ಟ್ವಿನ್ ಗ್ರೂವ್ ಗಾಳಿ ವಿದ್ಯುತ್ ಕೇಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟ್ವಿನ್ ಗ್ರೂವ್ ಗಾಳಿ ವಿದ್ಯುತ್ ಕೇಂದ್ರ

’ಟ್ವಿನ್ ಗ್ರೂವ್ ವಿಂಡ್ ಫಾರ್ಮ್', ಇಲಿನಾಯ್ ರಾಜ್ಯದ ಬ್ಲೂಮಿಂಗ್ಟನ್ ನಗರದಲ್ಲಿ ಸ್ಥಾಪಿಸಲ್ಪಟ್ಟಿದೆ[ಬದಲಾಯಿಸಿ]

ಅಮೆರಿಕ ಸಂಯುಕ್ತ ಸಂಸ್ಥಾನದ, ಇಲಿನಾಯ್ ರಾಜ್ಯದಲ್ಲಿರುವ, 'ಟ್ವಿನ್ ಗ್ರೂವ್ ಗಾಳಿಶಕ್ತಿ ಕೇಂದ್ರ,' ವನ್ನು ಸ್ಥಾಪಿಸುವ ಉದ್ದೇಶ್ಯದಹಿಂದೆ, ಖಾಸಗಿಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರತಿಷ್ಠಿತ ಹೊರೈಜಾನ್ ಕಂಪೆನಿಯಯ ಜೊತೆಗೆ, ಸ್ಥಳೀಯ ರೈತಾಪಿಜನರ, ವೈಜ್ಞಾನಿಕ ಮನೋಭಾವ, ದೂರದೃಷ್ಟಿ, ಹಾಗೂ ನೆರವಾಗುವ ಸುಬುದ್ಧಿಗಳ ಯೋಗದಾನದಿಂದ ಕೆಲಸಗಳು ಸುಗಮವಾಗಿ ನಡೆಯುತ್ತಿವೆ. ಅಮೆರಿಕದಲ್ಲಿ ಪ್ರಸಿದ್ಧಿಯಾದ 'ಹೊರೈಜಾನ್ ಗಾಳಿಶಕ್ತಿ' ಕಂಪೆನಿ ತನ್ನ ದಿಟ್ಟಹೆಜ್ಜೆಯಿಂದ ಮುನ್ನಡೆದು, ಗಾಳಿಯಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸಿ ಯಶಸ್ಸನ್ನು ಸ್ಥಾಪಿಸಿದೆ. ಇದರ ಶಾಖೆಗಳು ಅಮೆರಿಕದ ಮೂಲೆ-ಮೂಲೆಗಳಲ್ಲಿ ಸಫಲತಾಪೂರ್ವಕವಾಗಿ ಕೆಲಸಮಾಡುತ್ತಿವೆ.

'ಪೂರ್ವ ಮೆಕ್ಲೀನ್ ಕೌಂಟಿ' ಯ ಪರಿಸರ ಹಾಗೂ ಅಲ್ಲಿ ಬೀಸುವಗಾಳಿಯ ವೇಗ ಅನುಕೂಲವಾಗಿತ್ತು[ಬದಲಾಯಿಸಿ]

ಅಮೆರಿಕದ, 'ಪೂರ್ವ ಮೆಕ್ಲೀನ್ ಕೌಂಟಿ,' ಯಲ್ಲಿರುವ 'ಬ್ಲೂಮಿಂಗ್ಟನ್ ಮೊರೇನ್,' ನಲ್ಲಿ ಬೀಸುವ ಗಾಳಿಯವೇಗ ಅತಿ ಹೆಚ್ಚಾಗಿರುವುದನ್ನು ಅಲ್ಲಿಯ ಸ್ಥಳೀಯರು ಯಾವಾಗಲೂ ಗಮನಿಸಿ, ಅಲ್ಲಿನ ಜನರು, ಆಗಾಗ, ಮಾತಾಡಿಕೊಳ್ಳುತ್ತಿದ್ದರು. ಪಿಕ್ನಿಕ್ ಗೆ ಬಂದ ಹೆಂಗೆಳೆಯರ ತಲೆಯ ಕೂದಲು, ಮುಂಗುರುಳು ಎಡೆಬಿಡದೆ ಹಾರುತ್ತಿದ್ದುದ್ದನ್ನು ಗಮನಿಸಿದ್ದರು. ಫರ್ ಹ್ಯಾಟ್ ಗಳನ್ನು ಗಾಳಿ ಹಾರಿಸಿಕೊಂಡು ಹೋಗುತ್ತಿತ್ತು. ಕೈನಲ್ಲಿ ಹಿಡಿದ ಪುಸ್ತಕ, ಥೈಲಿಗಳು ಪಟ-ಪಟನೆ ಹಾರಾಡುತ್ತಿದ್ದವು. ಒಬ್ಬರ ಮಾತು ಮತ್ತೊಬ್ಬರಿಗೆ ಕೇಳದಷ್ಟು 'ಗುಯ್ ಗುಟ್ಟುವ,' 'ಸುಂಯ್,' ಎಂದು ಕಿವಿಗಳಲ್ಲಿ ಶಬ್ದಮಾಡುವ, ಗಾಳಿಯ ಸಂಗಾತಿಗಳಾಗಿದ್ದೇನೋ ನಿಜ. ಆದರೆ ಇದೇ ಗಾಳಿ ಬೃಹತ್ ಪ್ರಮಾಣದ ಯಂತ್ರಗಳ ಗಾಲಿಗಳನ್ನೂ ತಿರುಗಿಸುವ ಸಾಮರ್ಥ್ಯ ಉಳ್ಳದ್ದು, ಎಂದು ಅರಿ ಯಂತ್ರಗಳ ಗಾಲಿಗಳನ್ನೂ ತಿರುಗಿಸುವ ಸಾಮರ್ಥ್ಯ ಉಳ್ಳದ್ದು, ಎಂದು ಅರಿಯಲು ಕೆಲವು ಸಮಯವೇ ಬೇಕಾಯಿತು. ಎಲ್ಲರ ಅನುಮತಿ ಪಡೆದು ’ಟ್ವಿನ್ ಗ್ರೂವ್ ವಿಂಡ್ ಫಾರ್ಮ್,” ನ್ನು ಈ ಸ್ಥಳದಲ್ಲೇ ಸ್ಥಾಪಿಸಲು ನಿರ್ಧರಿಸಲಾಯಿತು. ೩೯೬ ಮೆಗಾ. ವ್ಯಾಟ್ ಪಲ್ಯೂಶನ್ ಫ್ರೀ ಗಾಳಿ ಶಕ್ತಿಯು ಉತ್ಪಾದನೆಯಾದಾಗ, ೧,೧೮,೦೦೦ ಮನೆಗಳಿಗೆ ವರ್ಷಪೂರ್ತಿ ಬೇಕಾದ ಪವರ್ ನ್ನು ಒದಗಿಸಬಲ್ಲದೆಂದು ವರದಿಗಳು ತಿಳಿದುಬಂದವು.

'ಹೊರೈಜಾನ್ ಕಂಪೆನಿ', ಬ್ಲೂಮಿಂಗ್ಟನ್ ಹಳ್ಳಿಯಲ್ಲಿ ಗಾಳಿಯನ್ನುಪಯೋಗಿಸಿ ವಿದ್ಯುತ್-ತಯಾರಿಕಾ ಘಟಕವನ್ನು ಸ್ಥಾಪಿಸಿತು[ಬದಲಾಯಿಸಿ]

ಬ್ಲೂಮಿಂಗ್ಟನ್ ನಗರದ ಸ್ಥಳೀಯ ೧೪೦ ಜಮೀನು-ಮಾಲೀಕರ ಅವಶ್ಯಕತೆಯನ್ನು ಗಮನಿಸಿ, ಅವರ ಮನಒಲಿಸಿ, ತಮ್ಮ ಗಾಳಿ ಶಕ್ತಿ ಪ್ರಾಜೆಕ್ಟ್ ನ್ನು ಅಲ್ಲಿ ಸ್ಥಾಪಿಸುವ ಬಗ್ಗೆ ಪೂರ್ಣ ಮಾಹಿತಿಗಳನ್ನು ನೀಡಿ ಅವರೆಲ್ಲರ ಸಮ್ಮತಿ ಹಾಗೂ ಸಹಕಾರದ ನಂತರ ಪ್ರಾಜೆಕ್ಟ್ ಪ್ರಾರಂಭಿಸಿದರು. ಸ್ಥಳೀಯರಿಗೆ ಸಂದರ್ಭೋಚಿತವಾಗಿ, ಸಲ್ಲಬೇಕಾದ ರಾಯಲ್ಟಿಹಣವನ್ನು ಕೊಟ್ಟು ಸಹಕರಿಸಿದ್ದಾರೆ. ೨೨,೦೦೦ ಎಕರೆ ಹೊಲಕ್ಕೆ. ನಗದುಹಣದ ಪರಿಹಾರಧನದ ಸಹಾಯವನ್ನೂ ಮಾಡಿದ್ದಾರೆ. ಈ ಪ್ರಾಜಕ್ಟ್ ಪ್ರಾರಂಭವಾದಾಗ ೩೫೦ ಜನರಿಗೆ ನೌಕರಿದೊರೆತಿತ್ತು. ಈಗ ೩೭ ಮಂದಿ ದಿನಪೂರ್ತಿಕೆಲಸಮಾಡುವ ಕಾರ್ಯಕರ್ತರಿದ್ದಾರೆ. ಅವರುಗಳೆಲ್ಲಾ ಅಲ್ಲಿನ ಜಮೀನು ಹಾಗೂ ಈಗ ಅಲ್ಲಿ ಸ್ಥಾಪಿಸುವ ಗಾಳಿ ಯಂತ್ರಗಳ ಕಾರ್ಯಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಕೊಂಡಿಯಾಗಿ ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ’ಟ್ವಿನ್ ಗ್ರೂ ವ್ ಗಾಳಿ ಯಂತ್ರಗಳು ’, ತಮ್ಮ ಪರಿಸರದಲ್ಲಿನ ಗಾಳಿಯ ವೇಗಕ್ಕನುಗುಣವಾಗಿ ವಿದ್ಯುತ್ತನ್ನುಅಚ್ಚುಕಟ್ಟಾಗಿ ಉತ್ಪಾದಿಸಿ ಪರಿಸರ ಮಾಲೀನ್ಯತೆ ಮುಂತಾದ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿದ್ಯುತ್ ಉತ್ಪಾದನಾ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಈ ಗಾಳಿಶಕ್ತಿ ಉತ್ಪಾದನಾ ಕೇಂದ್ರದಲ್ಲಿ, ಹೊಸ ಕೆಲಸಕಾರ್ಯಗಳಿಗೆ ಕೆಲಸಗಾರರಿಗೆ ಸ್ಥಳೀಯ ಕಂಪೆನಿಯ ಸ್ಥಾನಗಳು ತೆರವಾಗುತ್ತವೆ. ಅಲ್ಲಿನ ಸ್ಥಳೀಯ ಶಾಲೆಗಳು, ಸ್ಥಳೀಯಸಂಸ್ಥೆಗಳು, ಸಾರ್ವಜನಿಕ ಮನೋರಂಜನಾ ಸಂಸ್ಥೆಗಳು ಮುಂತಾದ ಕ್ಷೇತ್ರಗಳಿಗೆ ವಿದ್ಯುತ್ ಪೂರೈಕೆಯನ್ನು ಸರಿಯಾಗಿ ಮಾಡಬಹುದು. ಒಟ್ಟಾರೆ ಇಂತಹ ಪ್ರಾಜೆಕ್ಟ್ ಗಳಿಂದ, ದೇಶದ ಬೊಕ್ಕಸ-ಖಾನೆಗೆ ಹಣದ ಸಂದಾಯವಾಗುತ್ತಿದೆ.

ವಿಂಡ್ ಮಿಲ್ ಪ್ರಾಜೆಕ್ಟ್ ನ ಅಂಕಿಅಂಶಗಳು[ಬದಲಾಯಿಸಿ]

ಪ್ರಚಂಡವೇಗದಲ್ಲಿ ಗಾಳಿ ಬೀಸುವಿಕೆಯನ್ನು ಗುರುತಿಸಿ ನಿರ್ಮಾಣಮಾಡಿದ ಸ್ಥಳ :

’ಮಕ್ಲೀನ್ ಕೌಂಟಿ”.[ಬದಲಾಯಿಸಿ]

ಒಟ್ಟು ೨೨,೦೦೦ ಎಕರೆ ಕ್ಷೇತ್ರದಲ್ಲಿ ಕೆಲಸ ಆರಂಭವಾಗಿದೆ.

ಪ್ರಾಜೆಕ್ಟ್ ಮುಗಿದ ತಾರೀಖು :

  • ಮೊದಲನೆಯ ಫೇಸ್ : ಜೂನ್, ೨೦೦೭
  • ಎರಡನೆಯ ಫೇಸ್ : ಫೆಬ್ರವರಿ, ೨೦೦೮

ಪ್ರಾಜೆಕ್ಟ್ ನಿಂದ ಉತ್ಪಾದನೆಯಾಗುವ ಅಂದಾಜು ವಿದ್ಯುತ್ ಶಕ್ತಿ : ೩೯೬ ಮೆಗಾವ್ಯಾಟ್ ಗಳು.

ವಾರ್ಷಿಕ ವಿದ್ಯುತ್ ಉತ್ಪಾದನಾ ಸಾಮರ್ಥ್ಯ : ೧.೩ ಬಿಲಿಯನ್ ಕಿಲೋವ್ಯಾಟ್ ಅವರ್ಸ್ಗಳು.[ಬದಲಾಯಿಸಿ]

ಒಟ್ಟು ಟರ್ಬೈನ್ ಗಳು : ೨೪೦ ವಿಂಡ್ ಟರ್ಬೈನ್ ಜನರೇಟರ್ ಗಳು ೧.೬೫ ಮೆಗಾವ್ಯಾಟ್ /ಪ್ರತಿ ಯಂತ್ರದ ಉತ್ಪಾದನಾ ಸಾಮರ್ಥ್ಯ.

’ಮೆಕ್ಲೀನ್ ಕೌಂಟಿ,’ ಯನ್ನೇ ಆರಿಸಿಕೊಂಡಿದ್ದಕ್ಕೆ ಕಾರಣಗಳು[ಬದಲಾಯಿಸಿ]

ಮೊದಮೊದಲು ಈ ಭಾಗದಲ್ಲಿ ಹೆಚ್ಚು-ಗಾಳಿಬೀಸುವ ಸಾಧ್ಯತೆ ಬಹಳ ಕಡಿಮೆ ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು. ಅಮೆರಿಕದ ಹಲವಾರು ಪ್ರದೇಶಗಳಲ್ಲಿ ಬೀಸುವ ತರಹ ಇಲ್ಲೂ ಬೀಸುತ್ತದೆ, ಎಂದು ಜನರ ಅಭಿಮತವಾಗಿತ್ತು. ಆದರೆ, ವೈಜ್ಞಾನಿಕ ಸರ್ವೇಕ್ಷಣೆ ನಡೆಸಿದನಂತರ ತಿಳಿದ ಸಂಗತಿಗಳು, ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದವು. (US Department of Energy and the National Renewable Energy laboratory) ರಾಜ್ಯದ ಹಲವು ಜಾಗಗಳಲ್ಲಿ ಗಾಳಿಯಿಂದ ಯಂತ್ರನಡೆಸುವಷ್ಟು ಅನುಕೂಲವಿದೆಯೆಂದು ಕಂಡುಬಂತು. ವಾಣಿಜ್ಯ ಮಟ್ಟದಲ್ಲಿ ಉತ್ಪಾದಿಸಿ ಬಳಕೆಗೆ ತರುವ ಸಾಧ್ಯತೆಗಳು ಗೋಚರಿಸಿದವು. ಬ್ಲೂಮಿಂಗ್ಟನ್ ಮೊರೇನ್ ನಲ್ಲಿ ಟ್ವಿನ್ ಗ್ರೂವ್ಸ್ ಪ್ರಾಜೆಕ್ಟ್ ನ್ನು ಸ್ಥಾಪಿಸಿದ್ದಾರೆ. ಇಲಿನಾಯ್ ನ ೪ ಅತಿದೊಡ್ಡ ಮೊರೇನ್ ಗಳಲ್ಲಿ ಒಂದು. ವರ್ಷಗಳ ಹಿಂದೆ ಅಲ್ಲಿನ ಸ್ಥಳೀಯ ಜನರು ಆಡಿಕೊಳ್ಳುವ ರೀತಿ ಸುಮಾರು,೧೪,೦೦೦ ರಿಂದ ೨೫,೦೦೦ ವರ್ಷಗಳ ಹಿಂದೆಯೇ ಇಂತಹ ಮೊರೇನ್ ಗಳು, ಒಡಮೂಡಿರಬಹುದು. ಈ ಪ್ರದೇಶ ಸಮುದ್ರಮಟ್ಟದಿಂದ ಸುಮಾರು, ೬೫೦ ರಿಂದ ೯೦೦ ಅಡಿಎತ್ತರದಲ್ಲಿದೆ. ಎರಡು ಹಳ್ಳಿಗಳಾದ ’ಯಾರೋಸ್ಮಿತ್,’ ಮತ್ತು”ಚೆನಿಸ್ ಗ್ರೂವ್,’ ಮತ್ತು ಅಲ್ಲಿನ ವಿಶಾಲವಾದ ಹೊಲಗಳಲ್ಲಿ, ಪ್ರಾರಂಭವಾಗಿ ಕೆಲಸಮಾಡುತ್ತಿವೆ. ಮಧ್ಯ ಇಲಿನಾಯ್ ನಲ್ಲಿಯೂ ಸುಮಾರು ವಿಂಡ್ ಮಿಲ್ ಗಳು ಸ್ಥಾಪಿತವಾಗಿವೆ; ಸರಿಯಾಗಿ ಕೆಲಸThe Twin Groves site , ಎಲ್ಲವಿಧದಿಂದಲೂ, ಅತ್ಯುತ್ತಮವಾದ ಜಾಗದಲ್ಲಿ ಸ್ಥಾಪಿಸಿದ್ದು, ಗಾಳಿ ಚೆನ್ನಾಗಿ ದಿನದ ಎಲ್ಲಾ ಸಮಯದಲ್ಲೂ ಲಭ್ಯವಿದೆ. ರತರ ಹೊಲದಮಧ್ಯೆ ನೆಡುವ ಕಂಬಗಳಿಂದ ತಯಾರಾಗುವ ಶಕ್ತಿ, ಸಮೀಪದ ವಿದ್ಯುತ್ ಮಾರುಕಟ್ಟೆಗೆ ಮಾರಲು ಸಹಾಯಕವಾಗಿದೆ. ಶಕ್ತಿಯನ್ನು 'ಟ್ರಾನ್ಸ್ ಮಿಶನ್ ಟವರ್' ನ ತಂತಿಗಳ ಮೂಲಕ ದೂರಕ್ಕೆ ಕೊಂಡೊಯ್ಯಲೂ ಸಹಾಯಕವಾಗಿದೆ. ನೋಡಲು ಮೊದಲು ಇಲಿನಾಯ್ ಸಮತಟ್ಟಾದ ಪ್ರದೇಶದಂತಿತ್ತು. ಆಗಾಗ ಗಾಳಿಜೋರಾಗಿ ಬೀಸುವುದನ್ನು ಜನರು ಗಮನಿಸಿದ್ದರು. ಆದರೆ ಅದರಿಂದ ಯಂತ್ರಗಳನ್ನು ತಿರುಗಿಸುವ ಶಕ್ತಿಯಿದೆಯೆಂಬ ವಿಚಾರ ಯಾರತಲೆಯಲ್ಲೂ ಹೊಳೆದಿರಲಿಲ್ಲ. ಹಾಗೇ ಹುಡುಕಿಕೊಂಡು ಹೋದಾಗ, ಕಂದರಗಳು, ವ್ಯಾಲಿಗಳು, ದಿಣ್ಣೆಗಳು, ಪುಟ್ಟಬೆಟ್ಟಗಳು, ಕಂಡವು. ವಿಸ್ಕಾನ್ಸಿನ್ ಪ್ರದೇಶದ ಗ್ಲೇಷಿಯರ್ ಕಥೆ ಪ್ರಕಾರ, ಕೆಲವರಿಗೆ ಸ್ಪೂರ್ಥಿಬಂದು ಇದಕ್ಕೆ ಅನುಮೋದನೆ ನೀಡಿದರಂತೆ.ಮಾಡುತ್ತಿವೆ.

ಆರ್. ಪಿ. ಎಸ್ ವರದಿ[ಬದಲಾಯಿಸಿ]

೨೦೦೧ ಮತ್ತು ೨೦೦೫ ರಲ್ಲಿ ಗಾಳಿಯಿಂದ ತಮಗೆ ಬೇಕಾದ ಹೆಚ್ಚಿನ ವಿದ್ಯುತ್ತನ್ನು ಪಡೆಯಬೇಕೆಂಬ ಆಕಾಂಕ್ಷೆಯಿತ್ತು. ಆಗಸ್ಟ್, ೨೦೦೭, ರಲ್ಲಿ ಇಲಿನಾಯ್ ಸರ್ಕಾರ, ಒಂದು ಕಾನೂನು ಹೊರಡಿಸಿ, 'ಇಲಿನಾಯ್ ಪವರ್ ಏಜೆನ್ಸಿ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿತು. ಇದು ಗಾಳಿಶಶಕ್ತಿಯನ್ನು ಉತ್ಪಾದಿಸುವ ಅಧಿಕೃತ ಘಟಕವಾಗಿ ತನ್ನ ಕೆಲಸಗಳನ್ನು ನಿರ್ವಹಿಸಬೇಕು, ಮತ್ತು ೨೦೨೫ ರಲ್ಲಿ ಕನಿಷ್ಟ ಪಕ್ಷ ೨೫% ನಷ್ಟು ಕಾರ್ಯವನ್ನು ಈ ನಿಟ್ಟಿನಲ್ಲಿ ನಿಭಾಯಿಸಬೇಕು. ಈ ಕಾನೂನಿನ ಪ್ರಕಾರ, ಆ ಪ್ರದೇಶದಲ್ಲಿ ಬಳಸುವ ಇಂಥನ-ಶಕ್ತಿಯ ೭೫% ಕನಿಷ್ಟ ಪಕ್ಷ ಗಾಳಿಯಮೂಲದ್ದಾಗಿರಬೇಕು, ಎಂಬ ಹಲವು ನಿರ್ಣಯಗಳಿವೆ.

ಬೇಕಾದ ತಾಂತ್ರಿಕ ಸೌಲಭ್ಯಗಳು[ಬದಲಾಯಿಸಿ]

'The McLean County Zoning Board,' ನವರು ಕೆಲವು ಮಂಡಲದ ನಿಯಮಗಳನ್ನು ಕ್ರಮಪಡಿಸಿದರು. ಇವು ಗಾಳಿಶಕ್ತಿಯನ್ನು ಪಯೋಗಿಸಿ ತಯಾರಿಸಿದ 'ವಿದ್ಯುತ್ ಟರ್ಬೈನ್ ಗಳಿಗೆ' ಅನ್ವಯಿಸುತ್ತದೆ ಕಂಬದ ಎತ್ತರ, ಮತ್ತು ಕೆಲವು ಅಡಚಣೆಗಳನ್ನು ಸರಿಪಡಿಸುವಿಕೆಯೂ ಇದರಲ್ಲಿ ಸೇರಿದೆ. 'ಹೊರೈಸನ್ ವಿಂಡ್ ಎನರ್ಜಿ ಕಂಪೆನಿ', ಮನೆಯಿಂದ ಯಂತ್ರದಘಟಕಕ್ಕೆ, ಸುಮಾರು, ೧,೫೦೦ ಅಡಿ ಅಂತರವನ್ನು ನಿಗದಿಮಾಡಿದೆ.