ತಿರುಮಕೂಡಲು ಚೌಡಯ್ಯ
| ತಿರುಮಕೂಡಲು ಚೌಡಯ್ಯ |
|---|
(ಜನವರಿ ೧.೧೮೯೫ - ಜನವರಿ ೧೯, ೧೯೬೭)
[ಬದಲಾಯಿಸಿ] ಜನನ; ಬಾಲ್ಯದಲ್ಲೇ ಅಪರಿಮಿತ ಸಂಗೀತಾಸಕ್ತಿ
'ತಿರುಮಕೂಡಲು ಚೌಡಯ್ಯ' ಆಗತ್ಸ್ಯ ಗೌಡ, ಹಾಗೂ ಸುಂದರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಬಿಡಾರಮ್ ಕೃಷ್ಣಪ್ಪನವರಲ್ಲಿ ಹದಿನೆಂಟು ವರ್ಷ ಸಂಗೀತಾಬ್ಯಾಸ ಮಾಡಿದ ಚೌಡಯ್ಯನವರು ಅಸಾಧಾರಣ ಪಾಂಡಿತ್ಯ ಪಡೆದರು. ತಿರುಚಿ ಗೋವಿಂದ ಸ್ವಾಮಿಗಳಿಂದ ಹೆಚ್ಹಿನ ಪರಿಣತಿ ಪಡೆದರು.ಕರ್ನಾಟಕ ಸಂಗೀತ ಪ್ರಕಾರದ ಒಬ್ಬ ಪ್ರಮುಖ ಪಿಟೀಲು ವಾದಕರಾಗಿದ್ದವರು. ಪಿಟೀಲು ಟಿ. ಚೌಡಯ್ಯನವರು ಅಭಿನಯಿಸಿದ ಚಿತ್ರದ ಹೆಸರು “ವಾಣಿ”. ಅದರಲ್ಲಿ ಅವರೇ ನಾಯಕ. ವಿಶೇಷವೆಂದರೆ ಪಂಡರೀಬಾಯಿ ಮತ್ತು ಮುಸುರಿ ಕೃಷ್ಣಮೂರ್ತಿಯವರ ಮೊದಲ ಚಿತ್ರವೂ ಅದೇ. ಮೈಸೂರಿನ ಪಿಟೀಲು ಚೌಡಯ್ಯನವರ ಹೆಸರು ಶಾಸ್ತ್ರೀಯ ಸಂಗೀತ ವಲಯದಲ್ಲಿ ಚಿರಸ್ಮರಣೀಯವಾಗಿದೆ. ತಮ್ಮ ಸಂಗೀತ ಪಾಂಡಿತ್ಯ ಮತ್ತು ಹೆಚ್ಚುಗಾರಿಕೆಯಿಂದ ಹೆಸರಾದವರು. ಇಂದಿಗೂ ಕರ್ನಾಟಕದಲ್ಲಿ ಪಿಟೀಲಿನೊಂದಿಗೆ ಜೋಡಿಸಿದ ಹೆಸರೆಂದರೆ ಚೌಡಯ್ಯನವರದ್ದೇ. 'ಬೆಂಗಳೂರಿನ ವೈಯಾಲಿಕಾವಲ್'ನಲ್ಲಿರುವ ಚೌಡಯ್ಯ ಸ್ಮಾರಕ ಭವನ “ಪಿಟೀಲಿನ’ ಆಕಾರದಲ್ಲೇ ಇದೆ.
[ಬದಲಾಯಿಸಿ] ವಾಣಿ ಚಿತ್ರದಲ್ಲಿ ಅಭಿನಯಿಸಿದ್ದರು
ಇಂಥ ಸಂಗೀತ ವಿದ್ವಾಂಸ ನಾಯಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದ್ದರು. 'ನಟ ಅಂಬರೀಷನ ತಾತ'ನವರಾದ ಚೌಡಯ್ಯನವರು ೧೯೪೩ ರಲ್ಲಿ ಬಿಡುಗಡೆಯಾದ “ವಾಣಿ’ ಚಿತ್ರದಲ್ಲಿ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು, ಅದರ ಇಂಗ್ಲಿಷ್ ನ ಟೈಟಲ್ “violinist’. ಸಂಗೀತ ಪ್ರಧಾನವಾದ ಚಿತ್ರ. ಇದರಲ್ಲಿನ ಹಾಡಿಗೆ ಸ್ವತಃ ಅವರೇ ಸಂಗೀತ ಸಂಯೋಜಿಸಿದ್ದರು. ಇಡೀ ಚಿತ್ರದ ಸಂಗೀತ ನಿರ್ದೇಶನವನ್ನು ಮತ್ತೊಬ್ಬ ಸಹಾಯಕನೊಂದಿಗೆ ಪೂರೈಸಿದ್ದರು. ಚೌಡಯ್ಯನವರು, ೧೯೫೨-೧೯೫೮ ರವರೆಗೆ 'ವಿದಾನ ಪರಿಷತ್ ಸದಸ್ಯ'ರಾಗಿದ್ದರು.
[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು
- ಚೌಡಯ್ಯನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ "ಸಂಗೀತ ರತ್ನ'(೧೯೪೧)
- ಮದ್ರಾಸ್ ಸಂಗೀತ ಅಕಾಡೆಮಿ ನೀಡಿದ "ಸಂಗೀತ ಕಲಾನಿದಿ"
- ಮೈಸೂರ್ ಸಂಗೀತ ಪರಿಷತ್ ನೀಡಿದ "ಗಾನ ಕಲಾ ಸಿಂಧು" ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ.
|
|
|||||||
[[೧]]
