ಟಿ.ಎಸ್. ನಾಗಾಭರಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: irrelevant

Expression error: Unexpected < operator.

ಟಿ.ಎಸ್.ನಾಗಾಭರಣ
Born ಬೆಂಗಳೂರು, ಕರ್ನಾಟಕ, ಭಾರತ
Nationality ಭಾರತೀಯ
Occupation ಚಿತ್ರನಿರ್ದೇಶಕ,ನಟ

ಟಿ. ಎಸ್. ನಾಗಾಭರಣ ಕನ್ನಡ ಚಿತ್ರರಂಗಕ್ಕೆ ಸೇರಿದ ಒಬ್ಬ ಭಾರತೀಯ ಚಿತ್ರನಿರ್ದೇಶಕ. ಇವರು ತಮ್ಮ ೨೬ ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ ೩೦ ಕನ್ನಡ ಚಿತ್ರಗಳಲ್ಲಿ ೨೦ ಚಿತ್ರಗಳಿಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಹಾಗು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ವಿಜ್ಞಾನ ಹಾಗು ಕಾನೂನು ಪದವೀಧರರು. ಇವರನ್ನು ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು[ಕರ್ನಾಟಕ ಸರ್ಕಾರ](ರಾಜ್ಯ ಚಲನಚಿತ್ರ ಮಂಡಳಿ).


ಸಾಧನೆಗಳು[ಬದಲಾಯಿಸಿ]

೮ ರಾಷ್ಟ್ರೀಯ ಪುರಸ್ಕಾರಗಳು ಹಾಗು ೧೪ ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ ಕೆಲವೇ ಕೆಲವು ಭಾರತೀಯ ನಿರ್ದೇಶಕರುಗಳಲ್ಲಿ ನಾಗಾಭರಣ ಒಬ್ಬರೆನಿಸಿದ್ದಾರೆ.[೧] ಇವರು ಜನುಮದ ಜೋಡಿ , ನಾಗಮಂಡಲ ಹಾಗು ಚಿನ್ನಾರಿ ಮುತ್ತ ದಂತಹ ಮುಖ್ಯವಾಹಿನಿ ಬ್ಲಾಕ್ಬಸ್ಟರ್ ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರ ನಿರ್ದೇಶನದ ನಾಗಮಂಡಲ ಚಿತ್ರವು ೧೯೯೮ರಲ್ಲಿ ಭಾರತದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಇವರು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಮೂರು ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿದ್ದಾರೆ; ಅವರ ನಿರ್ದೇಶನದ ಚಿತ್ರ ನಾವಿದ್ದೇವೆ ಎಚ್ಚರಿಕೆ ರಾಜ್ಯ ಪ್ರಶಸ್ತಿಯನ್ನು ಗಳಿಸುವುದರ ಜೊತೆಗೆ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಅವರ ನಿರ್ದೇಶನದ ಹೆಚ್ಚಿನ ಚಿತ್ರಗಳು ಭಾರತೀಯ ಜನಪದ ಕಥೆಗಳಿಂದ ಸಮೃದ್ಧವಾಗಿರುವುದರ ಜೊತೆಗೆ ಮಕ್ಕಳು ಹಾಗು ಮಹಿಳೆಯರೆಡೆಗೆ ಕಾಳಜಿಯುಳ್ಳ ಕಥಾವಸ್ತುವನ್ನು ಹೊಂದಿರುತ್ತದೆ. ಅವರ ನಿರ್ದೇಶನದ ಮೂರು ಚಲನಚಿತ್ರಗಳು ಅತ್ಯುತ್ತಮ ಚಲನಚಿತ್ರವೆಂದು ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಯನ್ನು ಗಳಿಸಿದೆ, ಹಾಗು ಇದನ್ನು ಗಳಿಸಿದಂತಹ ಏಕೈಕ ಭಾರತೀಯ ನಿರ್ದೇಶಕ. ಅವರು ದೂರದರ್ಶನಕ್ಕಾಗಿ ಹಲವಾರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ, ಇದರಲ್ಲಿ ಸಂಕ್ರಾಂತಿ , ಮುಸ್ಸಂಜೆ , ಗೆಳತಿ , ಹಾಗು ನಮ್ಮ ನಮ್ಮಲ್ಲಿ ಧಾರಾವಾಹಿಗಳು ಸೇರಿವೆ.

ಅವರ ನಿರ್ದೇಶನದ ಚಿತ್ರ ಸಿಂಗಾರವ್ವ , ೨೦೦೩ರಲ್ಲಿ "ಮತ್ತೊಂದು ದೃಷ್ಟಿಕೋನ" ಕಾರ್ಯಕ್ರಮದ ಒಂದು ಭಾಗವಾಗಿ ಕಾರ್ಲೋವಿ ವೇರಿ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು.


ಚಲನಚಿತ್ರಗಳು[ಬದಲಾಯಿಸಿ]

ವರ್ಷ ಚಲನಚಿತ್ರ ಟಿಪ್ಪಣಿಗಳು
೨೦೦೬ ಕಲ್ಲರಳಿ ಹೂವಾಗಿ
೨೦೦೪ ಸಿಂಗಾರವ್ವ
೨೦೦೩ ಚಿಗುರಿದ ಕನಸು
೧೯೯೬ ಜನುಮದ ಜೋಡಿ
೧೯೯೭ ನಾಗಮಂಡಲ
೧೯೯೫ ಅಮೇರಿಕಾದಲ್ಲಿ ಗೊರೂರು
೧೯೯೫ ನಾವಿದ್ದೇವೆ ಎಚ್ಚರಿಕೆ
೧೯೯೫ ಸಂಸ್ಮರಣ
೧೯೯೪ ಸಾಗರ ದೀಪ
೧೯೯೩ ಆಕಸ್ಮಿಕ
೧೯೯೩ ಚಿನ್ನಾರಿ ಮುತ್ತ
೧೯೯೧ ಮೈಸೂರು ಮಲ್ಲಿಗೆ
೧೯೯೦ ಸಂತ ಶಿಶುನಾಳ ಶರೀಫಾ
೧೯೮೯ ಪ್ರೇಮಾಗ್ನಿ
೧೯೮೯ ಸುರ ಸುಂದರಾಂಗ
೧೯೮೮ ಆಸ್ಫೋಟ
೧೯೮೭ ರಾವಣ ರಾಜ್ಯ
೧೯೮೬ ನೆನಪಿನ ದೋಣಿ
೧೯೮೫ ನೇತ್ರ ಪಲ್ಲವಿ
೧೯೮೪ ಆಹುತಿ
೧೯೮೪ ಪ್ರೇಮಯುದ್ಧ
೧೯೮೪ ಕರ್ನಾಟಕದ ಹೊಯ್ಸಳ ಹಾಗು ಚಾಲುಕ್ಯರ ವಾಸ್ತುಶಿಲ್ಪ ಸಾಕ್ಷ್ಯಚಿತ್ರ
೧೯೮೪ ಮಕ್ಕಳಿರಲವ್ವ ಮನೆತುಂಬ
೧೯೮೪ ಸೇಡಿನ ಸಂಚು
೧೯೮೩ ಬ್ಯಾಂಕರ್ ಮಾರ್ಗಯ್ಯ
೧೯೮೩ ಒಂಟಿ ಧ್ವನಿ
೧೯೮೨ ಪ್ರಾಯ ಪ್ರಾಯ ಪ್ರಾಯ
ಅನ್ವೇಷಣೆ
೧೯೮೦ ಬಂಗಾರದ ಜಿಂಕೆ
ಗ್ರಹಣ

ಉಲ್ಲೇಖಗಳು‌[ಬದಲಾಯಿಸಿ]

ಬಾಹ್ಯ ಕೊಂಡಿಗಳು‌[ಬದಲಾಯಿಸಿ]