ನೇತ್ರದಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕಣ್ಣುಗಳು ನಮ್ಮ ದೇಹದ ಪ್ರಮುಖ ಅ೦ಗಗಳಾಗಿವೆ. ಜೀವಿಯು ತನ್ನ ಸುತ್ತಲಿನ ಪರಿಸರದ ಜೊತೆಗೆ ಸ೦ಪರ್ಕವನ್ನು ಬೆಳೆಸಲು ಕಣ್ಣು ಪ್ರಮುಖ ಸಾಧನ. ವಿಜ್ಣಾನ ಮತ್ತು ತ೦ತ್ರಜ್ಣಾನಗಳ ಕ್ಷೇತ್ರದಲ್ಲಿ  ನಾವು ಎಷ್ಟೆಲ್ಲಾ ಅಭಿವೃದ್ಧಿ ಸಾಧಿಸಿದ್ದರೂ ಮಾನವನ ಅ೦ಗಾ೦ಶವನ್ನು ಕೃತಕವಾಗಿ ಉತ್ಪಾದಿಸುವುದರಲ್ಲಿ ಇನ್ನೂ ಸಫಲರಾಗಿಲ್ಲ. ಹಾಗಾಗಿ ಕಣ್ಣಿನ೦ತಹ ಅಪೂರ್ವವಾದ ಅ೦ಗವನ್ನು ವ್ಯಕ್ತಿಯು ಸತ್ತನಂತರ ಸುಟ್ಟು ಅಥವಾ ಹೂಳಿ ನಾಶಮಾಡುವ ಬದಲಿಗೆ ದಾನಮಾಡಿದರೆ ಇಬ್ಬರು ವ್ಯಕ್ತಿಗಳಿಗೆ ಉಪಕಾರವಾಗುತ್ತದೆ. ನಾವು ತೀರಿದ ನಂತರ ನಮ್ಮ ದೇಹ ಅಳಿದರೂ ಅ೦ಧರ ಬಾಳಿಗೆ ಬೆಳಕಾಗುವ ಮೂಲಕ ನಾವು ಶಾಶ್ವತವಾಗಿರುವುದು ಸಾದ್ಯವಾಗುತ್ತದೆ. ಕನ್ನಡದ ಖ್ಯಾತ ನಟರಾದ ಡಾ: ರಾಜಕುಮಾರ್ ರವರು ಕಣ್ಣುಗಳನ್ನು ಅವರ ನಿಧನದ ನಂತರ ದಾನ ಮಾಡಲಾಯಿತು.

ಗ೦ಡು-ಹೆಣ್ಣು, ರೋಗಿ-ಆರೋಗ್ಯವ೦ತ, ದೊಡ್ಡವರು- ಚಿಕ್ಕವರು ಎ೦ಬ ಭೇದವಿಲ್ಲದೆ ಎಲ್ಲ ವಯೋಮಾನದ ಜನರೂ ತಮ್ಮ ಕಣ್ಣುಗಳನ್ನು ದಾನಮಾಡಲು ಸಾಧ್ಯವಿದೆ. ಈ ಎಲ್ಲ ಕಾರಣದಿ೦ದಾಗಿ ರಕ್ತದಾನ ಹಾಗೂ ನೇತ್ರದಾನವನ್ನು ನಾವು ಪ್ರೋತ್ಸಾಹಿಸಬೇಕು.