ಎಚ್.ನಾಗವೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಾಗವೇಣಿ ಎಚ್ ಇಂದ ಪುನರ್ನಿರ್ದೇಶಿತ)

ನಾಗವೇಣಿ ಎಚ್. ಇವರು ೧೯೬೨ರಲ್ಲಿ ಮಂಗಳೂರಿನ ಹೊನ್ನಕಟ್ಟೆಯಲ್ಲಿ ಜನಿಸಿದರು. ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದ ಬಳಿಕ ಕೆಲವು ವರ್ಷ ಕೋಲ್ಕತಾರಾಷ್ಟ್ರೀಯ ಗ್ರಂಥಾಲಯಕೇಂದ್ರೀಯ ಪರಾಮರ್ಶನ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿದರು. ಈಗ ಹಂಪಿಕನ್ನಡ ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹೊಸ ಕಥನ ಶೈಲಿಯನ್ನು ರೂಢಿಸಿಕೊ೦ಡಿರುವ ನಾಗವೇಣಿಯವರು ಕರಾವಳಿಯ ಪರಿಸರವನ್ನು ತಮ್ಮ ಕಥನಗಳನ್ನು ಆಪ್ತವಾಗಿ ಚಿತ್ರಿಸಿದ್ದಾರೆ.[೧]

ಕಥಾ ಸಂಕಲನಗಳು[ಬದಲಾಯಿಸಿ]

  • ಗಾಂಧಿ ಬಂದ-ಕಾದಂಬರಿ
  • ನಾಕನೇ ನೀರು
  • ಮೀಯುವ ಆಟ

ಕೃತಿಗಳು[ಬದಲಾಯಿಸಿ]

  • ನವೋದಯದ ಕಥೆಗಾರ್ತಿ ಗೌರಮ್ಮ
  • ರಂಗಸಂಪನ್ನ ಕಂಬಾರ
  • ಸಾರ–ವಿಸ್ತಾರ
  • ತಿರುಳು ತೋರಣ

ಪ್ರಬಂಧ ಸಂಕಲನ[ಬದಲಾಯಿಸಿ]

  • ವಸುಂಧರೆಯ ಗ್ಯಾನ

ಅಂಕಣ ಬರಹ ಸಂಗ್ರಹ[ಬದಲಾಯಿಸಿ]

  • ಸೂರ್ಯನಿಗೊಂದು ವೀಳ್ಯ

ಇವರ ಕಥಾಸಂಕಲನ ನಾಕನೇ ನೀರು ಈ ಕೃತಿಗೆ ೧೯೯೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಕಥಾ ಪ್ರಶಸ್ತಿ ಹಾಗೂ ಆರ್ಯಭಟ ಪ್ರಸಸ್ತಿ , ಚದುರ೦ಗ ಪ್ರಶಸ್ತಿ ಹಾಗೂ ಗೀತಾ ದೇಸಾಯಿ ಪ್ರಶಸ್ತಿಗಳು ಲಭಿಸಿವೆ.

ಉಲ್ಲೇಖಗಳು[ಬದಲಾಯಿಸಿ]