ಡಾ. ರೆಡ್ಡೀ'ಸ್‌ ಲ್ಯಾಬೋರೇಟರೀಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dr. Reddy's Laboratories Ltd.
ಸಂಸ್ಥೆಯ ಪ್ರಕಾರPublic
ಸ್ಥಾಪನೆ೧೯೮೪
ಮುಖ್ಯ ಕಾರ್ಯಾಲಯHyderabad, ಆಂಧ್ರ ಪ್ರದೇಶ, India
ಪ್ರಮುಖ ವ್ಯಕ್ತಿ(ಗಳು)Anji Reddy, Chairman
GV Prasad, CEO
ಉದ್ಯಮPharmaceuticals
ಆದಾಯ $೧.೫೬೫ billion (೨೦೧೦)
ನಿವ್ವಳ ಆದಾಯ $೨೩ million (೨೦೧೦)
ಉದ್ಯೋಗಿಗಳು೧೩,೪೫೫ (೨೦೧೦)
ಜಾಲತಾಣwww.drreddys.com

ಡಾ. ರೆಡ್ಡೀ'ಸ್‌ ಲ್ಯಾಬೋರೇಟರೀಸ್‌ ಲಿ. (NSEDRREDDY, ಬಿಎಸ್‌ಇ: 500124, NYSERDY, NASDAQRDY)ಅನ್ನು ೧೯೮೪ರಲ್ಲಿ ಡಾ. ಕೆ. ಅಂಜಿ ರೆಡ್ಡಿಯವರು ಸ್ಥಾಪಿಸಿದರು. ಅದು ಈಗ ಭಾರತದ ಎರಡನೇ ದೊಡ್ಡ ಔಷಧಿ ಕಂಪನಿ (ಫಾರ್ಮಾಸ್ಯುಟಿಕಲ್ ಕಂಪನಿ) ಆಗಿದೆ. ಡಾ. ಅಂಜಿ ರೆಡ್ಡಿಯವರು ಹೈದರಾಬಾದ್‌ನಲ್ಲಿರುವ ಸಾರ್ವಜನಿಕ ಒಡೆತನದ ಭಾರತೀಯ ಔಷಧ ಮತ್ತು ಔಷಧೀಯ ಲಿಮಿಟೆಡ್‌ನಲ್ಲಿ ಕೆಲಸ ಮಾಡಿದ್ದರು. ರೆಡ್ಡೀ'ಸ್‌ ಭಾರತ ಮತ್ತು ಹೊರದೇಶಗಳಲ್ಲಿ ವಿಶಾಲ ಶ್ರೇಣಿಯ ಔಷಧೀಯ ವಸ್ತುಗಳ ತಯಾರಕರು ಮತ್ತು ಮಾರಾಟಗಾರರು. ಕಂಪನಿಯು ಸುಮಾರು ೧೯೦ ಔಷಧವಸ್ತುಗಳು, ಔಷಧ ತಯಾರಿಕೆಗೆ ೬೦ ಕ್ರಿಯಾಶೀಲ ಔಷಧೀಯ ಅಂಶಗಳು, ರೋಗನಿದಾನದ (ಡಯಗ್ನೊಸ್ಟಿಕ್‌) ಕಿಟ್‌ಗಳು, ಕ್ರಿಟಿಕಲ್‌ ಕೇರ್‌ ಮತ್ತು ಜೈವಿಕತಂತ್ರಜ್ಞಾನದ ಉತ್ಪನ್ನಗಳನ್ನು ತಯಾರಿಸುತ್ತದೆ.

ಡಾ. ರೆಡ್ಡೀ'ಸ್ ಮೊದಲು ಭಾರತೀಯ ಔಷಧ ತಯಾರಕರಿಗೆ ಪೂರೈಕೆದಾರರಾಗಿ ಉದ್ಯಮವನ್ನು ಆರಂಭಿಸಿದರು. ಆದರೆ ಬಹುಬೇಗನೆ ಕಡಿಮೆ-ನಿಯಂತ್ರಣದ ಬೇರೆ ಮಾರುಕಟ್ಟೆಗಳಿಗೆ ರಫ್ತು ಮಾಡಲಾರಂಭಿಸಿದರು. ಯು.ಎಸ್‌. ಫುಡ್ ಆಂಡ್ ಡ್ರಗ್ ಅಡ್ಮಿನ್‌‌ಸ್ಟ್ರೇಶನ್‌ (ಎಫ್‌ಡಿಎ) ಅಂತಹ ಔಷಧ ಪರವಾನಗಿ ಅಂಗದಿಂದ ತಯಾರಿಕಾ ಘಟಕಕ್ಕೆ ಮಂಜೂರಾತಿ ಪಡೆಯಲು ಸಮಯ ಮತ್ತು ಹಣ ಖರ್ಚು ಮಾಡಲು ಅಸಾಧ್ಯವಾದ ಇಂತಹ ಮಾರುಕಟ್ಟೆಗಳಿಗೆ ಡಾ. ರೆಡ್ಡೀ'ಸ್ ರಫ್ತು ಮಾಡಲಾರಂಭಿಸಿದರು. ೧೯೯೦ರ ಆರಂಭದಲ್ಲಿ, ಈ ಅನಿಯಂತ್ರಿತ ಮಾರುಕಟ್ಟೆಗಳಿಂದ ದೊರೆತ ಲಾಭ ಮತ್ತು ವಿಸ್ತಾರಗೊಂಡ ಮಾರುಕಟ್ಟೆ ವ್ಯಾಪ್ತಿಯಿಂದಾಗಿ ಕಂಪನಿಗೆ ಔಷಧ ನಿಯಂತ್ರಕರಿಂದ ತಮ್ಮ ಔಷಧಸೂತ್ರಗಳಿಗೆ ಮಂಜೂರಾತಿ ಪಡೆಯುವುದರ ಮೇಲೆ ಮತ್ತು ಬೃಹತ್ ಔಷಧ ತಯಾರಿಕಾ ಘಟಕಗಳ ಮೇಲೆ ಗಮನ ಕೇಂದ್ರೀಕರಿಸಲು ಸಾದ್ಯಮಾಡಿತು. ಇದು ಅವರಿಗೆ ಕ್ರಮೇಣ ಯುಎಸ್‌ ಮತ್ತು ಯೂರೋಪ್‌ನಂತಹ ನಿಯಂತ್ರಿತ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಾಧ್ಯಮಾಡಿತು.

೨೦೦೭ರ ಸುಮಾರಿಗೆ, ಡಾ. ರೆಡ್ಡೀ'ಸ್ ಭಾರತದಲ್ಲಿ ಕ್ರಿಯಾಶೀಲ ಔಷಧೀಯ ಅಂಶಗಳನ್ನು ಉತ್ಪಾದಿಸುವ ಆರು ಎಫ್‌ಡಿಎ-ಘಟಕಗಳನ್ನು ಮತ್ತು ಏಳು ಎಫ್‌ಡಿಎ-ತಪಾಸಣೆ ನಡೆಸಿದ ಮತ್ತು ಐಎಸ್‌ಒ ೯೦೦೧ (ಗುಣಮಟ್ಟ) ಮತ್ತು ISO ೧೪೦೦೧ (ಪರಿಸರ ನಿರ್ವಹಣೆ) ಪ್ರಮಾಣೀಕೃತ ಘಟಕಗಳನ್ನು ಹೊಂದಿದ್ದವು. ಇವು ಪೇಶೆಂಟ್‌-ರೆಡಿ ಮೆಡಿಕೇಶನ್‌ಗಳ ಐದು ಘಟಕಗಳನ್ನು ಹೊಂದಿದ್ದು, ಅದರಲ್ಲಿ ಐದು ಭಾರತದಲ್ಲಿ ಮತ್ತು ಎರಡು ಬ್ರಿಟನ್ನಿನಲ್ಲಿ ಇವೆ.[೧]

೨೦೧೦ರಲ್ಲಿ, ಕುಟುಂಬದ ನಿಯಂತ್ರಣದಲ್ಲಿದ್ದ ಡಾ. ರೆಡ್ಡೀಸ್‌ [೨] ಭಾರತದಲ್ಲಿರುವ ತಮ್ಮಕೆಲವು ವಿಶಿಷ್ಠ ಉದ್ಯಮಗಳನ್ನು ಅಮೆರಿಕದ ಬೃಹತ್ ಔಷಧ ಕಂಪನಿಯಾದ ಫಿಜರ್‌ಗೆ ಮಾರಾಟ ಮಾಡುವ ಮಾತುಕತೆ ನಡೆಯುತ್ತಿದೆ ಎಂಬುದನ್ನು ನಿರಾಕರಿಸಿದರು[೩]. ಫಿಜರ್‌ ಮಾರಾಟ ಮಾಡುತ್ತಿದ್ದ ಆಂಟಿ-ಕೊಲೆಸ್ಟೆರಾಲ್‌ ಔಷಧ, ಅಟೊರ್ವಸ್ಟಾಟಿನ್‌ ನ ಜಾತಿವಿಶಿಷ್ಟ (ಜೆನೆರಿಕ್‌) ಆವೃತ್ತಿಯಾಗಿದ್ದ ಲಿಪಿಟರ್‌ ಅನ್ನು ತಾನು ಉತ್ಪಾದಿಸುವ ಉದ್ದೇಶವಿದೆ ಎಂದು ಡಾ ರೆಡ್ಡೀಸ್‌ ಪ್ರಕಟಿಸಿದ ನಂತರ ಪೇಟೆಂಟ್‌ ಉಲ್ಲಂಘನೆ ಎಂದು ಆರೋಪಿಸಿ, ಕಂಪನಿಯ ಮೇಲೆ ಮೊಕದ್ದಮೆ ಹೂಡಲಾಗಿತ್ತು.[೪][೫] ರೆಡ್ಡೀಸ್‌ ಅದಾಗಲೇ ಯುಕೆ ಫಾರ್ಮಾಸ್ಯುಟಿಕಲ್ಸ್ ಬಹುರಾಷ್ಟ್ರೀಯ ಕಂಪನಿ ಗ್ಲಾಕ್ಸೋ ಸ್ಮಿತ್‌ಕ್ಲಿನ್ ಜೊತೆ ವ್ಯಾಪಾರೀಸಂಬಂಧ ಹೊಂದಿದ್ದರು.[೬]

ಡಾ. ರೆಡ್ಡೀ'ಸ್‌ ಮತ್ತು ನಿಯಂತ್ರಕಗಳು[ಬದಲಾಯಿಸಿ]

ಜೆನೆರಿಕ್ ಗೋಲ್ಡ್‌ಮೈನ್‌[ಬದಲಾಯಿಸಿ]

ಬಹುತೇಕ ಒಇಸಿಡಿ ಸದಸ್ಯ ರಾಜ್ಯಗಳಲ್ಲಿ ಔಷಧ ಬೆಲೆಗಳ ಬೆಲೆ ಅಧಿಕವಿದೆ. ಇದರಿಂದಾಗಿ , ಬ್ರಿಟನ್‌ನಲ್ಲಿ ಆರೋಗ್ಯ ಸೇವೆಗಳು ಔಷಧಗಳ ಮೂಲ ಬ್ರಾಂಡ್‌ಗಳಿಗೆ ಬದಲಾಗಿ ಜಾತಿವಿಶಿಷ್ಟ (ಜೆನೆರಿಕ್‌)) ಆವೃತ್ತಿಗಳನ್ನು ಅವಲಂಬಿಸುವಂತೆ ದೇಶದ ಆರೋಗ್ಯ ಇಲಾಖೆಯು ರಾಷ್ಟ್ರೀಯ ಆರೋಗ್ಯ ಸೇವೆ (ನ್ಯಾಶನಲ್‌ ಹೆಲ್ತ್‌ ಸರ್ವಿಸ್‌)ಯ ವೈದ್ಯರಿಗೆ ಸಲಹೆ ಮಾಡಿದೆ. ಅಮೆರಿಕದಲ್ಲಿ ೧೯೮೪ರ ಸುಮಾರಿಗೆ ಹ್ಯಾಚ್‌-ವ್ಯಾಕ್ಸ್‌ಮನ್ ಕಾಯಿದೆ ಅಥವಾ ಔಷಧ ಬೆಲೆ ಸ್ಪರ್ಧೆ ಮತ್ತು ಪೇಟೆಂಟ್‌ ಕರಾರುಗಳ ಪುನಾಉಳಿಸಿಕೊಳ್ಳುವ ಕಾಯಿದೆ[೭] ಮತ್ತು ೧೯೯೦ರಲ್ಲಿ ಜರುಗಿದ ಆರ್ಥಿಕ ಉದಾರೀಕರಣದ[೮] ಪರಿಣಾಮದಿಂದಾಗಿ, 'ತೃತೀಯ ವಿಶ್ವ'ದ ಔಷಧೀಯ ಕಂಪನಿಗಳಿಗೆ, ತಮ್ಮ ರಿವರ್ಸ್‌-ಎಂಜಿನೀರ್‌ ಸಾಮರ್ಥ್ಯವನ್ನು ಬಳಸಿಕೊಂಡು ಹೆಚ್ಚು ಲಾಭದಾಯಕ ಮಾರುಕಟ್ಟೆಗಳನ್ನು ಪ್ರವೇಶಿಸುವ ಅವಕಾಶವನ್ನು ಒದಗಿಸಿತು. ೧೯೯೭ರಲ್ಲಿ, ಯು.ಎಸ್‌. ಎಫ್‌ಡಿಎಯು ಜೆನೆರಿಕ್ ಕಂಪನಿಗಳಿಗೆ ಬ್ರಾಂಡ್‌ ಔಷಧ ತಯಾರಕರನ್ನು ನ್ಯಾಯಾಲಕ್ಕೆಳೆಯಲು ಸ್ಪರ್ಧೆಯನ್ನು ಹುಟ್ಟುಹಾಕುವ ಒಂದು ಕರೆಯಲ್ಲಿ ಪ್ಯಾರಾ ೪ ಫೈಲಿಂಗ್ ಲಾ ಎಂಬುದನ್ನು ಪರಿಚಯಿಸುವ ಮೂಲಕ ಉತ್ತೇಜಕಗಳನ್ನು ಸೃಷ್ಟಿಸಿತು. ಈ ಕಾಯಿದೆಯು ಜನೆರಿಕ್ ತಯಾರಿಕರಿಗೆ ಕಾಲಮಿತಿ ಮುಗಿಯುವವರೆಗೆ ಕಾಯುವುದರ ಬದಲಿಗೆ ಇರುವ ಪೇಟೆಂಟ್‌ಗಳಿಗೆ ತಕರಾರು ಹೂಡುವವರಿಗೆ ಪುರಸ್ಕಾರ ನೀಡಿತು.

ಭಾರತ: ಪೇಟೆಂಟ್‌ಗಳು ಮತ್ತು ಲಾಭಗಳು[ಬದಲಾಯಿಸಿ]

ಭಾರತವು ಸ್ವತಂತ್ರಗೊಂಡು ೬೦ ವರ್ಷಗಳಲ್ಲಿ, ದೇಶೀಯ ಔಷಧೀಯ ಉದ್ಯಮವು ಮುಖ್ಯವಾಗಿ ನಿಯಂತ್ರಣಗಳಿಂದ ರೂಪುಪಡೆದಿತ್ತು. ಆರಂಭದಲ್ಲಿ, ಬಹುರಾಷ್ಟ್ರೀಯ ಕಂಪನಿಗಳು ಔಷಧೀಯ ಉತ್ಪನ್ನಗಳ ಮೇಲೆ ಬಹುತೇಕ ಏಕಸ್ವಾಮ್ಯವನ್ನು ಹೊಂದಿದ್ದವು. ಅವು ಭಾರತದಲ್ಲಿ ಔಷಧಗಳನ್ನು ರಫ್ತು ಮಾಡುತ್ತಿದ್ದವು ಮತ್ತು ಸಂಪೂರ್ಣ ಫಾರ್ಮುಲೇಶನ್‌ಗಳನ್ನು ಮಾರಾಟ ಮಾಡುತ್ತಿದ್ದವು, ಅದರಲ್ಲಿಯೂ ಮುಖ್ಯವಾಗಿ ಕಡಿಮೆ ಬೆಲೆಯ ಜೆನೆರಿಕ್ ಔಷಧಗಳು ಮತ್ತು ಕೆಲವು ಅಧಿಕ ಬೆಲೆಯ ವಿಶೇಷ ಔಷಧಗಳನ್ನು ಪೂರೈಸುತ್ತಿದ್ದವು. ಸರ್ಕಾರವು ಸಿದ್ಧ ಉತ್ಪನ್ನಗಳನ್ನು ರಫ್ತು ಮಾಡಿಕೊಳ್ಳುವುದನ್ನು ತಡೆಯಲು ಒತ್ತಡ ಹಾಕತೊಡಗಿದಾಗ, ಬಹುರಾಷ್ಟ್ರೀಯ ಕಂಪನಿಗಳು ಫಾರ್ಮುಲೇಟಿಂಗ್ ಘಟಕಗಳನ್ನು ಸ್ಥಾಪಿಸಿದವು ಮತ್ತು ಬೃಹತ್‌ ಪ್ರಮಾಣದ ಔಷಧಗಳನ್ನು ರಫ್ತು ಮಾಡುವುದನ್ನು ಮುಂದುವರೆಸಿದವು.

೧೯೬೦ರಲ್ಲಿ, ಭಾರತ ಸರ್ಕಾರವು ಬೃಹತ್ ಪ್ರಮಾಣದ ಔಷಧಗಳ ಉತ್ಪಾದನೆಗೆ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಆಂಟಿಬಯಾಟಿಕ್ಸ್ ಲಿ. ಮತ್ತು ಭಾರತೀಯ ಔಷಧಗಳು ಮತ್ತು ಔಷಧೀಯs ಲಿ. (ಇಂಡಿಯನ್ ಡ್ರಗ್ಸ್ ಆಂಡ್ ಫಾರ್ಮಾಸ್ಯುಟಿಕಲ್ ಲಿ.) ಸ್ಥಾಪನೆಯೊಂದಿಗೆ ಅಡಿಪಾಯ ಹಾಕಿತು. ಆದರೂ, ಬಹುರಾಷ್ಟ್ರೀಯ ಕಂಪನಿಗಳು ತಮ್ಮ ತಾಂತ್ರಿಕ ಪರಿಣತಿ, ಆರ್ಥಿಕ ಸಾಮರ್ಥ್ಯ ಮತ್ತು ಒಂದು ಮಾರುಕಟ್ಟೆಯಿಂದ ಇನ್ನೊಂದಕ್ಕೆ ಸಾಗುವ ವಿನೂತನ ಕ್ರಮಗಳಿಂದಾಗಿ ಮುಂಚೂಣಿಯಲ್ಲಿದ್ದವು. ಮೂಲ ಸಂಶೋಧನೆಗೆ ತಗಲುವ ಅಪಾರ ವೆಚ್ಚ, ಅಗತ್ಯವಿರುವ ಅತ್ಯಾಧುನಿಕ ವೈಜ್ಞಾನಿಕ ಜ್ಞಾನ ಮತ್ತು ಹಣಕಾಸು ಆಯ್ಕೆಯ ಕೊರತೆ, ಈ ಎಲ್ಲವೂ ಖಾಸಗಿ-ವಲಯದ ಭಾರತೀಯ ಕಂಪನಿಗಳ ವಿರುದ್ಧ ಕೆಲಸ ಮಾಡಿದವು.

ಈ ಪರಿಸ್ಥಿತಿಯು೧೯೭೦ರ ಭಾರತೀಯ ಪೇಟೆಂಟ್ ಕಾಯಿದೆಯೊಂದಿಗೆ ಬದಲಾಯಿತು. ಆಹಾರ ಮತ್ತು ಔಷಧೀಯ ವಸ್ತುಗಳಲ್ಲಿ ಬಳಸಿದ ವಸ್ತುಗಳು ಕಾನೂನುರೀತ್ಯ ನೀಡಿದ ಉತ್ಪನ್ನ ಪೇಟೆಂಟ್‌ಗಳಲ್ಲ. ಪ್ರಕ್ರಿಯೆ ಪೇಟೆಂಟ್‌ಗಳು ನೀಡಿದ ದಿನಾಂಕದಿಂದ ಐದು ವರ್ಷದ ಅವಧಿಯವರೆಗೆ ಅಥವಾ ಫೈಲ್ ಮಾಡಿದ ಏಳು ವರ್ಷದ ಅವಧಿಯವರೆಗೆ, ಯಾವುದೋ ಮೊದಲೋ, ಆವರೆಗೆ ಅಸ್ತಿತ್ವದಲ್ಲಿರುತ್ತವೆ. ಪ್ರಕ್ರಿಯೆ ಮಾರ್ಪಾಡುಗಳು ಈಡೇರಿಸಲು ಸುಲಭ ಮತ್ತು ದೇಶೀಯ ತಯಾರಕರ ತ್ವರಿತಗತಿಯ ಒಳಹರಿವು ಇತ್ತು . ಈ ಕಂಪನಿಗಳು ಸಾಧಾರಣವಾಗಿ ಸಗಟು ಔಷಧಗಳಿಂದ ಆರಂಭಿಸಿ, ಕ್ರಮೇಣ ಸಂಪೂರ್ಣ ಔಷಧಿ ತಯಾರಿಗೆ ತೊಡಗುತ್ತವೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಮಾತೃ ಕಂಪನಿಗಳ ಉತ್ಪನ್ನ ಶ್ರೇಣಿಗೆ ನಿರ್ಬಂಧಗೊಂಡಿರುತ್ತವೆ, ಆದರೆ ಭಾರತೀಯ ತಯಾರಕರು ಹೆಚ್ಚುಕಡಿಮೆ ಏನಾದರೂ ಮಾಡಬಹುದು. ಉತ್ಪನ್ನ ಪೇಟೆಂಟ್ ರಾಯಧನವನ್ನು ಕೊಡದೇ ಇರುವುದು ಸ್ಥಳೀಯ ತಯಾರಕರ ಖರ್ಚನ್ನು ತಗ್ಗಿಸುತ್ತದೆ ಮತ್ತು ಭಾರತೀಯ ಉತ್ಪಾದಕರ ಏಳಿಗೆಗೆ ಸಹಾಯ ಮಾಡಿತು.

ಇದಾದ ಸ್ವಲ್ಪ ಸಮಯದಲ್ಲಿಯೇ, ಔಷಧಗಳ ಬೆಲೆ ನಿಯಂತ್ರಣಾ ಆದೇಶವು ಕೆಲವು ಬೃಹತ್-ಬಳಕೆಯ ಸೂತ್ರಗಳ ಬೆಲೆಯ ಮೇಲೆ ಗರಿಷ್ಠ ಮಿತಿಯನ್ನು ಹೇರಿತು. ಅಷ್ಟು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದು ಸ್ವದೇಶೀ ಮಾರುಕಟ್ಟೆಯಲ್ಲಿ ಅತೃಪ್ತಿಯನ್ನು ಉಂಟು ಮಾಡುವುದರಿಂದ, ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಹೊಸ ಉತ್ಪನ್ನಗಳ ಬಿಡುಗಡೆಯನ್ನು ನಾಟಕೀಯವಾಗಿ ನಿಲ್ಲಿಸಿದವು. ಇದು ಭಾರತದ ದೇಶೀಯ ಕಂಪನಿಗಳಿಗೆ ವರದಾನವಾಯಿತು.

೧೯೭೦ರ ಕೊನೆಯ ಭಾಗದಲ್ಲಿ ವಿದೇಶೀ ವಿನಿಮಯ ನಿಯಂತ್ರಕಗಳು ಕಾಯಿದೆ ಅಡಿಯಲ್ಲಿ, ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಉದ್ಯಮಗಳಲ್ಲಿ ತಮ್ಮ ಪಾಲನ್ನು ಶೇ. ೪೦ಕ್ಕೆ ಕಡಿಮೆಗೊಳಿಸಬೇಕಾಯಿತು ಅಥವಾ ಕೆಲವು ರಫ್ತು ಬಾಧ್ಯತೆಗಳಿಗೆ ಬದ್ಧರಾಗಬೇಕಾಯಿತು ಮತ್ತು ತಮ್ಮ ಈಕ್ವಿಟಿಯನ್ನು ಶೇ. ೫೧ರಷ್ಟು ಇಟ್ಟುಕೊಳ್ಳಬೇಕಾಯಿತು. ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈ ಪರಿಸ್ಥಿತಿಯಲ್ಲಿ ಭಾರತದಲ್ಲಿ ವ್ಯಾಪಾರ ಮಾಡದೇ ಇರುವುದಕ್ಕೆ ಆದ್ಯತೆ ನೀಡಿದವು - ಇದು ಭಾರತದ ಔಷಧೀಯ ಉದ್ಯಮಕ್ಕೆ ಮತ್ತೊಂದು ವರದಾನವಾಯಿತು.

೧೯೮೬ರಲ್ಲಿ, ರೆಡ್ಡೀ'ಸ್ ಕಂಪನಿಯು ಬ್ರಾಂಡ್‌ ಔಷಧ ತಯಾರಿಕೆಯ ಕಾರ್ಯಾರಂಭ ಮಾಡಿತು. ಒಂದೇ ವರ್ಷದಲ್ಲಿ ರೆಡ್ಡೀ'ಸ್ ನೋರಿಲೆಟ್‌ ಉತ್ಪನ್ನವನ್ನು ಬಿಡುಗಡೆ ಮಾಡಿದರು. ಅದು ಭಾರತದಲ್ಲಿ ರೆಡ್ಡೀ'ಸ್ ಕಂಪನಿಯ ಮೊದಲ ಮಾನ್ಯತೆ ಪಡೆದ ಬ್ರಾಂಡ್ ಆಗಿದೆ. ಆದರೆ ಅತ್ಯುತ್ಕೃಷ್ಟ ತಂತ್ರಜ್ಞಾನದಿಂದಾಗಿ, ರೆಡ್ಡೀ'ಸ್‌ನ ಒಮೆಜ್‌ ಉತ್ಪನ್ನ ಯಶಸ್ವಿಯಾಯಿತು. ಇದು ಒಮೆಪ್ರಜೋಲ್‌ನ ಬ್ರಾಂಡ್‌ ಉತ್ಪನ್ನವಾಗಿದ್ದು, ಅಲ್ಸರ್ ಮತ್ತು ರಿಫ್ಲಕ್ಸ್‌ ಓಸೊಫಗಟಿಸ್‌ಗೆ ಔಷಧವಾಗಿ ಬಳಸಲಾಗುತ್ತದೆ. ಈ ಉತ್ಪನ್ನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಅದೇ ವೇಳೆಗೆ ಬೇರೆ ಬ್ರಾಂಡ್‌ಗಳ ಅರ್ಧದಷ್ಟು ಬೆಲೆಗೆ ಬಿಡುಗಡೆ ಮಾಡಲಾಯಿತು.

ನಂತರ ಒಂದೇ ವರ್ಷದಲ್ಲಿ ರೆಡ್ಡೀ'ಸ್ ಯೂರೋಪ್‌ಗೆ ಔಷಧಿಗಳಿಗಾಗಿ ಕ್ರಿಯಾಶೀಲ ಘಟಕಗಳನ್ನು ರಫ್ತು ಮಾಡುತ್ತಿದ್ದ ಪ್ರಥಮ ಭಾರತೀಯ ಕಂಪನಿಯಾಯಿತು. ೧೯೮೭ರಲ್ಲಿ, ಬೇರೆ ತಯಾರಕರಿಗೆ ಔಷಧೀಯ ಘಟಕಗಳ ಪೂರೈಕೆದಾರರಾಗಿದ್ದ ರೆಡ್ಡೀ'ಸ್ ಕಂಪನಿಯು ಔಷಧೀಯ ಉತ್ಪನ್ನಗಳ ತಯಾರಕ ಕಂಪನಿಯಾಗಿ ಹೊರಹೊಮ್ಮಿತು.

ಭಾರತದಿಂದ ಬೇರೆಡೆ ಪ್ರಯಾಣ[ಬದಲಾಯಿಸಿ]

ಮೊದಲು ರೆಡ್ಡೀಸ್ ಕಂಪನಿಯು ರಷ್ಯಾ ಮಾರುಕಟ್ಟೆ ಪ್ರವೇಶಿಸಿತು. ಅಲ್ಲಿಯ ಔಷಧೀಯ ಉತ್ಪನ್ನಗಳ ಬೃಹತ್ ತಯಾರಕರಾದ ಬಯೊಮೆಡ್ ಜೊತೆ ೧೯೯೨ರಲ್ಲಿ ಜಂಟಿ ಯೋಜನೆಯಲ್ಲಿ ಉದ್ಯಮ ಸ್ಥಾಪಿಸಿತು. ನಂತರ ೧೯೯೫ರಲ್ಲಿ ಹಗರಣವೊಂದರ ಆಪಾದನೆಗೆ ಸಿಕ್ಕು, ರೆಡ್ಡೀ'ಸ್ ಲ್ಯಾಬ್ಸ್‌ನ ಮಾಸ್ಕೋ ಶಾಖೆಯ ಕಾರ್ಯಗಳಿಂದಾಗಿ ಸಾಕಷ್ಟು ಸಾಮಗ್ರಿ ನಷ್ಟವಾಯಿತು ಮತ್ತು ಈ ಜಂಟಿ ಯೋಜನೆಯನ್ನು ಬಯೋಮೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ[೯] ಸಹಾಯದಿಂದ ಕ್ರೆಮ್ಲಿನ್-ಸ್ನೇಹಿ ಸಿಸ್ಟೆಮಾ ಗ್ರೂಪ್‌ಗೆ ಮಾರಾಟ ಮಾಡಲಾಯಿತು. ನಂತರ ೨೦೦೨ರಲ್ಲಿ ಇಡೀ ಕಂಪನಿಯನ್ನು ರೆಡ್ಡೀಸ್ ಕೊಂಡುಕೊಂಡಿತು.

೧೯೯೩ರಲ್ಲಿ, ರೆಡ್ಡೀ'ಸ್ ಮಧ್ಯ-ಪ್ರಾಚ್ಯದಲ್ಲಿ ಜಂಟಿ ಯೋಜನೆಯನ್ನು ಆರಂಭಿಸಿತು ಮತ್ತು ಅಲ್ಲಿ ಹಾಗೂ ರಷ್ಯಾದಲ್ಲಿ ಎರಡು ಔಷಧ ಫಾರ್ಮುಲೇಶನ್ ಘಟಕಗಳನ್ನು ಸ್ಥಾಪಿಸಿತು. ರೆಡ್ಡೀ'ಸ್ ಸಗಟು ಔಷಧಗಳನ್ನು ಈ ಫಾರ್ಮುಲೇಶನ್ ಘಟಕಗಳಿಗೆ ರಫ್ತು ಮಾಡಿತು, ಅವು ಇವುಗಳನ್ನು ಅಂತಿಮ ಉತ್ಪನ್ನಗಳಾಗಿ ಪರಿವರ್ತಿಸಿದವು. ೧೯೯೪ರಲ್ಲಿ, ರೆಡ್ಡೀ'ಸ್ ಕಂಪನಿಯು ಅತ್ಯಾಧುನಿಕ ತಯಾರಿಕಾ ಘಟಕವನ್ನು ನಿರ್ಮಿಸಿ, ಅಮೆರಿಕದ ಜೆನೆರಿಕ್ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿತು.

ರೆಡ್ಡೀ'ಸ್ ಕಂಪನಿಯ ಹೊಸ ಔಷಧ ಶೋಧವು, ಔಷಧಗಳ ಶೋಧದ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ಪಾಶ್ಚಾತ್ಯ ಮಾರುಕಟ್ಟೆಗಳಲ್ಲಿ ವಿಶಿಷ್ಟ ಜೆನೆರಿಕ್‌ ಉತ್ಪನ್ನಗಳನ್ನು ಗುರಿಯಾಗಿ ಇಟ್ಟುಕೊಳ್ಳುವುದನ್ನು ಒಳಗೊಂಡಿತ್ತು. ವಿಶಿಷ್ಟ ಔಷಧಗಳ ಅಭಿವೃದ್ಧಿಯು ಹೊಸ ರಾಸಾಯನಿಕ ಸಂಯುಕ್ತಗಳನ್ನು ಅಭಿವೃದ್ಧಿಪಡಿಸುವಲ್ಲಿ ಒಂದು ಬಹುಮುಖ್ಯ ಕೊಂಡಿ ಎಂದರೆ ಎನ್‌ಸಿಇ ಪ್ರಯತ್ನದಲ್ಲಿ ಒಳಗೊಂಡ ಎಲ್ಲ ಅಂಶಗಳು, ಅಂದರೆ ಪ್ರಯೋಗಾಲಯದಲ್ಲಿ ಆವಿಷ್ಕಾರ, ಸಂಯುಕ್ತವನ್ನು ಅಭಿವೃದ್ಧಿಪಡಿಸುವುದು, ಮಾರುಕಟ್ಟೆಗೆ ಸೇಲ್ಸ್ ತಂಡವನ್ನು ಕಳುಹಿಸುವುದು ಇತ್ಯಾದಿ ಎಲ್ಲವೂ, ಒಂದು ವಿಶಿಷ್ಟ ಔಷಧದ ಅಭಿವೃದ್ಧಿಯಲ್ಲಿ ವಿವಿಧ ಹಂತಗಳಾಗಿವೆ. ರೆಡ್ಡೀ'ಸ್ ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ಪ್ರಯೋಗಾಲಯಗಳನ್ನು ನಿರ್ಮಿಸಲು ಅಪಾರವಾಗಿ ಹಣಕಾಸು ಹೂಡಿಕೆ ಮಾಡಿತು. ಜೊತೆಗೆ ವಿದೇಶಗಳಲ್ಲಿ ಮಹತ್ವದ ಆರ್‌&ಡಿ ಕೈಗೊಂಡ ಏಕೈಕ ಭಾರತೀಯ ಕಂಪನಿಯಾಗಿದೆ. ಡಾ. ರೆಡ್ಡೀ'ಸ್ ರಿಸರ್ಚ್‌ ಫೌಂಡೇಶನ್‌ಅನ್ನು ೧೯೯೨ರಲ್ಲಿ ಸ್ಥಾಪಿಸಲಾಯಿತು ಮತ್ತು ಅದನ್ನು ಹೊಸ ಔಷಧ ಶೋಧದ ಕ್ಷೇತ್ರದಲ್ಲಿ ಸಂಶೋಧನೆಗೆ ಸಮರ್ಪಿಸಲಾಯಿತು. ಮೊದಲಿಗೆ, ಫೌಂಡೇಶನ್ನಿನ ಔಷಧ ಸಂಶೋಧನಾ ಕಾರ್ಯತಂತ್ರವು ಸಾದೃಶ್ಯ ಔಷಧಗಳನ್ನು ಹುಡುಕುವುದರಲ್ಲಿ ತೊಡಗಿತ್ತು, ಆದರೆ ನಂತರ ತನ್ನ ಗಮನವನ್ನು ಅತ್ಯಾಧುನಿಕ ಆರ್‌&ಡಿ, ಹೊಸ ವಿಜ್ಞಾನಿಗಳ ನೇಮಕ, ವಿಶೇಷವಾಗಿ ವಿದೇಶಗಳಲ್ಲಿ ವೈದ್ಯಕೀಯ ಮತ್ತು ಸ್ನಾತಕೋತ್ತರ ವೈದ್ಯಕೀಯ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವುದು, ಇತರೆ ಅಂಶಗಳತ್ತ ತಿರುಗಿದರು. ೨೦೦೦ದಲ್ಲಿ, ಫೌಂಡೇಶನ್ ಯುಎಸ್‌ನ ಅಟ್ಲಾಂಟಾದಲ್ಲಿ ಒಂದು ಪ್ರಯೋಗಾಲಯ ಸ್ಥಾಪಿಸಿ, ನವೀನ ಚಿಕಿತ್ಸಾ ಪದ್ಧತಿಗಳ ಶೋಧ ಮತ್ತು ವಿನ್ಯಾಸಕ್ಕೆ ಮೀಸಲಾಗಿಟ್ಟಿತು. ಈ ಪ್ರಯೋಗಾಲಯವನ್ನು ರೆಡ್ಡಿ ಯುಎಸ್‌ ಥೆರಪೆಟಿಕ್ಸ್ ಇಂಕ್ (ಆರ್‌ಯುಎಸ್‌ಟಿಐ)ಎಂದು ಹೆಸರಿಸಲಾಗಿದೆ ಮತ್ತು ಇದರ ಮುಖ್ಯ ಗುರಿ ಎಂದರೆ ಮುಂದಿನ ತಲೆಮಾರಿನ ಔಷಧಗಳನ್ನು ಜೀನೋಮಿಕ್ಸ್ ಮತ್ತು ಪ್ರೋಟೆಯೊಮಿಕ್ಸ್ ಬಳಸಿ ಕಂಡುಹಿಡಿಯುವುದಾಗಿದೆ. ರೆಡ್ಡೀ'ಸ್ ಸಂಶೋಧನಾ ಮುಖ್ಯಾಂಶಗಳು ಪಾಶ್ಚಾತ್ಯ ಮಾರುಕಟ್ಟೆಯಲ್ಲಿ ವಿಶಾಲ ಕ್ಷೇತ್ರದಡಿ ಗಮನ ಕೊಡುವುದಾಗಿದೆ; ಅದೆಂದರೆ - ಕ್ಯಾನ್ಸರ್‌ವಿರೋಧಿ, ಮಧುಮೇಹ ವಿರೋಧಿ, ಹೃದಯ-ರಕ್ತನಾಳದ ಮತ್ತು ಸೋಂಕು-ವಿರೋಧಿ ಔಷಧಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.

ರೆಡ್ಡೀ'ಸ್ ಅಂತಾರಾಷ್ಟ್ರೀಯ ಮಾರುಕಟ್ಟೆ ಯಶಸ್ಸುಗಳು ಬಲವಾದ ಉತ್ಪಾದನಾ ನೆಲೆಗಟ್ಟಿನ ಮೇಲೆ ನಿರ್ಮಿತಗೊಂಡಿತ್ತು, ಅದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಂಪನಿಗಳ ಸ್ವಾಧೀನದ ಮೂಲಕ ಕಂಪನಿಯು ಮಾಡಿದ ಅಸಂಘಟಿತ ಬೆಳವಣಿಗೆಯ ಮೂಲಕವಾಗಿತ್ತು. ರೆಡ್ಡೀ'ಸ್ ಕಂಪನಿಯು ಉತ್ತರ ಅಮೆರಿಕದ ಮತ್ತು ಯೂರೋಪ್‌ದ ತಾಂತ್ರಿಕತೆ ಬೇಡಿಕೆ ಇರುವ ಮಾರುಕಟ್ಟೆಗಳಿಗೆ ಎಪಿಐಗಳನ್ನು ಪೂರೈಸುವ ಮುಖ್ಯ ಗುರಿಯೊಂದಿಗೆ ಚೆಮ್ಮಿನೂರ್ ಡ್ರಗ್ ಲಿಮಿಟೆಡ್ (ಸಿಡಿಎಲ್‌) ಕಂಪನಿಯನ್ನು ವಿಲೀನಗೊಳಿಸಿತು. ಈ ವಿಲೀನವು ರೆಡ್ಡೀ'ಸ್ಗೆ ಮೌಲ್ಯವರ್ಧಿತ ಜೆನೆರಿಕ್ಸ್ ಉದ್ದಿಮೆಗೆ ಎಪಿಐಗಳ ನಿಯಂತ್ರಿತ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸಾಧ್ಯಗೊಳಿಸಿತು.

೧೯೯೭ರ ಸುಮಾರಿಗೆ, ರೆಡ್ಡೀ'ಸ್ ಮುಂದಿನ ಮಹತ್ವದ ನಡೆಗೆ ಸಜ್ಜಾಗಿದ್ದರು. ಅಮೆರಿಕ ಮತ್ತು ಬ್ರಿಟನ್‌ನಂತಹ ನಿಯಂತ್ರಕ ಮಾರುಕಟ್ಟೆಗಳಿಗೆ ಎಪಿಐ ಮತ್ತು ಸಗಟು ಔಷಧ ಪೂರೈಕೆದಾರರಾಗಿ ಮತ್ತು ಭಾರತ ಮತ್ತು ರಷ್ಯಾದಂತಹ ಅನಿಯಂತ್ರಿತ ಮಾರುಕಟ್ಟೆಗಳಿಗೆ ಬ್ರಾಂಡ್‌ ಫಾರ್ಮುಲೇಶನ್‌ಗಳ ಪೂರೈಕೆದಾರರಾಗಿ, ರೆಡ್ಡೀ'ಸ್ ಅಮೆರಿಕದಲ್ಲಿ ಅಬ್ರೆವಿಯೇಟೆಡ್ ನ್ಯೂ ಡ್ರಗ್ ಅಪ್ಲಿಕೇಶನ್‌ (ಎನ್‌ಎನನ್‌ಡಿಎ) ಫೈಲ್ ಮಾಡುವ ಮೂಲಕ ಜೆನೆರಿಕ್ಸ್ ಔಷಧ ಕ್ಷೇತ್ರವನ್ನು ಪ್ರವೇಶಿಸಿದರು. ಅದೇ ವರ್ಷ, ರೆಡ್ಡೀ'ಸ್ ಒಂದು ರಾಸಾಯನಿಕ ಸಂಯುಕ್ತವನ್ನು ನೋವೋ ನೋರ್ಡ್ಸಿಕ್ ಎಂಬ ಡಚ್‌ ಕಂಪನಿಗೆ ವೈದ್ಯಕೀಯ ಪರೀಕ್ಷಣೆಗಾಗಿ ಹೊರ-ಪರವಾನಗಿ (ಔಟ್ ಲೈಸೆನ್ಸ್) ನೀಡಿದರು.

ಕಂಪನಿಯು ೧೯೯೯ರಲ್ಲಿ ಅಮೆರಿಕನ್ ರೆಮಿಡೀಸ್ ಲಿ. ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಭಾರತೀಯ ತಯಾರಿಕಾ ಕಾರ್ಯಾಚರಣೆಗಳನ್ನು ಬಲಪಡಿಸಿಕೊಂಡಿತು. ಈ ಸ್ವಾಧೀನವು ರೆಡ್ಡೀಸ್‌ಅನ್ನು ಭಾರತದಲ್ಲಿ ರಾನ್‌‌ಬಾಕ್ಸಿ ಮತ್ತು ಗ್ಲಾಕ್ಸೋ ಲಿ. ನಂತರ ಮೂರನೇ ಬೃಹತ್ ಔಷಧೀಯ ಕಂಪನಿಯಾಗಿ ಬೆಳೆಯಲು ಸಾಧ್ಯಗೊಳಿಸಿತು. ಕಂಪನಿಯ ಔಷಧೀಯ ಉತ್ಪನ್ನಗಳು ಸಗಟು ಔಷಧಗಳು, ಇಂಟರ್‌ಮೀಡಿಯೇಟ್ಸ್, ಫಿನಿಶ್‌ಡ್ ಡೋಸೇಜ್‌ಗಳು, ರಾಸಾಯನಿಕ ಸಂಶ್ಲೇಷಣೆ, ರೋಗನಿದಾನ ಮತ್ತು ಜೈವಿಕತಂತ್ರಜ್ಞಾನವೂ ಸೇರಿದಂತೆ ಪೂರ್ಣ ಶ್ರೇಣಿಯನ್ನು ಒಳಗೊಂಡಿದೆ.

ರೆಡ್ಡೀಸ್ ತ್ವರಿತ ಗತಿಯಲ್ಲಿ ಹೊಸ ಔಷಧಗಳನ್ನು ಮಾರುಕಟ್ಟೆಗೆ ತರಲು ಪ್ಯಾರಾ ೪ ಫೈಲಿಂಗ್ ಬಳಸುವುದನ್ನು ಒಂದು ಕಾರ್ಯತಂತ್ರವಾಗಿ ಆರಂಭಿಸಿದರು. ೧೯೯೯ರಲ್ಲಿ ಕಂಪನಿಯು ಭಾರತದಲ್ಲಿ ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದ ಒಮೆಪ್ರಜೋಲ್ ಔಷಧಕ್ಕಾಗಿ ಪ್ಯಾರಾ ೪ ಅರ್ಜಿಯನ್ನು ಸಲ್ಲಿಸಿತು. ೨೦೦೦, ಡಿಸೆಂಬರ್‌‌ನಲ್ಲಿ ರೆಡ್ಡೀ'ಸ್ ಅಮೆರಿಕದಲ್ಲಿ ತಮ್ಮಮೊದಲ ಜನೆರಿಕ್ ಉತ್ಪನ್ನದ ವಾಣಿಜ್ಯಕ ಬಿಡುಗಡೆಯನ್ನು ಮಾಡಿದರು. ನಂತರ ೨೦೦೧ರ ಆಗಸ್ಟ್‌ನಲ್ಲಿ ಅದರ ಪ್ರಥಮ ಉತ್ಒನ್ನವನ್ನು ಮಾರುಕಟ್ಟೆಯಲ್ಲಿ ವಿಶೇಷವಾಗಿ ಬಿಡುಗಡೆ ಮಾಡಲಾಯಿತು. ಅದೇ ವರ್ಷ, ಇದು ಏಷ್ಯಾ-ಪೆಸಿಫಿಕ್ ಪ್ರದೇಶದಿಂದ ನ್ಯೂಯಾರ್ಕ್‌ ಷೇರು ವಿನಿಮಯ (ಎನ್‌ಎಸ್‌ಇ) ಪಟ್ಟಿಯಲ್ಲಿ ಪ್ರವೇಶ ಪಡೆದ ಮೊದಲ ಜಪಾನ್‌ಗೆ ಸೇರದ ಔಷಧೀಯ ಕಂಪನಿಯಾಗಿದೆ. ಭಾರತೀಯ ಔಷಧೀಯ ಉದ್ಯಮದಲ್ಲಿ ಈ ಪ್ರತಿಯೊಂದೂ ಸಾಧನೆಯೂ ಆಭುತಪೂರ್ವವಾದುದಾಗಿದೆ.

೨೦೦೧ರಲ್ಲಿ ರೆಡ್ಡೀ'ಸ್ ಫ್ಲುವೊಕ್ಸೆಟಿನ್ ಅನ್ನು ಬಿಡುಗಡೆ ಮಾಡುವ ಮೂಲಕ ಜೆನೆರಿಕ್ ಔಷಧ ಬಿಡುಗಡೆ ಮಾಡಿದ ಮೊದಲ ಭಾರತೀಯ ಕಂಪನಿಯಾಗಿದೆ. (ಇದು ಎಲಿ ಲಿಲ್ಲಿಯ ಜೆನೆರಿಕ್ ಆವೃತ್ತಿ ಮತ್ತು ಕಂಪನಿಯ ಪ್ರೊಜಾಕ್), ಅಮೆರಿಕದಲ್ಲಿ ೧೮೦ ದಿನಗಳ ವಿಶೇಷ ಮಾರಾಟವನ್ನು ಮಾಡಿತು. ಎಲಿ ಲಿಲ್ಲಿಯ ಖಿನ್ನತೆಶಮನಕಾರಕ ಪ್ರೊಜಾಕ್ ಔಷಧವು ೯೦ರ ದಶಕದ ಕೊನೆಯ ಭಾಗದಲ್ಲಿ ೧ ಬಿಲಿಯನ್‌ ಡಾಲರ್‌ಗೂ ಅಧಿಕ ಮಾರಾಟವಾಯಿತು. ಯು.ಎಸ್‌.ನ ಬಾರ್‌ ಲ್ಯಾಬೋರೇಟರೀಸ್‌ನವರು ಅನುಮೋದಿತಗೊಂಡ ಎಲ್ಲ ಡೋಸ್‌ ಮಾದರಿಗಳನ್ನು (೧೦ ಮಿ.ಗ್ರಾಂ., ೨೦ ಮಿ.ಗ್ರಾಂ.) ಏಕಮಾತ್ರವಾಗಿ ಪಡೆದುಕೊಂಡಿತು. ಕೇವಲ ಒಂದು ಡೋಸ್ ಮಾದರಿಯನ್ನು ಮಾತ್ರ (೪೦ ಮಿ.ಗ್ರಾಂ.) ರೆಡ್ಡೀ'ಸ್ ಪಡೆದುಕೊಂಡರು. ಲಿಲ್ಲಿ ಔಷಧ ಸಂಯುಕ್ತಕ್ಕೆ ಸಂಬಂಧಿಸಿದ ಇನ್ನಿತರ ಸಂಯುಕ್ತಗಳ ಬೇರೆ ಹಲವಾರು ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದರು ಮತ್ತು ಪೇಟೆಂಟ್‌ ಸಂರಕ್ಷಣೆಯನ್ನು ಬಹುಕಾಲದವರೆಗೆ ಹೊಂದಿದ್ದರು. ಈ ಪ್ರಕರಣದ ವಿಚಾರಣೆಯನ್ನು ಒಕ್ಕೂಟ ಸರ್ಕ್ಯೂಟ್‌ ನ್ಯಾಯಾಲಯವು ಎರಡು ಬಾರಿ ನಡೆಸಿತು ಮತ್ತು ರೆಡ್ಡೀ'ಸ್ ಎರಡೂ ವಿಚಾರಣೆಗಳನ್ನು ಗೆದ್ದರು. ಈ ಅಂಶದಿಂದ ಮಾರುಕಟ್ಟೆ ಅನನ್ಯತೆ ಅಥವಾ ಏಕೈಕತೆಯ ಮಹತ್ವವು ನಿರೂಪಿತವಾಯಿತು. ರೆಡ್ಡೀ'ಸ್ ಸುಮಾರು ೭೦ ದಶಲಕ್ಷ ಡಾಲರ್‌ ಆದಾಯವನ್ನು ಆರು ತಿಂಗಳ ಅವಧಿಯಲ್ಲಿ ಗಳಿಸಿದರು. ವಿವಾದದಲ್ಲಿರುವ ವಿಷಯದಿಂದ ಅಷ್ಟು ಹಣ ಮರಳಿಬರುವುದನ್ನು ಗಮನಿಸಿ, ರೆಡ್ಡೀ'ಸ್ ಕಂಪನಿಯು ವಿಚಾರಣೆಯ ಅವಧಿಯನ್ನು ಅವಲಂಬಿಸಿ, ಲಕ್ಷಾಂತರ ಡಾಲರ್‌ ವೆಚ್ಚವಾಗಲಿರುವ ಮೊಕದ್ದಮೆಗಳ ಮೇಲೆ ಅಪಾಯಕರ ಸಾಹಸಕ್ಕೆ ಕೈಹಾಕಿದರು.

ಫ್ಲುವೊಕ್ಸೆಟಿನ್ ಮಾರುಕಟ್ಟೆ ಯಶಸ್ಸು ನಂತರ ಐಬ್ರೂಫೇನ್ನ ೪೦೦, ೬೦೦ ಮತ್ತು ೮೦೦ ಮಿ.ಗ್ರಾಂ. ಮಾತ್ರೆಗಳನ್ನು ಅಮೆರಿಕದಲ್ಲಿ ತನ್ನದೇ ಬ್ರಾಂಡ್ ಮತ್ತು ಹೆಸರಿನಲ್ಲಿ ೨೦೦೩ರ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. ರೆಡ್ಡೀ'ಸ್ ಬ್ರಾಂಡ್‌ ಹೆಸರಿನಡಿಯಲ್ಲಿ ನೇರ ಮಾರಾಟ ಮಾಡಿದ್ದು ಅಮೆರಿಕದಲ್ಲಿ ಬಲಶಾಲಿ ಮತ್ತು ಸುಸ್ಥಿರವಾದ ಜೆನೆರಿಕ್ ಉದ್ಯಮವನ್ನು ಸ್ಥಾಪಿಸುವಲ್ಲಿ ಕಂಪನಿಯ ಪ್ರಯತ್ನಗಳ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಇದು ಅಮೆರಿಕದ ಮಾರುಕಟ್ಟೆಯಲ್ಲಿ ರೆಡ್ಡೀ'ಸ್ ಅವರ ಪೂರ್ಣ ಪ್ರಮಾಣದ ವಿತರಣಾ ಜಾಲವನ್ನು ಹುಟ್ಟುಹಾಕುವಲ್ಲಿ ಮೊದಲ ಹೆಜ್ಜೆಯಾಗಿತ್ತು. ಇದು ಭಾರತೀಯ ಸಾಫ್ಟ್‌ವೇರ್ ದಿಗ್ಗಜರು ಅಮೆರಿಕದಲ್ಲಿ ಮಾರುಕಟ್ಟೆ ವೃತ್ತಿಪರರನ್ನು ಹೊಂದಿರುವ ರೀತಿಯಲ್ಲಿಯೇ ಇತ್ತು.

೨೦೦೧ರಲ್ಲಿ ರೆಡ್ಡೀ'ಸ್ ತಮ್ಮ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ೧೩೨.೮ ದಶಲಕ್ಷ ಡಾಲರ್‌ ಬೆಲೆಯ ಅಮೆರಿಕನ್ ಡಿಪಾಸಿಟರಿ ರೆಸಿಪ್ಟ್ಗಳನ್ನು ನೀಡಿದರು ಮತ್ತು ನ್ಯೂಯಾರ್ಕ್‌ ಷೇರು ವಿನಿಮಯದ ಹೆಸರು ಪಟ್ಟಿಯಲ್ಲಿ ಸೇರಿತು. ಅಮೆರಿಕದ ಆರಂಭೀಕ ಸಾರ್ವಜನಿಕ ಕೊಡುಗೆಗಳಿಂದ ದೊರೆತ ಹಣಕಾಸು ರೆಡ್ಡೀ'ಸ್ ಕಂಪನಿಗೆ ಅಂತಾರಾಷ್ಟ್ರೀಯ ಉತ್ಪಾದನೆಯಲ್ಲಿ ತೊಡಗಲು ಸಹಾಯ ಮಾಡಿತು ಮತ್ತು ತಂತ್ರಜ್ಞಾನ-ಆಧರಿತ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯಮಾಡಿತು.

೨೦೦೨ರಲ್ಲಿ, ರೆಡ್ಡೀ'ಸ್ ಬ್ರಿಟನ್‌ನಲ್ಲಿ ಎರಡು ಔಷಧೀಯ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ತಮ್ಮ ಐರೋಪ್ಯ ಕಾರ್ಯಾಚರಣೆಗಳನ್ನು ಆರಂಭಿಸಿತು. ಬಿಎಂಎಸ್‌ ಲ್ಯಾಬೋರೇಟರೀಸ್‌ ಮತ್ತು ಅದರ ಒಡೆತನದ ಉಪಕಂಪನಿಗಳನ್ನು ಮತ್ತು ಮೆರಿಡಿಯನ್ ಬ್ರಿಟನ್‌ ಕಂಪನಿಗಳನ್ನು ಸ್ವಾಧಿನಪಡಿಸಿಕೊಂಡಿದ್ದು ರೆಡ್ಡೀ'ಸ್‌‌‌ಗೆ ಭೌಗೋಳಿಕವಾಗಿ ವಿಸ್ತಾರಗೊಳ್ಳಲು ಮತ್ತು ಐರೋಪ್ಯ ಮಾರುಕಟ್ಟೆಗೆ ಕಂಪನಿಯು ಪ್ರವೇಶಿಸಲು ಅವಕಾಶ ಒದಗಿಸಿತು. ೨೦೦೩ರಲ್ಲಿ ರೆಡ್ಡೀ'ಸ್ ಬಯೋಸೈನ್ಸ್‌ಸ್‌ ಲಿ.ನ ೫.೨೫ ದಶಲಕ್ಷ ಈಕ್ವಿಟಿ ಬಂಡವಾಳದಲ್ಲಿ ಅಮೆರಿಕನ್ ಡಾಲರ್ ಕೂಡ ಹೂಡಿಕೆ ಮಾಡಿದರು.

ಗುತ್ತಿಗೆ ಸಂಶೋಧನಾ ಕಂಪನಿಯಾದ ಆರಿಜೀನ್ ಡಿಸ್ಕವರಿ ಟೆಕ್ನಾಲಜೀಸ್‌ ಅನ್ನು ೨೦೦೨ರಲ್ಲಿ ಸಂಪೂರ್ಣವಾಗಿ ರೆಡ್ಡೀ'ಸ್ ಕಂಪನಿಯ ಒಡೆತನದಲ್ಲಿ ಸ್ಥಾಪಿಸಲಾಯಿತು. ಇದು ಬೇರೆ ಫಾರ್ಮಾ ಕಂಪನಿಗಳೊಂದಿಗೆ ಗುತ್ತಿಗೆ ಸಂಶೋಧನೆ ಮೂಲಕ ಔಷಧಗಳನ್ನು ಕಂಡುಹಿಡಿಯುವ ಅನುಭವವನ್ನು ಪಡೆಯುವ ಉದ್ದೇಶವನ್ನು ಹೊಂದಿದೆ. ರೆಡ್ಡೀ'ಸ್ ಭಾರತೀಯ ಬ್ಯಾಂಕ್‌, ಐಸಿಐಸಿಐ ಜೊತೆಗೆ ಉದ್ಯಮ ಹೂಡಿಕೆ ರೀತಿಯ ಒಪ್ಪಂದವನ್ನು ಮಾಡಿಕೊಂಡರು. ಇದರ ಕರಾರುಗಳ ಅಡಿಯಲ್ಲಿ, ಐಸಿಐಸಿಐ ಉದ್ಯಮವು ಅಭಿವೃದ್ಧಿ, ನೋಂದಣಿ ಮತ್ತು ಎಎನ್‌ಡಿಎದ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಕಾನೂನು ವೆಚ್ಚಗಳಿಗೆ ಒಂದು ಪೂರ್ವ ನಿರ್ದರಿತ ಆಧಾರದಲ್ಲಿ ಹಣಕಾಸು ಒದಗಿಸುತ್ತದೆ. ಈ ಉತ್ಪನ್ನಗಳ ವಾಣಿಜ್ಯೀಕರಣದ ನಂತರ, ಒಟ್ಟು ೫ ವರ್ಷಗಳ ಅವಧಿಗೆ ಡಾ. ರೆಡ್ಡೀ'ಸ್ ಒಟ್ಟು ಮಾರಾಟದ ಮೇಲೆ ಐಸಿಐಸಿಐ ವೆಂಚರ್ ರಾಯಧನವನ್ನು ಪಾವತಿಸುತ್ತದೆ. ಒಂದು ಸಂಪೂರ್ಣ ಸಮಗ್ರ ಔಷಧೀಯ ಕಂಪನಿಯಾಗಿ ದಶಕಕ್ಕೂ ಕಡಿಮೆ ಅವಧಿಯಲ್ಲಿ ರೆಡ್ಡೀ'ಸ್ ಅವರ ಯಶಸ್ವೀ ಬೆಳವಣಿಗೆಯು ಅಸಂಘಟಿತ ಬೆಳವಣಿಗೆಯ ಒಂದು ಯಶಸ್ವೀ ಮತ್ತು ಗುರಿ ಇರುವ ಯೋಜನೆಯನ್ನು ಹಾಗೂ ಆರ್‌&ಡಿ ಪ್ರಕ್ರಿಯೆಯಲ್ಲಿ ಹೂಡಿಕೆಯನ್ನು ಆಧರಿಸಿತ್ತು. ಅದು ಅದಾಗಲೇ ಇರುವ ಪೇಟೆಂಟ್‌‌ದಾರರೊಂದಿಗೆ ನೇರ ಸ್ಪರ್ಧೆಗೆ ಇಳಿಯುವ ಮೂಲಕ ಹೆಚ್ಚು ಅಪಾಯ-ಹೆಚ್ಚು ಲಾಭ ಕಾರ್ಯತಂತ್ರವನ್ನು ಅಳವಡಿಸಿಕೊಂಡಿತು. ರೆಡ್ಡೀ'ಸ್ ಕಂಪನಿಗೆ ಒಂದು ಮುಖ್ಯ ಸವಾಲು ಎಂದರೆ ತನ್ನೆಲ್ಲ ಒಟ್ಟಾರೆ ಕಾರ್ಯತಂತ್ರವನ್ನು ಅಪಾಯ-ರಹಿತವಾಗಿಸುವ ವಿಧಾನಗಳನ್ನು ಕಂಡುಕೊಳ್ಳುವುದಾಗಿದೆ. ಒಂದು ವಿಧಾನವೆಂದರೆ 'ಸುರಕ್ಷಿತ' ಎಪಿಐ ಮತ್ತು ಫಾರ್ಮುಲೇಶನ್ಸ್ ಉದ್ಯಮದಿಂದ ಹಣದ ಹರಿವು ನಿರ್ವಹಣೆ ಮಾಡುವುದು. ಇನ್ನೊಂದು ವಿಧಾನವೆಂದರೆ ಆರ್‌&ಡಿ ಉದ್ಯಮಕ್ಕೆ ಬೇರೆ ಹೆಚ್ಚು ಅನುಭವೀ ಪಾಲುದಾರರನ್ನು ಹುಡುಕುವುದು ಅಥವಾ ಆರ್‌&ಡಿ ಸಂಪನ್ಮೂಲಗಳನ್ನು ಹಾಗೂ ಆದಾಯವನ್ನು ವೃದ್ಧೀಸಲು ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಬಳಸುವುದು. ಕಂಪನಿಯು ಜಾಗತಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು ಮತ್ತು ಉತ್ಸಹಾವೇಶದಿಂದ ಕೆಲವು ಕಂಪನಿಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತ ಮುನ್ನಡೆಯಿತು.

೨೦೦೨ರ ಮಾರ್ಚ್‌ನಲ್ಲಿ, ಡಾ. ರೆಡ್ಡೀ'ಸ್ ಬಿಎಂಎಸ್‌ ಲ್ಯಾಬೋರೇಟರೀಸ್‌, ಬೆವರ್ಲೆಯನ್ನು ಸ್ವಾಧೀನಪಡಿಸಿಕೊಂಡಿತು. ಜೊತೆಗೆ ಉಪಾಂಗವಾಗಿದ್ದ ಮೆರಿಡಿಯನ್ ಹೆಲ್ತ್‌ ಕೇರ್‌ ಅನ್ನು ೧೪.೮೧ ದಶಲಕ್ಷ ಯೂರೋಗಳಿಗೆ ಕೊಂಡುಕೊಂಡಿತು. ಈ ಕಂಪನಿಗಳು ಬಾಯಿಆರೋಗ್ಯಕ್ಕೆ ಸಂಬಂಧಿಸಿದ ಘನವಸ್ತುಗಳು, ದ್ರಾವಣಗಳು ಮತ್ತು ಪ್ಯಾಕೇಜಿಂಗ್ ವ್ಯವಹಾರ ನಡೆಸುತ್ತಿದ್ದವು ಮತ್ತು ಬ್ರಿಟನ್‌ನ ಲಂಡನ್‌ ಹಾಗೂ ಬೆವರ್ರ್ಲೆಯಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದ್ದವು. ಇತ್ತೀಚೆಗೆ ಡಾ. ರೆಡ್ಡೀ'ಸ್ ಬ್ರಿಟನ್‌ ಮೂಲದ ಖಾಸಗಿ ಔಷಧ ಅಭಿವೃದ್ಧಿ ಕಂಪನಿ ಅರ್ಜೆಂಟಾ ಡಿಸ್ಕವರಿ ಲಿ. ಜೊತೆಗೆ ಸಿಒಪಿಡಿ ಚಿಕಿತ್ಸೆಗಾಗಿ ಆರ್‌&ಡಿ ಮತ್ತು ವಾಣಿಜ್ಯೀಕರಣ ಒಪ್ಪಂದವನ್ನು ಮಾಡಿಕೊಂಡಿದೆ.

ಜೆನೆರಿಕ್ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಯಶಸ್ಸಿನಿಂದಾಗಿ, ರೆಡ್ಡೀ'ಸ್ ಕಂಪನಿಯು ಅಮೆರಿಕದಲ್ಲಿ ಮಾರುಕಟ್ಟೆ ಮತ್ತು ವಿತರಣಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯವನ್ನು ಮನಗಂಡಿತು. ರೆಡ್ಡೀ'ಸ್ ಹೈಪರ್‌ಟೆನ್ಷನ್ ಉತ್ಪನ್ನವನ್ನು ೨೦೦೩ರಲ್ಲಿ ಮಾರಾಟ ಮಾಡಲು ಹಲವಾರು ಆಯ್ಕೆಗಳನ್ನು ಪರಿಗಣಿಸಿದರು. ಕಂಪನಿಯು ಆಗಲೇ ಫಾರ್ಮಾಸ್ಯುಟಿಕಲ್ ರಿಸೋರ್ಸಸ್‌, ಇಂಕ್ ಜೊತೆ ಫ್ಲುವೊಕ್ಸೆಂಟೈನ್ ೪೦ ಮಿ.ಗ್ರಾಂ. ಮಾತ್ರೆಗಳನ್ನು ಮಾರಾಟ ಮಾಡಲು ಒಂದು ಒಪ್ಪಂದವನ್ನು ಹೊಂದಿದ್ದಿತು. ಜೊತೆಗೆ ಪಾರ್ ಫಾರ್ಮಾಸ್ಯುಟಿಕಲ್ ಇಂಕ್ ಜೊತೆ ಅಮೆರಿಕದಲ್ಲಿ ಓವರ್‌-ದಿ-ಕೌಂಟರ್ ಡ್ರಗ್‌ಗಳನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಒಪ್ಪಂದವನ್ನು ಹೊಂದಿತ್ತು. ಸಂಯುಕ್ತ ಸಂಸ್ಥಾನದ ಜೊತೆಗೆ, ರೆಡ್ಡೀ'ಸ್ ಜೆನೆರಿಕ್ಸ್ ಉದ್ಯಮವು ಬ್ರಿಟನ್ನಿನಲ್ಲಿಯೂ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿತು. ಇದು ಯೂರೋಪ್‌ನ ಬೇರೆ ದೇಶಗಳಿಗೆ ವಿಸ್ತರಣೆಗೊಳ್ಳಲು ಒಂದು ವೇದಿಕೆಯಾಯಿತು. ರೆಡ್ಡೀ'ಸ್ ಕೆನಡಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತಿರಿಸಲು ಯೋಜಿಸುತ್ತಿದೆ. ಕಂಪನಿಯಎಪಿಐ ಉದ್ಯಮವು ಸುಮಾರು ೬೦ ದೇಶಗಳಲ್ಲಿ ಮಾರಾಟವನ್ನು ಒಳಗೊಂಡಿದೆ, ಇವುಗಳಲ್ಲಿ ಅಮೆರಿಕ ಮತ್ತು ಭಾರತ ಕಂಪನಿಗೆ ಗಣನೀಯ ಆದಾಯವನ್ನು ತಂದುಕೊಡುತ್ತವೆ. ಬ್ರಾಂಡೆಡ್ ಫಾರ್ಮುಲೇಶನ್ ಉದ್ಯಮವು ಸುಮಾರು ೩೦ ದೇಶಗಳಲ್ಲಿ ಕ್ರಿಯಾಶೀಲವಾಗಿದೆ ಮತ್ತು ರೆಡ್ಡೀ'ಸ್ ಭಾರತೀಯ ಮತ್ತು ರಷ್ಯಾದ ಮಾರುಕಟ್ಟೆಗಳಲ್ಲಿ ಮಹತ್ವದ ಕಂಪನಿಯಾಗಿದೆ. ಕಂಪನಿಯು ಸದ್ಯದಲ್ಲಿಯೇ ಚೀನಾ, ಬ್ರೆಜಿಲ್ ಮತ್ತು ಮೆಕ್ಸಿಕೋಗಳಲ್ಲಿಯೂ ಅಸ್ತಿತ್ವ ಕಂಡುಕೊಳ್ಳಲು ಯೋಜಿಸಿದೆ.

ಡಾ. ರೆಡ್ಡೀ'ಸ್ ಡೆನ್ಮಾರ್ಕ್‌ನ ರಿಯೋಸೈನ್ಸ್‌ ಎ/ಎಸ್‌ ಜೊತೆ ಬೆಲಗ್ಲಿಟಜೋನ್ (ಡಿಆರ್‌ಎಫ್‌ ೨೫೯೩)ನ ಜಂಟಿ ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕೆ ೧೦ ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಂಯುಕ್ತವು ಟೈಪ್‌-೨ ಮಧುಮೇಹದ ಚಿಕಿತ್ಸೆಗೆ ಬಳಸಲಾಗುತ್ತದೆ. ರಿಯೋಸೈನ್ಸ್‌ ಐರೋಪ್ಯ ಒಕ್ಕೂಟ ಮತ್ತು ಚೀನಾದಲ್ಲಿ ಈ ಉತ್ಪನ್ನದ ಮಾರಾಟದ ಹಕ್ಕುಗಳನ್ನು ಹೊಂದಿರುತ್ತದೆ ಮತ್ತು ಅಮೆರಿಕ ಮತ್ತು ವಿಶ್ವದ ಇನ್ನುಳಿದ ದೇಶಗಳಿಗೆ ಮಾರಾಟದ ಹಕ್ಕನ್ನು ಡಾ. ರೆಡ್ಡೀ'ಸ್ ಹೊಂದಿರುತ್ತದೆ. ಡಾ. ರೆಡ್ಡೀ'ಸ್ ನ್ನ ಹೃದಯರಕ್ತನಾಳದ ಔಷಧ ಆರ್‌ಯುಎಸ್‌ ೩೧೦೮ರ ವೈದ್ಯಕೀಯ ಪರೀಕ್ಷಣೆಯನ್ನು ೨೦೦೫ರಲ್ಲಿ ಉತ್ತರ ಐರ್ಲೆಂಡ್‌ನ ಬೆಲಾಫಾಸ್ಟ್‌ನಲ್ಲಿ ನಡೆಸಿದೆ. ಔಷಧದ ಸುರಕ್ಷತೆ ಮತ್ತು ಫಾರ್ಮಾಕೋಕೈನೆಟಿಕ್ ಚಿತ್ರಣವನ್ನು ಅಧ್ಯಯನ ಮಾಡಲು ಪರೀಕ್ಷಣೆಗಳನ್ನುನಡೆಸಲಾಯಿತು. ಈ ಔಷಧವು ಹೃದಯರಕ್ತನಾಳದ ಕಾಯಿಲೆಯ ಪ್ರಮುಖ ಕಾರಣವಾದ ಅಥೆರೊಸ್ಕ್ಲಿರೋಸಿಸ್‌ನ ಚಿಕಿತ್ಸೆಯ ಉದ್ದೇಶವನ್ನುಹೊಂದಿದೆ.

ಡಾ. ರೆಡ್ಡೀ'ಸ್ ನೆದರ್‌ಲ್ಯಾಂಡ್ಸ್ ಮೂಲದ ಔಷಧೀಯ ಕಂಪನಿ ಯೂರೋಡ್ರಗ್ ಲ್ಯಾಬೋರೇಟರೀಸ್‌, ಜೊತೆ ಉಸಿರಾಟದ ಕಾಯಿಲೆಗಳ ಚಿಕಿತ್ಸೆಯನ್ನು ಉತ್ತಮಪಡಿಸಲು ಮಾರುಕಟ್ಟೆ ಒಪ್ಪಂದವನ್ನು ಮಾಡಿಕೊಂಡಿದೆ. ಕಂಪನಿಯು ಎರಡನೇ ತಲೆಮಾರಿನ ಕ್ಸಾಂತಿನ್ ಬ್ರಾಂಕೋಡಿಲೇಟರ್‌, ಅಸ್ತಮಾ ಚಿಕಿತ್ಸೆಗೆ ಮತ್ತು ತೀವ್ರವಾಗಿ ತಡೆಯೊಡ್ಡುವ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ರೋಗಿಗಳಿಗೆ ಬಳಸುವ ಡೋಕ್ಸೋಫಿಲಿನ್‌ ಔಷಧವನ್ನು ಬಿಡುಗಡೆ ಮಾಡಿದೆ.

೨೦೦೪ರಲ್ಲಿ, ರೆಡ್ಡೀ'ಸ್ ಟ್ರೈಜೆನೆಸಿಸ್‌ ಥೆರಪೆಟಿಕ್ಸ್ ಇಂಕ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡರು; ಅದು ಅಮೆರಿಕ ಮೂಲದ ಖಾಸಗಿ ಚರ್ಮಶಾಸ್ತ್ರ ಸಂಬಂಧಿತ ಕಂಪನಿಯಾಗಿದೆ. ಈ ಸ್ವಾಧೀನ ಪಡಿಸಿಕೊಳ್ಳುವಿಕೆಯು ರೆಡ್ಡೀ'ಸ್‌ಗೆ ಚರ್ಮಶಾಸ್ತ್ರದ ಕ್ಷೇತ್ರದಲ್ಲಿ ಕೆಲವು ಉತ್ಪನ್ನಗಳು ಮತ್ತು ತಂತ್ರಜ್ಞಾನದ ಖಾಸಗಿಸ್ವಾಮ್ಯ ಹೊಂದಲು ಸಾಧ್ಯಮಾಡಿತು. ಫಿಜರ್ನ ಔಷಧ ನೊರ್ವಸ್ಕ್‌ (ಅಮ್ಲೊಡಿಪಿನ್ ಮಲಿಯೇಟ್)ನ ಪ್ರಕರಣದಲ್ಲಿ ಪೇಟೆಂಟ್ ಮೊಕದ್ದಮೆಯನ್ನು ಸೋತ ನಂತರ, ಡಾ. ರೆಡ್ಡೀ'ಸ್‌ಗೆ ಜೆನೆರಿಕ್ ಉದ್ದಿಮೆಯಲ್ಲಿ ಪ್ಯಾರಾ ೪ ಅರ್ಜಿ ಕಾರ್ಯತಂತ್ರಕ್ಕೆ ತೀವ್ರ ಹಿನ್ನೆಡೆಯಾಯಿತು. ಅಮ್ಲೊಡಿಪಿನ್ ಮಲಿಯೇಟ್, ಫಿಜರ್ನ ನೊರ್ವಸ್ಕ್‌ ನ ಜೆನೆರಿಕ್ ಆವೃತ್ತಿಯಾಗಿದ್ದು, ಅದನ್ನು ಅಧಿಕ ಒತ್ತಡ ()ಹೈಪರ್ ಟೆನ್ಷನ್‌ ಮತ್ತು ಅಂಜಿನಾದ ಚಿಕಿತ್ಸೆಗೆ ಬಳಸುತ್ತಾರೆ. ಪೇಟೆಂಟ್ ಮೊಕದ್ದಮೆಗೆ ತಗುಲಿದ ಖರ್ಚು ಮತ್ತು ಕಾರ್ಯತಂತ್ರ ತಿರುವುಮುರುವಾಗಿದ್ದು, ಅಮೆರಿಕದ ಜೆನೆರಿಕ್ ಮಾರುಕಟ್ಟೆಯಲ್ಲಿ ಸ್ಪೆಶಾಲಿಟಿ ಉದ್ದಿಮೆಯನ್ನು ಆರಂಭಿಸುವ ರೆಡ್ಡೀ'ಸ್ ಯೋಜನೆಯ ಮೇಲೆ ಪರಿಣಾಮ ಬೀರಿತು.

೨೦೦೬ ಮಾರ್ಚ್‌ನಲ್ಲಿ, ಡಾ. ರೆಡ್ಡೀ'ಸ್ ಬೀಟಾಫಾರ್ಮ್‌ ಅರ್ಜೆನಿಮಿಟಲ್‌ ಜಿಎಂಬಿಎಚ್‌ ಅನ್ನು ೩ಐನಿಂದ ೪೮೦ ದಶಲಕ್ಷ ಯೂರೋಗಳಿಗೆ ಸ್ವಾಧೀನಪಡಿಸಿಕೊಂಡಿತು. ಭಾರತೀಯ ಔಷಧೀಯ ಕಂಪನಿಯೊಂದು ಈ ವರೆಗೆ ಸ್ವಾಧೀನಪಡಿಸಿಕೊಂಡ ಉದ್ದಿಮೆಗಳಲ್ಲಿಯೇ ಇದು ಅತ್ಯಂತ ದೊಡ್ಡದು. ಬೀಟಾಫಾರ್ಮ್‌ ಜರ್ಮನಿಯ ನಾಲ್ಕನೇ ಅತಿದೊಡ್ಡ ಜೆನೆರಿಕ್ ಔಷಧೀಯ ಕಂಪನಿಯಾಗಿದ್ದು, ಸುಮಾರು ೧೫೦ ಕ್ರಿಯಾಶೀಲ ಔಷಧೀಯ ಘಟಕಾಂಶಗಳನ್ನು ಸೇರಿದಂತೆ, ಮಾರುಕಟ್ಟೆ ಷೇರುಗಳ ಶೇ. ೩.೫ರಷ್ಟನ್ನು ಒಳಗೊಂಡಿದೆ.

ರೆಡ್ಡೀ'ಸ್ ಭಾರತದ ಮೊದಲ ಸಮಗ್ರ ಔಷಧ ಅಭಿವೃದ್ಧಿ ಕಂಪನಿ ಪರ್ಲೆಕಾನ್ ಫಾರ್ಮಾ ಪ್ರೈ. ಲಿ. ಅನ್ನು ಐಸಿಐಸಿಐ ವೆಂಚರ್‌ ಬಂಡವಾಳ ನಿಧಿ ನಿರ್ವಹಣಾ ಕಂಪನಿ ಲಿ. ಮತ್ತು ಸಿಟಿಗ್ರೂಪ್‌ ವೆಂಚರ್ ಕ್ಯಾಪಿಟಲ್‌ ಅಂತಾರಾಷ್ಟ್ರೀಯ ಬೆಳವಣಿಗೆ ಸಹಭಾಗಿತ್ವ ಮಾರಿಶಸ್‌ ಲಿ. ಕಂಪನಿಗಳ ಜೊತೆಗೂಡಿ ಸ್ಥಾಪಿಸಿದೆ. ಈ ಸಂಯುಕ್ತ ಘಟಕವು ಹೊಸ ರಾಸಾಯನಿಕ ಘಟಕ ಆಸ್ತಿಗಳ ವೈದ್ಯಕೀಯ ಅಭಿವೃದ್ಧಿ ಮತ್ತು ಹೊರ-ಪರವಾನಗಿಯನ್ನು ಕೈಗೆತ್ತಿಕೊಳ್ಳಲಿದೆ.

ಪ್ರಸಕ್ತ ಡಾ. ರೆಡ್ಡೀ'ಸ್ ಮರ್ಕ್‌ & ಕೋ. ಕಂಪನಿಯಿಂದ ಜನಪ್ರಿಯ ಔಷಧವಾದ ಸಿಮಿವಸ್ತಟಿನ್‌ (ಜೊಕೊರ್)ನ ಒಂದು ಅಧಿಕೃತ ಜೆನೆರಿಕ್ ಆವೃತ್ತಿಯನ್ನು ಅಮೆರಿಕದಲ್ಲಿ ಮಾರಾಟ ಮಾಡಲು ಪರವಾನಗಿ ಪಡೆದಿದೆ. ಡಾ. ರೆಡ್ಡೀ'ಸ್ ಕಂಪನಿಯು ಮರ್ಕ್‌ನಿಂದ ಪರವಾನಗಿ ಪಡೆದಿರುವುದರಿಂದ, ಜೆನೆರಿಕ್‌ ಸಿಮಿವಸ್ತಟಿನ್‌ ಮೇಲೆ ೨೦೦೬ರ ಜೂನ್‌ ೨೩ರಿಂದ ೧೮೦ ದಿನಗಳ ಎಕ್ಸ್‌ಕ್ಲುಸಿವಿಟಿ ಅವಧಿಗೆ ಒಳಪಟ್ಟಿಲ್ಲ. ಅದು ರಾನ್‌ಬಾಕ್ಸಿ ಲ್ಯಾಬೋರೇಟರೀಸ್‌ (ಇದೂ ಭಾರತದ್ದೇ) ಮತ್ತು ಟೆಲ್ವ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್‌ ನಡುವೆ ಅದು ಹಂಚಿಕೆಯಾಗಿದೆ.[೧೦]

೨೦೦೬ರರಂತೆ, ಡಾ. ರೆಡ್ಡೀ'ಸ್ ಲ್ಯಾಬ್ಸ್‌ ಆದಾಯವು ಎಪಿಐಗಳು, ಬ್ರಾಂಡ್ ಫಾರ್ಮುಲೇಶನ್‌ಗಳು ಮತ್ತು ಜೆನೆರಿಕ್‌ಗಳ ವಲಯದಿಂದ ೫೦೦ ದಶಲಕ್ಷ ಅಮೆರಿಕನ್ ಡಾಲರ್‌ಗಳನ್ನು ದಾಟಿತ್ತು. ಅದರಲ್ಲಿ ಮೊದಲಿನ ಎರಡು ಸುಮಾರು ಶೇ. ೭೫ರಷ್ಟು ಆದಾಯವನ್ನು ತಂದಿವೆ. ಇದು ಎಪಿಐನ ಅಭಿವೃದ್ಧಿಯಿಂದ ಹಿಡಿದು ನಿಯಂತ್ರಕ ಏಜೆನ್ಸಿಗಳಿಗೆ ಫಿನಿಶ್‌ಡ್ ಡೋಸೇಜ್‌ ಕಾಗದಪತ್ರಗಳವರೆಗೆ ಎಲ್ಲ ಪ್ರಕ್ರಿಯೆಗಳ ವ್ಯವಹಾರ ನಡೆಸಿ, ನಿರ್ವಹಣೆ ಮಾಡುತ್ತದೆ.

ಔಷಧ ಶೋಧದ ತೊಂದರೆಗಳು[ಬದಲಾಯಿಸಿ]

ಡಾ. ರೆಡ್ಡೀ'ಸ್ ಅವರ ಔಷಧ ಶೋಧ ಮತ್ತು ಸಂಶೋಧನೆ ವಿಭಾಗವನ್ನು ಪರ್ಲೆಕಾನ್ ಫಾರ್ಮಾ ಪ್ರೈವೇಟ್‌ ಲಿಮಿಟೆಡ್‌ ಎಂದು ಪ್ರತ್ಯೇಕ ಕಂಪನಿಯಾಗಿ ೨೦೦೫ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ್ದು ಆ ಸಮಯದಲ್ಲಿ ಒಂದು ವಿನೂತನ ನಡೆ ಎಂದು ಬಣ್ಣಿಸಲಾಗಿತ್ತು. ಆದರೆ ಹಣಕಾಸು ಅಡ್ಡಿಗಳಿಂದಾಗಿ ೨೦೦೮ರಲ್ಲಿ ಅದಕ್ಕೆ ಹಿನ್ನಡೆಯುಂಟಾಯಿತು.[೧೧] ಡಾ. ರೆಡ್ಡೀ'ಸ್ ಔಷಧ ಶೋಧದ ಸಾಹಸವನ್ನು ಮಾತೃ ಕಂಪನಿಯಿಂದ ಭಿನ್ನಗೊಳಿಸಿ, ಬಾಹ್ಯ ಹಣಕಾಸು ಸಂಪನ್ಮೂಲದಿಂದ ಪ್ರತ್ಯೇಕ ಕಂಪನಿಯಾಗಿ ಹುಟ್ಟುಹಾಕಲು ಪ್ರಯತ್ನಿಸಿದ ಪ್ರಪ್ರಥಮ ಭಾರತೀಯ ಔಷಧ ಕಂಪನಿಯಾಗಿದೆ. ಪರ್ಲೆಕಾನ್ ಫಾರ್ಮಾ ಕಂಪನಿಗೆ ಐಸಿಐಸಿಐ ವೆಂಚರ್ ಕ್ಯಾಪಿಟಲ್‌ ಮತ್ತು ಸಿಟಿಗ್ರೂಪ್ ವೆಂಚರ್ ಕ್ಯಾಪಿಟಲ್‌ ಇಂಟರ್‌ನ್ಯಾಶನಲ್‌ ಭಾಗಶಃ ಹಣಕಾಸು ಒದಗಿಸಿವೆ. ಪರ್ಲೆಕಾನ್‌ನಲ್ಲಿ ಆ ಎರಡೂ ಶೇ. ೪೩ರಷ್ಟು ಷೇರುಗಳನ್ನು ಹೊಂದಿದ್ದು, ಅದು ಅಂದಾಜು ೨೨.೫ ದಶಲಕ್ಷ ಡಾಲರ್‌ಗಳಾಗುತ್ತದೆ. ಪರ್ಲೆಕಾನ್‌ನ ಪರಿಶೀಲನೆಯಲ್ಲಿರುವ ಔಷಧಗಳ ವಾಣಿಜ್ಯಕ ಕಾರ್ಯಸಾಧ್ಯತೆ ಕುರಿತು ವೆಂಚರ್ ಬಂಡವಾಳದಾರಿಗೆ ಅನುಮಾನಗಳಿದ್ದು, ಐಸಿಐಸಿಐ ಮತ್ತು ಸಿಟಿಗ್ರೂಪ್‌ ಈ ಯೋಜನೆಯಿಂದ ಹೊರಹೋಗಲು ಬಯಸಿವೆ, ಹೀಗಾಗಿ ಕಂಪನಿಯು ಪರ್ಲೆಕಾನ್‌ ಷೇರುಗಳನ್ನು ಮರಳಿ ಕೊಳ್ಳಬೇಕಿದೆ. ಡಾ. ರೆಡ್ಡೀ'ಸ್ ಜುಲೈನಲ್ಲಿ ತನ್ನ ಷೇರುಗಳನ್ನು ಮರಳಿ ಕೊಂಡುಕೊಂಡಿತು ಮತ್ತು ಪರ್ಲೆಕಾನ್‌ ಈಗ ಕಂಪನಿಯ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾಗಿದೆ. ಆದರೆ ಅಕ್ಟೋಬರ್‌ ೨೩ರಂದು ನಡೆದ ಸಭೆಯಲ್ಲಿ, ಕಂಪನಿಯು ಪರ್ಲೆಕಾನ್‌ಅನ್ನು ವಿಲೀನಗೊಳಿಸಲು ನಿರ್ಧರಿಸಿ, ಅದನ್ನು ೨೦೦೫ಕ್ಕೆ ಮೊದಲಿನ ಹಾಗೆ ಆಂತರಿಕ ಸಂಶೋಧನಾ ಸೌಲಭ್ಯವನ್ನಾಗಿ ಮಾರ್ಪಡಿಸಿದೆ.[೧೧]

೨೦೦೯ರಲ್ಲಿ, ಕಂಪನಿಯು ತನ್ನ ಕಾರ್ಯತಂತ್ರದಲ್ಲಿ ಸಂಪೂರ್ಣ ಬದಲಾವಣೆ ಮಾಡಿಕೊಂಡು, ತನ್ನ ಬೆಂಗಳೂರು ಮೂಲದ ಅಂಗಸಂಸ್ಥೆಗೆ ಶೋಧ ಸಂಶಫಧನೆ ಮತ್ತು ಸಂಬಧಿತ ಬೌದ್ಧಿಕ ಆಸ್ತಿಯನ್ನು ಒಪ್ಪಿಸಿತು. ಅದನ್ನು ಒಂದು ಪ್ರತ್ಯೇಕ ಘಟಕವನ್ನಾಗಿ ಮಾರ್ಪಡಿಸುವ ಸಂಭಾವ್ಯದಿಂದ ಹೀಗೆ ಮಾಡಿದೆ. "ಕಂಪನಿಯು ಭವಿಷ್ಯದಲ್ಲಿ ಅಪಾಯಗಳನ್ನು ಮತ್ತು ಸಂಶೋಧನೆಗೆ ಹಣಕಾಸು ಹಂಚಿಕೊಳ್ಳಲು ಕಾರ್ಯತಂತ್ರ ಪಾಲುದಾರ ಸಿಗಬಹುದೆಂಬ ಆಶಯದಲ್ಲಿದೆ."[೧೨]

ಹಂತ III ಪರೀಕ್ಷಾರ್ಥ ಪ್ರಯೋಗದಲ್ಲಿ ಮಧುಮೇಹ ಔಷಧ[ಬದಲಾಯಿಸಿ]

ಕಂಪನಿಯ ಮಧುಮೇಹ ಔಷಧ ಬಲಗ್ಲಿಟಜೋನ್‌ನ ಹಂತ III ಪರೀಕ್ಷಾರ್ಥ ಪ್ರಯೋಗವನ್ನು ವಿಳಂಬ ಮಾಡಲಾಗುತ್ತಿದೆ ಎನ್ನಲಾಗಿದೆ, ಕಾರಣ ವೈದ್ಯಕೀಯ ಪರೀಕ್ಷಣೆಗಳನ್ನು ನಡೆಸುತ್ತಿರುವ ಡಚ್‌ ಸಂಶೋಧನಾ ಪಾಲುದಾರ ಸಂಸ್ಥೆಯು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.[೧೩] ರಿಯೋಸೈನ್ಸ್‌ನ ಮಾತೃ ಕಂಪನಿ ನೋರ್ಡಿಕ್ ಬಯೋಸೈನ್ಸ್‌ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲು ರಿಯೋಸೈನ್ಸ್‌ಗೆ ಹಣಕಾಸು ಒದಗಿಸುವ ಜವಾಬ್ದಾರಿ ತೆಗೆದುಕೊಂಡಿದೆ ಎಂದು ನಂಬಲಾಗಿದೆ. ಇದರಿಂದ ಡಾ. ರೆಡ್ಡೀ'ಸ್‌ ಜೊತೆಗಿನ ಒಪ್ಪಂದವೂ ಉಳಿಯುತ್ತದೆ.

೨೦೧೦ರ ಜನವರಿಯಲ್ಲಿ, ಡಾ. ರೆಡ್ಡೀ'ಸ್ ಲ್ಯಾಬೋರೇಟರೀಸ್‌ ತನ್ನ ಮಧುಮೇಹ ಔಷಧ ಬಲಗ್ಲಿಟಜೋನ್‌ನ ಮೊದಲ ತಡ-ಹಂತದ ಪ್ರಾಯೋಗಿಕ ಪರೀಕ್ಷಣೆಯು ರಕ್ತದ ಗ್ಲುಕೋಸ್‌ ಮಟ್ಟವನ್ನು ಕಡಿಮೆಗೊಳಿಸುವ ಪ್ರಾಥಮಿಕ ಅಂತಿಮಹಂತವನ್ನು ತಲುಪಿದೆ ಎಂದು ಪ್ರಕಟಿಸಿದೆ. ದತ್ತಾಂಶಗಳು "ಯೋಜನೆಯನ್ನು ಸರಿಯಾದ ಹಳಿಯಲ್ಲಿ ನಡೆಸಿದ್ದು, ನಿಯಂತ್ರಣದ ಅನುಮೋದನೆ ದೊರೆಯುವಂತೆ ಮಾಡಲಿದೆ" ಎಂದು ಡಾ. ರೆಡ್ಡೀ'ಸ್‌ ಹೇಳಿಕೆ ನೀಡಿದೆ.[೧೪]

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

೨೦೦೬ ಮಾರ್ಚ್‌ ೩೧ರಂ ಪ್ರಕಾರ, ಕೆಳಗಿನವರು ಆಡಳಿತ ಮಂಡಳಿ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಆಗಿದ್ದಾರೆ.

  • ಶ್ರೀ. ಅಮಿತ್ ಪಟೇಲ್ - ಉಪಾಧ್ಯಕ್ಷರು, ಕಾರ್ಪೊರೇಟ್ ಅಭಿವೃದ್ಧಿ & ಕಾರ್ಯತಂತ್ರ ಯೋಜನೆ
  • ಡಾ. ಕೆ. ಅಂಜಿ ರೆಡ್ಡಿ, ಅಧ್ಯಕ್ಷರು
  • ಶ್ರೀ. ಜಿ ವಿ ಪ್ರಸಾದ್‌ - ಉಪಾಧ್ಯಕ್ಷರು & ಮುಖ್ಯ ಕಾರ್ಯನಿರ್ವಹಣಾಧಿಕಾರಿ
  • ಶ್ರೀ. ಸತೀಶ್ ರೆಡ್ಡಿ - ನಿರ್ವಹಣಾ ನಿರ್ದೇಶಕ ಮತ್ತು ಸಿಒಒ
  • ಶ್ರೀ. ಬಿ. ಕೋಟೇಶ್ವರ್‌ ರಾವ್ - ಸ್ವತಂತ್ರ ನಿರ್ದೇಶಕ
  • ಶ್ರೀ. ಅನುಪಮ್‌ ಪುರಿ - ಸ್ವತಂತ್ರ ನಿರ್ದೇಶಕ
  • ಡಾ. ಓಂಕಾರ್‌ ಗೋಸ್ವಾಮಿ - ಸ್ವತಂತ್ರ ನಿರ್ದೇಶಕ
  • ಶ್ರೀ. ಪಿ. ಎನ್‌. ದೇವರಾಜನ್ - ಸ್ವತಂತ್ರ ನಿರ್ದೇಶಕ
  • ಶ್ರೀ. ರವಿ ಭೂತಲಿಂಗಂ - ಸ್ವತಂತ್ರ ನಿರ್ದೇಶಕ
  • ಡಾ. ವಿ. ಮೋಹನ್‌ - ಸ್ವತಂತ್ರ ನಿರ್ದೇಶಕ
  • ಡಾ. ರಾಜಿಂದರ್‌ ಕುಮಾರ್‌, - ಅಧ್ಯಕ್ಷರು, ಸಂಶೋಧನೆ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣ (ಏಪ್ರಿಲ್ ೩೦, ೨೦೦೭ರಲ್ಲಿ ಕಂಪನಿ ಸೇರಿ, ೨೦೦೯-೧೦ರಲ್ಲಿ ಕಂಪನಿಯನ್ನು ಬಿಟ್ಟಿದ್ದಾರೆ; ಈಗ ಡಾ. ರೆಡ್ಡೀ'ಸ್ ಜೊತೆ ಇಲ್ಲ )[೧೫]

ಪ್ರಮುಖ ಉತ್ಪನ್ನಗಳು[ಬದಲಾಯಿಸಿ]

ಅತ್ಯಂತ ಪ್ರಮುಖ ಕ್ರಿಯಾಶೀಲ ಔಷಧೀಯ ಘಟಕಾಂಶಗಳು[ಬದಲಾಯಿಸಿ]

  • ಸಿಪ್ರೋಫ್ಲಾಕ್ಸಾಸಿನ್ ಹೈಡ್ರೋಕ್ಲೋರೈಡ್
  • ರಾಮಿಪ್ರಿಲ್
  • ಟರ್ಬಿನಫೈನ್‌ ಎಚ್‌ಸಿಎಲ್‌
  • ಇಬುಪ್ರೋಫೆನ್‌
  • ಸರ್ಟಲಿನ್‌ ಹೈಡ್ರೋಕ್ಲೋರೈಡ್
  • ರಾನಿಟಿಡಿನ್ ಎಚ್‌ಸಿಎಲ್‌ ಫಾರ್ಮ್‌ ೨
  • ನಾಪ್ರೊಕ್ಸೆನ್ ಸೋಡಿಯಂ
  • ನಾಪ್ರೋಕ್ಸೆನ್
  • ಅಟೊರ್ವಸ್ಟಟಿನ್
  • ಮಾಂಟೆಲುಕಾಸ್ಟ್‌
  • ಲೊಸರ್ಟನ್‌ ಪೊಟಾಶಿಯಂ
  • ಸ್ಪರ್‌‌‌ಫ್ಲೋಕ್ಸಾಸಿನ್
  • ನಿಜಟಿಡಿನ್
  • ಫೆಕ್ಸೊಫೆನಡಿನ್
  • ರಾನಿಟಿಡಿನ್‌ ಹೈಡ್ರೋಕ್ಲೋರೈಡ್ ಫಾರ್ಮ್‌ ೧
  • ಕ್ಲೊಪಿಡೊಗ್ರೆಲ್‌ ( ಪೇಟೆಂಟ್ ಪ್ರಕರಣದಿಂದಾಗಿ ಯುಎಸ್‌ನಲ್ಲಿ ಮಾರುವುದಿಲ್ಲ)
  • ಒಮೆಫ್ರಜೋಲ್‌
  • ಫಿನಸ್ಟೆರೈಡ್‌
  • ಸುಮಟ್ರಿಪ್ಟನ್

ಭಾರತದಲ್ಲಿ ಟಾಪ್‌-೧೦ ಬ್ರಾಂಡ್‌ಗಳು[ಬದಲಾಯಿಸಿ]

  • ಒಮೆಜ್‌
  • ನೈಸ್‌
  • ಸ್ಟಮ್ಲೋ
  • ಸ್ಟಮ್ಲೋ ಬೀಟಾ
  • ಎನಮ್‌
  • ಅಟೊಕಾರ್‌
  • ರಜೋ
  • ರೆಕ್ಲಿಮೆಟ್
  • ಕ್ಲಾಂಪ್‌
  • ಮಿನ್‌ಟಾಪ್‌

ಮಧ್ಯ ಪ್ರಾಚ್ಯದಲ್ಲಿ ಟಾಪ್‌ ಬ್ರಾಂಡ್‌[ಬದಲಾಯಿಸಿ]

ಉಲ್ಲೇಖಗಳು‌‌[ಬದಲಾಯಿಸಿ]

  1. ಡಾ. ರೆಡ್ಡೀ'ಸ್‌ ಲ್ಯಾಬೋರೇಟರೀಸ್‌ 2007-2012 – ಮಾರ್ಕೆಟ್‌ರಿಪೋರ್ಟ್ಸ್.ಕಾಂ 2007 ಲೈಫ್‌ ಸೈನ್ಸ್‌ಸ್‌ ರಿಸರ್ಚ್‌ ರಿಪೋರ್ಟ್‌, ಟೆಕ್ನಾಲಜಿ ನೆಟ್‌ವರ್ಕ್ಸ್, ಸಡ್‌ಬರಿ ಎಸ್ಸೆಕ್ಸ್‌, ಬ್ರಿಟನ್‌ Archived 2010-01-19 ವೇಬ್ಯಾಕ್ ಮೆಷಿನ್ ನಲ್ಲಿ.. ಸಂಪಾದಿಸಲಾಯಿತು: ೨೦೦೭-೦೮-೨೨.
  2. ಡಾ. ರೆಡ್ಡೀ'ಸ್ ಲ್ಯಾಬೋರೇಟರೀಸ್‌ ಲಿಮಿಟೆಡ್‌ ನಾಟ್‌ ಟು ಸೆಲ್‌ ಅನಯ ಬ್ಯುಸಿನೆಸ್‌-ಡಿಜೆ , ರಾಯಿಟರ್ಸ್ ಸುದ್ದಿ ಸಂಸ್ಥೆ, 23 ಮಾರ್ಚ್‌ 2010.(೨೦೧೦ರ ಅಕ್ಟೋಬರ್ ೨ರಂದು ಸಂಪಾದಿಸಲಾಯಿತು)
  3. ಫಿಜರ್ ಇನ್ ಟಾಕ್ಸ್‌ ಟು ಬೈ ಡಿಆರ್‌ಎಲ್‌'ಸ್‌ ಫಾರ್ಮುಲೇಶನ್ಸ್‌ ಬ್ಯುಸಿನೆಸ್ ಇನ ಇಂಡಿಯಾ , ಎನ್‌ಡಿಟಿವಿ , ನವ ದೆಹಲಿ , 23 ಫೆಬ್ರವರಿ 2010.( ಅಕ್ಟೋಬರ್ ೨, ೨೦೧೦ರಂದು ಸಂಪಾದಿಸಲಾಯಿತು)
  4. ಡಾ. ರೆಡ್ಡೀ'ಸ್‌ ಡೆವಲಪ್ಸ್‌ ಜೆನೆರಿಕ್‌ ವರ್ಶನ್ ಆಫ್‌ ಫಿಜರ್'ಸ್ ಲಿಪಿಟರ್ , ಬ್ಯುಸಿನೆಸ್ ಸ್ಟ್ಯಾಂಡರ್ಡ್, ನವ ದೆಹಲಿ ಮತ್ತು ಮುಂಬಯಿ, 7 ನವೆಂಬರ್ 2009.(ಅಕ್ಟೋಬರ್ ೨ ೨೦೧೦ರಂದು ಸಂಪಾದಿಸಲಾಯಿತು)
  5. ಫಿಜರ್ ಸ್ಯೂಸ್‌ ಡಾ. ರೆಡ್ಡೀ'ಸ್ ಓವರ್‌ ಕೊಲೆಸ್ಟರಾಲ್ ಡ್ರಗ್ 'ಲಿಪಿಟರ್‌’ , ಸ್ಟಾಕ್‌ ವಾಚ್‌, ಮುಂಬಯಿ, 12 ನವೆಂಬರ್ 2009 Archived 2011-05-20 ವೇಬ್ಯಾಕ್ ಮೆಷಿನ್ ನಲ್ಲಿ..(೨ ಅಕ್ಟೋಬರ್ ೨೦೧೦ರಂದು ಸಂಪಾದಿಸಲಾಯಿತು)
  6. ಆಸ್ಟ್ರಾಜೆಂಕಾ ಪಾರ್ಟನರ್ಸ್ ವಿತ್ ಇಂಡಿಯಾಸ್‌ ಟೊರೆಂಟ್ ಫಾರ್ಮಾಸ್ಯುಟಿಕಲ್ಸ್‌ , ಔಷಧೀಯ ತಂತ್ರಜ್ಞಾನ, ಇಸ್ಲೆನ್, ಎನ್‌ಜೆ ಮತ್ತು ಚೆಸ್ಟರ್ ಬ್ರಿಟನ್‌ Archived 2011-07-11 ವೇಬ್ಯಾಕ್ ಮೆಷಿನ್ ನಲ್ಲಿ.. ಸಂಪಾದಿಸಿದ್ದು: ೨ ಅಕ್ಟೋಬರ್‌ ೨೦೧೦.
  7. ರಿಪರ್ಕಶನ್ಸ್‌ ಆಫ್‌ ದಿ ಡ್ರಗ್ ಪ್ರೈಸ್‌ ಕಾಂಪಿಟಿಶನ್‌ ಆಂಡ್ ಪೇಟೆಂಟ್ ಟರ್ಮ್‌ ರೆಸ್ಓರೇಶನ್‌ ಆಕ್ಟ್ ಆಪ್ 1984 , G.F. HoASFLFKAJS;LKFSLFDNDS;LFSLFKDJFSFgan, ಅಮೆರಿಕನ್ ಜರ್ನಲ್ ಆಫ್ ಹಾಸ್ಪಿಟಲ್ ಫಾರ್ಮಸಿ, 1985, ಪುಟಗಳು849-851. ಸಂಪಾದಿಸಿದ್ದು: : ೨೦೦೭-೦೮-೨೨.
  8. ಭಾರತದಲ್ಲಿ ಉದಾರೀಕರಣ ಮತ್ತು ಖಾಸಗೀಕರಣದ ಪರಿಣಾಮಗಳು – ವಿಚಾರಸಂಕಿರಣ IIರಲ್ಲಿ ರಾಜ್‌ ಮಿಶ್ರಾ: ಬೋಸ್ಟನ್‌, ಏಪ್ರಿಲ್ 17, 1999, ಅಸೋಸಿಯೇಶನ್ ಆಫ್‌ ಇಂಡಿಯನ್ ಪ್ರೊಗ್ರೆಸಿವ್ ಸ್ಟಡಿ.ಸಂಪಾದಿಸಿದ್ದು: ೨೦೦೭-೦೮-೨೨.
  9. ಡಾ. ರೆಡ್ಡೀ'ಸ್ ಲ್ಯಾಬೋರೇಟರೀಸ್‌ ವಿಲ್ ನೊ ಲಾಂಗರ್ ಪ್ರೊಡ್ಯೂಸ್ ಇಟ್ಸ್ ಮೆಡಿಸಿನ್ಸ್ ಇನ್‌ ರಷ್ಯಾ – ಪ್ರಾವ್ಡಾ.ರು 8 ಫೆಬ್ರವರಿ 2005 Archived 2011-06-05 ವೇಬ್ಯಾಕ್ ಮೆಷಿನ್ ನಲ್ಲಿ..ಸಂಪಾದಿಸಿದ್ದು : ೨೦೦೭-೦೮-೨೨.
  10. ಡಾ. ರೆಡ್ಡೀ'ಸ್ ರಿಸೀವ್‌ ಎಕ್ಸ್‌ಕ್ಲುಸಿವ್ ರೈಟ್ಸ್ ಫಾರ್ ಜೊಕೊರ್
  11. ೧೧.೦ ೧೧.೧ ಪರ್ಲೆಕಾನ್‌ ಹೈಲೈಟ್ಸ್ ಆರ್‌&ಡಿ ಟ್ರಾವೈಲ್ಸ್ ಆಫ್ ಇಂಡಿಯನ್ ಫರ್ಮಾ , 17 ಅಕ್ಟೋಬರ್‌ 2008.ಸಂಪಾದಿಸಿದ್ದು: ೨೦೦೯-೧೦-೧೮.
  12. ಡಿಆರ್‌ಎಲ್‌ ಮೂವಿಂಗ್ ರಿಸರ್ಚ್‌ ಆರ್ಮ್‌ ಟು ಬ್ಯಾಂಗಲೋರ್‌ ಯುನಿಟ್ ೨೨ ಮೇ ೨೦೦೯. ಸಂಪಾದಿಸಿದ್ದು: ೨೦೦೯-೦೮-೨೦.
  13. ಡಾ. ರೆಡ್ಡೀ'ಸ್ ಡಯಾಬಿಟೀಸ್ ಡ್ರಗ್ ಮೇ ಬಿ ಡಿಲೇಯ್ಡ್ , 05 ಅಕ್ಟೋಬರ್‌ 2008..ಸಂಪಾದಿಸಿದ್ದು: ೨೦೦೯-೧೦-೧೮.
  14. ಡಾ. ರೆಡ್ಡೀ'ಸ್ ಸ್ಪಾಟ್‌ಲೈಟ್ಸ್‌ ಪ್ರಾಮಿಸಿಂಗ್ ಫೇಸ್‌ III ಡಯಾಬಿಟೀಸ್ ಡಾಟಾ , 04 ಜನವರಿ 2010 .ಸಂಪಾದಿಸಿದ್ದು : ೨೦೧೦-೦೧-೦೭.
  15. "ಡಾ. ರೆಡ್ಡೀ'ಸ್ ಅನೌನ್ಸಸ್‌ ನ್ಯೂ ಆರ್‌&ಡಿ ಚೀಫ್‌ – ಕಾರ್ಪೊರೇಟ್‌ ಪ್ರೆಸ್‌ ಆಫೀಸ್‌". Archived from the original on 2009-04-19. Retrieved 2011-06-07.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]