ಡಿ. ಎನ್. ಶಂಕರ ಭಟ್ಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಡಾ.ಡಿ. ಎನ್. ಶಂಕರ ಭಟ್ಟ'

(೧೫, ಜುಲೈ, ೧೯೩೫-)

'ದರ್ಬೆ ನಾರಾಯಣಭಟ್ಟ ಶಂಕರ ಭಟ್ಟ' ರೆಂದು ಮನೆಯಲ್ಲಿ ಕರೆಸಿಕೊಳ್ಳುತ್ತಿದ್ದ, ಶಂಕರ ಭಟ್ಟರು, ಕನ್ನಡ ಭಾಷಾ ಪ್ರಪಂಚಕ್ಕೆ ಡಾ.ಡಿ.ಎನ್.ಶಂಕರ ಭಟ್ಟ, ರೆಂದೇ ಪ್ರಸಿದ್ಧರಾಗಿದ್ದರು. ವಿದ್ಯಾಬ್ಯಾಸದ ನಂತರ, ೧೯೬೨ ರಿಂದ ಕೊನೆಯವರೆಗೆ ಅವರು ರಾಜ್ಯದ ಹೊರಗೇ ಹೆಚ್ಚಾಗಿದ್ದರು. ಅಂತಹಸಮಯದಲ್ಲೂ ಅನೇಕ ಮೌಲಿಕ ಕೃತಿರಚನೆಗಳಿಂದ ಕನ್ನಡಕ್ಕೆ ಮಾಡಿದ ಸೇವೆ ಅನನ್ಯ. ಕನ್ನಡದ ಬಗ್ಗೆ ತುಡಿತವಿರುವ ವ್ಯಕ್ತಿ ಎಲ್ಲಿದ್ದರೂ ಹೇಗೆ ಒಂದು ಉನ್ನತ ಕೊಡುಗೆಯನ್ನು ಕೊಡಲು ಸಾಧ್ಯತೆಗಳಿವೆ ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ. ಶಂಕರ ಭಟ್ಟರಂತೆ ಹಲವಾರು ಕನ್ನಡ ಭಾಷಾಶಾಸ್ತ್ರಜ್ಞರು ಕನ್ನಡನಾಡಿನ ಹೊರಗಡೆಇದ್ದು ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ. ಉದಾಹರಣೆಗೆ, ಎ.ಎಸ್.ಬಿಳಿಗಿರಿ, ಎಸ್.ಎನ್.ಶ್ರೀಧರ್, ಎಚ್.ಎಸ್.ಅನಂತನಾರಾಯಣ, ಇತ್ಯಾದಿ. ಕನ್ನಡದಲ್ಲಿ ಭಾಷಾಶಾಸ್ತ್ರ, ವ್ಯಾಕರಣ ಛಂದಸ್ಸು, ಮುಂತಾದ ಅಧ್ಯಯನಶಿಸ್ತುಗಳು ಬೆಳೆದುಬಂದಿವೆ. ಇತ್ತೀಚಿನ ದಶಕಗಳಲ್ಲಿ ಕನ್ನಡ ಭಾಷೆಯನ್ನು ಕುರಿತು ಇಂಗ್ಲೀಷ್ ಮತ್ತು ಕನ್ನಡದಲ್ಲಿ ನಡೆದಿರುವ ಕೆಲಸಗಳು, ನಮ್ಮ ಸ್ನಾತಕೋತ್ತರ ಪಾಠಕ್ರಮದ ಪರಿಧಿಯಿಂದ ಆಚೆಗೆ ಉಳಿದಿವೆ. ಅವನ್ನು ಅವಲೋಕಿಸುವವರು, ಮತ್ತು ಕಲಿಯುವವರು ಇಬ್ಬರೂ ಆಧ್ಯಯನ ಚಿಂತನೆಗಳನ್ನು ಗ್ರಹಿಸುವ ಆಸಕ್ತಿಯನ್ನು ತೋರಿಸುತ್ತಿಲ್ಲ. ಕನ್ನಡದ ಬಗ್ಗೆ ಅಪಾರ ಸಂಶೋಧನೆ, ಭಟ್ಟರ ವಿಶಿಷ್ಟ ಸಾಧನೆ.

ಪರಿವಿಡಿ

[ಬದಲಾಯಿಸಿ] 'ಡಿ.ಎನ್.ಎಸ್'. ರವರ, ಜನನ ಹಾಗೂ, 'ವಿದ್ಯಾಭ್ಯಾಸ'

ಶಂಕರಭಟ್ಟರು ಸುಸಂಸ್ಕೃತ ಪಂಡಿತರ ಮನೆಯಲ್ಲಿ ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ, ಪಿ.ಎಚ್.ಡಿ [೧೯೬೨] ಗಳಿಸಿದರು. ೧೯೬೬ ರಲ್ಲಿ (British Council) ಬ್ರಿಟಿಷ್ ಕೌನ್ಸಿಲ್ ನಲ್ಲಿ, (Fellowship), 'ಫೆಲೋಶಿಪ್' ಆಯ್ಕೆಯಾಗಿ, ಇಂಗ್ಲೀಷ್ ನಲ್ಲಿ, 'ಉಪಭಾಷಾಪರಿವೀಕ್ಷಣೆಯ ವಿಧಾನ'ಗಳನ್ನು ಕುರಿತು 'ಅಧ್ಯಯನ' ಮಾಡಿದರು. 'ಶಂಕರಭಟ್ಟರು', ವೃತ್ತಿಜೀವನದಲ್ಲಿ 'ಅನೇಕ ಮಹತ್ವದಹೊಣೆ'ಗಳನ್ನು ನಿಭಾಯಿಸಿದ್ದಾರೆ.

[ಬದಲಾಯಿಸಿ] ಮೊದಲನೆಯ ಹಂತ

  • 'ಪುಣೆ ವಿಶ್ವ ವಿದ್ಯಾಲಯ'ದಿಂದ "ದ್ರಾವಿಡಿಯನ್ ಭಾಷಾಶಾಸ್ತ್ರ" ದ ಅಧ್ಯಯನ. (೧೯೬೨-೬೫)
  • 'ಪುಣೆ ಡೆಕ್ಕನ್ ಕಾಲೇಜ್' ನಲ್ಲಿ "ಟಿಬೆಟೊ ಬರ್ಬನ್ ಭಾಷೆ" ಗಳ ರೀಡರ್ ಆಗಿ, (೧೯೬೫-೭೯)
  • 'ತಿರುವನಂತಪುರ ISDL' ನಲ್ಲಿ, 'ಭಾಷಾ ಪ್ರಾಧ್ಯಾಪಕ,' (೧೯೭೯-೮೫)
  • 'ಮಣಿಪುರದ ರಾಜಧಾನಿ', 'ಇಂಫಾಲ್'-ಮಹಾವಿಶ್ವವಿದ್ಯಾಲಯ 'ಭಾಷಾ ಪ್ರಾಧ್ಯಾಪಕರಾಗಿ.' (೧೯೮೮-೯೫)
  • 'ಮೈಸೂರಿನ, ಸಿ.ಐ.ಎಲ್' ನಲ್ಲಿ (UGC) 'ಯು.ಜಿ.ಸಿ' ವತಿಯಿಂದ, ನಿಯೋಜಿತ 'ಪ್ರಖ್ಯಾತವಿಜ್ಞಾನಿ' ಯಾಗಿ ಸೇವೆಸಲ್ಲಿಸಿದರು.

[ಬದಲಾಯಿಸಿ] ಡಾ. ಶಂಕರಭಟ್ಟರು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿಯೂ, ದುಡಿದರು

  • ೧. 'ಸ್ಟಾನ್ ಫರ್ಡ್' ವಿಶ್ವ ವಿದ್ಯಾಲಯದಲ್ಲಿ '(Research Associate)', ಭಾಷಾ ಶಾಸ್ತ್ರಗಳನ್ನು '(Language Univarsals) ಕುರಿತಂತೆ, ಯೋಜನೆಗಳಲ್ಲಿ ಭಾಗವಹಿಸಿದರು. [೧೯೭೩-೭೫]
  • ೨. ೧೯೯೭ ರಲ್ಲಿ ಬೆಲ್ಜಿಯಂ ನ, "ಆಂಟ್ ವರ್ಪ್," ನ ವಿಶ್ವವಿದ್ಯಾಲಯ ದಲ್ಲಿ '(Visiting Scholar),'ಆಗಿ, ಆಸ್ಟ್ರೇಲಿಯದಲ್ಲಿ, ಮೆಲ್ಬೊರ್ನ್ ನಗರದ 'Law Brobe' ವಿಶ್ವ ವಿದ್ಯಾಲಯದಲ್ಲಿ '(Visiting Professor)' ಅತಿಥಿ ಪ್ರಾಧ್ಯಾಪಕ [೨೦೦೦]
  • ೩.'Germany)' 'ಜರ್ಮನಿ' ಯ, ಲೀಪ್ಝಿಗ್ ನಗರದಲ್ಲಿ, "Maxplanc Institute" ನಲ್ಲಿ, "evolutionary" ಅತಿಥಿವಿಜ್ಞಾನಿಯಾಗಿ, [೨೦೦೭]

[ಬದಲಾಯಿಸಿ] ಪುಣೆಯಲ್ಲಿ

ನಿಯೋಜಿತ ಕನ್ನಡದ ನೇರ ಸಂಬಂಧವಿಲ್ಲ. ಆದರೂ ಕನ್ನಡದಲ್ಲಿ ಅಪಾರಸಾಧನೆ, ಮಾಡಿದ್ದಾರೆ. ವಿಶಿಷ್ಟಸಾಧನೆ, ಬರವಣಿಗೆಯ ವೈಶಾಲ್ಯತೆ, ವ್ಯಾಪ್ತಿ, ಗಹನವಾದ ಇಂಗ್ಲೀಷ್ ನಲ್ಲಿ, ೧೫ ಪುಸ್ತಕಗಳನ್ನು ವಿಶ್ವವಿಖ್ಯಾತ ಪ್ರಕಟನಾಲಯಗಳು ಪ್ರಕಟಿಸಿವೆ. ಇದು ಅವರ ಕನ್ನಡಪರ ಚಟುವಟಿಕೆಯ ಪ್ರಥಮ ಭಾಗ. ಪುಣೆಯ, 'ಡೆಕ್ಕನ್ ಕಾಲೇಜ್' ನಲ್ಲಿ ಪ್ರಕಟವಾದ, ಮಾಹಿತಿ ಸಂಗ್ರಹ. 'ತುಳು', 'ಬೋಡೊ', 'ಥಂಕುರ್', 'ನಾಗಾ'', 'ಹವ್ಯಕ್,' 'ಕೊರಗ ಭಾಷೆ.'

[ಬದಲಾಯಿಸಿ] ಎರಡನೆಯ ಹಂತದಲ್ಲಿ, ಅವರು ರಚಿಸಿದ ವಿಚಾರಾತ್ಮಕ, ಹಾಗೂ ಅತ್ಯಂತ ಉಪಯುಕ್ತ ಕೃತಿರಚನೆ-'ಕನ್ನಡ ಭಾಷಾ ಚರಿತ್ರೆ'

'ಕನ್ನಡದ ಸರ್ವನಾಮಗಳು'

ಸೈದ್ಧಾಂತಿಕ, ಇಂಗ್ಲೀಷ್ ಕೃತಿಗಳು. ಇದರಲ್ಲಿ ಹಲವು ಕೃತಿಗಳು ಕನ್ನಡಕ್ಕೆ ಸಂಬಂಧಿಸಿವೆ. 'ಕನ್ನಡದ ಬಗ್ಗೆ ನೀವೇನು ಬಲ್ಲಿರಿ ? [೧೯೭೦] ಭಾರತೀಯ ಸ್ವರೂಪ. ಮತ್ತು ಬರಹ, ರೊ.ಗು.ಇಂದ್ರಜಾಲ' ಮುಂತಾದ ಬರಹ ಬಗ್ಗೆ ವೈಜ್ಞಾನಿಕ ಸಂಗತಿ. ಸರಳ ಸಂಪತ್ತಿನ ಭಾಷೆ ವಿವರಿಸುತ್ತಾರೆ. ಇವೆಲ್ಲಾ 'ಸುಧಾ ಪತ್ರಿಕೆ,' ಯಲ್ಲಿ ಪ್ರಕಟವಾದವು.

[ಬದಲಾಯಿಸಿ] 'ಕನ್ನಡ ಭಾಷೆ', ಮತ್ತು 'ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ'

'ಕನ್ನಡ ಬರಹವನ್ನು ಸರಿಪಡಿಸೋಣ'

'ಕನ್ನಡ ಭಾಷೆ, ಮತ್ತು ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ' ಶಂಕರ ಭಟ್ಟರ ತೀವ್ರ ಆಸಕ್ತಿಗಳಲ್ಲಿ ಒಂದು. ೧೯೭೮ ಪ್ರಕಟವಾದ, 'ಕನ್ನಡ ಭಾಷಾ ಚರಿತ್ರೆ' ಮೊದಲ ಪ್ರಯತ್ನ. ಕನ್ನಡಪದ ರಚನೆ. ಶೈಲಿ ನಿಖರವಾಗಿದೆ. ಶಾಸ್ತ್ರರಚನೆಗೆ ಸೂಕ್ತ. ಭಾಷೆಯ ಚಾರಿತ್ರಿಕ ಮುಖ, ಸಮಕಾಲೀನ ಆಸಕ್ತಿಗಳು, ಪರಸ್ಪರ ಪೂರಕ. ಶಂಕರ ಭಟ್ಟರು, ಅಂತರರಾಷ್ಟ್ರೀಯ ಖ್ಯಾತಿಯ ಭಾಶಾಶಾಸ್ತ್ರಜ್ಞರು. ಗ್ರಹಿಸಿ ಬಗ್ಗೆ ಜಾಣತನ. ಕನ್ನಡ ಭಾಷೆಯ ಸಾಹಿತ್ಯ, ಮತ್ತು ವ್ಯಾಕರಣ, ಛಂದಸ್ಸು, ಅಧ್ಯಯನ, ಇತಿಹಾಸದ ಮರುನಿರ್ಮಾಣ ಅವರ ಆಸಕ್ತಿಗಳಲ್ಲೊಂದು. ೧೯೭೮-'ಕನ್ನಡ ಭಾಷೆಯ ಚರಿತ್ರೆ' ಮೊದಲ ಹೆಜ್ಜೆ. ಇತ್ತೀಚೆಗೆ ರಚಿಸಿದ, ಪ್ರೌಢಪ್ರಯತ್ನ. ಇಲ್ಲಿ ಗಮನಿಸಬೇಕಾದದ್ದು ಸಂಸ್ಕೃತವನ್ನು ಅವಲಂಭಿಸದೇ, ದ್ರಾವಿಡಭಾಷೆಯ ವರ್ಗಕ್ಕೆ ಸಹಜವಾದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ. ಕನ್ನಡವಾಕ್ಯಗಳು [೧೯೭೮], ಕನ್ನಡ ಶಬ್ದರಚನೆ, [೧೯೯೯] [ಕನ್ನಡ ಸರ್ವನಾಮಗಳು], ಅನನ್ಯಕೃತಿಗಳೆಂದು ಗುರುತಿಸಲಾಗಿವೆ. ಅವರ ಇನ್ನೊಂದು ಅತ್ಯಂತ, ಮುಖ್ಯಕೃತಿ, 'ಕನ್ನಡಕ್ಕೆ ಬೇಕು, ಕನ್ನಡದ್ದೇ ವ್ಯಾಕರಣ' ಅವರ ಸಂಶೋಧನೆಗಳ ತಾತ್ವಿಕ ನೆಲೆಗಳು, ಅತ್ಯಂತ ಮುಖ್ಯ. ಇಲ್ಲಿ ಎರಡು ಮುಖ್ಯ ಆರ್ಯಮೂಲದ ಸಂಸ್ಕೃತ, ಇನ್ನೊಂದೆಡೆ ಪಾಶ್ಚಾತ್ಯಮೂಲದ ಇಂಗ್ಲೀಷ್-ಕನ್ನಡ ಭಾಷೆಯ ಸ್ವರೂಪ, ಹಾಗೂ ಇತಿಹಾಸಗಳಲ್ಲಿ, ಇಂತಹ ಅನನ್ಯತೆಯ ಅನ್ವೇಷಣೆಯನ್ನು ನಿರಂತರವಾಗಿ ಮಾಡುತ್ತಾಬಂದಿದ್ದಾರೆ. ಅವರ ತಾತ್ವಿಕ ನಿಲವುಗಳ ಫಲವಾಗಿ ಇವು ಹೊರಹೊಮ್ಮಿವೆ. ಕೆಳಗೆ ನಮೂದಿಸಿದ 'ಡಾ.ಶಂಕರ ಭಟ್ಟ'ರ ಪುಸ್ತಕಗಳು ಅತಿಮಹತ್ವದ್ದಾಗಿವೆ.

[ಬದಲಾಯಿಸಿ] ಒಟ್ಟು ೧೫, ಪುಸ್ತಕಗಳು, ಇಂಗ್ಲೀಷ್ ಭಾಷೆಯಲ್ಲಿವೆ. ಕೆಲವನ್ನು ಇಲ್ಲಿ ದಾಖಲಿಸಲಾಗಿದೆ

  • 'Sound Change',
  • 'Pronominalization,'
  • 'Referents of noun phrases'
  • 'Identification' 'Grammatical relations'
  • 'The adjectival category'
  • 'The prominance of tense aspect and Mood'
  • 'Introducing grammatical notions' 'Manipuri Grammar'
  • 'An introduction to linguistics,'

೧೫೦ ಸಂಸ್ಕೃತ ಪ್ರಬಂಧಗಳು. ಕನ್ನಡಕ್ಕೂ ಬಂದಿವೆ. ಕನ್ನಡ, ದ್ರಾವಿಡಸಂಸ್ಕೃತಿಯ ಒಡಲಿನಲ್ಲಿ ರೂಪಿತವಾದರೂ, ತನ್ನದೇಅದ ಪ್ರತ್ಯೇಕ ವಿಶಿಷ್ಠ ಅಸ್ತಿತ್ವ, ಮತ್ತು ಲಕ್ಷಣಗಳ ಭಾಷೆಯೆನ್ನುವುದನ್ನು ತೋರಿಸಿಕೊಡುವ ಪ್ರಯತ್ನ. ಹಾಗೆನೋಡಿದರೆ, ಅವರ ಪಾಂಡಿತ್ಯವನ್ನು ನಾವು ಸಂಸ್ಕೃತ ಮತ್ತು ಇಂಡೋ ಅರ್ಯನ್ ಭಾಷೆ ಗಳಲ್ಲಿ ಕಾಣಬಹುದು. ಆದರೆ ಅವು ದ್ರಾವಿಡಚಿಂತನೆಗೆ ಪೂರಕವಾಗಿವೆ. ಭಾಷೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಸಾಧನಗಳಲ್ಲೊಂದು. ಅದರ ಗ್ರಹಿಕೆ, ಮತ್ತು ಬಳಕೆಯ ಕ್ರಮಗಳು ತಪ್ಪುದಾರಿ ತುಳಿದಾಗ, ಸಂಸ್ಕೃತಿ ವಿಶಿಷ್ಟ ಸಂಗತಿಗಳನ್ನು ಕಳೆದುಕೊಳ್ಳುವ ಅಪಾಯವಿದೆ. "ನಾನು ಶಿಕ್ಷಣತಜ್ಞನಲ್ಲ ;ವೈಯ್ಯಾಕರಣಿ ಮಾತ್ರ," ಎಂದು ವಿನಯವಾಗಿ ಹೇಳುವ ಅವರು, ಭಾಷಾಶಿಕ್ಷಣಕ್ಕೆ ಹೊಸಆಯಾಮಗಳನ್ನು, ನೀಡುವ ಸಾಮರ್ಥ್ಯವಿರುವ ವಿದ್ವಾಂಸರಲ್ಲಿ, ಪ್ರಮುಖರು.

[ಬದಲಾಯಿಸಿ] 'ಡಾ.ಶಂಕರ ಭಟ್,' ಪ್ರತಿಪಾದಿಸುವ, ತಾತ್ವಿಕತೆಯ ಹಿನ್ನೆಲೆ

ಭಾಷೆಕಲಿಕೆ, ರಚನೆ ಹಾಗೂ ಬಳಕೆಯಲ್ಲಿ ಸಿದ್ಧಾಂತಗಳಿವೆ. ಅವುಗಳೆಲ್ಲಾ ಏಕಮತೀಯವಲ್ಲ. ವಿರೋಧಗಳೂ ಇವೆ. ಭಾಷಾಶಾಸ್ತ್ರಜ್ಞ ಅವನು ನಂಬಿರುವ, ಸಿದ್ಧಾಂತಗಳಮೇಲೆ, ಮನೋಧರ್ಮವನ್ನೂ ಅದು ಅವಲಂಭಿಸಿರುತ್ತದೆ. ಕನ್ನಡಭಾಷೆಗೆ ವ್ಯಾಕರಣದ ಅಸಾಧ್ಯತೆಗಳು ಖಂಡಿತ ಇವೆ. ಕನ್ನಡಭಾಷೆಯ ನಿರೂಪಣೆಯ ಸ್ವರೂಪ, ವ್ಯಾಪ್ತಿ ಮತ್ತು ನಿಯೋಗಗಳಲ್ಲಿ ಅತ್ಯಂತ ಭಿನ್ನತೆ ಕಾಣಬಹುದು. ಭಾಷೆಯ ಚಾರಿತ್ರಿಕ ಮತ್ತು ಮತ್ತು ಸಮಕಾಲೀನ ಸ್ಥಿತಿ, ಕನ್ನಡದ ಉಪಭಾಷೆಗಳಿಂದ ಲಭ್ಯವಾಗುವ ಮಹಿತಿಗಳನ್ನು ಕಡೆಗಣಿಸಿದ್ದೇವೆ. ಕಾಲೇಜ್ ನಲ್ಲಿ ಓದಿದನಂತರ ವ್ಯಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಅತಿ ಕಡಿಮೆ. ನಮ್ಮ ಶಿಕ್ಷಣವ್ಯವಸ್ಥೆಯೂ ಅದನ್ನು ತಿಳಿಸಿಲ್ಲ. 'ನಾವು ಕಲಿಸುತ್ತಿರುವ ವ್ಯಾಕರಣ, ವ್ಯಾಕರಣ ಅಲ್ಲ'; ಎಂಬ ಸಂಗತಿಯನ್ನು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಇದು ನಮ್ಮೆಲ್ಲರಿಗೆ ಚಿಂತನೆಗೆ ಎಡೆಮಾಡಿಕೊಡುವ ಸಂಗತಿಯಾಗಿದೆ.

[ಬದಲಾಯಿಸಿ] 'ಡಾ. ಶಂಕರ ಭಟ್'- 'ಶ್ರೇಷ್ಠ ಭಾಷಾಶಾಸ್ತ್ರಜ್ಞ', 'ಕನ್ನಡಭಾಷಾಪ್ರೇಮಿ', 'ಸಂಶೋಧಕ', ಹಾಗೂ ನಮ್ರಮಾನವತಾವಾದಿ',

ಕನ್ನಡವೂ, ಬೇರೆ ದ್ರಾವಿಡ ಭಾಷೆಭಾಷೆಗಳತರಹ, ಒಂದು ಭಾಷೆ. ಅನ್ಯಭಾಷೀಯ ಮಾದರಿಯನ್ನು ನಾವು ನಿರಾಕರಿಸಬೇಕು. ಜನಬಳಕೆಯ ಮಾದರಿಯನ್ನು ಅನುಸರಿಸಬೇಕು. ಗ್ರಹಿಸಿ ರೂಪಿಸಬೇಕು. ಕನ್ನಡದಲ್ಲಿ 'ಸಂಶೋಧನೆ' ಮತ್ತು 'ಕಂಪ್ಯೂಟರ್ ತಂತ್ರಜ್ಞಾನ'ಕ್ಕೆ ಅಳಡಿಸಲು, ವ್ಯಾಕರಣದ ಮರುರೂಪಣದ ಅಗತ್ಯತೆಯಿದೆ. ಅವರ ಪುಸ್ತಕ, ಈ ದಿಕ್ಕಿನಲ್ಲಿ ದಾರಿದೀಪ, ಹಾಗೂ ಮಾದರಿಸೂಚಕವೂ ಹೌದು. ೧೨ ಅಧ್ಯಾಯ. ಮೊದಲು, ಕೊನೆ, ಹಿನ್ನೆಲೆ ತಿಳಿಸುತ್ತವೆ. ಮೊದಲೇ ಬೇಕಾದ ಮುಂದಿನ ಸ್ವರೂಪಗಳನ್ನು ತಿಳಿಸುತ್ತವೆ. ಉಳಿದ ೧೦ ಅಧ್ಯಾಯಗಳು, ಸಂಧಿಕಾರ್ಯ, ಪದವರ್ಗ, ಪದರಚನೆ, ಸಮಾಸ, ಪುರುಷ, ಲಿಂಗ, ವಚನ, ವಿಭಕ್ತಿ, ಮತ್ತು ಕಾರಕಗಳು, ವಿಭಕ್ತಿಪಲ್ಲಟ, ಸರ್ವನಾಮ, ಸಂಖ್ಯಾವಾಚಕ, ಕ್ರಿಯಾಪದ, ಎಂಬ ಹಣೆಬರಹದಲ್ಲಿವೆ. ಕೃತಿ ವ್ಯಾಪಕವಾದ ಚರ್ಚೆಗೆ, ಅನುವುಮಾಡಿಕೊಡುತ್ತದೆ. ನಿರ್ದಿಷ್ಟ ಸಂಸ್ಕೃತಿಯ ಚೌಕಟ್ಟಿನಲ್ಲಿ ಅಭ್ಯಾಸಮಾಡುವಾಗ, ಕೆಲವು ಬಳಕೆಗಳು ತಪ್ಪುಗ್ರಹಿಕೆ, ತೀರ್ಮಾನಕ್ಕೆ ದಾರಿಮಾಡಿದೆ. ಸಾಹಿತ್ಯವಿಮರ್ಶೆ, ಜಾನಪದ ಅಧ್ಯಯನ, ಸಂಸ್ಕೃತಿಯ ಅದ್ಯತೆ, ಸ್ತ್ರೀವಾದಿ ಚಿಂತನೆಗಳು, ಮುಂತಾದ ವಲಯಗಳು ಸವಾಲನ್ನು ಎದುರಿಸುತ್ತವೆ. ಶಂಕರ ಭಟ್ಟ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾಕಾರರು. ನಮ್ಮ ವಿದ್ವತ್ ಪ್ರಪಂಚ, ವಿಶ್ವವಿದ್ಯಾಲಯಗಳು, ಭಾಷಾವಿಭಾಗಗಳು ಗ್ರಹಿಸಿ ಬಳಸುವ ಕೆಲಸಮಾಡಬೇಕು.

[ಬದಲಾಯಿಸಿ] ಉಪಯುಕ್ತ ಕೊಂಡಿ

-'ತವರುಮನೆಯಲ್ಲೇ ಆಗುಂತಕ'-'ಡಿ.ಎನ್.ಶಂಕರಭಟ್,' ಪು.೧೭೧, "ನಮಸ್ಕಾರ," 'ಡಾ.ಎಚ್.ಎಸ್.ರಾಘವೇಂದ್ರ ರಾವ್'

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು
ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ