ನಿಷ್ಕಾಮ ಕರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಷ್ಕಾಮ ಕರ್ಮ, ಅಥವಾ ಸ್ವಾರ್ಥರಹಿತ ಕ್ರಿಯೆ ಫಲಗಳು ಅಥವಾ ಪರಿಣಾಮಗಳ ಯಾವುದೇ ನಿರೀಕ್ಷೆ ಇಲ್ಲದೆ ಮಾಡಲಾದ ಕ್ರಿಯೆ, ಮತ್ತು ಇದು ಮೋಕ್ಷಕ್ಕೆ ಕರ್ಮಯೋಗ ಮಾರ್ಗದ ಕೇಂದ್ರ ತತ್ವ, ಮತ್ತು ಇದು ಈಗ ವ್ಯವಹಾರ ನಿರ್ವಹಣೆ, ನಿರ್ವಹಣಾ ಅಧ್ಯಯನಗಳು ಮತ್ತು ಉತ್ತಮ ವ್ಯಾಪಾರ ನೀತಿಗಳನ್ನು ಪ್ರೋತ್ಸಾಹಿಸುವಲ್ಲಿ ಸ್ಥಾನ ಕಂಡುಕೊಂಡಿದೆ. ಅದರ ಆಧುನಿಕ ಪ್ರತಿಪಾದಕರು ಯಶಸ್ಸನ್ನು ಸಾಧಿಸಲು ಯೋಗದ ತತ್ವಗಳನ್ನು ಅನುಸರಿಸುವುದರ ಮೇಲೆ, ಮತ್ತು ಯಾವುದೇ ಕಾರ್ಯ ಮಾಡುವಾಗ ವೈಯಕ್ತಿಕ ಗುರಿಗಳು ಹಾಗು ಕಾರ್ಯಸೂಚಿಗಳನ್ನು ಮೀರಿ ಹೆಚ್ಚಿನ ಒಳಿತಿನೆಡೆಗೆ ಹೆಜ್ಜೆಯಿಡುವುದರ ಮೇಲೆ ಒತ್ತು ಕೊಡುತ್ತಾರೆ, ಮತ್ತು ಇದು ಭಗವದ್ಗೀತೆಯ ಕೇಂದ್ರ ಸಂದೇಶವಾಗಿರುವುದರಿಂದ ಬಹು ಪ್ರಸಿದ್ಧವಾಗಿದೆ. ಭಾರತೀಯ ತತ್ವಶಾಸ್ತ್ರದಲ್ಲಿ ಕರ್ಮವನ್ನು ಅದರ ಗುಣಗಳನ್ನು ಆಧರಿಸಿ ಮೂರು ವರ್ಗಗಳಲ್ಲಿ ವಿಭಜಿಸಲಾಗಿದೆ.