ಜಗನ್ನಾಥನ್ ಸಾರಂಗಪಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಜಗನ್ನಾಥನ್ ಸಾರಂಗಪಾಣಿ ಇಂದ ಪುನರ್ನಿರ್ದೇಶಿತ)



ಭಾರತ ಮೂಲದ ಅಮೇರಿಕನ್ ವಿಜ್ಞಾನಿ ಡಾ. ಜಗನ್ನಾಥನ್ ಸಾರಂಗಪಾಣಿ ಅವರು ರೋಬೋಟ್ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಕೆಲಸ ಮಾಡುವ ಮತ್ತು ಸ್ವತಂತ್ರವಾಗಿ ಯಂತ್ರಗಳನ್ನು ನಿರ್ವಹಿಸುವ ರೋಬೋಟ್ ಗಳ ಕುರಿತ ಮಾನವನ ಮೇಲ್ವಿಚಾರಣೆ ವ್ಯವಸ್ಥೆಯನ್ನು ಕನಿಷ್ಠ ಮಿತಿಗೆ ಇಳಿಸುವ ಹೊಸ ಪ್ರತಿಕ್ರಿಯಾ ವ್ಯವಸ್ಥೆಯೊಂದನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.

ಮೇಲ್ವಿಚಾರಣೆ ಇಲ್ಲದೆ ರೋಬೋಟ್ ಗಳು ಸ್ವತಃ ಕೆಲಸವನ್ನು ಕಲಿತು ಅದನ್ನು ಕ್ರಿಯಾತ್ಮಕವಾಗಿ ಅಳವಡಿಸಿಕೊಳ್ಳಲು ಈ ವ್ಯವಸ್ಥೆ ಸಹಾಯಕವಾಗಲಿದೆ.

ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ಜಗನ್ನಾಥನ್ ಅವರು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ಚಲಿಸುವ ರೋಬೋಟ್ ಗಳು ತಮಗೆ ನೀಡಿದ ಒಂದು ನಿರ್ದಿಷ್ಟ ಕೆಲಸವನ್ನು ಸಂಭವನೀಯ ತಪ್ಪುಗಳನ್ನು ಸುಧಾರಿಸಿಕೊಂಡು ಪೂರ್ಣಗೊಳಿಸುವಂತಾಗಲಿದೆ.