ಡಾ. ಯು. ಆರ್. ರಾವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
U. R. Rao
U R Rao.jpg
Rao circa 2008
ಜನನ (1932-03-10) 10 ಮಾರ್ಚ್ 1932 (ವಯಸ್ಸು Expression error: Unrecognized punctuation character "�".)
Adamaru, Udupi, India
ರಾಷ್ಟ್ರೀಯತೆ Indian
ಕಾರ್ಯಕ್ಷೇತ್ರಗಳು Space science and Satellite Technology
ಸಂಸ್ಥೆಗಳು Indian Space Research Organisation
Physical Research Laboratory
ಪ್ರಸಿದ್ಧಿಗೆ ಕಾರಣ Indian Space Program
ಗಮನಾರ್ಹ ಪ್ರಶಸ್ತಿಗಳು Padma Bhushan (1976)

ಉಡುಪಿ ರಾಮಚಂದ್ರರಾವ್ ರವರು ಉಡುಪಿ ಸಮೀಪದ 'ಮಾರ್ಪಳ್ಳಿ'ಯಲ್ಲಿ ಮಾರ್ಚ್ ೧೦, ೧೯೩೨ ರಂದು ಜನಿಸಿದರು. ಇವರ ತಾಯಿ, ಕೃಷ್ಣವೇಣೀಯಮ್ಮ; ತಂದೆ, ಲಕ್ಷ್ಮೀನಾರಾಯಣರಾವ್. ಇವರದು ಕೃಷಿಕ ಕುಟುಂಬ. ರಾಮಚಂದ್ರರಾಯರು ಉಡುಪಿ, ಅನಂತಪುರ, ಮದ್ರಾಸ, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ವಿಕ್ರಮ್ ಸಾರಾಭಾಯಿಯವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಅಮೆರಿಕದ ಮೆಸಾಚುಸೆಟ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಟೆಕ್ಸಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು,೧೯೬೬ರಲ್ಲಿ ಭಾರತಕ್ಕೆ ಮರಳಿದರು.

ವೃತ್ತಿಜೀವನ[ಬದಲಾಯಿಸಿ]

ಮೊದಲಿಗೆ 'ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲೆಬೊರೆಟರಿ'ಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಯು.ಆರ್.ರಾವ್ ಆ ಬಳಿಕ ಇಸ್ರೊದಲ್ಲಿ ಸೇವೆಗೈದರು. ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನುಸೇರಿಸಿದ ಕೀರ್ತಿ ಡಾ.ಯು.ಆರ್.ರಾವ್ ಅವರದು.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಯು.ಆರ್.ರಾವ ಇವರು ಶಾಂತಿಗಾಗಿ ಅಂತರಿಕ್ಷ ಯೋಜನೆಯ ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್ ಗೌರವ'[ಬದಲಾಯಿಸಿ]

'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'(ಇಸ್ರೋ) ದ ಮಾಜಿ ಮುಖ್ಯಸ್ಥರಾಗಿರುವ 'ಪ್ರೊ.ಯು.ಆರ್.ರಾವ್' 'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾಗಿದ್ದಾರೆ.ಸನ್.೨೦೧೩ ರ,ಮಾರ್ಚ್,೧೯ ರಂದು ವಾಷಿಂಗ್ಟನ್ ನಲ್ಲಿ ನಡೆದ ಸಮಾರಂಭದಲ್ಲಿ ಒಂದು ಸಾವಿರ ಗೌರವಾನ್ವಿತ ಬಾಹ್ಯಾಕಾಶ ವಿಜ್ಞಾನಿಗಳ ಸಮ್ಮುಖದಲ್ಲಿ ಡಾ.ರಾವ್ ರಿಗೆ ಪ್ರಶಸ್ತಿಯನ್ನು ದಯಪಾಲಿಸಲಾಯಿತು.ಡಾ.ರಾವ್ ಈ ತರಹ ಪ್ರಶಸ್ತಿಗಳಿಸಿದ ಪ್ರಥಮ ಭಾರತೀಯರು, ಹಾಗೂ ಈ ಗೌರವ ಪಡೆದ ೫೦ ಜನರ ಗುಂಪಿನಲ್ಲಿ ಅವರೂ ಸೇರಿದರು. 'ವಾಷಿಂಗ್ಟನ್ ನ ಸೊಸೈಟಿ ಆಫ್ ಸೆಟಲೈಟ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್' ವತಿಯಿಂದ ನೀಡಲಾಗುವ ಪ್ರತಿಷ್ಟಿತ ಗೌರವ ಇದಾಗಿದೆ. ಭಾರತದಲ್ಲಿ 'ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂವಹನ ವಿಸ್ತಾರಕ್ಕೆ ನೀಡಿದ ಕೊಡುಗೆ'ಗಾಗಿ ಪ್ರೊ.ರಾವ್ ರವರಿಗೆ ಪ್ರಶಸ್ತಿ ಲಭಿಸಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]