ತ್ರಿಮೂರ್ತಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತ್ರಿಮೂರ್ತಿ (ಚಲನಚಿತ್ರ)
ತ್ರಿಮೂರ್ತಿ
ನಿರ್ದೇಶನಸಿ.ವಿ.ರಾಜೇಂದ್ರನ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಕಥೆಸಿ ವಿ ರಾಜೇಂದ್ರನ್
ಪಾತ್ರವರ್ಗರಾಜಕುಮಾರ್, ಜಯಮಾಲ , ಸುರೇಖ, ಸಂಪತ್, ಬಾಲಕೃಷ್ಣ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆಪೂರ್ಣಿಮಾ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನರಾಜಕುಮಾರ್


ತ್ರಿಮೂರ್ತಿ 1975 ರ ಭಾರತೀಯ ಕನ್ನಡ ಭಾಷೆಯ ಥ್ರಿಲ್ಲರ್ ಚಲನಚಿತ್ರವಾಗಿದೆ , ಇದನ್ನುಸಿ.ವಿ.ರಾಜೇಂದ್ರನ್ ನಿರ್ದೇಶಿಸಿದ್ದಾರೆ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಮತ್ತು ಎಸ್‌ಪಿ ನಾಗಮ್ಮ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಾಜಕುಮಾರ್,ಸುರೇಖ ಮತ್ತು ಜಯಮಾಲ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಲನಚಿತ್ರವು ತಮಿಳಿನ ನಿರ್ದೇಶಕ ಸಿ.ವಿ.ರಾಜೇಂದ್ರನ್ ಅವರ ಕನ್ನಡದಲ್ಲಿ ಚೊಚ್ಚಲ ಚಿತ್ರವಾಗಿದೆ ಚಲನಚಿತ್ರವನ್ನು 3 ಕಥೆಗಳಾಗಿ ವಿಂಗಡಿಸಲಾಗಿದೆ - ತ್ರಿಮೂರ್ತಿ , ಉಂಡೂ ಹೋದ ಕೊಂಡೂ ಹೋದ ಮತ್ತು ಆಳಾಗಬಲ್ಲವ ಅರಸಾಗಬಲ್ಲ . ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಮೊದಲ ನಿರ್ಮಾಣ ಉದ್ಯಮವಾಗಿತ್ತು . ಇದು ಅವರ ಮೊದಲ ವಿತರಣಾ ಉದ್ಯಮವೂ ಆಗಿತ್ತು. ಸಿನಿಮಾ ದೊಡ್ಡ ಯಶಸ್ಸು ಕಂಡಿತು.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜಕುಮಾರ್ - ಶ್ರೀಧರ್/ವಿಜಯ್/ಶೇಖರ್/ಶೇಷಗಿರಿ (ಮೂರು ಪಾತ್ರದಲ್ಲಿ)
  • ನಾಯಕಿ(ಯರು) = ಜಯಮಾಲ- ಪ್ರೇಮಾ
  • ಸುರೇಖ
  • ಆರ್.ಸಂಪತ್ – ರಾಜಾರಾಂ
  • ಬಾಲಕೃಷ್ಣ
  • ವಜ್ರಮುನಿ -ಶ್ರೀಕಾಂತ್

ಹಾಡಗಳು[ಬದಲಾಯಿಸಿ]

ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ

ಕ್ರಮ ಸಂಖ್ಯೆ ಹಾಡು ಗಾಯಕರು
1 ಲೇ ಲೇ ಅಪ್ಪನ ಮಗಳೆ ರಾಜಕುಮಾರ್
2 ಏನು ಮಾಡಲಿ ನಾನು ರಾಜಕುಮಾರ್
3 ಹಣ್ಣು ಮಾಗಿದೆ ಜಾನಕಿ
ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು ರಾಜಕುಮಾರ್