ಡಾ.ಬಿ.ಆರ್.ಮಂಜುನಾಥ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಡಾ.ಮಂಜುನಾಥರು ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು'
'ಡಾ.ಬಿ.ಆರ್.ಮಂಜುನಾಥ್' ಸನ್ಮಾನಿಸಲ್ಪಟ್ಟರು'

'ಡಾ.ಬಿ.ಆರ್.ಮಂಜುನಾಥ್' ರವರು, ಸುಮಾರು ೪ ದಶಕಗಳಿಗಿಂತ ಹೆಚ್ಚು ಸಮಯ ಮುಂಬೈನಗರದಲ್ಲಿ ಮಾಡಿದ ವೃತ್ತಿಜೀವನದಲ್ಲಿ ಕನ್ನಡ ನಾಟಕ, ಸಂಗೀತ, ನೃತ್ಯಗಳ ಬಗ್ಗೆ ಬಹಳ ಕಾಳಜಿವಹಿಸಿದ್ದಾರೆ. ಅವರ ಪ್ರಮುಖ ಆಸಕ್ತಿಗಳಲ್ಲೊಂದಾದ, ಕನ್ನಡ ರಂಗಭೂಮಿಯನ್ನು ಉತ್ತು, ಹಸನಾದ-ಗಟ್ಟಿ ಬೀಜಗಳನ್ನು ಬಿತ್ತಿ,'ಬಿತ್ತಿ ಬೆಳೆದವರು' ಎಂಬ ಅನ್ವರ್ಥನಾಮದ 'ಕನ್ನಡ ನಾಟಕ'ವನ್ನೂ ಬರೆದು ನಿರ್ದೇಶಿಸಿದ 'ಅಪ್ರತಿಮ ಕನ್ನಡ ಪ್ರೇಮಿಗಳು.

ಪರಿವಿಡಿ

ಬರೆದು ನಿರ್ದೇಶಿಸಿದ ನಾಟಕಗಳು [ಬದಲಾಯಿಸಿ]

  • ಬೆಳ್ಳಿಬಯಲು,
  • ಬೆಂದಕಾಳೂರು,
  • ಬಿಸಿಲ್ಗುದುರೆ,
  • ಹೀರಾ,
  • ಹೂಗಿಡದಲ್ಲಿ ಹೂ ಅರಳಿಹುದು,
  • ನಾ ದ್ಯಾವ್ರನ್ನ್ ಕಾಣ್ಬೇಕು,
  • ಸಾಕಾರ

ಮೊದಲಾದ ನಾಟಕಗಳನ್ನು ರಚಿಸಿ,ಇವರದೇ ನಿರ್ದೇಶನದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಪ್ರಯೋಗಕಂಡ ನಾಟಕಗಳು [ಬದಲಾಯಿಸಿ]

  • ಆ ರಾತ್ರಿ,
  • ಆ ಮನಿ,
  • ಜಾತ್ರೆ,
  • ಕತ್ತಲೆ-ಬೆಳಕು,
  • ಹಯವದನ,
  • ನಾಗಮಂಡಲ,

ಮೊದಲಾದ ಈಗಾಗಲೇ ಮಂಚೂಣಿಯಲ್ಲಿರುವ ಪ್ರಮುಖ ನಾಟಕಕೃತಿಗಳನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನಿರೂಪಿಸಿ,ನಿರ್ದೇಶಿಸಿ ಹೆಸರುಗಳಿಸಿದ್ದಾರೆ.

'ವೃತ್ತಿಯಲ್ಲಿ ’ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್’(BTRA) ನಲ್ಲಿ ವಿಜ್ಞಾನಿಯಾಗಿದ್ದರು. ನಂತರ ಖಾಸಗಿ ಸಂಸ್ಥೆಯ ನಿರ್ದೇಶಕರಾಗಿ ದುಡಿದು, ನಿವೃತ್ತರಾಗಿದ್ದಾರೆ. ಆದರೂ, ಕನ್ನಡ ಪರ ಚಟುವಟಿಕೆಗಳೆಂದರೆ ಅವರಿಗೆ ಎಲ್ಲಿಲ್ಲದ ಕಳಕಳಿ ; ಆಸಕ್ತಿ.'ಮೈಸೂರ್ ಅಸೋಸಿಯೇಷನ್' ಸಂಸ್ಥೆಯ ಕನ್ನಡ ವಿಭಾಗದ ಹಲವು ದಿಗ್ಗಜರಾದ, 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ', ವಿ.ಕೆ.ಮೂರ್ತಿ, ಮತ್ತು ದಿವಂಗತ,'ಆರ್.ನಾಗೇಂದ್ರರಾವ್' ರಂತಹ 'ಮುತ್ಸದ್ಧಿ'ಗಳಿಂದ ಪ್ರಭಾವಿತರಾಗಿ, ತಾವೂ ತಮ್ಮದೇ ರೀತಿಯಲ್ಲಿ, ಸಮರ್ಥವಾಗಿ ಯೋಗದಾನ ಮಾಡುತ್ತಿರುವ 'ಮಂಜುನಾಥ'ರ ಕೊಡುಗೆಗಳು ಅಮೂಲ್ಯವಾದವುಗಳು.

'*ಸಾಧನ ಶಿಖರ ಪ್ರಶಸ್ತಿ ಪ್ರದಾನ'

ಪ್ರಶಸ್ತಿ ಪುರಸ್ಕಾರಗಳು [ಬದಲಾಯಿಸಿ]

  • ಸನ್. ೧೯೯೪ ರಲ್ಲಿ, ನಾಟಕ ಅಕ್ಯಾಡೆಮಿ ಪ್ರಶಸ್ತಿಗೆ ಪಾತ್ರರಾದರು.

ಸಾಧನ ಶಿಖರ ಪ್ರಶಸ್ತಿ [ಬದಲಾಯಿಸಿ]

ವರ್ಷ ೨೦೧೨ ರ, ಮಾರ್ಚ್ ತಿಂಗಳ ೨೪ ಶನಿವಾರ ಮತ್ತು ೨೫ ರ ಭಾನುವಾರ 'ಮುಂಬೈನ ಕರ್ನಾಟಕ ಸಂಘದ ಡಾ.ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ ಮೂರು ಜನ ಸಾಧಕರಿಗೆ 'ಸಾಧನ ಶಿಖರ ಪ್ರಶಸ್ತಿಯನ್ನು ಪ್ರದಾನಮಾಡಿ ಗೌರವ ಸೂಚಿಸಲಾಯಿತು. ಡಾ.ಬಿ.ಆರ್.ಮಂಜುನಾಥ್ ರ ಜೊತೆ, ಇದೇ ಪ್ರಶಸ್ತಿ ಪಡೆದವರು, ಡಾ. ಸಂಜೀವ ಶೆಟ್ಟಿ, ಮತ್ತು ವಿದುಷಿ. ಉಮಾನಾಗಭೂಷಣ. ಪ್ರಶಸ್ತಿ ವಿಜೇತರಿಗೆ, ಶಾಲುಹೊದಿಸಿ,ಫಲ ಪುಷ್ಪಗಳನ್ನು ಅರ್ಪಿಸಿ,ಜೊತೆಯಲ್ಲಿ ಸ್ಮರಣಿಕೆ, ಪ್ರಶಸ್ತಿಪತ್ರ, ಹಾಗೂ ೧೦ ಸಾವಿರ ರೂಪಾಯಿಗಳ ನಗದು ಹಣವನ್ನು ಕೊಡಲಾಯಿತು. ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು, ಡಾ.ಜಿ.ಡಿ.ಜೋಶಿ, ಶ್ರೀ.ಬಿ.ಎ.ಸನದಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,ಡಾ.ಭರತ್ ಕುಮಾರ್ ಪೊಲಿಪು, ಶ್ರೀ.ಓಂದಾಸ ಕಣ್ಣಂಗಾರ್, ಮೊದಲಾವರು.

ಈಗಾಗಲೇ ಸಾಧನ ಶಿಖರ ಪ್ರಶಸ್ತಿ ವಿಜೇತರು [ಬದಲಾಯಿಸಿ]

  • ಚಿತ್ರ ಕೃಪೆ : [[೧]]