ಟಾಟಾ ಟೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Tata company
ಸಂಸ್ಥೆಯ ಪ್ರಕಾರPrivate
ಸ್ಥಾಪನೆಕೊಲ್ಕತ್ತ, India (1964)
ಮುಖ್ಯ ಕಾರ್ಯಾಲಯಬೆಂಗಳೂರು, India
ಪ್ರಮುಖ ವ್ಯಕ್ತಿ(ಗಳು)Ratan Tata (Chairman)
ಉತ್ಪನ್ನTea
ಉದ್ಯೋಗಿಗಳು34,596 (2006)
ಪೋಷಕ ಸಂಸ್ಥೆTata Group
ಜಾಲತಾಣwww.tatatea.com

ಟಾಟಾ-ಟೆಟ್ಲಿ ಎಂದು ಕರೆಯಲ್ಪಡುವ ಟಾಟಾ ಟೀ ಲಿಮಿಟೆಡ್ ಜಗತ್ತಿನಲ್ಲಿಯೇ ಚಹಾ ಉತ್ಪನ್ನಗಳ ಎರಡನೇ ಬೃಹತ್ ಪ್ರಮಾಣದ ತಯಾರಕರು ಮತ್ತು ವಿತರಕರು ಆಗಿರುತ್ತಾರೆ.[೧] ಭಾರತದಟಾಟಾ ಗ್ರೂಪ್‌ನ ಸ್ವಾಧೀನಕ್ಕೊಳಪಟ್ಟ ಟಾಟಾ ಟೀ ಲಿಮಿಟೆಡ್ ವ್ಯಾಪಾರ ವಹಿವಾಟಿನ ಟೀಯು ಟಾಟಾ ಟೀ,ಟೆಟ್ಲಿ, ಗುಡ್ ಅರ್ತ್ ಟೀಸ್ ಮತ್ತು ಜೆಇ‌ಎಮ್‌ಸಿಎ ಎಂಬ ಪ್ರಮುಖ ಮುದ್ರಾಂಕಿತ ಸರಕುಗಳ ವ್ಯಾಪಾರದಡಿಯಲ್ಲಿದೆ. ಪ್ರಸ್ತುತ, ಭಾರತದಲ್ಲಿ ಟಾಟಾ ಟೀಯು ಬೃಹತ್ ಪ್ರಮಾಣದ ಬ್ರ್ಯಾಂಡೆಡ್ ಚಹಾ ಸರಕಾಗಿದೆ. ಹಾಗೇಯುನೈಟೆಡ್ ಕಿಂಗ್ ಡಂ ಮತ್ತು ಕೆನಡಾಗಳಲ್ಲಿ ಟೆಟ್ಲಿಯು ಬಹುದೊಡ್ಡ ಚಹಾ ಕಂಪೆನಿಯಾಗಿದೆ. ಗಾತ್ರದಲ್ಲಿ [೨] ಅಂದರೆ ವ್ಯಾಪಾರ ಪ್ರಮಾಣ ಆಧರಿಸಿ ಎರಡನೇ ದೊಡ್ಡ ಚಹಾ ಕಂಪೆನಿಯು ಯುನೈಟೆಡ್ ಸ್ಟೇಟ್ಸ್ ನಲ್ಲಿದೆ. ಹಾಗೂ ಝೆಕ್ ರಿಪಬ್ಲಿಕ್ನ ಮುಂದಾಳತ್ವದ ಟೀ ಕಂಪನಿ ಎಂದರೆ ಜೆಇ‌ಎಮ್‌ಸಿಎ.[೩]

ಕಂಪನಿ[ಬದಲಾಯಿಸಿ]

ಆರೋಗ್ಯ ಮತ್ತು ಪೋಷಕಾಂಶಯುತ ಪಾನೀಯಗಳಾಗಿ ಹೊರಹೊಮ್ಮಲು ಇದನ್ನು ಟಾಟಾ ಗ್ಲೋಬಲ್ ತಂಪು ಪಾನೀಯಗಳನ್ನಾಗಿ ಪುನರ್ ನಾಮಕರಣ ಮಾಡಲಾಯಿತು. ಹೀಗೆ ಪಾನೀಯದ ಗುಣಮಟ್ಟ ಹೆಚ್ಚಿಸಿಕೊಂಡು ವ್ಯಾಪಾರ ವಹಿವಾಟಿನ ಮಾರುಕಟ್ಟೆ ಪ್ರವೇಶಿಸಿತು.

ಭಾರತದಲ್ಲಿ, ೭೦ ಮಿಲಿಯನ್ ಕಿಲೋಗ್ರಾಂಗಳಷ್ಟು ಚಹಾದ ಟಾಟಾ ಟೀ ಉತ್ಪಾದನ ಘಟಕಗಳು ತನ್ನ ಅಂಗ ಸಂಸ್ಥೆಗಳಾದ ಚಹಾ ಕಂಪೆನಿಗಳ ಮೂಲಕ 54 ಚಹಾ ಎಸ್ಟೇಟ್ ಗಳನ್ನು, ಸುಮಾರು 59,000 ಜನರಿರುವ ಕೆಲಸಗಾರರನ್ನು ಮತ್ತು ಚಹಾದ ಹತ್ತು ಮಿಶ್ರಮಾಡಿ ಸಂಸ್ಕರಿಸುವ ಮತ್ತು ಪ್ಯಾಕಿಂಗ್ ಮಾಡುವ ಕಾರ್ಖಾನೆ ಗಳನ್ನು ತನ್ನ ಹತೋಟಿಯಲ್ಲಿರಿಸಿಕೊಂಡಿದೆ.[೪] ಭಾರತ ಮತ್ತು ಶ್ರೀಲಂಕಾದಲ್ಲಿ ಸುಮಾರು ೫೧ ಚಹಾ ಎಸ್ಟೇಟ್ ಗಳನ್ನು ಈ ಕಂಪೆನಿಯು ಸ್ವಂತ ಮಾಡಿಕೊಂಡಿದೆ. ವಿಶೇಷವಾಗಿ ಪೂರ್ವ ಭಾರತದ ಕೆಲ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳಗಳಲ್ಲಿ ಹಾಗೂ ದಕ್ಷಿಣ ಭಾಗದ ಕೇರಳದಲ್ಲಿ ತನ್ನ ಸ್ವಂತ ಚಹಾ ಎಸ್ಟೇಟ್ ಗಳನ್ನು ಕಂಪೆನಿಯು ಹೊಂದಿದೆ. ಈ ಕಂಪೆನಿಯು ಆಸ್ಸಾಂ ಟೀ ಮತ್ತು ಡಾರ್ಜಲಿಂಗ್ ಟೀಗಳ ಬೃಹತ್ ಪ್ರಮಾಣದ ಉತ್ಪಾದಕರು ಮತ್ತು ಸಿಲೋನ್ ಟೀಯ ಉತ್ಪಾದನೆಯಲ್ಲಿ ದೊಡ್ಡ ತಯಾರಕರಾಗಿರುವರು.

ಮೌಲ್ಯಾಧಾರಿತ ಗುಣಮಟ್ಟದ ಟೀಯನ್ನು ಉತ್ಪಾದಿಸಲು ಕಂಪೆನಿ ಮತ್ತು ಯುಕೆಮೂಲದ ಜೇಮ್ಸ್ ಫಿನ್ಲೆಯೊಂದಿಗೆ ಒಂದು ಸಂಯೋಜಿತ ಸಟ್ಟಾ ವ್ಯಾಪಾರವೆಂದು 1964ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇಂದು 50 ದೇಶಗಳಲ್ಲಿ ಟಾಟಾ ಟೀ ಗ್ರೂಪ್ ತನ್ನದೇ ಉತ್ಪನ್ನ ಮತ್ತು ಚಾಲನೀಯ ಸರಕು ಪದಾರ್ಥವನ್ನು ಹೊಂದಿದೆ. ಇದು ಭಾರತದ ಮೊದಲನೇ ಅಂತರಾಷ್ಟ್ರೀಯ ಕಂಪೆನಿಗಳಲ್ಲಿ ಒಂದಾಗಿದೆ. ಟೀಯಲ್ಲಿ ಶ್ರೇಷ್ಠ ಗುಣಮಟ್ಟದ ಉತ್ಪನ್ನಕ್ಕೆ ಅವಕಾಶ ನೀಡುವಲ್ಲಿ ಟಾಟಾ ಟೀ ಮತ್ತು ಅದರ ಅಂಗ ಸಂಸ್ಥೆಗಳ ಕಾರ್ಯ ಪ್ರಯೋಗಗಳು ತಮ್ಮದೇ ದೃಷ್ಠಿಕೋನ ಬೀರಿವೆ. ಆದರೇ ಭಾರತ ಮತ್ತು ಶ್ರೀಲಂಕಾಗಳಲ್ಲಿನ ವಸಾಹತು ಸ್ಥಾಪಿಸುವ ಕಾರ್ಯಗಳಲ್ಲಿ ಒಂದು ಮಹತ್ವಯುತ ಪ್ರಭಾವ ಹೊಂದಿದೆ.

ಟಾಟಾ ಟೀ ಗ್ರೂಪ್‌ನ ಒಂದು ಏಕೀಕೃತ ವಿಶ್ವ ಸರಕು ಪದಾರ್ಥದ ಟೀನಲ್ಲಿಯೇ ತನ್ನ ಕ್ರೋಡೀಕೃತ ವ್ಯಾಪಾರ ವಹಿವಾಟಿನ ಮೊತ್ತದಲ್ಲಿ ಸುಮಾರು 86 ಶೇಖಡದಷ್ಟು ಕೊಡುಗೆಯನ್ನು ನೀಡುತ್ತಿದೆ. ಬಾಕಿಉಳಿದಂತೆ ಅಧಿಕ ಟೀ ಕಾಫೀಗಳಿಂದ ಮತ್ತು ಬಂಡವಾಳ ಆದಾಯದಗಳಿಂದಾಗಿಯೂ ಶೇಖಡಾ 14ರಷ್ಟು ಲಾಭ ಬರುತ್ತಿದೆ. ಬೆಂಗಳೂರಿನಲ್ಲಿ ಈ ಕಂಪೆನಿಯ ಪ್ರಧಾನ ಕಛೇರಿ ಇದೆ. ವಾರ್ಷಿಕವಾಗಿ, ಅಂದಾಜು 159 km² ಗಳಷ್ಟು ವಿಸ್ತೀರ್ಣದ ಪ್ರದೇಶದಲ್ಲಿನ ಟೀ ಕೃಷಿಯಿಂದ ಟಾಟಾ ಟೀಯು ಸುಮಾರು ಮುವತ್ತು ಮಿಲಿಯನ್ ಕೆಜಿ ಬ್ಲ್ಯಾಕ್ ಟೀಯನ್ನು ಉತ್ಪಾದಿಸುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] 100% ಟೀಗಳ ಅಲ್ಪ ಸಾರಕ್ಕಾಗಿ, ಹಿಮಾಧಾರಿತ ಟೀ ಮಿಶ್ರಣಗಳಿಗಾಗಿ ಮತ್ತು ರೆಡಿ-ಟು-ಡ್ರಿಂಕ್ (ಆರ್‌ಟಿಡಿ) ಪಾನೀಯಗಳ ತಯಾರಿಕೆಯಲ್ಲಿ ದಿಢೀರ್ ಚಹಾವನ್ನು ಉಪಯೋಗಿಸಲಾಗುತ್ತದೆ.

ಭಾರತದಲ್ಲಿ, ಟಾಟಾ ಟೀಯು ತನ್ನದೇ ಐದು ರೂಪಗಳಲ್ಲಿ ವಿಶಿಷ್ಠ ಟೀಯನ್ನು ಹೊಂದಿದೆ - ಟಾಟಾ ಟೀ, ಟೆಟ್ಲಿ, ಕಣ್ಣನ್ ದೇವನ್, ಚಕ್ರಗೋಲ್ಡ್ ಮತ್ತು ಜೆಮಿನಿ. (ಕೆಒಎಸ್‌ಎಚ್‌ಇಆರ್ ಹಾಗೂ ಎಚ್‌ಎಸಿಸಿಪಿ ಪ್ರಮಾಣೀಕೃತ) ಯುನೈಟೆಡ್ ಸ್ಟೇಟ್ಸ್ನ ಹೊರಭಾಗದಲ್ಲಿ ಇಂತಹ ಅತೀ ದೊಡ್ಡ ಸೌಲಭ್ಯವನ್ನು ಹೊಂದಿರುವ ಘಟಕವು ಈ ಕಂಪೆನಿಯಲ್ಲಿ ಇದೆ. ಅದೆಂದರೆಮುನಾರ್, ಕೇರಳಗಳಲ್ಲಿ ಉತ್ಪಾದನೆಯಾಗುತ್ತಿರುವ ಇನ್‌ಸ್ಟಂಟ್ ಟೀ ಯು 100% ರಷ್ಠು ಮೌಲ್ಯದ ಒಂದು ರಫ್ತು-ಆಧಾರಿತ ಘಟಕವನ್ನು ಈ ಕಂಪೆನಿಯು ಹೊಂದಿದೆ. ಟಾಟಾ ಟೀಯು ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್, ಯುನೈಟೆಡ್ ಸ್ಟೇಟ್ಸ್,ಝೆಕ್ ರಿಪಬ್ಲಿಕ್ ಮತ್ತು ಭಾರತಗಳಲ್ಲಿ ತನ್ನ ಅಂಗ ಘಟಕಗಳನ್ನು ಹೊಂದಿದೆ.

ಭಾರತದ ಮುನಾರ್‌ನಲ್ಲಿರುವ ಟಾಟಾ ಅವರ ಟೀ ತೋಟ

ಇತಿಹಾಸ[ಬದಲಾಯಿಸಿ]

1980ರ ದಶಕ[ಬದಲಾಯಿಸಿ]

1980ರ ಪೂರ್ವದಲ್ಲಿಯೇ, ಭಾರತದಲ್ಲಿ ಒಂದು ಚಹಾ ಕಾರ್ಖಾನೆಯು ಮೇಲೇಳುವ ಪ್ರಯತ್ನದಲ್ಲಿಯೇ ಮುಂದುವರೆದಿತ್ತು. ಕಾರ್ಮಿಕರ ಮೌಲ್ಯಗಳು ಮತ್ತು ಅವಸಾನ ಸ್ಥಿತಿಯ ಅಂಚಿನ ಗೆರೆಗಳು ಹಾಗೇ ಅಧಿಕ ತೆರಿಗೆಗಳು ಎಂಬಂತಾಗಿ ಈ ಕಾರ್ಖಾನೆಯು ಅನುಭವಗಳನ್ನು ಮನಗಂಡಿತ್ತು. ಚೈನಾ, ಮಾತ್ರವಲ್ಲದೇ ಬೇರೇ ರಾಷ್ಠ್ರಗಳಿಂದಲೂ ಆದ ಪ್ರವೇಶದಿಂದ ಈ ವ್ಯಾಪಾರ ವಹಿವಾಟಿನಲ್ಲಿ, ವಿಶ್ವಮಾರುಕಟ್ಟೆಯಲ್ಲಿ ಭಾರತವು ಸ್ಪರ್ಧೆಯನ್ನು ಎದುರಿಸುತ್ತಿತ್ತು.

1983ರಲ್ಲಿ ಜೇಮ್ಸ್ ಫಿನ್ಲೇ ಗ್ರೂಪ್‌ಗೆ ಸೇರಿದ್ದ ವ್ಯಾಪಾರದಿಂದ ಸ್ವತಂತ್ರವಾದ ಅಸ್ತಿತ್ವವುಳ್ಳ ಟಾಟಾ ಟೀಯನ್ನು ಸ್ಥಾಪಿಸಲು ಟಾಟಾ ಟೀಯು ಒಂದು ಹೂಡಿಕೆ ಹಣವನ್ನು ಕೊಟ್ಟು ಖರೀದಿಸಿತ್ತು. ಅದೇ ವರ್ಷದಲ್ಲಿ, ಈ ಕಂಪನಿಯು ಸಗಟು ವ್ಯಾಪಾರದಿಂದ ಗ್ರಾಹಕರ ಸರಕು ಪದಾರ್ಥವಾಗಿ ವಹಿವಾಟು ನಡೆಸಲು ನಿರ್ಧರಿಸಿತು. ಟಾಟಾ ಟೀಯು ತನ್ನ ಮೊಟ್ಟಮೊದಲ ನಿರ್ಧಿಷ್ಟ ಮುದ್ರೆಯ ಟೀಯನ್ನು ಪರಿಚಯಿಸಿತು. ಇದು ಬೇರೆ ವಿವಿಧ ಟೀ ಉತ್ಪನ್ನಗಳಾಗಿ ಮುಂದುವರೆಯಲ್ಪಟ್ಟಿತು ಕಣ್ಣನ್ ದೇವನ್, ಅಗ್ನಿ, ಜೆಮಿನಿ ಮತ್ತು ಚಕ್ರಗೋಲ್ಡ್ ಇತ್ಯಾದಿ. ಜಗತ್ತಿನ ಅತೀ ದೊಡ್ಡ ಮಾರುಕಟ್ಟೆಯಾಗಿ ಖ್ಯಾತಿಗೊಳ್ಳುವ ಬದಲು ತನ್ನದೇ ಆದ ನಿರ್ಧಿಷ್ಟ ಮುದ್ರೆಯ ಟೀಯನ್ನು ಪ್ರಚಾರಗೊಳಿಸಲೆಂದು ಟಾಟಾ ಟೀಯು ತುಂಬಾ ಅವಧಿಯನ್ನು ತೆಗೆದುಕೊಂಡಿತು.[ಸಾಕ್ಷ್ಯಾಧಾರ ಬೇಕಾಗಿದೆ]

1987ರಲ್ಲಿ, ಯುಎಸ್‌ಎಯಲ್ಲಿನ ಟಾಟಾ ಟೀ ಇಂಕ್., ಎಂಬ ಅಂಗ ಸಂಸ್ಥೆಯನ್ನು ಟಾಟಾ ಟೀಯು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿತು.

1990ರ ದಶಕ[ಬದಲಾಯಿಸಿ]

1990ರಲ್ಲಿನ, ಟಾಟಾ ಟೀಯು ವಿಶ್ವವ್ಯಾಪಕ ಮಾರುಕಟ್ಟೆಯೊಳಗೆ ತನ್ನದೇ ಮುದ್ರಾಂಕಿತ ಟೀಯ ಹಲವು ರೂಪಗಳನ್ನು ಹೊರತರಲು ನಿರ್ಧರಿಸಿತು. 1992ರಲ್ಲಿ ಬ್ರಿಟನ್ನಿನ ಟೆಟ್ಲಿ ಟೀಯೊಂದಿಗೆ ಒಂದು ಶ್ರೇಷ್ಠಗುಣಮಟ್ಟದ ರಫ್ತು ಯೋಗ್ಯ ಸಂಯೋಜಿತ ಸಟ್ಟಾ ವ್ಯಾಪಾರವನ್ನು ಕಂಪೆನಿಯು ರಚಿಸಿತು. ಸಂಯೋಜಿತ ಕಾಫಿ ಲಿಮಿಟೆಡ್ ನಲ್ಲಿ ಅಧಿಕ ಆಸಕ್ತಿಯು ಸೇರಿ, ಹಲವಾರು ಹೊಸ ಉದ್ಯಮಗಳು ಹೊರಬಂದವು.( ಟಾಟಾ ಕಾಫಿ ಲಿಮಿಟೆಡ್) ಮತ್ತು ಶ್ರೀಲಂಕಾದಲ್ಲಿ ಕೃಷಿಯಾಧಾರಿತ ಎಸ್ಟೇಟ್ ಗಳನ್ನು ನಿರ್ವಹಣೆ ಮಾಡಲೆಂದು ಒಂದು ಸಟ್ಟಾ ವ್ಯಾಪಾರವನ್ನು ಪ್ರಾರಂಭಿಸಲಾಯಿತು. ಯುನೈಟೆಡ್ ಸ್ಟೇಟ್ಸ್‌‍ನಲ್ಲಿಯ ಟಾಟಾ ಟೀ ಇಂಕ್. ಇದು ವಿಶೇಷ ವಿಧಾನದ ಮೂಲಕ ಸಂಸ್ಕರಿಸಿದ ಮತ್ತು ವ್ಯಾಪಾರ ಮಾಡುವ ದಿಢೀರ್ ಟೀಯ ಸೌಲಭ್ಯವನ್ನು ಫ್ಲೋರಿಡಾದಲ್ಲಿ ಪ್ರಾರಂಭಿಸಲಾಯಿತು. ಹೀಗೆ ಕೇರಳದ ಮುನಾರ್ ಗಳಿಂದ ಹೊರಭಾಗದಲ್ಲಿ ಈ ದಿಢೀರ್ ಚಹಾದ ಉತ್ಪನ್ನಗಳನ್ನು ಮೂಲವಾಗಿಸಿಕೊಂಡು ವ್ಯಾಪಾರ ಆಧರಿಸಿತು. 1993ರಲ್ಲಿ, ಅವರು ಅಲೈಡ್ ಲೈನ್ಸ್ ಪಿಎಲ್‌ಸಿ ಜೊತೆಗೆ ಒಂದು ಸಟ್ಟಾ ವ್ಯಾಪಾರವನ್ನು ಯುಕೆಯಲ್ಲಿ ಪ್ರಾರಂಭಿಸಲು ನಿರ್ಧರಿಸಿತು, ಇದರಿಂದ ಎಸ್ಟೇಟ್ ಟಾಟಾ ಟೆಟ್ಲಿಯು ಉಗಮವಾಯಿತು.

1990ರ ಮಧ್ಯಕಾಲಿನದಲ್ಲಿ ಟಾಟಾ ಟೀಯು ವಾಟಾವಾಲಾ ಪ್ಲ್ಯಾನ್‌ಟೇಶಗಳ ಲಿಮಿಟೆಡ್‌ನಲ್ಲಿ ಶೇಖಡ 51ರಷ್ಟು ಷೇರುಗಳ ವಹಿವಾಟಿನಲ್ಲಿ ಆಕ್ರಮಿಸಿಕೊಂಡು, ಟೆಟ್ಲಿ ಮತ್ತು ದಿ ಲಂಕನ್ ಜೆವಿಸಿಗಳನ್ನು ಖರೀದಿಸಲೆಂದು ಪ್ರಯತ್ನಿಸಿತು.

"ಟಾಟಾ ಟೇಪ್ಸ್ ಕಾಂಟ್ರೊವರ್ಸಿ" ಎಂಬ ಹೆಸರಿನ ಒಂದು ದೊಡ್ಡ ಹಗರಣದಲ್ಲಿ 1997ರಲ್ಲಿ ಕಂಪೆನಿಯು ಜಟಿಲವಾಗಿ ಸಿಕ್ಕಿಹಾಕಿಕೊಂಡಿತು. ಈ ಕಂಪೆನಿಯು ಕಾನೂನು ಬಾಹಿರಗೊಂಡ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಆಸಮ್(ಯುಎಲ್‌ಎಫ್‌ಎ)ಗೆ, ಹಾಗೂ ಅಸ್ಸಾಂನಲ್ಲಿಯ ಒಂದು ಶಸ್ತ್ರಸಜ್ಜಿತ ತಂಡದ ಕಾರ್ಯಕ್ಕೆ (ಪರಿಹಾರ) ಸಹಾಯ ನಿಧಿಯನ್ನು ಒದಗಿಸಿತ್ತು.

1999ರಿಂದ ಭಾರತದಲ್ಲಿ ಟಾಟಾ ಟೀಯ ಮುದ್ರಾಂಕಿತ ವಿಶಿಷ್ಟ ಸರಕುಗಳ ವ್ಯಾಪಾರ ವಹಿವಾಟಿನಲ್ಲಿ ಒಂದು ಸಂಯೋಜಿತ ಮಾರುಕಟ್ಟೆಯನ್ನು ಶೇಖಡ 25 ರಷ್ಟು ಹೊಂದಿತ್ತು. ಈ ಕಂಪೆನಿಯು 74 ಟೀ ತೋಟಗಳನ್ನು ಹೊಂದಿದ್ದಿತು. ಇದರಿಂದ 62 ಮಿಲಿಯನ್ ಕಿಲೋಗ್ರಾಂ‍ಗಳಷ್ಟು ಟೀಯನ್ನು ಒಂದೇ ವರ್ಷದಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಇದರಲ್ಲಿ ಮೂರನೇ ಎರಡರಷ್ಟು ಭಾಗವು ಸಂಸ್ಕರಿಸಲ್ಪಟ್ಟ ಮತ್ತು ಪ್ಯಾಕ್ ಮಾಡಲ್ಪಟ್ಟ ವಾಣಿಜ್ಯ ಚಹಾವಾಗಿ ಹೊರಬಂದಿತು. ವರ್ಷದ ಅಂತ್ಯದಲ್ಲಿ, ಭಾರತದ ಅನೇಕ ಭಾಗಗಳಲ್ಲಿನ ಬರಗಾಲದಿಂದಾಗಿ ಈ ಟೀ ವ್ಯಾಪಾರವು ಕಳೆಗುಂದಿತ್ತು. ಇದರೊಂದಿಗೆ, ಭಾರತದ ಟೀಯ ಅತೀ ದೊಡ್ಡ ಗ್ರಾಹಕನೆನಿಸಿದ್ದ ರಷ್ಯಾ ದೇಶವು ಮಾರುಕಟ್ಟೆಯಿಂದ ತಾತ್ಕಾಲಿಕವಾಗಿ ಕೊಂಡುಕೊಳ್ಳುವಿಕೆಯಿಂದ ಹಿಂದೆ ಸರಿದಿತ್ತು.


2000ರ ದಶಕದಲ್ಲಿ[ಬದಲಾಯಿಸಿ]

ಕೆನಡಾದ ಟೆಟ್ಲೀ ಟೀಯ ತಗಡಿನ ಡಬ್ಬಿ

(ಯುನೈಟೆಡ್ ಕಿಂಗ್‌‍ಡಂನಲ್ಲಿ ನೆಲೆಯೂರಿದ್ದ) ಟೆಟ್ಲಿ ಗ್ರೂಪನ್ನು 2000 ವರ್ಷದಲ್ಲಿಯೇ, ಟಾಟಾ ಟೀ ಕಂಪೆನಿಯು ಕೊಂಡುಕೊಳ್ಳುವ ಮೂಲಕ ಸಂಪಾದಿಸಿ ತನ್ನದೇ ಆದ ಒಂದು ಪ್ರಮುಖ ಹೆಜ್ಜೆಯನ್ನು ಇರಿಸಿತು. £271 ಮಿಲಿಯನ್ ($432 ಮಿಲಿಯನ್) ನಷ್ಟು ಪ್ರಮಾಣದಲ್ಲಿ ಟಾಟಾ ಕಂಪೆನಿಯ ಬಾಹ್ಯಬಂಡವಾಳದಿಂದ ತನ್ನ ಹತೋಟಿಗೆ ಬೇಕಾದಷ್ಟು ಷೇರುಗಳೆಲ್ಲವನ್ನೂ ಕೊಂಡುಕೊಳ್ಳುವ ಮೂಲಕ ತನ್ನದೇ ಆದ ಹತೋಟಿ ಕ್ರಯವನ್ನು ಹೊಂದಿದ್ದಿತು. ಟಾಟಾ ಟೀಯ ವರದಿಯ ಪ್ರಕಾರ, ಅಂದಿನ ದಿನಗಳಲ್ಲಿ ಒಂದು ಭಾರತೀಯ ಕಂಪೆನಿಯಾಗಿದ್ದುಕೊಂಡು ಸಾರಾ ಲೀಎಂಬ ಒಂದು ಅಮೇರಿಕನ್ ವೈವಿಧ್ಯ ವಾಣಿಜ್ಯೋದ್ಯಮ ಕೂಟದಲ್ಲಿ ದರ ಏರಿಸಿತ್ತು. ಅಲ್ಲಿ ಅತ್ಯಂತ ದೊಡ್ಡ ಗಾತ್ರದಲ್ಲಿ ಮಾಲೀಕತ್ವವನ್ನು ಹೊಂದಿದ್ದ, ವಿದೇಶಿ ಕಂಪೆನಿಯೆಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಆ ಕಾಲದಲ್ಲಿ, ಯುನಿಲಿವರ್ನ ಬ್ರೂಕ್ ಬಾಂಡ್-ಲಿಪ್ಟನ್ಗಳ ನಂತರ, ಟೆಟ್ಲಿಯು ಜಗತ್ತಿನ ಎರಡನೇ ಅತೀದೊಡ್ಡ ಟೀ ಕಂಪೆನಿಯಾಗಿ ಹೊರಹೊಮ್ಮಿತು. ಆಗ ಸುಮಾರು £300 ಮಿಲಿಯನ್ ಗಳಷ್ಟು ವ್ಯಾಪಾರ ವಹಿವಾಟಿನ ಮೊತ್ತವನ್ನು ಒಂದು ವರ್ಷದ ಆದಾಯಗಳಿಸಿತ್ತು. ಕೆನಡಾ ಮತ್ತು ಬ್ರಿಟನ್‌ಗಳಲ್ಲಿ ಇದು ಮಾರುಕಟ್ಟೆ ವ್ಯಾಪಾರದ ನಾಯಕನಾಗಿತ್ತು. ಮತ್ತು ಯುನೈಟೆಡ್ ಸ್ಟೇಟ್ಸ್, ಆಸ್ಟೇಲಿಯಾ ಹಾಗೂ ಮಧ್ಯೆ ಪೂರ್ವರಾಷ್ಟ್ರಗಳಲ್ಲಿ ಒಂದು ಜನಪ್ರಿಯ ಮುದ್ರಾಂಕಿತ ಸರಕಾಗಿತ್ತು.

1837ರಲ್ಲಿ ಸ್ಥಾಪನೆಯಾಗಿದ್ದ, ಟೆಟ್ಲಿಯು ಮೊಟ್ಟ ಮೊದಲ ಬ್ರಿಟಿಷ್ ಟೀ ಕಂಪೆನಿಯಾಗಿದ್ದಿತು. ಈ ಮೂಲಕ ಒಂದು ಟೀ ಬ್ಯಾಗನ್ನು 1953ರಲ್ಲಿ ಯುಕೆಗೆ ಪರಿಚಯಿಸಿತು. 1989ರಲ್ಲಿ, ಇದೇ ಟೀಬ್ಯಾಗ್ ಪ್ರಥಮ ಸುತ್ತಿನ ಟೀ ಬ್ಯಾಗಾಗಿ ಮುಂದುವರೆದಿತ್ತು. 1997ರಲ್ಲಿ ಡ್ರಾಸ್ಟ್ರಿಂಗ್ಬ್ಯಾಗ್ ರೂಪದಲ್ಲಿ 'ನೋ ಡ್ರಿಪ್, ನೋ ಮೆಸ್ಸ್' ಎಂಬ ಕೋಟೆಡ್ ಪದಗಳೊಂದಿಗೆ ಪರಿಚಯಿಸಲ್ಪಟ್ಟಿತ್ತು. ಟಾಟಾ ಟೀ ಕಂಪೆನಿಯ, ಒಟ್ಟು ವಾರ್ಷಿಕ ಲಾಭದ ಮೊತ್ತದಲ್ಲಿಯೇ ಟೆಟ್ಲಿಯು ಸುಮಾರು ಮೂರನೇ ಎರಡರಷ್ಟು ಆದಾಯದ ಕೊಡುಗೆಯನ್ನು ಇಂದು ನೀಡುತ್ತಿದೆ.

2005ರಿಂದ, ಟಾಟಾ ಟೀ ಕಂಪೆನಿಯು ಭಾರತದಲ್ಲಿ ಸ್ವಂತ ವಸಾಹತು ಶಾಹಿ ಸಂಸ್ಥೆಯ ನೇರ ನಾಯಕತ್ವವನ್ನು ಬಿಟ್ಟುಬಿಡಲೆಂದು ಹೊಸದಾಗಿ ಒಂದು ಕಂಪೆನಿಯ ಪುನರ್ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿತು. ವಿಶ್ವಬ್ಯಾಂಕ್‌ನಇಂಟರ್ ನ್ಯಾಷನಲ್ ಫೈನ್ಯಾನ್ಸ್ ಕಾರ್ಪೊರೇಶನ್ಯಿಂದ ಅಂಗೀಕರಿಸಲ್ಪಟ್ಟ ಸಾಲವನ್ನು ತೆಗೆದುಕೊಳ್ಳುವ ಮೂಲಕ ಹೊಸ ಕಂಪೆನಿಯ ಉದ್ಘಾಟನ ಕಾರ್ಯವು ಟಾಟಾ ಕಂಪೆನಿಗೆ ಸುಸೂತ್ರವಾಯಿತು.[೫]

2007ರಲ್ಲಿ ಟಾಟಾ ಟೀಯು ಜಾಗೋ ರೇ!ಎಂಬ ಘೋಷಣೆಯ ಮೂಲಕ ಸಾಮಾಜಿಕ ವಿಚಾರಗಳಲ್ಲಿ ಯುವ ಜನಾಂಗವನ್ನು ಎಚ್ಚರಿಸಲೆಂದು ತನ್ನ ಬ್ರಾಂಡನ್ನು ಬಿಡುಗಡೆ ಮಾಡಿತು. 2008ರಲ್ಲಿಯೂ ಈ ಘೋಷಣಾ ಕಾರ್ಯಾಚರಣೆಯು ಮುಂದುವರೆದಿತ್ತು. 2009ರಲ್ಲಿ, 'ಅಬ್ ಸೇ ಖಿಲಾನ ಬಂದ್, ಪಿಲಾನ ಶುರು' ಎಂಬ ಒಂದು ಹೊಸ ಜಾಹೀರಾತು ಘೋಷಣೆಯ ಮೂಲಕ ಅವರ ಬಡಿದೆಚ್ಚರಿಸುವ ಕಾರ್ಯವು ಭ್ರಷ್ಟಾಚಾರದ ವಿಚಾರಗಳ ಸುತ್ತ ಆವರಿಸಿತ್ತು.

2009ರಲ್ಲಿ, ಅಂತರಾಷ್ಟ್ರೀಯ ವಾಣಿಜ್ಯ ಕೂಟ ಐಯುಎಫ್ ಈ ಕಂಪೆನಿಯನ್ನು ಟೀಕಿಸಿತ್ತು ಏಕೆಂದರೆ ಕಾನೂನು ಸಮ್ಮತವಾದ ಹೆರಿಗೆ ರಜಾವನ್ನು ಗರ್ಭಿಣಿಯಾಗಿರುವ ಟೀ ಕಾರ್ಮಿಕರಿಗೆ ನೀಡದೇ ಇರುವುದಕ್ಕಾಗಿ ಮತ್ತು ಪಶ್ಚಿಮ ಬಂಗಾಳದ ನವ್ವೆರಾ ನಡ್ಡಿ ಟೀ ಎಸ್ಟೇಟಿನ ಸಾವಿರ ಕಾರ್ಮಿಕರನ್ನು ನಿಷೇಧಿಸಿ ಬೀಗ ಮುದ್ರೆಯನ್ನು ಧೀರ್ಘಾವಧಿಯವರೆಗೆ ಜಡಿದಿತ್ತು. ಇದನ್ನು ವಿರೋಧಿಸಿದ ಐಯುಎಫ್ನ್ನು ಕಂಡು ಭಾರತದ ಸ್ಥಳೀಯ ಸರ್ಕಾರವು ತದನಂತರ ಆ ನೊಂದ ಕಾರ್ಮಿಕ ಕುಟುಂಬಕ್ಕೆ ತುರ್ತು ಆಹಾರ ಪದಾರ್ಥಗಳಿಗಾಗಿ ಫುಡ್ ಕೂಪನ್‌ಗಳನ್ನು ವಿತರಿಸಲು ಪ್ರಾರಂಭಿಸಿತು.[೬] ಮೇ 2010ರಲ್ಲಿ ಅಸ್ಸಾಂನಲ್ಲಿಯ ಟಾಟಾ ಎಸ್ಟೇಟ್‌ನಲ್ಲಿ ಒಬ್ಬ ಟೀ ಗಿಡದ ಔಷಧಿ ಸಿಂಪಣೆಗಾರ ಅನುಮಾನಾಸ್ಪದವಾಗಿ ವಿಷ ನೀಡಿ ಸಾವನಪ್ಪಿದ್ದನು. ಇದನ್ನು ವಿರೋಧಿಸಿದ ಉಳಿದ ಇಬ್ಬರು ಕಾರ್ಮಿಕರು, ಶಾಂತಿಭಂಗ ವಿರೋಧಿ ಪೋಲೀಸರುಗಳಿಂದ ಹತ್ಯೆಯಾಗಲ್ಪಟ್ಟರು.[೭]

ಮಾರಾಟ ಯೋಜನೆ[ಬದಲಾಯಿಸಿ]

ಜಗತ್ತಿನೆಲ್ಲೆಡೆ ಯಲ್ಲದೆ, ಪ್ರಾದೇಶಿಕ ಆಧಾರ ಮೇಲೆ ಈ ಟೀ ಬ್ರಾಂಡ್‌ಗಳನ್ನು ವಿವಿಧ ರೀತಿಯಲ್ಲಿ ವಿತರಿಸಲಾಯಿತು. ಭಾರತದಲ್ಲಿ, ಟಾಟಾ ಟೀಯು ಒಂದು ಜನಪ್ರಿಯ ಮತ್ತು ಪ್ರಭಾವಶಾಲಿ ವಾಣಿಜ್ಯ ಸರಕಾಗಿದ್ದರಿಂದ ಇಲ್ಲಿನ ಮಾರುಕಟ್ಟೆಯಲ್ಲಿ ಹೊರಹೊಮ್ಮಿತು ಮತ್ತು ಭಾರತೀಯ ದೊಡ್ಡ ಜನಸಂಖ್ಯೆಯಲ್ಲಿ ಅಧಿಕ ಮಾರಟಗೊಂಡಿತು. ಆದ್ದರಿಂದ, ಟೆಟ್ಲಿಯು ಕಂಪೆನಿಯ ಅಂತರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಮತ್ತು ಅತೀ ದೊಡ್ಡ ವ್ಯಾಪಾರವಾಗಿ ಟೆಟ್ಲಿ ಬ್ರಾಂಡ್‌ನ ಮೇಲೆ ಪ್ರಭಾವ ಬೀರಿತು. ಒಂದೇ ಮಾರುಕಟ್ಟೆಯಲ್ಲಿ, ಇದರ ಎರಡು ಬ್ರಾಂಡ್‌ಗಳು ಅಸ್ತಿತ್ವದಲ್ಲಿದ್ದು, ಅದರಲ್ಲಿ ಟೆಟ್ಲಿಯು ಅತ್ಯಂತ ಪ್ರಮುಖ ಬ್ರಾಂಡ್‌ನ ಸ್ಥಾನದಲ್ಲಿದೆ.

ಜಾಗೋ ರೆ!![ಬದಲಾಯಿಸಿ]

"ಜಾಗೋ ರೇ!!"ಎಂಬ ಹೆಸರಿನ ಘೋಷಣಾ ಸುಸಂಘಟಿತ ಕಾರ್ಯಚರಣೆಯೊಂದಿಗೆ ಟಾಟಾ ಟೀಯು ಜನಾಗ್ರಹಮತದಾರ ನೋಂದಣಿ ಸಂಚಾಲನೆಯಲ್ಲಿ ಕಾರ್ಯ ನಿರ್ವಹಿಸಿತು. (ಎದ್ದೇಳಿ!) ಇದು ಮುಂದುವರೆದಂತೆ, ಈ ಕಂಪೆನಿಯು ಭ್ರಷ್ಟಾಚಾರವಿರೋಧದ ಮೇಲೆಯು ಒಂದು ಸುಸಂಘಟಿತ ಕಾರ್ಯಚರಣೆ ಮಾಡಿತು. ಇದರ ಮತ್ತು ಬೇರೆ ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚಿಸಲು ಜಾಗೋರೆ ವೆಬ್ ಸೈಟ್ ಪ್ರೇರೇಪಿಸುತ್ತದೆ.[೮]

ಇವನ್ನೂ ನೋಡಿ[ಬದಲಾಯಿಸಿ]

  • ಭಾರತದಲ್ಲಿ ಚಹಾದ ಇತಿಹಾಸ

ಉಲ್ಲೇಖಗಳು[ಬದಲಾಯಿಸಿ]

  1. "tata.com : ಟೆಟ್ಲೀ ಫಿಸ್ಕಲ್ ಶೋ ಟು ಶೋ ಟು ಜಾಝ್ ಅಪ್ ಟಾಟಾ ಟೀ ರಿಸಲ್ಟ್ಸ್". Archived from the original on 2016-04-14. Retrieved 2011-01-23.
  2. "ಟಾಟಾ ಟೀ ಕಂಪನಿ ಪ್ರೊಫೈಲ್". Archived from the original on 2010-12-03. Retrieved 2011-01-23.
  3. ": Tetley.com :". Archived from the original on 2006-11-12. Retrieved 2011-01-23.
  4. "ಆರ್ಕೈವ್ ನಕಲು" (PDF). Archived from the original (PDF) on 2006-09-09. Retrieved 2011-01-23.
  5. ಟಾಟಾ ಟೀ ಸೆಲ್ಸ್ ಸ್ಟಾಕ್ ಇನ್ ನ್ಯೂ ಪ್ಲಾಂಟೇಷನ್ ಫರ್ಮ್ ಟು ಐಎಫ್‌ಸಿ, ರೂಟರ್ಸ್, 19 ಫೆಬ್ರವರಿ 2007
  6. ಟೆಟ್ಲೇ/ಟಾಟಾ ರೆಸ್ಪಾಂಡ್ಸ್ ಟು ಐಯುಎಫ್ ಸಪೋರ್ಟ್ ಫಾರ್ ಹಂಗ್ರಿ ಟೀ ವರ್ಕರ್ಸ್ ಇನ್ ಇಂಡಿಯಾ ... ವಿತ್ ಪಬ್ಲಿಕ್ ರಿಲೇಷನ್ಸ್, ಐಯುಎಫ್, 23 ನವೆಂಬರ್ 2009
  7. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ಟೆಟ್ಲೇ ಅಕ್ಯೂಸ್ಡ್ ಆಫ್ ರೈಟ್ಸ್ ವಯೊಲೇಶನ್ Archived 2010-10-15 ವೇಬ್ಯಾಕ್ ಮೆಷಿನ್ ನಲ್ಲಿ., ಹಿಂದೂಸ್ಥಾನ್ ಟೈಮ್ಸ್ , 30 ಸೆಪ್ಟೆಂಬರ್ 2010. 7 ಅಕ್ಟೋಬರ್, 2008ರಂದು ಪರಿಷ್ಕರಿಸಲಾಗಿದೆ.
  8. ಜಾಗೊ ರೆ! Archived 2010-01-26 ವೇಬ್ಯಾಕ್ ಮೆಷಿನ್ ನಲ್ಲಿ.ಕಥೆ Archived 2010-01-26 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಟಾಟಾ_ಟೀ&oldid=1062824" ಇಂದ ಪಡೆಯಲ್ಪಟ್ಟಿದೆ