ಡಾ.ವಿಷ್ಣುವರ್ಧನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡಾ. ವಿಷ್ಣುವರ್ಧನ್

ಡಾ.ವಿಷ್ಣುವರ್ಧನ್ ಅವರ ಕಿರು ಪರಿಚಯ[ಬದಲಾಯಿಸಿ]

ಡಾ.ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ ೧೯೫೨ | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ವೊದಲ ಚಿತ್ರ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿದೆ. ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ, ವಿಷ್ಣುವರ್ಧನ್ -ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿಗೆ ಅವರಿಗೆ ಸಲ್ಲುತ್ತದೆ.

ಬಂನ್ನಂಜೆ ಗೋವಿಂದಾಚಾರ್ಯಾರು ಇವರ ಆದ್ಯಾತ್ಮಿಕ ಗುರುವಾಗಿದ್ದರು, ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು.

೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್‌ ನಾಗ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ 'ಮಾಲ್ಗುಡಿ ಡೇಸ್‌'ನ ಕಂತೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮರು ೧೪ ಚಿತ್ರಗಳು)

ಬಾಲ್ಯ ಜೀವನ[ಬದಲಾಯಿಸಿ]

ಡಾ. ವಿಷ್ಣುವರ್ಧನ್ಅವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳಿಗೆ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು. ಇವರಿಗೆ ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡರು.

ವೈಯಕ್ತಿಕ ಜೀವನ[ಬದಲಾಯಿಸಿ]


ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾದರು. ಯಾವಾಗಲೂ ವಿವಾದಗಳಿಂದ ದೂರವಿರುತಿದ್ದರು ಅವರು ಸಾಮಾನ್ಯವಾಗಿ ಅಹಿಂಸೆ ಪ್ರತಿಪಾದಿಸಿದರು. ಅವರು ಉದ್ಯಮದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದರು ಮತ್ತು ಯಾರಿಗಾದರೂ ಸಹಾಯದ ಅಗತ್ಯವಿದೆ ಎಂದು ತಿಳಿದಾಗ ನೆರವು ನೀಡಿದ್ದಾರೆ. ಕನ್ನಡ ಚಿತ್ರರ೦ಗದಲ್ಲಿ ಅತಿ ಹೆಚು ಅಭಿಮಾನಿ ಹೋ೦ದಿರುವ ಅದ್ಬುತ ನಟ.

ಡಾ. ವಿಷ್ಣುವರ್ಧನ್ ಅಭಿನಯದ ಸಂಪೂಣ೯ ಚಿತ್ರಗಳು[ಬದಲಾಯಿಸಿ]

  • ಕನ್ನಡ
ವರ್ಷ ಸಂಖ್ಯೆ ಚಿತ್ರದ ಹೆಸರು ಪಾತ್ರದ ಹೆಸರು
೧೯೭೨ ವಂಶವೃಕ್ಷ ಬಾಲ ನಟ
ನಾಗರಹಾವು (ಚಲನಚಿತ್ರ ೧೯೭೨) ರಾಮಾಚಾರಿ
೧೯೭೩ ಸೀತೆಯಲ್ಲ ಸಾವಿತ್ರಿ
ಮನೆ ಬೆಳಗಿದ ಸೊಸೆ
ಗಂಧದ ಗುಡಿ ಆನಂದ್
೧೯೭೪ ಭೂತಯ್ಯನ ಮಗ ಅಯ್ಯು ಗುಳ್ಳ
ಪ್ರೊಫೆಸರ್ ಹುಚ್ಚುರಾಯ
ಅಣ್ಣ ಅತ್ತಿಗೆ
೧೯೭೫ ದೇವರಗುಡಿ
೧೦ ಕೂಡಿ ಬಾಳೋಣ
೧೧ ಕಳ್ಳ ಕುಳ್ಳ ಮಹೇಶ
೧೨ ಭಾಗ್ಯಜ್ಯೋತಿ
೧೩ ನಾಗಕನ್ಯೆ
೧೪ ಒಂದೇ ರೂಪ ಎರಡು ಗುಣ
೧೯೭೬ ೧೫ ದೇವರು ಕೊಟ್ಟ ವರ
೧೬ ಹೊಸಿಲು ಮೆಟ್ಟಿದ ಹೆಣ್ಣು
೧೭ ಮಕ್ಕಳ ಭಾಗ್ಯ
೧೮ ಬಂಗಾರದ ಗುಡಿ
೧೯೭೭ ೧೯ ಬಯಸದೇ ಬಂದ ಭಾಗ್ಯ
೨೦ ಸೊಸೆ ತಂದ ಸೌಭಾಗ್ಯ
೨೧ ನಾಗರಹೊಳೆ (ಚಲನಚಿತ್ರ)
೨೨ ಚಿನ್ನಾ ನಿನ್ನ ಮುದ್ದಾಡುವೆ
೨೩ ಸಹೋದರರ ಸವಾಲ್
೨೪ ಶ್ರೀಮಂತನ ಮಗಳು
೨೫ ಶನಿ ಪ್ರಭಾವ
೨೬ ಕಿಟ್ಟು ಪುಟ್ಟು ಕಿಟ್ಟು
೨೭ ಗಲಾಟೆ ಸಂಸಾರ
೧೯೭೮ ೨೮ ಹೊಂಬಿಸಿಲು ಡಾ.ನಟರಾಜ
೨೯ ಸಂದರ್ಭ
೩೦ ಕಿಲಾಡಿ ಕಿಟ್ಟು ಕಿಟ್ಟು
೩೧ ವಂಶಜ್ಯೋತಿ
೩೨ ಮುಯ್ಯಿಗೆ ಮುಯ್ಯಿ
೩೩ ಸಿರಿತನಕ್ಕೆ ಸವಾಲ್
೩೪ ಪ್ರತಿಮಾ (ಚಲನಚಿತ್ರ)
೩೫ ನನ್ನ ಪ್ರಾಯಶ್ಚಿತ್ತ
೩೬ ಸ್ನೇಹ ಸೇಡು
೩೭ ಕಿಲಾಡಿ ಜೋಡಿ
೩೮ ವಸಂತ ಲಕ್ಷ್ಮಿ
೩೯ ಅಮರನಾಥ್ (ಚಲನಚಿತ್ರ)
೪೦ ಭಲೇ ಹುಡುಗ
೪೧ ಮಧುರ ಸಂಗಮ ಕುಮಾರ ರಾಮ
೪೨ ಸಿಂಗಾಪುರದಲ್ಲಿ ರಾಜಾಕುಳ್ಳ ರಾಜಾ
೧೯೭೯ ೪೩ ಅಸಾಧ್ಯ ಅಳಿಯ
೪೪ ವಿಜಯ್ ವಿಕ್ರಮ್ ವಿಜಯ್,ವಿಕ್ರಮ್
೪೫ ನಾನಿರುವುದೆ ನಿನಗಾಗಿ (ಚಲನಚಿತ್ರ)
೪೬ ಮಾನಿನಿ
೪೭ ನೆಂಟರೋ ಗಂಟು ಕಳ್ಳರೋ
೧೯೮೦ ೪೮ ನನ್ನ ರೋಷ ನೂರು ವರುಷ
೪೯ ರಾಮ ಪರಶುರಾಮ ರಾಮ
೫೦ ಕಾಳಿಂಗ (ಚಲನಚಿತ್ರ) ಪ್ರಭಾಕರ, ಕಾಳಿಂಗ
೫೧ ಡ್ರೈವರ್ ಹನುಮಂತು ಸಂಗೀತದ ಗುರುಗಳು
೫೨ ಹಂತಕನ ಸಂಚು
೫೩ ಮಕ್ಕಳ ಸೈನ್ಯ
೫೪ ಬಿಳಿಗಿರಿಯ ಬನದಲ್ಲಿ
೫೫ ಸಿಂಹಜೋಡಿ
೫೬ ರಹಸ್ಯರಾತ್ರಿ
೫೭ ಬಂಗಾರದ ಜಿಂಕೆ
೧೯೮೧ ೫೮ ಮದುವೆ ಮಾಡು ತಮಾಷೆ ನೋಡು ಗಣೇಶ
೫೯ ಮನೆ ಮನೆ ಕಥೆ ಸುಬ್ಬು
೬೦ ನಾಗ ಕಾಳ ಭೈರವ
೬೨ ಗುರು ಶಿಷ್ಯರು
೬೩ ಸ್ನೇಹಿತರ ಸವಾಲ್
೬೪ ಅವಳ ಹೆಜ್ಜೆ
೬೫ ಪ್ರೀತಿಸಿ ನೋಡು
೧೯೮೨ ೬೬ ಪೆದ್ದ ಗೆದ್ದ ಲಾಯರ್
೬೭ ಸಾಹಸ ಸಿಂಹ
೬೮ ಕಾರ್ಮಿಕ ಕಳ್ಳನಲ್ಲ
೬೯ ಊರಿಗೆ ಉಪಕಾರಿ ಶ್ರೀಕಾಂತ್
೭೦ ಜಿಮ್ಮಿಗಲ್ಲು ಕೆರೆಏರಿ/ಜಿಮ್ಮಿ
೭೧ ಸುವರ್ಣ ಸೇತುವೆ
೭೨ ಒಂದೇ ಗುರಿ
೭೩ ಕಲ್ಲು ವೀಣೆ ನುಡಿಯಿತು
೧೯೮೩ ೭೪ ಮುತ್ತೈದೆ ಭಾಗ್ಯ
೭೫ ಗಂಧರ್ವ ಗಿರಿ
೭೬ ಸಿಡಿದೆದ್ದ ಸಹೋದರ
೭೭ ಗಂಡುಗಲಿ ರಾಮ ರಾಮ, ಗಂಡುಗಲಿ, ಕುಮಾರ್
೭೮ ಚಿನ್ನದಂತ ಮಗ
೭೯ ಸಿಂಹ ಘರ್ಜನೆ
೧೯೮೪ ೮೦ ಇಂದಿನ ರಾಮಾಯಣ
೮೧ ಪ್ರಚಂಡ ಕುಳ್ಳ ಶಿವ
೮೨ ರುದ್ರನಾಗ
೮೩ ಖೈದಿ
೮೪ ಬೆಂಕಿ ಬಿರುಗಾಳಿ
೮೫ ಬಂಧನ ಡಾ.ಹರೀಶ್
೮೬ ಹುಲಿ ಹೆಜ್ಜೆ
೮೭ ಚಾಣಕ್ಯ
೧೯೮೫ ೮೮ ಆರಾಧನೆ
೮೯ ಕರ್ತವ್ಯ
೯೦ ಮಹಾಪುರುಷ
೯೧ ವೀರಾಧಿವೀರ
೯೨ ನೀ ಬರೆದ ಕಾದಂಬರಿ
೯೩ ಮರೆಯದ ಮಾಣಿಕ್ಯ
೯೪ ನನ್ನ ಪ್ರತಿಜ್ಞೆ
೯೫ ಜೀವನ ಚಕ್ರ
೯೬ ನೀ ತಂದ ಕಾಣಿಕೆ ರವಿ
೧೯೮೬ ೯೭ ಕರ್ಣ (ಚಲನಚಿತ್ರ) ಕರ್ಣ
೯೮ ಕಥಾನಾಯಕ
೯೯ ಈ ಜೀವ ನಿನಗಾಗಿ ಚಂದ್ರು
೧೦೦ ಸತ್ಯಜ್ಯೋತಿ
೧೦೧ ಕೃಷ್ಣ ನೀ ಬೇಗನೆ ಬಾರೋ ಕೃಷ್ಣ
೧೦೨ ಮಲಯ ಮಾರುತ ವಿಶ್ವನಾಥ
೧೯೮೭ ೧೦೩ ಪ್ರೇಮಲೋಕ ಕಾಲೇಜ್ ಲೆಕ್ಚರರ್
೧೦೪ ಸೌಭಾಗ್ಯ ಲಕ್ಷ್ಮಿ
೧೦೫ ಕರುಣಾಮಯಿ
೧೦೬ ಜಯಸಿಂಹ ಜಯಸಿಂಹ
೧೦೭ ಆಸೆಯ ಬಲೆ
೧೦೮ ಜೀವನ ಜ್ಯೋತಿ
೧೦೯ ಶುಭ ಮಿಲನ
೧೧೦ ಸತ್ಯಂ ಶಿವಂ ಸುಂದರಂ (ಚಲನಚಿತ್ರ)
೧೯೮೮ ೧೧೧ ಡಿಸೆಂಬರ್ ೩೧ (ಚಲನಚಿತ್ರ)
೧೧೨ ಒಲವಿನ ಆಸರೆ
೧೧೩ ನಮ್ಮೂರ ರಾಜ
೧೧೪ ಜನನಾಯಕ
೧೧೫ ಸುಪ್ರಭಾತ (ಚಲನಚಿತ್ರ)
೧೧೬ ಕೃಷ್ಣ ರುಕ್ಮಿಣಿ ಕೃಷ್ಣ
೧೧೭ ಮಿಥಿಲೆಯ ಸೀತೆಯರು
೧೧೮ ದಾದಾ
೧೧೯ ಒಂದಾಗಿ ಬಾಳು
೧೨೦ ಹೃದಯಗೀತೆ
೧೨೧ ರುದ್ರ ರುದ್ರ
೧೨೨ ದೇವ ದೇವ
೧೨೩ ಡಾಕ್ಟರ್ ಕೃಷ್ಣ ಡಾ.ಕೃಷ್ಣ
೧೯೯೦ ೧೨೪ ಶಿವಶಂಕರ್ ಶಿವು,ಶಂಕರ್
೧೨೫ ಮುತ್ತಿನ ಹಾರ ಆಚಪ್ಪ
೧೨೬ ಮತ್ತೆ ಹಾಡಿತು ಕೋಗಿಲೆ
೧೯೯೧ ೧೨೭ ಲಯನ್ ಜಗಪತಿರಾವ್ ಲಯನ್ ಜಗಪತಿರಾವ್, ಕುಮಾರ್
೧೨೮ ನೀನು ನಕ್ಕರೆ ಹಾಲು ಸಕ್ಕರೆ
೧೨೯ ಜಗದೇಕ ವೀರ
೧೩೦ ಪೋಲಿಸ್ ಮತ್ತು ದಾದಾ
೧೯೯೨ ೧೩೧ ರಾಜಾಧಿರಾಜ
೧೩೨ ರವಿವರ್ಮ ರವಿವರ್ಮ
೧೩೩ ಹರಕೆಯ ಕುರಿ
೧೩೪ ನನ್ನ ಶತ್ರು
೧೯೯೩ ೧೩೫ ಸಂಘರ್ಷ (ಚಲನಚಿತ್ರ)
೧೩೬ ವೈಶಾಖದ ದಿನಗಳು
೧೩೭ ನಾನೆಂದೂ ನಿಮ್ಮವನೆ
೧೩೮ ರಾಯರು ಬಂದರು ಮಾವನ ಮನೆಗೆ ವಿಷ್ಣು
೧೩೯ ವಿಷ್ಣು ವಿಜಯ ವಿಷ್ಣು
೧೪೦ ಮಣಿಕಂಠನ ಮಹಿಮೆ
೧೪೧ ನಿಷ್ಕರ್ಷ ವಿಜಯ್
೧೯೯೪ ೧೪೨ ಟೈಂಬಾಂಬ್
೧೪೩ ಕುಂತಿಪುತ್ರ
೧೪೪ ಸಾಮ್ರಾಟ್
೧೪೫ ಮಹಾ ಕ್ಷತ್ರಿಯ
೧೪೬ ಹಾಲುಂಡ ತವರು
೧೪೭ ಕಿಲಾಡಿಗಳು
೧೯೯೫ ೧೪೮ ಕೋಣ ಈದೈತೆ
೧೪೯ ಯಮ ಕಿಂಕರ ಕಿಂಕರ
೧೫೦ ಮೋಜುಗಾರ ಸೊಗಸುಗಾರ ವಿಜಯ್ ಮತ್ತು ವಿನೋದ್
೧೫೧ ದೀರ್ಘ ಸುಮಂಗಲಿ
೧೫೨ ಬಂಗಾರದ ಕಳಶ
೧೫೩ ತುಂಬಿದ ಮನೆ
೧೫೪ ಕರುಳಿನ ಕುಡಿ
೧೫೫ ಹಿಮಪಾತ ಅರವಿಂದ್/ಗೌತಮ್
೧೯೯೬ ೧೫೬ ಅಪ್ಪಾಜಿ
೧೫೭ ಹಲೋ ಡ್ಯಾಡಿ
೧೫೮ ಕರ್ನಾಟಕ ಸುಪುತ್ರ
೧೫೯ ಧಣಿ
೧೬೦ ಜೀವನದಿ ಸಾಗರ್
೧೬೧ ಬಾಳಿನ ಜ್ಯೋತಿ
೧೯೯೭ ೧೬೨ ಮಂಗಳ ಸೂತ್ರ (೧೯೯೭)
೧೬೩ ಎಲ್ಲರಂಥಲ್ಲ ನನ್ನ ಗಂಡ
೧೬೪ ಶೃತಿ ಹಾಕಿದ ಹೆಜ್ಜೆ
೧೬೫ ಜನನಿ ಜನ್ಮಭೂಮಿ
೧೬೬ ಲಾಲಿ
೧೯೯೮ ೧೬೭ ನಿಶ್ಯಬ್ಧ
೧೬೮ ಯಾರೇ ನೀನು ಚೆಲುವೆ ಆಟೋ ಡ್ರೈವರ್
೧೬೯ ಸಿಂಹದ ಗುರಿ
೧೭೦ ಹೆಂಡ್ತಿಗೇಳ್ತೀನಿ
೧೯೯೯ ೧೭೧ ವೀರಪ್ಪನಾಯ್ಕ ವೀರಪ್ಪನಾಯ್ಕ
೧೭೨ ಹಬ್ಬ ವಿಷ್ಣು
೧೭೩ ಸೂರ್ಯವಂಶ ಸತ್ಯಮೂರ್ತಿ & ಕನಕ ಮೂರ್ತಿ
೧೭೪ ಪ್ರೇಮೋತ್ಸವ
೨೦೦೦ ೧೭೫ ದೀಪಾವಳಿ (ಚಲನಚಿತ್ರ) ರವಿ
೧೭೬ ನನ್ ಹೆಂಡ್ತಿ ಚೆನಾಗಿದಾಳೆ
೧೭೭ ಸೂರಪ್ಪ ಸೂರಪ್ಪ
೧೭೮ ಯಜಮಾನ ಗಣೇಶ
೨೦೦೧ ೧೭೯ ದಿಗ್ಗಜರು
೧೮೦ ಕೋಟಿಗೊಬ್ಬ ನಂಜುಂಡ
೨೦೦೨ ೧೮೧ ಪರ್ವ (ಚಲನಚಿತ್ರ)
೧೮೨ ಜಮೀನ್ದಾರ್ರು ಬೆಟ್ಟಪ್ಪ
೧೮೩ ಸಿಂಹಾದ್ರಿಯ ಸಿಂಹ
೨೦೦೩ ೧೮೪ ರಾಜ ನರಸಿಂಹ
೧೮೫ ಹೃದಯವಂತ
೨೦೦೪ ೧೮೬ ಕದಂಬ (ಚಲನಚಿತ್ರ) ಕದಂಬ
೧೮೭ ಆಪ್ತಮಿತ್ರ ಡಾ.ವಿಜಯ್
೧೮೮ ಸಾಹುಕಾರ
೧೮೯ ಜ್ಯೇಷ್ಠ
೨೦೦೫ ೧೯೦ ವರ್ಷ(ಚಲನಚಿತ್ರ)
೨೩.೦೯.೨೦೦೫ ೧೯೧ ವಿಷ್ಣುಸೇನಾ
೨೦೦೬ ೧೯೨ ನೀನೆಲ್ಲೋ ನಾನಲ್ಲೆ
೧೯೩ ಸಿರಿವಂತ
೨೦೦೭ ೧೯೪ ಏಕದಂತ ವಿಜಯ್ (ಬಸ್ ಕಂಡಕ್ಟರ್)
೧೯೫ ಕ್ಷಣ ಕ್ಷಣ ಡಿ.ಸಿ.ಪಿ. ವಿಷ್ಣು
೧೯೬ ಮಾತಾಡ್ ಮಾತಾಡು ಮಲ್ಲಿಗೆ ಹೂವಯ್ಯ
೧೯೭ ಈ ಬಂಧನ ಹರೀಶ್ ರಾಜ್
೨೦೦೯ ೧೯೮ ನಮ್ಮೆಜಮಾನ್ರು
೧೯೯ ಬಳ್ಳಾರಿ ನಾಗ ನಾಗ ಮಾಣಿಕ್ಯ
೨೦೧೦ ೨೦೦ ಸ್ಕೂಲ್ ಮಾಸ್ಟ್ರರ್
೨೦೧ ಆಪ್ತ ರಕ್ಷಕ ಡಾ.ವಿಜಯ್ - ವಿಜಯ ರಾಜೇಂದ್ರ ಬಹದ್ದೂರ್

ಹಿಂದಿ[ಬದಲಾಯಿಸಿ]

ಸಂಖ್ಯೆ ಚಿತ್ರದ ಹೆಸರು
ಏಕ್ ನಯಾ ಇತಿಹಾಸ್
ಇನ್ಸ್ ಪೆಕ್ಟರ್ ಧನುಷ್
ಖಾಖಿ ವರ್ಧಿ
ಜಾಲೀಮ್

ತಮಿಳು[ಬದಲಾಯಿಸಿ]

ಸಂಖ್ಯೆ ಚಿತ್ರದ ಹೆಸರು
ಮಳಲೈ ಪಟ್ಟಾಳಂ
ವಿಡುದಲೈ
ಅಲೈಗಳ್
ಗುರು ರಾಘವೇಂದ್ರರ್
ಮರುದ ನಾಯಗನ್
ಈಟಿ

ತೆಲುಗು[ಬದಲಾಯಿಸಿ]

ಸಂಖ್ಯೆ ಚಿತ್ರದ ಹೆಸರು
ಸರ್ದಾರ್ ಧರ್ಮನ್ನ
ಲಕ್ಷ್ಮಿ ನಿರ್ದೋಷಿ

ಒಕ್ಕಡು ಚಾಲು

1-ಕಂಕಣಂ

ಮಲಯಾಳಂ[ಬದಲಾಯಿಸಿ]

ಸಂಖ್ಯೆ ಚಿತ್ರದ ಹೆಸರು
ಅಡಿಮೈ ಚಂಗಲ
ಕೌರವರ್
3 ಈಟಿ

ಹೊರಗಿನ ಕೊಂಡಿಗಳು[ಬದಲಾಯಿಸಿ]