ಥಾರ್ ಮರುಭೂಮಿ
ವಿಕಿಪೀಡಿಯ ಇಂದ
(ಥಾರ್ ಇಂದ ಪುನರ್ನಿರ್ದೇಶಿತ)
ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ಥಾರ್ ಮರುಭೂಮಿ, ಪಶ್ಚಿಮ ಭಾರತದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ ಮರುಭೂಮಿಯನ್ನು ಅಲ್ಲಿ "ಚೋಲಿಸ್ತಾನ್ ಮರುಭೂಮಿ" ಎಂದು ಕರೆಯುತ್ತಾರೆ.
ಈಶಾನ್ಯಕ್ಕೆ ಸಟ್ಲೆಜ್ ನದಿ, ಪೂರ್ವಕ್ಕೆ ಅರಾವಳಿ ಶ್ರೇಣಿ ದಕ್ಷಿಣಕ್ಕೆ ಗುಜರಾತಿನ ಕಚ್ ಜೌಗುಪ್ರದೇಶ ಹಾಗು ಪಶ್ಚಿಮಕ್ಕೆ ಸಿಂಧೂ ನದಿಗಳಿಂದ ಈ ಮರುಭೂಮಿಯ ಸುತ್ತುವರಿಯಲ್ಪಟ್ಟಿದೆ. ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು ೪,೪೬,೦೦೦ ಚ. ಕಿಮೀ. ಸುಮಾರು ೮೦೫ ಕಿಮೀ ಉದ್ದ ಮತ್ತು ಸುಮಾರು ೪೮೫ ಕಿಮೀ ಅಗಲವಿದೆ. ೧೦% ಮರಳು ದಿಣ್ಣೆಗಳಿಂದ ಕೂಡಿದ ಇದರ ೯೦% ಭಾಗ ಕಲ್ಲು ಮಣ್ಣಿನ ಶಾಶ್ವತ ದಿಣ್ಣೆಗಳು, ಬಂಡೆಗಳು ಮತ್ತು ಉಪ್ಪಿನ ಬೈಲುಗಳಿಂದ ಕೂಡಿದೆ. ಅಲ್ಲಲ್ಲಿ ಮುಳ್ಳಿನ ಕುರುಚಲು ಗಿಡಗಳು ಮತ್ತು ಹುಲ್ಲುಗಾವಲುಗಳಿದ್ದರೂ ಇದು ಭಾಗಶಃ ಒಣ ಭೂಮಿಯಾಗಿದೆ.
ಇದನ್ನೂ ನೋಡಿ[ಬದಲಾಯಿಸಿ]
ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ಇದು ೯ ನೇ ಅತೀ ದೊಡ್ಡ ಮರುಭೂಮಿ .
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
ನಾಸಾ ಸಿದ್ಧಪಡಿಸಿದ ಥಾರ್ ಮರುಭೂಮಿಯ ನಕ್ಷೆ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |