ನವಣೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ನವಣೆ'

[ಬದಲಾಯಿಸಿ] 'ನವಣೆ,' 'ರಾಗಿ', ಯಂತೆ ಒಂದು 'ಕಿರುಧಾನ್ಯ'

'ನವಣೆ', ಒಂದು ಸತ್ವಯುತ ಕಿರುಧಾನ್ಯ. ಇದು ಅಲ್ಪಾವಧಿ ಬೆಳೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಅಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಧಾನ್ಯ. 'ಉತ್ತಮ ಪೌಷ್ಟಿಕ ಮೌಲ್ಯ,' ವನ್ನು ಹೊಂದಿದ್ದರೂ ಈ ಧಾನ್ಯದ ಬಳಕೆ ಅತಿ ಕಡಿಮೆಯಾಗುತ್ತಿದೆ. 'ಕಿರುಧಾನ್ಯ' ಗಳಿಗೆ ಉತ್ತಮ ಮಾರುಕಟ್ಟೆ ಮತ್ತು 'ಬೆಂಬಲಬೆಲೆ', ಇಲ್ಲದಿರುವುದು ಮತ್ತು 'ಬಡವರ ಆಹಾರ,' ಎಂಬ ಭಾವನೆ ಇರುವುದರಿಂದ ಕ್ರಮೇಣವಾಗಿ, ನವಣೆಯಂತಹ ಕಿರುಧಾನ್ಯಗಳು ಅವಸಾನದ ಅಂಚನ್ನು ಮುಟ್ಟುತ್ತಿವೆ. 'ನವಣೆ,' ' ಕೀಟ' ಮತ್ತು 'ರೋಗ ನಿರೋಧಕ ಶಕ್ತಿ' ಹೊಂದಿದೆ. ಕಡಿಮೆ ಫಲವತ್ತಾದ ಹೊಲಗಳಲ್ಲು ಸುಲಭವಾಗಿ ಬೆಳೆಯಬಹುದು. ಸಣ್ಣಪ್ರಮಾಣದ ರೈತರು, ಹಾಗೂ ಅತಿಸಣ್ಣರೈತರೂ ಸುಲಭವಾಗಿ ಬೆಳೆದು, ಹೆಚ್ಚಿನ ಲಾಭವನ್ನು ಪಡೆಯಬಹುದು. ದೊಡ್ಡರೈತರಿಗೆ ತೊಂದರೆಯಿಲ್ಲ. ಪೋಷಕ ಸತ್ವಗಳು ನವಣೆಯಲ್ಲಿ ಇವೆ. ಅಬಾಲ-ವೃದ್ಧರಾದಿಯಾಗಿ ಎಲ್ಲರೂ ಇದರ ಉಪಯೋಗವನ್ನು ಪಡೆಯಬಹುದು. ಸದ್ಯಕ್ಕೆ ರೈತರಿಗೆ ಬೆಲೆಬರದೆ ಇರುವುದರಿಂದ ಸರ್ಕಾರ ಮಧ್ಯೆಪ್ರವೇಶಿಸಿ, ಬೇಸಾಯದ ಕ್ಷೇತ್ರವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು.

[ಬದಲಾಯಿಸಿ] 'ನವಣೆಯ ಮೌಲ್ಯವರ್ಧನೆ', ಹಾಗೂ ಅದಕ್ಕಾಗಿಯೇ 'ಮಾರುಕಟ್ಟೆಯ ನಿರ್ಮಾಣದ ಅಗತ್ಯತೆ'

ನವಣೆಯ ಸಂಸ್ಕರಣ ಪದ್ದತಿಗಳು, ಹೆಚ್ಚು ಶ್ರಮದಾಯಕವೆನ್ನುವುದು ಒಪ್ಪುವ ಮಾತು. ಮಾರುಕಟ್ಟೆಯೂ ಇಲ್ಲ. ಹೀಗಾಗಿ ಬಳಸುವ ಜನರೂ ಕಡಿಮೆಯಾಗುತ್ತಿದ್ದಾರೆ. ಸದ್ಯಕ್ಕೆ ಸರ್ಕಾರಮಾಡಬೇಕಾದ ಕೆಲಸವೆಂದರೆ, ನವಣೆಧಾನ್ಯದ ಮೌಲ್ಯವನ್ನು ಹೆಚ್ಚಿಸಿ, ವಿವಿಧ ರುಚಿಯಾದ ತಿಂತಿನಸುಗಳನ್ನು ಪರಿಚಯಿಸಿ ಮಾರಾಟಮಾಡಬಹುದು. ಪ್ರತ್ಯೇಕವಾದ 'ಹೋಟೆಲ್' ಗಳನ್ನು ತೆರೆದು, 'ನವಣೆಯ ಖಾದ್ಯಗಳನ್ನು' ಮಾಡಿ-ಬಡಿಸುವ ಕೆಲಸದಿಂದ ಹೆಚ್ಚಿನ ಜನರಿಗೆ ಉದ್ಯೋಗಾವಕಾಶವೂ ಆಗುತ್ತದೆ. ಜನರಿಗೆ 'ಕಮ್ಮಟ' ಗಳ ಮೂಲಕ, ತಿಳಿಸಿ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ. ದಿನ-ನಿತ್ಯ ಅನ್ನವನ್ನು ತಿನ್ನುವವರಿಗೆ, ಒಂದು ಹೊಸ ಬದಲಾವಣೆ ಸಿಕ್ಕಂತಾಗುತ್ತದೆ. ನವಣೆಯಲ್ಲಿ ಪ್ರೋಟೀನ್ ೧೨.೩ ಗ್ರಾಂ, ಹಾಗೂ ಅಕ್ಕಿಯಲ್ಲಿ ೬.೮೦ ಗ್ರಾಂ.ಅಂಶವಿದೆ. ನವಣೆಯಿಂದ ಕೆಳಗೆ ನಮೂದಿಸಿದ ಎಲ್ಲ ಖಾದ್ಯಗಳನ್ನೂ ಸಲೀಸಾಗಿಮಾಡಬಹುದು. ಬೆಳೆಯುತ್ತಿರುವ ಜನಸಂಖ್ಯೆಯ ಆಹಾರದ ಪೂರೈಕೆಗೆ, ಎಷ್ಟು ಹೊಸ-ಹೊಸ ದವಸ-ಧಾನ್ಯಗಳು ಹುಟ್ಟಿಕೊಂಡರೂ, ಕಡಿಮೆಯೆನ್ನಿಸುತ್ತದೆ.

[ಬದಲಾಯಿಸಿ] ಸಾಮಾನ್ಯವಾಗಿ ಮನೆಗಳಲ್ಲಿ ಮಾಡುವ, ತಿಂಡಿ-ತಿನಸುಗಳು

ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಉಪ್ಪಿಟ್ಟು, ಪೊಂಗಲ್, ತಾಲಿಪಟ್ಟು, ಹೋಳಿಗೆ, ಚಿಕ್ಕಿ, ಭಜಿಯ, ಬಿಸ್ಕೆಟ್, ಮುದ್ದೆ ಇತ್ಯಾದಿಗಳನ್ನೆಲ್ಲಾ, 'ನವಣೆ' ಯಿಂದ ಮಾಡಬಹುದು.

"http://kn.wikipedia.org/w/index.php?title=ನವಣೆ&oldid=216335" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು