ದೀಪ್ತಿ ಭಟ್ನಾಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಪ್ತಿ ಭಟ್ನಾಗರ್
ದೀಪ್ತಿ ಭಟ್ನಾಗರ್ 2010
ಜನನ(೧೯೬೭-೦೯-೩೦)೩೦ ಸೆಪ್ಟೆಂಬರ್ ೧೯೬೭
ಉದ್ಯೋಗರೂಪದರ್ಶಿ, ನಟಿ, ಕಿರುತೆರೆ ನಿರೂಪಕಿ

(ಸೆಪ್ಟೆಂಬರ್ ೩೦, ೧೯೬೭) Hindi:(दीप्ति भटनागर) ಒಬ್ಬ ಮಾಡೆಲ್ ಆಗಿದ್ದಾರೆ. ಅವರು ಟೆಲಿವಿಶನ್ ಕಲಾಕಾರರು.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

೧೯೯೨ ರಲ್ಲಿ, ಉತ್ತರ ಪ್ರದೇಶದ 'ಮೀರತ್' ನಿಂದ 'ಬೊಂಬಾಯಿ'ಗೆ ಬಂದರು. ಉತ್ತರ ಪ್ರದೇಶದ ಮೀರತ್ ನಗರದಲ್ಲಿ ಅವರ 'ಹ್ಯಾಂಡಿ ಕ್ರಾಫ್ಟ್ ಕಾರ್ಖಾನೆ'ಯಿದೆ. ಅದರಲ್ಲಿ ತಯಾರಾದ 'ದಿನಬಳಕೆ', ಹಾಗೂ 'ಶೃಂಗಾರ ವಸ್ತುಗಳನ್ನು ಜನಪ್ರಿಯಮಾಡಲು' ಒಳ್ಳೆಯ ಜಾಹೀರಾತಿನ ಕಂಪೆನಿಗಳನ್ನು ಹುಡುಕಿಕೊಂಡು ಬೊಂಬಾಯಿಗೆ ಬಂದರು.

ರೂಪದರ್ಶಿಯಾಗಿ[ಬದಲಾಯಿಸಿ]

೧೯೯೦ ರಲ್ಲಿ ಅಂದಿನ ಪ್ರಮುಖ ವಾರಪತ್ರಿಕೆ, ಪ್ರಾಯೋಜಿಸಿದ, ಇವ್ಸ್ ವೀಕ್ಲಿ ಮಿಸ್ ಇಂಡಿಯ ಕಾಂಟೆಸ್ಟ್ ನಲ್ಲಿ ವಿಜೇತರಾದರು. ಅಲ್ಲಿಂದ ಅವರು ಸಿಂಗಪುರದಲ್ಲಿ ಅನೇಕ 'ಅಂತಾರಾಷ್ಟ್ರೀಯ ಫ್ಯಾಶನ್ ಶೋ' ಗಳನ್ನು ಆಯೋಜಿಸುತ್ತಾ ಬಂದರು.

ನಟಿಯಾಗಿ[ಬದಲಾಯಿಸಿ]

ಕೆಲವು ಹಿಂದಿ ಹಾಗೂ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲೂ ನಟಿಸುವ ಅವಕಾಶವನ್ನು ಬಿಡದೆ, ಉಪಯೋಗಿಸಿಕೊಂಡರು. ಅವರು ಅಭಿನಯಿಸಿದ ಚಲನಚಿತ್ರಗಳ ವಿವರಗಳು ಹೀಗಿವೆ.

  • 'ರಾಮ್ ಶಾಸ್ತ್ರ'
  • 'ಪೆಲ್ಲಿ ಸಂದದಿ'(ತೆಲುಗು)
  • 'ಇನ್ಫರ್ನೊ' (೧೯೯೭ ಚಿತ್ರ)
  • 'ಮನ್ (ಅಮೀರ್ ಖಾನ್ ಅಭಿನಯಿಸಿರುವ ಚಿತ್ರ)

ಕಿರುತೆರೆ ನಿರೂಪಕಿಯಾಗಿ[ಬದಲಾಯಿಸಿ]

ಟೆಲಿವಿಶನ್ ವಲಯದಲ್ಲಿ ಅವರು ಯಾತ್ರ ಯೆಂಬ ಧಾರಾವಾಹಿಯನ್ನು ಪ್ರಸ್ತುತ ಪಡಿಸಿ, ಭಾರತದ ಎಲ್ಲಾ ಪುಣ್ಯ ಕ್ಷೇತ್ರಗಳ ದರ್ಶನವನ್ನು ತೋರಿಸುವ ಒಂದು ಹೊಸ ಆಯಾಮವನ್ನು ಮಾಡಿ ತೋರಿಸಿದರು. ಅದು ಅತ್ಯಂತ ಜನಪ್ರಿಯತೆಯನ್ನು ಮುಟ್ಟಿತು. 'ಮುಸಾಫಿರ್ ಹೂಂ ಯಾರೊ ಧಾರಾವಾಹಿ' ಮತ್ತೊಂದು ಒಂದು ಅಂತಹದೇ ಕಾರ್ಯಕ್ರಮ. ಒಟ್ಟು ೮೦ ದೇಶಗಳ ಅತ್ಯಂತ ಸುಂದರ ಹಾಗೂ ಹೆಸರುವಾಸಿಯಾದ ಸ್ಥಳಗಳ ದರ್ಶನಮಾಡಿಸುವ ಗೈಡ್ ಆಗಿ, ಸುಮಾರು ೬ ವರ್ಷ 'ಸ್ಟಾರ್ ಪ್ಲಸ್ ಚಾನೆಲ್' ನಲ್ಲಿ ಕಾರ್ಯಕ್ರಮವನ್ನು ಕ್ರಮವಾಗಿ ಕೊಡುತ್ತಾ ಬಂದರು. ಇದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ತಮ್ಮದೇ ಆದ, ೨೦ ಜನರ ಸಹಾಯದಿಂದ, Deepti Bhatnagar Productions, ಕಂಪೆನಿಯನ್ನು ಸ್ಥಾಪಿಸಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]