ಪಕ್ಷಿಕಾಶಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಕಿಸೋರ್ಸ್‍ಗೆ ಸ್ಥಳಾಂತರಿಸಿ

ಇದು ಕುವೆಂಪುರವರ ಕೃತಿ. ಈ ಹೆಸರಿನ ಕವಿತೆಯೂ ಈ ಸಂಕಲನದಲ್ಲಿದೆ.

ಪಕ್ಷಿಕಾಶಿ

ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ:
ಇದು ಪಕ್ಷಿಕಾಶಿ!
ದೇವನದಿಯಲ್ಲಿ ದ್ವೀಪಕೃಪೆಯಲ್ಲಿ
ಭಾವತರುವಾಸಿ
ಪ್ರಾಣಪಕ್ಷಿಕುಲಮಿಹುದು ರಕ್ಷೆಯಲಿ
ನಿತ್ಯಮವಿನಾಶಿ:
ಶಕ್ತಿ ಸುತ್ತಲೂ ಕಾವಲಿಹುದು ಕಾಣ್
ಅಗ್ನಿಜಲರಾಶಿ
ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು
ಅಲ್ಲೆ ಇಟ್ಟು ಬಾ;
ಬಿಂಕದುಕುತಿಯನು ಕೊಂಕು ಯುಕುತಿಯನು
ಎಲ್ಲ ಬಿಟ್ಟು ಬಾ;
ಮೆಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ,
ಹಮ್ಮನುಳಿದು ಬಾ:
ಇಕ್ಷು ಮಧುರಮೆನೆ ಮೋಕ್ಷ ಪಕ್ಷಿಯುಲಿ
ನಾಡಿನಾಡಿಯಲಿ ಹಾಡಿ ಹರಿದು ನಲಿ
ದಾಡಬಹುದು ಬಾ!