ನಮಸ್ಕಾರ
ವಿಕಿಪೀಡಿಯ ಇಂದ
[ಬದಲಾಯಿಸಿ] ನಾಮಪದ
ಅಭಿವಂದನೆ
(ಸಂ) ಗೌರವದಿಂದ ಮಾಡುವ ನಮಸ್ಕಾರ
ಅವನತಿ
(ಸಂ) ೧ ಕೀಳುದೆಸೆ, ದುರ್ದೆಸೆ ೨ ನಮಸ್ಕಾರ
ಆದಾಬು
(<ಅರ. ಆದಾಬ್) ೧ ಗೌರವ ಸೂಚನೆ ೨ ನಮಸ್ಕಾರ
ಉದ್ದಂಡ
ನಮಸ್ಕಾರ ಸಾಷ್ಟಾಂಗ ನಮಸ್ಕಾರ
ಕುಂಬು
(ದೇ) ೧ ಗಟ್ಟಿಯಿಲ್ಲದುದು, ದುರ್ಬಲವಾದುದು ೨ ಬಾಗುವಿಕೆ, ನಮಸ್ಕಾರ ೩ (ಮರಕ್ಕೆ ಹಿಡಿಯುವ) ಕುಟ್ಟೆ, ಹುಳುಕು
ಕೋರ್ನಿಶಾತ್)
ಸಲಾಮು, ನಮಸ್ಕಾರ
ಗೌರವರಕ್ಷೆ
ಗೌರವ ಸೂಚಕವಾಗಿ ನೀಡುವ (ಸೈನಿಕ ರೀತಿಯ) ವಂದನೆ, ನಮಸ್ಕಾರ
ಜೋಹರ
(<ಪ್ರಾ. ಜೋಹರ್) ೧ ಪ್ರಣಾಮ, ನಮಸ್ಕಾರ ೨ ಬಿನ್ನಹ, ವಿಜ್ಞಾಪನೆ ೩ ರಜ ಪೂತ ಸ್ತ್ರೀಯರು ಶತ್ರುವಶವಾಗಬಾರದೆಂದು ಅಗ್ನಿ ಪ್ರವೇಶದ ಮೂಲಕ ಪ್ರಾಣತ್ಯಾಗ ಮಾಡಿಕೊಳ್ಳುತ್ತಿದ್ದ ಒಂದು ಪದ್ಧತಿ
ತುಳಿಲ್(ಲು)
(ದೇ) ೧ ನಮಸ್ಕಾರ, ಮಣಿ ಯುವುದು ೨ ಪರಾಕ್ರಮ, ಸಾಹಸ
ದಂಡ
ನಮಸ್ಕಾರ ನೆಲದ ಮೇಲೆ ಕೋಲಿನಂತೆ ದೇಹವನ್ನು ಚಾಚಿ ಕಾಲಿಗೆ ಬೀಳುವುದು, ದೀರ್ಘ ದಂಡ ನಮಸ್ಕಾರ
ನತ
(ಸಂ) ೧ ಬಾಗಿದುದು ೨ ನಮಸ್ಕಾರ ಮಾಡಿದವನು ೩ ಒಂದು ಗ್ರಹಕ್ಕೂ ಖಗೋಳ ಮಧ್ಯ ರೇಖೆಗೂ ಇರುವ ಅಂತರ
ನಮನ
(ಸಂ) ಬಾಗುವಿಕೆ, ವಂದನೆ, ನಮಸ್ಕಾರ
ಪ್ರಣಾಮ
(ಸಂ) ನಮಸ್ಕಾರ, ವಂದನೆ
ಪ್ರಣಿಪಾತ
(ಸಂ) ಅಡ್ಡಬೀಳುವಿಕೆ, ನಮಸ್ಕಾರ
ಮುಜರೆ
(<ಹಿಂ. ಪಾರ. ಮುಜರಾ) ೧ (ಗೌರವಪೂರ್ವಕವಾಗಿ) ಬಿಟ್ಟುಕೊಡುವುದು, ಮಾಫಿ ೨ (ಗೌರವದಿಂದ ಅರ್ಪಿಸುವ) ನಮಸ್ಕಾರ
ವಂದನ(ನೆ)
(<ಸಂ. ವಂದನಾ) ೧ ನಮಸ್ಕಾರ, ನಮನ ೨ ಹೊಗಳಿಕೆ, ಸ್ತುತಿ
ಶರಣಾರ್ಥಿ
೧ ನಮಸ್ಕಾರ ೨ ರಕ್ಷಣೆಯನ್ನು ಬಯಸಿ ಬಂದವನು
ಶರಣು
(<ಸಂ. ಶರಣ) ೧ ಆಶ್ರಯ ೨ ವಂದನೆ, ನಮಸ್ಕಾರ
ಷೋಡಶೋಪಚಾರ
= ದೇವತೆಗಳಿಗೂ, ಪೂಜ್ಯರಿಗೂ ಮಾಡುವ ಆವಾಹನ, ಆಸನ, ಪಾದ್ಯ, ಅರ್ಘ್ಯ, ಸ್ನಾನೋದ್ವರ್ತನ, ವಸ್ತ್ರ, ಉಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ಆಚಮನ, ಫಲ, ತಾಂಬೂಲ ಮತ್ತು ನಮಸ್ಕಾರ ಎಂಬ ಹದಿನಾರು ಬಗೆಯ - ಉಪಚಾರ, ಸತ್ಕಾರ
[ಬದಲಾಯಿಸಿ] ಕ್ರಿಯಾಪದ
ಎರಗು
(ದೇ) ೧ ನಮಸ್ಕಾರ ಮಾಡು, ಅಡ್ಡಬೀಳು ೨ ಬೀಳು