ತ್ರ್ಯಂಬಕೇಶ್ವರ
ತ್ರ್ಯಂಬಕೇಶ್ವರವು ( ಮರಾಠಿಯಲ್ಲಿ ತ್ರಿಂಬಕೇಶ್ವರ್ ) ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿನ ಒಂದು ಪ್ರಾಚೀನ ಹಿಂದೂ ದೇವಾಲಯ. ಇದು ನಾಶಿಕ್ ನಗರದಿಂದ ೨೮ ಕಿ.ಮೀ. ದೂರದಲ್ಲಿ ಗೋದಾವರಿ ನದಿಯ ಉಗಮಸ್ಥಾನದ ಬಳಿಯಲ್ಲಿದೆ. ಶಿವದೇವಾಲಯವಿರುವ ಈ ಕ್ಷೇತ್ರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಸಮೀಪದಲ್ಲಿನ ಬ್ರಹ್ಮಗಿರಿ ಬೆಟ್ಟಸಾಲಿನಲ್ಲಿ ಉದ್ಗಮಿಸುವ ಗೋದಾವರಿ ನದಿಯು ಭಾರತ ಜಂಬೂದ್ವೀಪದ ಅತಿ ಉದ್ದದ ನದಿಯಾಗಿದೆ. ತ್ರ್ಯಂಬಕೇಶ್ವರದ ಕುಶಾವರ್ತ ಎಂಬ ಕುಂಡದಿಂದ ಮುಂದೆ ಗೋದಾವರಿಯ ಹರಿವು ಸ್ಪಷ್ಟವಾಗುವುದರಿಂದ ಈ ಸ್ಥಾನವನ್ನು ಹಿಂದೂ ಶ್ರದ್ಧಾಳುಗಳು ಪವಿತ್ರವೆಂದು ಭಾವಿಸಿ ಪುಣ್ಯಸ್ನಾನ ಕೈಗೊಳ್ಳುವರು. ತ್ರ್ಯಂಬಕೇಶ್ವರದದ ವೈಶಿಷ್ಟ್ಯವೆಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತೀಕವಾಗಿವೆ. ಭಾರತದ ಉಳಿದ ಹನ್ನೊಂದು ಜ್ಯೋತಿರ್ಲಿಂಗಗಳೆಲ್ಲವೂ ಶಿವಪ್ರಧಾನವಾಗಿವೆ. ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ತ್ರ್ಯಂಬಕೇಶ್ವರ ದೇವಾಲಯವು ಕರಿಕಲ್ಲಿನಿಂದ ಕಟ್ಟಲ್ಪಟ್ಟಿದ್ದು ಸುಂದರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಇಲ್ಲಿಂದ ೭ ಕಿ.ಮೀ. ದೂರದಲ್ಲಿರುವ ಅಂಜನೇರಿ ಪರ್ವತವು ಹನುಮಂತನ ಜನ್ಮಸ್ಥಾನವೆಂದು ಹೇಳಲ್ಪಡುವುದು.
ಇವನ್ನೂ ನೋಡಿ [ಬದಲಾಯಿಸಿ]
ಬಾಹ್ಯ ಸಂಪರ್ಕಕೊಂಡಿಗಳು [ಬದಲಾಯಿಸಿ]
- http://www.trambakeshwar.com ತ್ರ್ಯಂಬಕೇಶ್ವರ ದೇವಾಲಯದಲ್ಲಿ ಪೂಜೆಗಳ ಬಗ್ಗೆ ಮಾಹಿತಿ
- http://www.kalsarpa.com
- http://www.nashik.com/travel/trimbakeshwar.html
- http://www.religiousportal.com/Tryambakeshwar.html ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗದ ಬಗ್ಗೆ ಹೆಚ್ಚಿನ ಮಾಹಿತಿ