ಟ್ರಿಪನೊಸೋಮಿಯಾಸಿಸ್ ಅಥವಾ ಟ್ರಿಪನೊಸೋಮೋಸಿಸ್ ಎಂದರೆ ಟ್ರಿಪನೊಸೋಮ ಕುಲದ ಪರೋಪಜೀವಿ ಪ್ರೋಟೋಸೋವನ್ ಟ್ರಿಪನೊಸೋಮ್‌ಗಳಿಂದ ಕಶೇರುಕಗಳಿಗೆ ಬರುವ ಅನೇಕ ಕಾಯಿಲೆಗಳ ಹೆಸರಾಗಿದೆ. ಉಪ-ಸಹಾರ ಆಫ್ರಿಕಾದ 36 ರಾಷ್ಟ್ರಗಳ ಸರಿಸುಮಾರು 500,000 ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಮಾನವ ಆಫ್ರಿಕನ್ ಟ್ರಿಪನೊಸೋಮಿಯಾಸಿಸ್‌ನಿಂದ ಬಳಲುತ್ತಿದ್ದಾರೆ, ಇದು ಟ್ರಿಪನೋಸೋಮ ಬ್ರುಸಿ ಗ್ಯಾಂಬೈನ್ಸೆ ಅಥವಾ ಟ್ರಿಪನೊಸೋಮ ಬ್ರುಸಿ ರೋಡೆಸೈನ್ಸೆ ಯಿಂದ ಉಂಟಾಗುತ್ತದೆ. ಚಾಗಸ್ ಕಾಯಿಲೆ ಎಂದು ಕರೆಯುವ ಟ್ರಿಪನೊಸೋಮಿಯಾಸಿಸ್‌ನ ಮತ್ತೊಂದು ಮಾನವ ರೂಪವು ಪ್ರತಿ ವರ್ಷ 21,000 ಸಾವುಗಳಿಗೆ ಕಾರಣವಾಗುತ್ತದೆ,[೧] ಮುಖ್ಯವಾಗಿ ಲ್ಯಾಟಿನ್ ಅಮೇರಿಕಾದಲ್ಲಿ.
ಮಾನವ ಟ್ರಿಪನೊಸೋಮಿಯಾಸಸ್[ಬದಲಾಯಿಸಿ]
- ಮುಖ್ಯ ಲೇಖನವನ್ನು ಗಮನಿಸಿ: ಮಾನವ ಟ್ರಿಪನೊಸೋಮಿಯಾಸಿಸ್
- ಮಾನವ ಆಫ್ರಿಕನ್ ಟ್ರಿಪನೊಸೋಮಿಯಾಸಿಸ್, ಟ್ರಿಪನೊಸೋಮ ಬ್ರುಸಿಯಿಂದ ಸೋಂಕಿಗೊಳಗಾದ ಟ್ಸೆಟ್ಸೆ ಕೀಟದಿಂದ ಹರಡುತ್ತದೆ, ಆಫ್ರಿಕನ್ ಟ್ರಿಪನೊಸೋಮಿಯಾಸಿಸ್ಅನ್ನು ಗಮನಿಸಿ (ನಿದ್ರಿಸುವ ರೋಗ)
- ಮಾನವ ಅಮೇರಿಕನ್ ಟ್ರಿಪನೊಸೋಮಿಯಾಸಿಸ್, ಟ್ರಿಪನೊಸೋಮ ಕ್ರುಜಿಯಿಂದ ಸೋಂಕಿಗೊಳಗಾದ ಕೊಲೆಗಡುಕ ತಿಗಣೆಯಿಂದ ಹರಡುತ್ತದೆ, ಚಾಗಸ್ ಕಾಯಿಲೆಯನ್ನು ಗಮನಿಸಿ
ಪ್ರಾಣಿ ಟ್ರಿಪನೊಸೋಮಿಸಸ್[ಬದಲಾಯಿಸಿ]
ಚಾಗಸ್ ಸ್ಥಳೀಯ ವಲಯಗಳು (ಕೆಂಪು ಬಣ್ಣದಲ್ಲಿರುವುದು)
- ನಗಾನ ಅಥವಾ ಮಾನವ ಆಫ್ರಿಕನ್ ಟ್ರಿಪನೊಸೋಮಿಯಾಸಿಸ್, ಇದನ್ನು ಸೂಡಾನ್‌ನಲ್ಲಿ 'ಸೌಮ' ಅಥವಾ 'ಸೌಮಯ' ಎಂದು ಕರೆಯುತ್ತಾರೆ.
- ಸುರ್ರ
- ಮಾಲ್ ಡಿ ಕ್ಯಾಡೆರಾಸ್ (ಕೇಂದ್ರ ದಕ್ಷಿಣ ಅಮೇರಿಕಾ)
- ಮುರ್ರಿನ ಡಿ ಕ್ಯಾಡೆರಾಸ್ (ಪನಾಮ; ಡೆರ್ರೆಂಗಡೆರಾ ಡಿ ಕ್ಯಾಡೆರಾಸ್)
- ಡೌರಿನ್
- ಕ್ಯಾಚೆಕ್ಸಿಯಲ್ ಜ್ವರಗಳು (ವಿವಿಧ)
- ಗ್ಯಾಂಬಿಯನ್ ಹಾರ್ಸ್ ರೋಗ (ಕೇಂದ್ರ ಆಫ್ರಿಕಾ)
- ಬಲೇರಿ (ಸೂಡಾನ್)
- ಕಾವೋಡ್ಜೆರಾ (ರೋಡೇಶಿಯನ್ ಟ್ರಿಪನೊಸೋಮಿಯಾಸಿಸ್)
- ತಹಾಗ (ಅಲ್ಜೀರಿಯಾದಲ್ಲಿ ಒಂಟೆಗಳ ಒಂದು ರೋಗ)
- ಗ್ಯಾಲ್ಜಿಯಕ್ಟೆ, ಗ್ಯಾಲ್ಜಿಯಜ್ಕೆ (ದನಗಳ ಪಿತ್ತದ ಜ್ವರ; ದಕ್ಷಿಣ ಆಫ್ರಿಕಾದ ಪಿತ್ತದ ರೋಗ)
- ಪೆಸ್ಟೆ-ಬೋಡ (ವಿನೆಜುಯೆಲಾ; ಡೆರ್ರೆಂಗಡೆರಾ))
ಆಫ್ರಿಕನ್ ಟ್ರಿಪನೊಸೋಮಿಯಾಸಿಸ್‌ನ ರೋಗನಿರ್ಣಯ ಮಾಡಲು ರಕ್ತ, ದುಗ್ಧಗ್ರಂಥಿ ಹೀರಿಕೆ ಅಥವಾ CSFನಲ್ಲಿ ಟಿ. ಬ್ರುಸಿ ಯ ದಾಖಲೆಯು ಅಗತ್ಯವಾಗಿರುತ್ತದೆ.[೨]
ಅಮೇರಿಕನ್ ಟ್ರಿಪನೊಸೋಮಿಯಾಸಿಸ್‌ಗೆ ಪ್ರಸ್ತುತ ಬೆಂಜ್ನಿಡಜೋಲ್ ಮತ್ತು ನಿಫರ್ಟಿಮೋಕ್ಸ್ಅನ್ನೂ ಒಳಗೊಂಡಂತೆ ಒಂದು ಭಿನ್ನ ರೀತಿಯ ಶಿಲೀಂಧ್ರ-ವಿರೋಧಿ ಕಾರಕಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ಟಿ. ಬಿ. ಗ್ಯಾಂಬೈನ್ಸೆ ಯ ಚಿಕಿತ್ಸೆಗೆ ಬಳಸುವ ಮತ್ತೊಂದು ಔಷಧವೆಂದರೆ ಮೆಲಾರ್ಸೊಪ್ರೋಲ್.
ಪ್ರತಿ 100,000 ನಿವಾಸಿಗಳಲ್ಲಿ ಟ್ರಿಪನೊಸೋಮಿಯಾಸಿಸ್‌ನಿಂದ ಉಂಟಾಗುವ ದೌರ್ಬಲ್ಯವನ್ನು ನಿರ್ಣಯಿಸಿದ ಜೀವನಾವಧಿ ವರ್ಷ.[5][6][7][8][9][10][11][12][13][14][15][16][17]
- Thomas (1905). Report on Trypanosomes.
- Manson, Patrick, Sir, G.C.M.G. (1914). Tropical diseases, 5th.
- Daniels, C. W. (1914). Tropical Medicine and Hygiene.
- Miles, Michael W.; Ian Maudlin; Holmes, Peter (2004). The Trypanosomiases. Wallingford, UK: CABI Publishing.
ಟೆಂಪ್ಲೇಟು:Med-stub