ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

'ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ' (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜನಲ್ ಕೋ-ಆಪರೇಶನ್- ಸಾಕ್೯), ಇದು ಎಂಟು ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಒಂದು ಅಂತರರಾಷ್ಟ್ರೀಯ ಪ್ರಾದೇಶಿಕ ಸಂಘಟನೆಯಾಗಿದ್ದು,೧೯೮೫ರಲ್ಲಿ ಸ್ಥಾಪನೆಯಾಗಿದೆ. ಸಾಮೂಹಿಕ ಸ್ವಾವಲಂಬನೆಗೆ ಒತ್ತು ನೀಡುವುದರ ಜೊತೆಗೆ ಆಥಿ೯ಕ,ಸಾಮಾಜಿಕ,ತಾಂತ್ರಿಕ,ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಾಧಿಸುವಲ್ಲಿ ಪರಸ್ಪರರಿಗೆ ನೆರವಾಗುವುದು ಈ ಸಂಘಟನೆಯ ಮೂಲ ಉದ್ದೇಶ. ಭಾರತ, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಹಾಗೂ ನೇಪಾಳಗಳು ಸ್ಥಾಪಕ-ಸದಸ್ಯ ರಾಷ್ಟ್ರಗಳು. ಅಫ್ಘಾನಿಸ್ತಾನವು ನವದೆಹಲಿಯಲ್ಲಿ ನಡೆದ ಸಂಘಟನೆಯ ೧೪ನೇ ಶೃಂಗಸಭೆಯಲ್ಲಿ ದಿನಾಂಕ ಏಪ್ರಿಲ್ ೩, ೨೦೦೭ರಂದು ೮ನೇ ಸದಸ್ಯ ರಾಷ್ಟ್ರವಾಗಿ ಸಂಘಟನೆಗೆ ಸೇಪ೯ಡೆಗೊಂಡಿತು. ಸಂಘಟನೆಯ ಕೇಂದ್ರ ಕಛೇರಿಯು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು