ಪಂಚಾಯತ್ ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • (ಭಾರತದಲ್ಲಿ ಪಂಚಾಯತ್ ರಾಜ್ಎಂಬ ಹೊಸ ಪುಟವನ್ನು ಸೃಷ್ಟಿಸಲಾಗಿದೆ, ಕಾರಣ-ಈ ಲೇಖನ ಸಮಗ್ರತೆ ಹೊಂದಿಲ್ಲ; ತಿದ್ದಲಾರದಷ್ಟು ನಿರೂಪಣೆ ಮತ್ತು ವಾಕ್ಯದೋಷಗಳಿವೆ.ಮಾಹಿತಿ ದೋಷವಿದೆ. ಉಲ್ಲೇಖಗಳಿಲ್ಲ. ಇದನ್ನು ರದ್ದುಮಾಡುವುದು ಉತ್ತಮ. ಇಲ್ಲವೆ, ದಕ್ಷಿಣ ಏಷ್ಯಾದ ಪಂಚಾಯತ್ ರಾಜ್ ಎಂದು ಬದಲಾಯಿಸಿ-ಉತ್ತಮ ಪಡಿಸಿ)ಕರ್ನಾಟಕದ ಬಗೆಗೆ ಹೊಸ ಪುಟ ಕರ್ನಾಟಕದಲ್ಲಿ ಪಂಚಾಯತ್ ರಾಜ್-

ಆಧುನಿಕ ಪ್ರಪಂಚದಲ್ಲಿ ದೊಡ್ಡ ರಾಪ್ರ್ಟ ಗಳನ್ನು ಕಾಣುತ್ತೇವೆ. ಅವು ವಿಶಾಲವಾದ ಪ್ರದೇಶ ಮತ್ತು ಹೆಚ್ಚಾದ ಜನಸಂಖ್ಯೆಯನ್ನು ಹೊಂದಿರುತ್ತವೆ. ಉದಾ:- ಭಾರತದ ಪ್ರದೇಶವು ೩೨,೮೦೪೮೩ ಚ.ಕಿ.ಮಿ ಇದ್ದು. ಪ್ರದೇಶಕ್ಕೆ ತಕ್ಕಂತೆ ಜನಸಂಖ್ಯೆ ಕೂಡ ೭೦೦ ದಶಲಕ್ಷ ಇದೆ. ಇಂಥ ದೊಡ್ಡ ರಾಷ್ರ್ಟದ ಆಡಳಿವನ್ನು ಕೇಂದ್ರಸರಕಾ ರವೊಂದೆ ಸುಗಮವಾಗಿ ಸಾಗಿಸಲಾರದು. ಆಡಳಿತೆಯ ಅನುಕೂಲತೆಗಾಗಿ ಮತ್ತು ಆಡಳಿತೆಯ ದಕ್ಷತೆಯ ದೃಷ್ಟಿಯಿಂದ ರಾಷ್ರ್ಟವನ್ನು ಪಾತ್ರಗಳನ್ನಾಗಿ ಅಥವಾ ರಾಜ್ಯಗಳನ್ನಾಗಿ ವಿಭಜಿಸುತ್ತಾರೆ . ಉದಾ:- ಭಾರತ ರಾಷ್ರ್ಟದಲ್ಲಿ ೨೨ ರಾಜ್ಯಗಳಿವೆ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯದಲ್ಲಿ ರಾಜ್ಯ ಸರಕಾರವಿದೆ. ರಾಜ್ಯ ಸರಕಾವು ಸಹ ಒಂದು ರಾಜಧಾನಿಯ ಸ್ಥಳದಿಂದ ಇಡಿ ರಾಜ್ಯದ ಆಡಳಿತವನ್ನು ದಕ್ಷವಾಗಿ ಸಾಗಿಸಲಾರದು. ಏಕೆಂದರೆ ಅಲವಾರು ಸ್ಥಳೀಯ ಸಮಸ್ಯಗಳಿರುತ್ತವೆ. ಉದಾ:- ನೀರಿನ ಸರಬರಾಜು,,ಆರೋಗ್ಯ ರಕ್ಷಣೆ, ನಗರ ನ್ಯಮರಲಯ್ಯ ಒಳಚರಂಡಿ ವ್ಯಾವಸ್ಥೆ ಮುಂತಾದದುವುಗಳು ಆಡಳಿತವನ್ನು ಸ್ಥಿಳೀಯ ಜನರಿಗೆ ವಹಿಸಿಕೊಡುವುದು ಯೋಗ್ಯವಾಗಿದೆ. ಇಂಥ ಸಮಸ್ಯೆಗಳನ್ನು ಚೆನ್ನಾಗಿ ತಿಳಿದು ಕೊಳ್ಳಲಿಕ್ಕಾಗಿ ಮತ್ತು ಶೀಘ್ರ ಪರಿಹಾರವನ್ನು ಒದಗಿಸುವುದಾಕ್ಕಾಗಿ , ದೂರವಿದ್ದ ಕೇಂದ್ರ ಸರಕಾರ ಕ್ಕಾಗಲಿ ಅಥವಾ ರಾಜ್ಯಕ್ಕಾಗಲಿ ಸುಲಭ ಸಾಧ್ಯವಾಗಲಾರದು.

ಈ ಕಾರಣಗಳಿಂದ ಪ್ರತಿಹೊಂದು ಜಿಲ್ಲೆ, ತಾಲ್ಲೂಕು, ಪಟ್ಟಣ ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ನಡೆಸಲು ಚುನಾಯಿತ ಸ್ವರಾಜ್ಯ ಸಂಸ್ಥೆಗಳು ಅಸ್ತಿತ್ವದಲ್ಲಿ ಬಂದಿರುತ್ತವೆ. ಅಂತೇಯೆ ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್ ರಾಜ್ಯವೆಂಬ ಚುನಾಯಿತ ಸಂಸ್ಥೆ ಅಸ್ತಿತ್ವ ಪಡೆಯಿತು. ಪಂಚಾಯತ್ ರಾಜ್ಯವು ಸ್ವತಂತ್ರ್ಯ ಭಾರತದ ಒಂದು ಪಹತ್ವದ ರಾಜಕೀಯ ಶೋಧನೆ ಎನ್ನಬಹುದು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ದಿಟ್ಟ ಮತ್ತು ಕ್ರಾಂತಿಕಾರಿ ಹೆಜ್ಜೆ. ಗ್ರಾಮದ ಸರವೊತೋಮುಖ ಅಭಿವೃದ್ದಿ ಗ್ರಾಮ ಮಟ್ಟದಿಂದ ಆಗಬೇಕು. ರಾಜ್ಯದ ರಾಜಧಾನಿಯಿಂದಲ್ಲ ಎಂಬ ಸತ್ಯವನ್ನು ಸ್ವತಂತ್ರ್ಯ ಪೂವ್ದದಲ್ಲಿಯೆ ಗಾಂಧೀಜಿಯವರು ಕಂಡಿದ್ದರು.

ಪಂಚಾಯತ್ ರಾಜ್ಯವನ್ನು ಸ್ಥಾಪಿಸುವುದರಿಂದ ಈ ಗುರಿಯನ್ನು ಸ್ಥಾಪಿಸಬೇಕೆಂದು ಭಾರತ ಸಂವಧಾನದಲ್ಲಿ ನಿದೇ‍ಕ ತತ್ವಗಳು ಎಂಬ ೪ನೇಯ ಅಧ್ಯಾಯದಲ್ಲಿ ಗ್ರಾಮ ಪಂವಾಯಿತಿಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ(ಭಾರತ ಸಂವಿಧಾನ ಅನುಚ್ಚೇದ ೪೦ರ ಪ್ರಕಾರ). ಈ ದಿಸೆಯಲ್ಲಿ ಭಾರತ ಸರಕಾರವು ಜನವರಿ ೧೯೫೭ರಲ್ಲಿ ಒಂದು ಆಯೋಗ ನೇಮಿಸಿತು. ಆಯೋಗದ ಮುಂಖಡತ್ವವನ್ನು ಶ್ರೀಯುತ ಬಲವಂತರಾಯ ಮೆಹತಾ ವಹಿಸಿದ್ದರು. ಆಯೋಗವು ತನ್ನ ವರದಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಆಡಳಿತದಲ್ಲಿ ಹೆಚ್ಚು ಹೆಚ್ಚು ಅಧಿಕಾರವನ್ನು ಕೊಡಬೇಕು ಭಾರತದ ಎಲ್ಲಾ ರಾಜ್ಯಗಳಲ್ಲಿ ಪಂಚಾಯತ್ ರಾಜ್ಯವನ್ನು ಸ್ಥಾಪಿಸಬೇಕೆಂದು ಆಯೋಗವು ಶಪಾರಸ್ಸು ಮಾಡಿತು. ಹಾಹೆಯೇ ೧೮೫೮ರಲ್ಲಿ ಭಾರತ ಸರಕಾರವು ಈ ಸಿಪಾರಸ್ಸುಗಳನ್ನು ಒಪಿಪಸಿಕೊಂಡು ಪಂಚಾಯತ್ ರಾಜ್ಯ ಕಾನೂನು ಪಾಸುಮಾಡಿ ಅದನ್ನು ಜಾರಿಗೆ ತಂದಿತು.

ಬಲವಂತರಾಯ ಮೆಹತಾ ಸಮಿತಿಯ ಸಿಫಾರಿಸಿನ ಅನ್ವಯ ಪಂಚಾಯತ್ ರಾಜ್ಯದ ಸ್ವರೂಪವು ಮೂರು ಹಂತಗಳ ವ್ಯವಸ್ಥೆಯ (ಥ್ರಿ ಟಾಯರ್ ಸ್ಕೀಮ್) ರೂಪವನ್ನು ತಾಳಿರುತ್ತವೆ. ಅವುಗಳು:-

೧. ಹಳ್ಳಿಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ.

೨. ತಾಲ್ಲೂಕು ಮಟ್ಟದಲ್ಲಿ ಬ್ಲಾಕ್ ಸಮಿತಿ ಆಥವಾ ತಾಲ್ಲೂಕು ಡೆವಲೆಪ್ಮೆಂಟ್ ಬೋಡ‍.

೩. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ

ಈ ಮೂರು ಸಂಸ್ಥೆಗಳ ಮುಖ್ಯಾಂತರ ರಾಷ್ಟ್ರೀಯ ವಿಸ್ತರಣಾ ಸೇವಾ ಸಂಸ್ಥೆಯ ಕಾಯಗಳಲ್ಲಿ ಜನರು ಭಾಗವಹಿಸಿ ಸರಕಾರದೊಡನೆ ಸಹಕಾರಿಸಲು ಅನುಕೂಲಮಾಡಿಕೊಳ್ಳುವುದೇ ಪಂಚಾಯತ್ ರಾಜ್ಯದ ಪ್ರಮುಖ ಉದ್ದೇಶವಾಗಿದೆ.

ಗ್ರಾಮ ಪಂಚಾಯತ್[ಬದಲಾಯಿಸಿ]

ಗ್ರಾಮ ಪಂಚಾಯಿತಿಯು ಪಂಚಾಯತ್ ರಾಜ್ಯದ ಮೊದನೆಯ ಹಂತ. ಗ್ರಾಮಪಂಚಾಯಿತಿಯು ಬಹುತೇಕವಾಗಿ ದೇಶದ ಎಲ್ಲಾ ಭಾಗಗಳಲ್ಲಿ ಕಾಯ‍ ನಿವ‍ಹಿಸುತ್ತಿದ್ದು ಒಟ್ಟು ೨೧೯೬೯೯ ಪಂಚಾಯಿತಿಗಳಿದ್ದು, ೫೬೧೧೩೫ ಹಳ್ಳಿಗಳು, ೪೩ಕೋಟಿ ಜನರ ಸೇವೆಗೆಯ್ಯುತ್ತಿದೆ. ಗ್ರಾಮ ಪಂಚಾಯಿತಿಯನ್ನು ಒಂದು ಹಳ್ಳಿ ಅಥವಾ ಸಣ್ಣ ಹಳ್ಳಿಗಳು ಕೂಡಿ ಒಟ್ಟು ಶೇಕಡ (೯೩೦ ಜನಸಂಖ್ಯೆಗೆ ) ಒಂದರಂತೆ ಗ್ರಾಮ ಪಂಚಾಯಿತಿಗಳು ನಮ್ಮ ದೇಶದಲ್ಲಿ ಕಾರೋನ್ಮುಕ ವಾಗಿದೆ.

ಗ್ರಾಮ ಪಂಚಾಯಿತಿಯಲ್ಲಿ ೫ರಿಂದ ೧೫ರ ವರೆಗೆ ಸದಸ್ಯರಿರುತ್ತಾರೆ . ಸದಸ್ಯರು ಹಳ್ಳಿಗಳಲ್ಲಿ ಪ್ರೌಢ ಮತದಾನ ಪದ್ದತಿಯ ಮೂಲಕ ೪ ವಷ‍ ಗಳಿಗೊಮ್ಮೇ ಚುನಾಯಿಸಲ್ಪಡುತ್ತಾರೆ. ಈ ಸದಸ್ಯರು ತಮ್ಮೋಳಗೆ ಒಬ್ಬನನ್ನು ಸರಪಂಚನೆಂದು ಆರಿಸುವವರು. ಅವನು ಪಂಚಾಯಿತಿಯ ಮುಖ್ಯಸ್ಥನು. ಪ್ರತಿಯೊಂದು ಗ್ರಾಮ ಪಂಚಯಿತಿಗೆ ಒಬ್ಬ ಕಾಯ್ದಶಿ ಇರುತ್ತಾನೆ ಅವನು ಗ್ರಾಮ ಪಂಚಾಯಿತಿಯ ದಿನ ನಿತ್ಯ ಕೆಲಸಗಳನ್ನು ಪಂಚಾಯಿತಿಯ ಆದೇಶದ ಮೇರೆಗೆ ನಡಿಸುತ್ತಾನೆ . ಅವನು ಸರಪಂಚನಿಗೆ ಆ ದಿನದ ಲೆಕ್ಕ ಪ್ತ್ರತಗಳನ್ನು ಸೆರಿಯಾಗಿ ಕಾಯ್ದುಕೊಂಡು ಹೋಗುವುದು ಕಾಯ‍ದಶಿಯ ಹೊಣೆಯಾಗಿದೆ. ಗ್ರಾಮ ಪಂಚಾಯಿತಿಯ ಕ್ರಮಗಳು.

 
೧. ಪ್ರಾಥಮಿಕ ಶಾಲೆ,
 ೨. ಗ್ರಂಥಾಲಯ,ಮತ್ತು ವಾಚನಾಲಯದ ವ್ಯವಸ್ಥೆ,
 ೩. ಸಾರ್ವಜನಿಕ ಆರೋಗ್ಯ ಸಕ್ಷಣೆ ಮತ್ತು ರೋಗಳಳು ಹರಡುವಿಕೆಯನ್ನು ತಡೆಯುವ ಸ್ಯವಸ್ಥೆ,
 ೪. ದವಾಖಾನೆ ಮುಖಾಂತರ ವೈದ್ಯಕೀಯ ಪರಿಹಾರ ,
 ೫. ರಸ್ತೆ ನಿರ್ಮಾಣ
 ೬. ದೀಪದ ಪೂರೈಕೆ,
 ೭. ಕೆರೆ , ಭಾವಿಗಳ ರಚನೆ ಮತ್ತು ನಿರಿನ ಸರಬರಾಜು
 ೮. ಸಾವರಜನಿಕ ತೋಟ, ಆಟದ ಬಯಲುಗಳನ್ನು ಸಾದಿಸುವುದು ಇತ್ಯಾದಿ ನಿಮಿಸುವುದು,
 ೯. ಶಿಶುಗಳ ಕಲ್ಯಾಣ, ೧೦. ಸಮಾಜ ಕಲ್ಣ ಕೇಂದ್ರದ ಮುಖಾಂತರ ಹಳ್ಳಿಯ ಜನರು ನೈತಕ, ಶೈಕ್ಷಣಿಕ ಮತ್ತು ಮಾನಸಿಕ ಅಭಿವೃದ್ಧಿಯನ್ನು ಸಾಧಿಸುವುದು ಇತ್ಯಾದಿ.

ಕಾರ್ಯಗಳು

ತಾಲ್ಲೂಕಿನ ಬ್ಲಾಕಿನ ಸವ್ಯಾಂಗೀಣ ಅಭಿವೃದ್ದಿಯನ್ನು ಸಾಧಿಸುವುದೇ ತಾಲ್ಲೂಕು ಡೆವಲಪ್ಮೆಂಟನ ಮುಖ್ಯ ಕೆಲಸವಾಗಿದೆ. ಈ ದೃಷ್ಟಿಯಿಂದ ಅದು ಕೆಳಗೆ ನಮೂದಿಸಿದ ಕಾರ್ಯಗಳನ್ನು ಮಾಡುತ್ತದೆ.

೧. ತಾಲ್ಲೂಕಿನ ಹೆದ್ದಾರಿಗಳನ್ನು ರಚಿಸುವುದು ಮತ್ತು ಅವುಗಳ ರಿಪೇರಿಮಾಡುವುದು.
೨. ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು.
೩. ಗ್ರಂಥಾಲಯಗಳನ್ನು ಸ್ಥಾಪಿಸುವುದು.
೪. ಅಸ್ಪತ್ರೆಗಳನ್ನು ಸ್ಥಾಪಿಸಿ ವೈದ್ಯಕೀಯನೆರವು ನೀಡುವುದು.
೫. ಒಬ್ಬರಿಂದ ಒಬ್ಬರಿಗೆ ಹರಡುವ ರೋಗಿಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೋಳ್ಳುವುದು.
೬. ಸಣ್ಣ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವುದು.
೭. ರೈತರಿಗೆ ಬೀಜ, ಗೊಬ್ಬರ ವಿತರಣೆಮಾಡುವುದು.
೮. ಪಂಚ ವಾಷ್ರೀಕ ಯೋಜನೆಯ ಅನ್ವಯ ತಾಲ್ಲೂಕಿನಲ್ಲಿ ಉದ್ದಿ,ಮೆಗಳ ಹಾಗೂ ಭೂವ್ಯವಸಾಯದ ಅಭಿವೃದ್ದೀಯನ್ನು ಸಾದಿಸುವುದು ಬ್ಲಾಕ್ ಸಮಿತಿಯ ಗುರು ತರವಾದ ಹೊಣೆಯಾಗಿದೆ.

ಜಿಲ್ಲಾ ಪರಿಷತ್ತು[ಬದಲಾಯಿಸಿ]

ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪರಿಷತ್ತು ಇರುವುದು. ಪಂಚಾಯಿತಿ ರಾಜ್ಯದ ಮೂರು ಹಂತಗಳ ವ್ಯವಸ್ಥೆಯ ರೂಪದಲ್ಲಿ ಜಿಲ್ಲಾ ಪರಿಷತ್ತು ಮೂರನೆಯ ಮತ್ತು ಕೊನೆಯ ಹಂತದ ಸಂಸ್ಥೆಯಾಗಿದೆ. ಜಿಲ್ಲಾ ಪರಿಷತ್ತು ಅಯಾ ಜಿಲ್ಲೆಯ ತಾಲ್ಲೂಕು ಡೆವಲಪ್ ಮೆಂಟ್ ಬೋಡ್ಗಳು ಅಧ್ಯಕ್ಷರು ಪಾಲಿfರಮೆಂಟ್ ಸದಸ್ಯರು ಮತ್ತು ವಿಧಾನ ಸಭೆ ವಿದಾನ ಪರಿಷತ್ತುಗಳ ಸದಸ್ಯರುಗಳಂತಹ ಪ್ರಜಾಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಇದಲ್ಲದೇ ೧೫ ಕ್ಕಿಂತ ಮಿಕ್ಕದ ಸರಕಾರಿ ಅಧಿಕಾರಿಗಳು ಸಹ ಜಿಲ್ಲಾ ಪರಿಷತ್ತುಗಳಲ್ಲಿ ನಾಮಕರಣ ಹೊಂದಿರುತ್ತಾರೆ.

ಕಾರ್ಯಗಳು

೧. ತಾಲ್ಲೂಕು ಡೆವಲೆಪಮೆಂಟ್ ಬೋಡಗಳ ಮತ್ತು ಗ್ರಾಮ ಪಂಚಾಯತಿಗಳ ಆಥರ್ಯಕ ಯೋಜನೆಗಳ ಸಂಯೋಗವನ್ನು ಮಾಡುವುದೇ ಜಿಲ್ಲಾಪರಿಷತ್ತಿನ ಮುಖ್ಯ ಕೆಲಸವಾಗಿದೆ.
೨. ಬ್ಲಾಕ್ ಸಮಿತಿಗಳು ನಿವ್ರಹಿಸುವ ಕಾರ್ಯಗಳ ಮೇಲ್ವಿಚಾರಣೆ ಮಾಡುವುದು.
೩. ಜಿಲ್ಲೆಗೆ ಸರಕಾರದಿಂದ ಮಂಜೂರಾದ ಹಣವನ್ನೂ ಬ್ಲಾಕ್ ಸಮಿತಿಗಳಲ್ಲಿ ಹಂಚುವುದು.
೪. ಬ್ಲಾಕ್ ಸಮಿತಿಗಳ ಲೆಕ್ಕ ಪತ್ರವನ್ನು ತಪಾಸು ಮಾಡುವುದು.
೫. ಕೊನೆಯದಾಗಿ ಇಡೀ ಜಿಲ್ಲೆಯ ಆಥೀಕ ಅಭಿವೃದ್ದಿ ಮತ್ತು ಸವ್ರಂಗೀಣ ಪ್ರಗತಿಯನ್ನು ಸಾದಿಸುವುದು ಜಿಲ್ಲಾ ಪರಿಷತ್ತಿನ ಹೊಣೆಯಾಗಿದೆ.

ಕಾರ್ಯವ್ಯಾಪ್ತಿ ಗ್ರಾಮ ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನವು ಕರ್ನಾಟಕ ರಾಜ್ಯದ 29 ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿದೆ.

ಸಕ್ರೀಯ ಸಹಭಾಗಿತ್ವ: - ಪಂಚಾಯತ್ ರಾಜ್ ಸದಸ್ಯರನ್ನೊಳಗೊಂಡಂತೆ ಅಂದಾಜು 35,000 ಗ್ರಾಮ ಸಭಾ ಸದಸ್ಯರು ಆಂದೋಲನದಲ್ಲಿ ಭಾಗಿಯಾಗಿದ್ದಾರೆ.

ಸದಸ್ಯತ್ವ:- ಈ ಕೆಳಗಿನವರೆಲ್ಲರೂ ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನದ ಸದಸ್ಯರಾಗಬಹುದು:

1.ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯತ್-ಗಳ ಹಾಲಿ ಹಾಗೂ ಮಾಜಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು.
2.ಗ್ರಾಮ ಸಭಾ ಸದಸ್ಯರು,
3.ವಿಕೇಂದ್ರೀಕರಣದಲ್ಲಿ ಆಸಕ್ತ ಮತ್ತು ಪರಿಣಿತರಾಗಿರುವ ಯಾವುದೇ ವ್ಯಕ್ತಿ ಮತ್ತು ಸಂಸ್ಥೆ,
4.ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನಕ್ಕೆ ಮಾಹಿತಿ, ಮಾರ್ಗದರ್ಶನ ಹಾಗೂ ತಾಂತ್ರಿಕ ಸಹಾಯ ಒದಗಿಸುವ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆ,

ಗ್ರಾಮ ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನವು ತನ್ನ ಕಾರ್ಯನಿರ್ವಹಿಸಲು ತನ್ನದೇ ಆದ ಕಾರ್ಯಕಾರಿ ಸಮಿತಿಯನ್ನೊಳಗೊಂಡ ರಾಜ್ಯ ಸಮಿತಿ, ಸಂಯೋಜನಾ ಸಮಿತಿ ಸಲಹಾ ಸಮಿತಿ ಹಾಗೂ ತಾಲೂಕು ಸಮಿತಿಗಳನ್ನೊಗೊಂಡಿದೆ. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯವಾಗಿ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

ಗ್ರಾಮ ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನ ಕೈಗೆತ್ತಿಕೊಂಡ ಪ್ರಮುಖ ವಿಷಯಗಳು: -

 ಸಂವಿಧಾನದ 73ನೇ ತಿದ್ದುಪಡಿಯನ್ನು ಎತ್ತಿಹಿಡಿಯುವಿಕೆ:- ಪ್ರಜಾಪ್ರಭುತ್ವದ ತಳಹದಿ ವಿಕೇಂದ್ರೀಕರಣವನ್ನು ಬಲಪಡಿಸುವಲ್ಲಿ ಸ್ಥಳೀಯ ಸರ್ಕಾರಗಳ ಅಧಿಕಾರವನ್ನು ಸ್ಪಷ್ಟವಾಗಿ ಎತ್ತಿಹಿಡಿದ ಸಂವಿಧಾನದ 73ನೇ ತಿದ್ದುಪಡಿಗೆ ಯಾವುದೇ ರೀತಿಯ ಪುನರ್ ತಿದ್ದುಪಡಿ ತರದಂತೆ ಹಕ್ಕೊತ್ತಾಯ.

 ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರ ಗ್ರಾಮ ಸಭೆಯದ್ದೇ:- ಸರ್ಕಾರದ ಕಾರ್ಯಕ್ರಮಗಳಿಗೆ ಗ್ರಾಮ ಸಭೆಯಲ್ಲಿ ಜನರು ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಂವಿಧಾನಬದ್ಧ ಹಕ್ಕು. ಗ್ರಾಮ ಸಭೆಯ ಈ ಅಧಿಕಾರದ ಮೇಲೆ ನಿರ್ಭಂಧ ಹೇರಲು ಯಾರಿಗೂ ಅಧಿಕಾರವಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಅನುದಾನ ನೀಡುತ್ತಿರುವ ವಸತಿ ಹಾಗೂ ಇತರ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರವು ಗ್ರಾಮ ಸಭೆಯದ್ದೇ. ಇದನ್ನು ಯಾವುದೇ ಕಾರಣಕ್ಕೆ ಬದಲಾಯಿಸಲು ಸಾಧ್ಯವಿಲ್ಲ

 ಹಣಕಾಸು, ಕಾರ್ಯಗಳು ಮತ್ತು ಕಾರ್ಯ ನಿರ್ವಾಹಕರ ಹಸ್ತಾಂತರ:- ಸಂವಿಧಾನದ 73ನೇ ತಿದ್ದುಪಡಿ ಪ್ರಕರಣ XI ರಲ್ಲಿ ಮತ್ತು ಪಂಚಾಯತ್ ರಾಜ್ ಕಾಯಿದೆ 1993ರ ಅಧಿನಿಯಮದಲ್ಲಿ, ಸ್ಥಳೀಯ ಸರ್ಕಾರಗಳಿಗೆ ಎಲ್ಲಾ 29 ವಿಷಯಗಳ ಕಾರ್ಯಕ್ರಮಗಳು, ಹಣಕಾಸು ಮತ್ತು ಕಾರ್ಯನಿರ್ವಾಹಕರ ಹಸ್ತಾಂತರ ಪ್ರಕ್ರಿಯೆಗೆ ಕೊಡುವಂತಹ ಅತ್ಯಂತ ಸ್ಪಷ್ಟ ಪರಿಕಲ್ಪನೆ ಹಾಗೂ ಕಾರ್ಯರೂಪಿ ಮಾರ್ಗದರ್ಶಿ ಸೂತ್ರಗಳನ್ನು 'ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ'ವು ಮರುಪ್ರತಿಪಾದಿಸುತ್ತದೆ ಮತ್ತು ಒತ್ತು ನೀಡುತ್ತದೆ.

 ರಾಜ್ಯದ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಅನುಷ್ಠಾನ:- ಕೇವಲ ಜನಸಂಖ್ಯೆಯ ಆಧಾರದ ಮೇಲೆ ಮಾತ್ರವಲ್ಲದೇ ಭೌಗೋಳಿಕ ಅಸಮಾನತೆ, ಹಿಂದುಳಿದಿರುವಿಕೆ ಹಾಗೂ ಗ್ರಾಮ ಪಂಚಾಯತ್ ಗಳ ಸಾಧನೆಗಳ ಆಧಾರದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಶಾಸನಬದ್ಧ ಅಭಿವೃದ್ಧಿ ನಿಧಿಗಳನ್ನು ರಾಜ್ಯ ಸರ್ಕಾರ ಕೊಡಬೇಕು ಎನ್ನುವ ಮೂರನೇ ಹಣಕಾಸು ಆಯೋಗದ ಶಿಫಾರಸ್ಸು ಸೇರಿದಂತೆ ಅದರ ಎಲ್ಲಾ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು.

 ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಅಧ್ಯಕ್ಷರ ಸಹಿ ಕಡ್ಡಾಯ:- ಗ್ರಾಮ ಪಂಚಾಯತ್ ಗಳ ಯಾವುದೇ ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಅಧ್ಯಕ್ಷರ ಸಹಿಯನ್ನು ಕಡ್ಡಾಯಗೊಳಿಸಬೇಕು. ಯಾವುದೇ ಕಾರಣಕ್ಕೆ ಅಧ್ಯಕ್ಷರ ಈ ಅಧಿಕಾರವನ್ನು ಹಿಂತೆಗೆಯಲೇ ಬಾರದು.

 ಗ್ರಾಮ ಪಂಚಾಯತ್-ಗಳಿಗೆ ಹಣಕಾಸು ಮೀಸಲಾತಿ ಹಾಗೂ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆ:- ಗ್ರಾಮ ಪಂಚಾಯತ್ ಗಳಿಗೆ ಬಿಡುಗಡೆಯಾಗುವ ಅನುದಾನಗಳು ಸೂಕ್ತ ಸಮಯದಲ್ಲಿ ಗ್ರಾಮ ಪಂಚಾಯತ್ ಗಳನ್ನು ತಲುಪಿ, ಕ್ಲಪ್ತ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳು ಅನುಕೂಲವಾಗುವಂತೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮಕ್ಕಾಗಿ ಒತ್ತಾಯ.

 ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹಾಗೂ ಸದಸ್ಯರ ಸಭಾಭತ್ಯೆ ಹೆಚ್ಚಿಸುವುದು:- ಜನತೆಗೆ ಅತ್ಯಂತ ಹತ್ತಿರವಿರುವ ಸರ್ಕಾರವೆಂದರೆ ಗ್ರಾಮ ಪಂಚಾಯತ್ ಹಾಗೂ ಅದರ ಅದರ ಚುನಾಯಿತ ಪ್ರತಿನಿಧಿಗಳು. ಜನರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಇವರಿಗೆ ನೀಡುವ ಗೌರವ ಧನ ಹಾಗೂ ಸಭಾ ಭತ್ಯೆ ತುಂಬಾ ಕಡಿಮೆ. ಹೀಗಾಗಿ ಇಂದಿನ ದಿನಮಾನದಲ್ಲಿ ಜೀವನ ನಡೆಸಲು ಪೂರಕವಾಗುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಗೌರವಧನ ಹಾಗೂ ಸದಸ್ಯರ ಸಭಾ ಭತ್ಯೆಯನ್ನು ಹೆಚ್ಚಿಸಬೇಕು.