ದಲಿತ
ದಲಿತ ಸಾಂಪ್ರದಾಯಿಕವಾಗಿ "ಅಸ್ಪೃಶ್ಯ" ಎಂದು ಗುರುತಿಸಲಾಗುವ ಜನರ ಗುಂಪಿನ ಒಂದು ಹೆಸರು. ದಲಿತರು ದಕ್ಷಿಣ ಏಷ್ಯಾದ ಎಲ್ಲೆಡೆಯಲ್ಲಿರುವ ಹಲವಾರು ಜಾತಿಗಳ ಜನರು. ಅವು; ಅವರು ಅನೇಕ ಭಾಷೆಗಳ ಮಾತನಾಡುತ್ತಾರೆ ಮತ್ತು ಅನೇಕ ಧರ್ಮಗಳನ್ನು ಅನುಸರಿಸುತ್ತಾರೆ.
ಭಾರತೀಯ ಸಂವಿಧಾನ ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸಿಲ್ಲವಾದರೂ ಜಾತಿ ವ್ಯವಸ್ಥೆ ಯನ್ನು ಆಧರಿಸಿದ ಭೇದಭಾವಗಳನ್ನು ನಿಷೇಧಿಸಿದೆ. ಆದಾಗ್ಯೂ ಲ್ಲಿ ದಲಿತರ ವಿರುದ್ಧ ಪೂರ್ವಾಗ್ರಹಗಳಿವೆ, ಅವರ ವಿರುದ್ಧ ತಾರತಮ್ಯವನ್ನು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯದ ನಂತರ, ಗಮನಾರ್ಹ ರೀತಿಯಲ್ಲಿ ಅವರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. . ಅನೇಕ ಸಾಮಾಜಿಕ ಸಂಘಟನೆಗಳು ಕೂಡ ಸುಧಾರಿತ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅವಕಾಶಗಲನ್ನು ಒದಗಿಸುವುದರ ಮೂಲಕ ದಲಿತರ ಸ್ಥಿತಿಯನ್ನು ಉತ್ತಮಪಡಿಸಲು ಶ್ರಮಿಸಿವೆ.
ಅಸ್ಪೃಶ್ಯರು , ದಲಿತರು ಹೀಗೆ ಅನೇಕ ಹೆಸರುಗಳಿಂದ ಈ ಜನರನ್ನು ಕರೆಯುತ್ತಾರೆ.
2001 ರಲ್ಲಿ, ದಲಿತ ಜನಸಂಖ್ಯೆಯ ಪ್ರಮಾಣ ಭಾರತದ ಒಟ್ಟು ಜನಸಂಖ್ಯೆಯ 16.2 ಪ್ರತಿಶತ ಇತ್ತು. ದಲಿತರು ಭಾರತದ ಎಲ್ಲ ರಾಜ್ಯಗಳಲ್ಲಿ ಜಿಲ್ಲೆಗಳಲ್ಲಿ ಇದ್ದಾರೆ. 2001 ರಲ್ಲಿ, ಪಂಜಾಬ್ ರಾಜ್ಯವು ಜನಸಂಖ್ಯೆ ಯ ಅತಿಹೆಚ್ಚು ಭಾಗ ( ಸುಮಾರು 29 ಶೇಕಡಾ)ದಷ್ಟು , ದಲಿತರನ್ನು ಹೊಂದಿತ್ತು. ಮತ್ತು ಮಿಜೋರಾಮ್ ರಾಜ್ಯವು ಅತಿ ಕಡಿಮೆ ಭಾಗ ( ಹೆಚ್ಚೂಕಡಿಮೆ ಇಲ್ಲವೇ ಇಲ್ಲ ಎನ್ನುವಷ್ಟು ) ದಲಿತಜನರನ್ನು ಹೊಂದಿತ್ತು. ಭಾರತ ಸರ್ಕಾರವು ಅವರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಿ ಅವರ ಹಿತವನ್ನು ಕಾಯುತ್ತದೆ. 'ದಲಿತ' ಶಬ್ದಕ್ಕೆ ಸಮಾನಾರ್ಥಕವಾಗಿ 'ಪರಿಶಿಷ್ಟ ಜಾತಿ'ಶಬ್ದವನ್ನು ಬಳಸಲಾಗುತ್ತದೆ, ಈ ಶಬ್ದಗಳು ಶೂದ್ರರು ಮತ್ತು ಅಸ್ಪೃಶ್ಯರಂತಹ ಭಾರತದ ಐತಿಹಾಸಿಕವಾಗಿ ಭೇದಭಾವ ಮಾಡಲ್ಪಟ್ಟ ಕೆಳಜಾತಿಗಳನ್ನು ಒಳಗೊಳ್ಳುತ್ತವೆ.
ದಲಿತರನ್ನು ಸಾಮಾನ್ಯವಾಗಿ ಹಿಂದೂಧರ್ಮದೊಂದಿಗೆ ಗುರುತಿಸಲಾಗಿದೆಯಾದರೂ ದಲಿತರು ಮತ್ತು ಅಂಥ ಜನರು ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲೂ ಇದ್ದಾರೆ. ದಲಿತರಂಥ ಸಾಮಾಜಿಕ ಸ್ಥಿತಿಗತಿಗಳನ್ನು ಹೊಂದಿದ ಜನರು ಜಪಾನ್ , ಕೊರಿಯಾ,ಯೆಮೆನ್,ಸೋಮಾಲಿಯಾಗಳಲ್ಲೂ ಇದ್ದಾರೆ.
ದಲಿತರು ಮತ್ತು ಧರ್ಮಗಳು [ಬದಲಾಯಿಸಿ]
೨೦೦೬ರ ಸಾಚಾರ್ ಸಮಿತಿ ವರದಿಯು ಪರಿಶಿಷ್ಟಜಾತಿ ಮತ್ತು ವರ್ಗಗಳ ಜನರು ಹಿಂದೂಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತೋರಿಸುತ್ತದೆ.
| ಧರ್ಮ | ಪರಿಶಿಷ್ಟ ಜಾತಿ | ಪರಿಶಿಷ್ಟ ವರ್ಗ |
|---|---|---|
| ಬೌದ್ಧಧರ್ಮ | 89.50% | 7.40% |
| ಕ್ರಿಶ್ಚಿಯನ್ ಧರ್ಮ | 9.00% | 32.80% |
| ಸಿಖ್ ಧರ್ಮ | 30.70% | 0.90% |
| ಹಿಂದೂ ಧರ್ಮ | 22.20% | 9.10% |
| ಝಾರತುಷ್ಟ್ರ ಧರ್ಮ | – | 15.90% |