ಟಾಂಜಾನಿಯ
ವಿಕಿಪೀಡಿಯ ಇಂದ
(ಟಾಂಝಾನಿಯಾ ಇಂದ ಪುನರ್ನಿರ್ದೇಶಿತ)
| ಧ್ಯೇಯ: "ಸ್ವಾತಂತ್ರ್ಯ ಮತ್ತು ಏಕತೆ" | |
| ರಾಷ್ಟ್ರಗೀತೆ: "ದೇವನು ಆಫ್ರಿಕಾವನ್ನು ಆಶೀರ್ವದಿಸಲಿ" | |
| ರಾಜಧಾನಿ | ಡೊಡೋಮಾ (ಶಾಸಕೀಯ) ದಾರ್ ಎಸ್ ಸಲಾಮ್ (ಪರಂಪರಾಗತ) |
| ಅತ್ಯಂತ ದೊಡ್ಡ ನಗರ | ದಾರ್ ಎಸ್ ಸಲಾಮ್ |
| ಅಧಿಕೃತ ಭಾಷೆ(ಗಳು) | ಸ್ವಾಹಿಲಿ |
| ಸರಕಾರ | ಗಣರಾಜ್ಯ |
| - ರಾಷ್ಟಾಧ್ಯಕ್ಷ | ಜಕಾಯಾ ಮ್ರಿಶೋ ಕಿಟ್ವೇಟೆ |
| - ಪ್ರಧಾನಿ | ಎಡ್ವರ್ಡ್ ಲೊವಾಸ್ಸಾ |
| ಸ್ವಾತಂತ್ರ್ಯ | ಯು.ಕೆ. ಯಿಂದ |
| - ಟಾಂಗನ್ಯೀಕ | ಡಿಸೆಂಬರ್ 9 1961 |
| - ಜಾಂಜಿಬಾರ್ | ಜನವರಿ 12 1964 |
| - ಒಕ್ಕೂಟ | ಎಪ್ರಿಲ್ 26 1964 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 945,087 ಚದರ ಕಿಮಿ ; (31ನೆಯದು) |
| 364,898 ಚದರ ಮೈಲಿ | |
| - ನೀರು (%) | 6.2 |
| ಜನಸಂಖ್ಯೆ | |
| - November 2006ರ ಅಂದಾಜು | 37,849,1331 (32ನೆಯದು) |
| - 2002ರ ಜನಗಣತಿ | 35,214,888 |
| - ಸಾಂದ್ರತೆ | 41 /ಚದರ ಕಿಮಿ ; (159ನೆಯದು) 106 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $27.12 ಬಿಲಿಯನ್ (99ನೆಯದು) |
| - ತಲಾ | $723 (178ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಟಾಂಜಾನಿಯ ಷಿಲಿಂಗ್ (TZS) |
| ಕಾಲಮಾನ | EAT (UTC+3) |
| - ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+3) |
| ಅಂತರ್ಜಾಲ TLD | .tz |
| ದೂರವಾಣಿ ಕೋಡ್ | +255 |
ಟಾಂಜಾನಿಯ (ಅಧಿಕೃತವಾಗಿ 'ಸಂಯುಕ್ತ ಟಾಂಜಾನಿಯ ಗಣರಾಜ್ಯ') ಆಫ್ರಿಕಾದ ಮಧ್ಯಭಾಗದಲ್ಲಿ ಹಿಂದೂ ಮಹಾಸಾಗರದ ತೀರದಲ್ಲಿನ ಒಂದು ರಾಷ್ಟ್ರ. ಟಾಂಜಾನಿಯದ ಉತ್ತರಕ್ಕೆ ಕೆನ್ಯಾ ಮತ್ತು ಉಗಾಂಡ; ದಕ್ಷಿಣದಲ್ಲಿ ಜಾಂಬಿಯ, ಮಲಾವಿ ಮತ್ತು ಮೊಜಾಂಬಿಕ್; ಪಶ್ಚಿಮಕ್ಕೆ ರುವಾಂಡ, ಬುರುಂಡಿ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಹಾಗೂ ಪೂರ್ವದಲ್ಲಿ ಹಿಂದೂ ಮಹಾಸಾಗರಗಳಿವೆ. ರಾಷ್ಟ್ರದ ಮುಖ್ಯ ಭೂಭಾಗವಾದ ಟಾಂಗನ್ಯೀಕ ಮತ್ತು ತೀರದಾಚೆಗಿನ ಜಾಂಜಿಬಾರ್ ದ್ವೀಪಗಳ ಹೆಸರುಗಳ ಜೋಡಣೆಯಿಂದ "ಟಾಂಜಾನಿಯ" ಎಂಬ ಹೆಸರು ವ್ಯುತ್ಪತ್ತಿಯಾಗಿದೆ. ೧೯೬೪ರಲ್ಲಿ ಈ ಎರಡು ನಾಡುಗಳು ಒಕ್ಕೂಟ ಸ್ಥಾಪಿಸಿಕೊಂಡವು.