ಎಸ್. ಎಂ. ಮುತ್ತಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಎಸ್. ಎಂ. ಮುತ್ತಯ್ಯ ಇಂದ ಪುನರ್ನಿರ್ದೇಶಿತ)


ಡಾ.ಎಸ್.ಎಂ.ಮುತ್ತಯ್ಯ[ಬದಲಾಯಿಸಿ]

ಇವರು ೧೨.೧೨.೧೯೭೫ ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿ ಗ್ರಾಮದಲ್ಲಿ ಜನಸಿದರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಹಾಗೂ ನಲಗೇತನಹಟ್ಟಿ ಯ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಮುಗಿಸಿ, ಪಿಯುಸಿ ತರಗತಿಯನ್ನು ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಪ್ರಥಮ ದರ್ಜೆಯೊಂದಿಗೆ ಪೂರೈಸಿದ್ದಾರೆ. ಚಳ್ಳಕೆರೆಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ೯ನೇ ರಾಂಕಿನೊಂದಿಗೆ ಬಿ.ಎ.ಪದವಿಯನ್ನು ಕನ್ನಡ ಐಚ್ಛಿಕ ವಿಷಯದೊಂದಿಗೆ ಮುಗಿಸಿದ್ದಾರೆ. ಕುವೆಂಪು ವಿ.ವಿಯಲ್ಲಿ ೧೯೯೯ ರಲ್ಲಿ ಎರಡನೇ ರಾಂಕಿನೊಂದಿಗೆ ಕನ್ನಡ ಎಂ.ಎ. ಪದವಿಯನ್ನು ಪಡೆದಿದ್ದಾರೆ. ೧೯೯೯ರಿಂದಲೇ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯಲ್ಲಿ ಯುಜಿಸಿ ನವದೆಹಲಿ ಇವರ ಸಂಶೋಧನಾ ಫೆಲೋಷಿಪ್ ನೊಂದಿಗೆ :ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಸಾಂಸೃತಿಕ ಮುಖಾಮುಖಿಯ ಸ್ವರೂಪಗಳು ವಿಷಯವನ್ನು ಕುರಿತು ಡಾ. ರಂಗರಾಜ ವನದುರ್ಗ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನಾ ಪ್ರಬಂಧಕ್ಕೆ ೨೦೦೪ ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಪಿಎಚ್.ಡಿ. ಪದವಿ ನೀಡಿದೆ. ೨೦೦೪ ರಿಂದ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನಪದ, ಸಂಸ್ಕೃತಿ ಅಧ್ಯಯನ, ವಿಮರ್ಶೆ, ಶಿಕ್ಷಣ ಇವು ಇವರ ಆಸಕ್ತಿ ಕ್ಷೇತ್ರಗಳಾಗಿದ್ದು,, ಈ ಶಿಸ್ತುಗಳಲ್ಲಿ ಬರವಣಿಗೆ ಕೂಡಾ ಮಾಡಿದ್ದಾರೆ. ಅಂಥ ಬರವಣಿಗೆಗಳೆಂದರೆ ಕೃತಿಗಳು ಲಿಖಿತ-ಅಲಿಖಿತ;೨೦೦೫;ಸೃಷ್ಟಿ ಪ್ರಕಾಶನ;ಬೆಂಗಳೂರು, ಜಾನಪದ ಸಂಕಥನ; ೨೦೦೭;ಅಕ್ಷಯಪ್ರಕಾಶನ; ಬೆಂಗಳೂರು, ಜನಪದ ಮಹಾಕಾವ್ಯಗಳು ಮತ್ತು ಪ್ರತಿಸಂಸ್ಕೃತಿ;೨೦೦೮;ಕನ್ನಡ ಸಾಹಿತ್ಯ ಪರಿಷತ್ತು; ಬೆಂಗಳೂರು, ವಾಲ್ಮೀಕಿ ಜ್ಯೋತಿ(ಸಹ ಸಂಪಾದನೆ); ೨೦೦೩;ಚಾಮರಾಜನಗರ ಜಿಲ್ಲೆಯ ಸಮಾವೇಶ ಸಮಿತಿ, ಕಿಲಾರಿ(ಕಿಲಾರಿಯ ಆತ್ಮಕತೆ ನಿರೂಪಣೆ)೨೦೦೮;ಸೃಷ್ಟಿಪ್ರಕಾಶನ; ಬೆಂಗಳೂರು , ಬಡಗಿಕಟ್ಟಿದ ಬೆಡಗಿನ ಮಾಳಿಗೆ,(ಸಂ),೨೦೧೧,ದೇಸಿ ಪ್ರಕಾಶನ, ಬೆಂಗಳೂರು, ಬುಡಕಟ್ಟು ಬೆರಗು,೨೦೧೧, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಬೆಂಗಳೂರು, ಕನ್ನಡ ಜನಪದ ಸಂಸ್ಕೃತಿ, ೨೦೧೨, ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ, ಶಿಕ್ಷಣ ಮತ್ತು ಸಮಾಜ, ಸಂ. ೨೦೧೨, ಪೂರ್ಣಪ್ರಕಾಶನ, ಶಿವಮೊಗ್ಗ ಇವಲ್ಲದೆ ರಾಜ್ಯದ ವಿವಿಧ ಪತ್ರಿಕೆ ಸಂಚಿಕೆ ಪುಸ್ತಕಗಳಲ್ಲಿ ಸುಮಾರು ೫೦ ಕ್ಕಿಂತ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸುಮಾರು ೨೫ ಕ್ಕೂ ಹೆಚ್ಚಿನ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ೧೫ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಜೊತೆಗೆ ೨೫ ವಿಶೇಷ ಉಪನ್ಯಾಸಗಳನ್ನು ನೀಡಿರುತ್ತಾರೆ. ೨೦೦೪ ರಿಂದ ಆರಂಭವಾದ ಇವರ ಸಂಶೋಧನೆ ಮುಂದುವರೆದಿದೆ. ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಕೆ.ಟಿ. ಸೋಮಶೇಖರ್ ಎಂಬುವವರಿಗೆ ಎಂಫಿಲ್ ಮಾರ್ಗದರ್ಶನ ಮಾಡಿದ್ದು ಅದು ಆವಾರ್ಡ್ ಆಗಿದೆ. ಯುಜಿಸಿ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಿಂದ ಕ್ರಮವಾಗಿ ಮ್ಯಾಸಬೇಡರ ನ್ಯಾಯಪದ್ಧತಿ ಹಾಗೂ ಚಿತ್ರದುರ್ಗಜಿಲ್ಲೆಯ ಪಶುಪಾಲನಾ ಸಂಸ್ಕೃತಿ ಎನ್ನುವ ಎರಡು ಕಿರುಸಂಶೋಧನಾ ಯೋಜನೆಗಳು ಮಂಜೂರಾಗಿದ್ದು ಸಂಶೋಧನಾ ಕಾರ್ಯ ಪ್ರಗತಿಯಲ್ಲಿದೆ. ಇವರು ೨೦೧೩ ಮಾರ್ಚ್ ನಿಂದ ಮೂರು ವರ್ಷಗಳ ಅವಧಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಸಹ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇಷ್ಟಲ್ಲದೆ ೨೦೧೩ ನೇ ಮಾರ್ಚ್ ನಿಂದ ಕುವೆಂಪು ವಿಶ್ವವಿದ್ಯಾಲಯವು ಇವರನ್ನು ಸಂಶೋಧನಾ ಮಾರ್ಗದರ್ಶಕರಾಗಿ ಮಾನ್ಯಮಾಡಿದೆ.