ನಾಗಸಂಪಿಗೆ
| ನಾಗಸಂಪಿಗೆ | |||||||||||||||||||
|---|---|---|---|---|---|---|---|---|---|---|---|---|---|---|---|---|---|---|---|
ನಾಗಸಂಪಿಗೆ ಮರ.ಶ್ರೀಲಂಕಾ
|
|||||||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||||||
|
|||||||||||||||||||
|
|
|||||||||||||||||||
| ಮೆಸುವ ಫೆರಿಯ L. |
|||||||||||||||||||
|
|
|||||||||||||||||||
| Synonyms | |||||||||||||||||||
| Mesua coromandelina Wight Mesua nagassarium (Burm.f.) Kosterm. Mesua pedunculata Wight Mesua roxburghii Wight Mesua sclerophylla Thw. Mesua speciosa Choisy |
ನಾಗಸಂಪಿಗೆ(ನಾಗಕೇಸರಿ)ಯು 'ಸಿಲೋನ್ ಐರನ್ ವುಡ್'ಎಂದು ಪ್ರಸಿದ್ಧವಾಗಿದೆ.ಇದು ಮದ್ಯಮ ಪ್ರಮಾಣದಲ್ಲಿ ದೊಡ್ಡಗಾತ್ರಕ್ಕೆ ಬೆಳೆಯುವ ಮರ.ಪರಿಮಳದ ಹೂವಿನಿಂದ ಕೂಡಿ ಅತ್ಯಂತ ಗಟ್ಟಿಯಾದ ದಾರುವನ್ನು ಹೊಂದಿದೆ.
ಪರಿವಿಡಿ |
[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ
ಇದು ಮೆಸುವ ಫೆರ್ರಿಯ(Mesua ferrea) ಎಂಬ ಸಸ್ಯಶಾಸ್ತ್ರೀಯ ಹೆಸರು ಹೊಂದಿದ್ದು,ಗುಟ್ಟಿಫೆರಸಿ (Guttiferae)ಕುಟುಂಬದಲ್ಲಿದೆ.
[ಬದಲಾಯಿಸಿ] ಇತರ ಹೆಸರುಗಳು
- ಕನ್ನಡ: ನಾಗಕೇಸರಿ
- ಇಂಗ್ಲೀಷ್: ಸಿಲೋನ್ ಐರನ್ ವುಡ್,ಇಂಡಿಯನ್ ರೋಸ್ ಚೆಸ್ಟನಟ್
- ಸಂಸ್ಕೃತ:ನಾಗಕೇಸರ,ನಾಗಪುಷ್ಪ
- ಮಲೆಯಾಳಂ:ವೈನಾವು
- ತುಳು:ಬೈನಾವು
- ತಮಿಳು:ತಡಿನಂಗು
[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು
ಸುಂದರ ನಿತ್ಯ ಹರಿದ್ವರ್ಣದ ಮರ.ದಟ್ಟವಾದ ಶಂಕುವಿನಾಕಾರದ ಹಂದರ.ಹೊಳೆಯುವ ಹಸಿರೆಲೆಗಳು.ತಳಭಾಗ ಮಾಸಲು ಬೂದಿಬಣ್ಣದ್ದಾಗಿರುತ್ತದೆ.ತೊಗಟೆ ತೆಳು. ಕರ್ನಾಟಕದ ಪಶ್ಚಿಮಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವುದು.ದಾರುವು ಕರಿಗೆಂಪು ಬಣ್ಣದಿಂದ ಕೂಡಿದ್ದು,ಅತಿ ಗಡಸಾಗಿದೆ.ತುಂಬಾ ಬಲಯುತ ಹಾಗೂ ಬಾಳಿಕೆ ಬರುವ ಮರ.ಸಸ್ಯದ ವಿವಿಧ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ.
[ಬದಲಾಯಿಸಿ] ಉಪಯೋಗಗಳು
ಇದು ಕಟ್ಟಡ ನಿರ್ಮಾಣ,ರೈಲ್ವೇ ಸ್ಲೀಪರ್,ಸೇತುವೆ ನಿರ್ಮಾಣಗಳಲ್ಲಿ ಬಳಕೆಯಲ್ಲಿದೆ.ಬೀಜದಿಂದ ಸಿಗುವ ಎಣ್ಣೆ ಚರ್ಮರೋಗಗಳಿಗೆ,ಎಲೆಯಿಂದ ಶೀತ ಪ್ರಕೋಪಕ್ಕೆ ಔಷಧ ತಯಾರಾಗುತ್ತದೆ.ಬೇರಿನಿಂದ ಹಾವಿನ ಕಡಿತಕ್ಕೆ ಪ್ರತಿವಿಷ ತಯಾರಿಸುತ್ತಾರೆ.
[ಬದಲಾಯಿಸಿ] ಆಧಾರ
- ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
- http://sliceoftheday.wordpress.com/2007/09/10/ceylon-ironwood-mesua-ferrea/
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
http://www.flowersofindia.net/catalog/slides/Nag%20Champa.html