕ್ಚರ್ಸ್ ಕ್ಲಾಸಿಕ್ (1995)
ಬಿಡುಗಡೆಯಾಗಿದ್ದು೧೯೫೫
ಅವಧಿ೧೧೨-೧೨೬ ನಿಮಿಷಗಳು
ದೇಶಭಾರತ
ಭಾಷೆಬೆಂಗಾಳಿ
ಬಂಡವಾಳ೭೦,೦೦-೧೫೦,೦೦೦ ರೂಪಾಯಿ

ಪಥೇರ್ ಪಾಂಚಾಲಿ ಭಾರತದ ಅಗ್ರಗಣ್ಯ ನಿರ್ದೇಶಕ ಸತ್ಯಜಿತ್ ರೇರವರ ಪ್ರಥಮ ಚಿತ್ರ. ಹೆಸರಾಂತ 'ಅಪೂ ಚಿತ್ರಸರಣಿ'ಯ ಮೊದಲ ಭಾಗವಾಗಿರುವ ಇದು, ೧೯೫೫ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡಿತು. ೧೯೨೯ರಲ್ಲಿ ಬಿಭೂತಿಭೂಷಣ್ ಬಂದೋಪಾಧ್ಯಾಯರು ಬರೆದ ಅದೇ ಹೆಸರಿನ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರವು, ಸುಬೀರ್ ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಕಾನು ಬ್ಯಾನರ್ಜಿ, ಉಮಾ ದಾಸ್ ಗುಪ್ತ, ಚುನಿಬಾಲ ದೇವಿ ಅವರನ್ನು ಮುಖ್ಯಭೂಮಿಕೆಯಲ್ಲಿ ಒಳಗೊಂಡಿತ್ತು. ಇದು ಅಪೂ ಹಾಗೂ ದುರ್ಗಾರ ಬಾಲ್ಯದ ದಿನಗಳು ಮತ್ತು ಸ್ವಾತಂತ್ರ್ಯ ಪೂರ್ವದ ಹಳ್ಳಿಯ ಕಷ್ಟದ ದಿನಗಳ ಕುರಿತು ಬೆಳಕುಚೆಲ್ಲುತ್ತದೆ.

ಚಿತ್ರವನ್ನು ಸ್ಥಳದಲ್ಲೇ(On spot) ಹೆಚ್ಚಾಗಿ ಚಿತ್ರೀಕರಿಸಲಾಗಿತ್ತು ಮತ್ತು ಸೀಮಿತ ಬಜೆಟ್ಅನ್ನು ಒಳಗೊಂಡಿತ್ತು. ಚಿತ್ರಕ್ಕೆ ಪಂ. ರವಿ ಶಂಕರ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ೧೯೫೫ರ ಅಮೆರಿಕಾನ್ಯೂಯಾರ್ಕ್ನ 'ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್'ನಲ್ಲಿ ನಡೆದ ಪ್ರೀಮಿಯರ್ ನ ನಂತರ,ಅದೇ ವರ್ಷ ಕಲ್ಕತ್ತಾದಲ್ಲಿ ಬಿಡಿಗಡೆ ಮಾಡಲಾಯಿತು. ಚಿತ್ರಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರದ ಸಹಜತೆ, ಮನಕಲಕುವ ನಿರೂಪಣೆ, ಮಾನವೀಯತೆ ಮುಂತಾದ ಅಂಶಗಳ ಕುರಿತು ವಿಮರ್ಶಕರು ಮೆಚ್ಚಿನ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ನಿಧಾನಗತಿಯ ನಿರೂಪಣೆಯನ್ನು ಹಿನ್ನಡೆ ಎಂದು ಭಾವಿಸಿದ್ದಾರೆ.

ಚಿತ್ರದ ಕಥೆಯು ಮುಂದಿನ ಎರಡು ಭಾಗಗಳಾದ ಅಪರಿಜಿತೊ(ಅಜೇಯ) ಹಾಗೂ ಅಪುರ್ ಸಂಸಾರ್(ಅಪೂವಿನ ಜಗತ್ತು)ನೊಂದಿಗೆ ಮುಂದುವರೆಯುತ್ತದೆ. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಆರಂಭವಾದ ಪರ್ಯಾಯ ಸಿನಿಮಾ ಅಥವಾ ಕಲಾತ್ಮಕ ಚಿತ್ರಗಳಿಗೊಂದು ಮಹತ್ವದ ಅಡಿಪಾಯವನ್ನು ಈ ಚಿತ್ರವು ಹಾಕಿಕೊಟ್ಟಿತು. ೧೯೫೫ರ ಅತ್ಯತ್ತಮ ಭಾರತೀಯ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರವು, ಕ್ಯಾನೆ ಚಲನಚಿತ್ರೋತ್ಸವದಲ್ಲಿ 'ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ' ಪಡೆಯಿತಲ್ಲದೇ, ರೇರವರನ್ನು ಜಗದ್ವಿಖ್ಯಾತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿತು.

ತಾರಾ ಬಳಗ[ಬದಲಾಯಿಸಿ]

  • ಹರಿಹರ, ತಂದೆ: ಕಾನು ಬ್ಯಾನರ್ಜಿ.
  • ಸರ್ಬಜಯ, ತಾಯಿ: ಕರುಣಾ ಬ್ಯಾನರ್ಜಿ.
  • ಅಪ್ಪು: ಸುಬೀರ್ ಬ್ಯಾನರ್ಜಿ.
  • ದುರ್ಗ, ಚಿಕ್ಕ ಹುಡುಗಿ: ಉಮಾ ದಾಸ್ ಗುಪ್ತ.
  • ದುರ್ಗ, ಮಗು: ರುಂಕಿ ಬ್ಯಾನರ್ಜಿ.
  • ಇಂದಿರ್ ಠಾಕ್ರುನ್, ವೃದ್ಧ ಚಿಕ್ಕಮ್ಮ: ಚುನಿಬಲ ದೇವಿ.
  • ಮಿಠಾಯಿ ಮಾರುವಾತ

ಪ್ರಶಸ್ತಿಗಳು[ಬದಲಾಯಿಸಿ]

  • ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫.
  • ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬.
  • ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬.
  • ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬.
  • ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬.
  • ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭.
  • ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭.
  • ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮.
  • ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮.
  • ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯.
  • ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬.
  • ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬.