ದಿಗಂತ್ (ನಟ)

ವಿಕಿಪೀಡಿಯ ಇಂದ
(ದಿಗಂತ್ ಮಂಚಾಲೆ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಿಗಂತ್
ಹುಟ್ಟು ಕರ್ನಾಟಕ
ಬೇರೆ ಹೆಸರುಗಳು ದೂದ್ ಪೇಡ
ವೃತ್ತಿ ನಟ, Model
ವರ್ಷಗಳು ಸಕ್ರಿಯ ೨೦೦೬-ಇಲ್ಲಿಯ ತನಕ


ದಿಗಂತ್ ಮಂಚಾಲೆ , ಅಥವಾ ದಿಗಂತ್ , ಕನ್ನಡ ಚಲನಚಿತ್ರ ನಟ ಹಾಗು ರೂಪದರ್ಶಿ.[೧]

ಪರಿವಿಡಿ

[ಬದಲಾಯಿಸಿ] ಆರಂಭಿಕ ಜೀವನ

ಇವರ ಹುಟ್ಟೂರು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ಇವರು ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಇವರ ಶಾಲಾ ವಿದ್ಯಾಭ್ಯಾಸ ತೀರ್ಥಹಳ್ಳಿಯಲ್ಲಿ ನಡೆಯಿತು, ಪಿ ಯು ಸಿ ಯನ್ನು ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿಯಲ್ಲಿ ಮುಗಿಸಿದರು. ದಿಗಂತನ ತಂದೆ ಕೃಷ್ಣಮೂರ್ತಿ ಅವರು ಪದವಿ ಕಾಲೇಜಿನ ಪ್ರಾಧ್ಯಾಪಕ. ದಿಗಂತಗೆ ಒಬ್ಬ ಸಹೋದರನಿದ್ದಾನೆ.

[ಬದಲಾಯಿಸಿ] ವೃತ್ತಿಜೀವನ

ಇವರು ಕನ್ನಡ ಚಲನಚಿತ್ರೋದ್ಯಮಕ್ಕೆ ಪರಿಚಯಗೊಂಡಿದ್ದು ಮಿಸ್ ಕ್ಯಾಲಿಫೋರ್ನಿಯಾ ಇಂದ. ಅನಂತರದ ಚಲನಚಿತ್ರ ಎಸ್ ಎಂ ಎಸ್ ೬೨೬೦. ಆದರೆ ಇವರನ್ನು ಜನಪ್ರಿಯ ನಟನಾಗಿಸಿದ್ದು ಮುಂಗಾರು ಮಳೆ.[೨] ನಂತರ ಗಾಳಿಪಟ ಚಿತ್ರದಲ್ಲಿ ಕೂಡ ನಟಿಸಿದರು.[೩] 'ಗಾಳಿಪಟ'ದ ಯಶಸ್ಸಿನ ನಂತರ ದಿಗಂತ್ ಮುಖ್ಯ ಭೂಮಿಕೆಯಲ್ಲಿ ೫ ಚಲನಚಿತ್ರದಲ್ಲಿ ಕಂಡುಬಂದರು. ಮನಸಾರೆ ಇವರು ಏಕನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ.[ಉಲ್ಲೇಖದ ಅಗತ್ಯವಿದೆ].

[ಬದಲಾಯಿಸಿ] ಚಲನಚಿತ್ರಗಳು

ಬಿಡುಗಡೆ ಚಲನಚಿತ್ರ ನಿರ್ದೇಶಕ ಟಿಪ್ಪಣಿಗಳು
[ಯಾವಾಗ?] ಕಡಲ ಮಗೆ (ತುಳು)
೨೦೦೬ ಮಿಸ್ ಕ್ಯಾಲಿಫೋರ್ನಿಯಾ ಕೂಡ್ಲು ರಾಮಕೃಷ್ಣ
೨೦೦೬ ಮುಂಗಾರು ಮಳೆ ಯೋಗರಾಜ ಭಟ್ ಅತಿಥಿ ಪಾತ್ರ
೨೦೦೭ ಮೀರಾ ಮಾಧವ ರಾಘವ ಟಿ ಎನ್ ಸೀತಾರಾಮ್
೨೦೦೮ ಗಾಳಿಪಟ ಯೋಗರಾಜ್ ಭಟ್
೨೦೦೯ ಮಸ್ತ್ ಮಜಾ ಮಾಡಿ ಅನಂತ ರಾಜು
೨೦೦೯ ಹೌಸ್ ಫುಲ್ ಹೇಮಂತ್ ಹೆಗಡೆ
೨೦೦೯ ಮನಸಾರೆ ಯೋಗರಾಜ ಭಟ್
೨೦೦೯ ಬಿಸಿಲೆ ಸಂದೀಪ್ ಎಸ್ ಗೌಡ
೨೦೧೦ ಸ್ವಯಂವರ
೨೦೧೦ ಪಂಚರಂಗಿ ಯೋಗರಾಜ್ ಭಟ್
೨೦೧೧ ಜಾಲಿ ಬಾಯ್ಸ್
೨೦೧೧ ಮಿ.ಡುಪ್ಲಿಕೇಟ್
೨೦೧೧ ಲೈಫು ಇಷ್ಟೇನೆ ಪವನ್ ಕುಮಾರ್
೨೦೧೧ ಕಾಂಚಾಣ
೨೦೧೧ ಪುತ್ರ

[ಬದಲಾಯಿಸಿ] ಉಲ್ಲೇಖಗಳು

  1. "Diganth is not scared!", The Times of India, 14 August 2008. Retrieved on 2008-10-30. 
  2. "Of superhero and filtered mud", The Hindu, 5 September 2007. Retrieved on 2008-10-30. 
  3. "'I'm not threatened by Ganesh'", The Times of India, 24 July 2007. Retrieved on 2008-10-30. 

ಟೆಂಪ್ಲೇಟು:India-actor-stub

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು