ಜೋಗಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೋಗಿ
ಬಿಡುಗಡೆ ವರ್ಷ ೨೦೦೫
ಚಿತ್ರ ನಿರ್ಮಾಣ ಸಂಸ್ಥೆ ಅಶ್ವಿನಿ ಪ್ರೊಡಕ್ಷನ್ಸ್
ಮುಖ್ಯಪಾತ್ರ(ಗಳು)(ಗಂಡು) ಶಿವರಾಜ್‍ಕುಮಾರ್
ಮುಖ್ಯಪಾತ್ರ(ಗಳು)(ಹೆಣ್ಣು) ಜೆನ್ನಿಫರ್ ಕೊತ್ವಾಲ್
ಪೋಷಕ ಪಾತ್ರವರ್ಗ ಅರುಂಧತಿನಾಗ್, ರಮೇಶ್ ಭಟ್, ಮಾ.ಕಿಶನ್, ರಘು, ಯತಿರಾಜ್
ನಿರ್ದೇಶನ ಪ್ರೇಮ್
ಸಂಗೀತ ನಿರ್ದೇಶನ ಗುರುಕಿರಣ್
ಚಿತ್ರಕಥೆ
ಸಂಭಾಷಣೆ
ಕಥೆ
ಕಥೆ ಆಧಾರ
ಸಾಹಿತ್ಯ ಪ್ರೇಂ
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸೋನು ಕಕ್ಕರ್, ಪ್ರೇಂ, ಗುರುರಾಜ ಹೊಸಕೋಟೆ, ಶಂಕರ ಮಹದೇವನ್, ಎಸ್.ಸುನೀತ, ಬಿ.ಜಯಶ್ರೀ, ಗುರುಕಿರಣ್, ವಿಜಯ್ ಯೇಸುದಾಸ್, ಮುರಳಿ ಮೋಹನ್, ಹರಿಹರನ್, ನಿತ್ಯಶ್ರಿ, ಸುನಿತಾ ಚೌಹಾಣ್
ಛಾಯಾಗ್ರಹಣ ಎಂ.ಆರ್.ಸೀನು
ನೃತ್ಯ
ಸಾಹಸ ಜನಾರ್ಧನ್
ಸಂಕಲನ ಶ್ರೀನಿವಾಸ್ ಪಿ.ಬಾಬು
ನಿರ್ಮಾಪಕರು ಪಿ.ಕೃಷ್ಣಪ್ರಸಾದ್, ರಾಮಪ್ರಸಾದ್
ದೇಶ
ಭಾಷೆ
ಅವಧಿ
ವಿತರಕರು
ಸ್ಟುಡಿಯೋ
ಪ್ರಶಸ್ತಿಗಳು
ಇತರೆ ಮಾಹಿತಿ


ಜೋಗಿ - ವರ್ಷ ೨೦೦೫ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳಲ್ಲೊಂದು.

ಶಿವರಾಜಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಜೆನ್ನಿಫರ್ ಕೊತ್ವಾಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.


ಮಾದೇಶ(ಶಿವರಾಜಕುಮಾರ್) ಮಹದೇಶ್ವರ ಬೆಟ್ಟದ ಬಳಿಯ ಹಳ್ಳಿಯ ಮುಗ್ದಯುವಕ. ಮಾದೇಶನಿಗೆ ತಾಯಿಯ (ಅರುಂಧತಿನಾಗ್) ಕುಣಿತವೆಂದರೆ ಬಹಳ ಅಚ್ಚುಮೆಚ್ಚು. ಅಸ್ವಸ್ಥರಾಗಿದ್ದ ಮಾದೇಶನ ತಂದೆಯು (ರಮೇಶ್ ಭಟ್) ನಿಧನರಾದಾಗ, ತಾಯಿಗೊಳಪಡಿಸಿದ ವಿಧವಾಶಾಸ್ತ್ರಗಳಿಗೆ ರೊಚ್ಚಿ, ವಿರೋಧ ವ್ಯಕ್ತಪಡಿಸುವ ಮಾದೇಶನು ತಾಯಿಯನ್ನು ಸುಖವಾಗಿಡಬೇಕೆಂಬ ಉದ್ದೇಶದೊಂದಿಗೆ ಬೆಂಗಳೂರಿಗೆ ಬರುತ್ತಾನೆ.

ಸಂದರ್ಭದ ಸುಳಿವಿಗೆ ಸಿಕ್ಕು ಮಚ್ಚು ಹಿಡಿಯುತ್ತಾನೆ.

ಈ ನಡುವೆ ಮಗನನ್ನು ಹುಡುಕುವ ಹಂಬಲದಲ್ಲಿ ತಾಯಿಯೂ ಕೂಡ ಬೆಂಗಳೂರಿಗೆ ಬರುತ್ತಾಳೆ. ಅನಿರೀಕ್ಷಿತವಾಗಿ ಪತ್ರಕರ್ತೆಯೊಬ್ಬಳ (ಜೆನ್ನಿಫರ್ ಕೊತ್ವಾಲ್) ಪರಿಚಯವಾಗುತ್ತದೆ. ಆ ಪತ್ರಕರ್ತೆಯು ತಾಯಿಗೆ ಮಗನನ್ನು ಹುಡುಕಿಕೊಡಲು ಪ್ರಯತ್ನಿಸುತ್ತಾಳೆ.

ತಾಯಿ ಮಗ ಕೊನೆಗೆ ಭೇಟಿಯಾಗುತ್ತಾರೆಯೇ? ಪತ್ರಕರ್ತೆಯ ಪ್ರಯತ್ನಗಳು ಫಲಕಾರಿಯಾಗುವುದೇ? ಇದು ಚಿತ್ರದ ಅಂತಿಮ ತಿರುಳು.


ಸ್ವಾರಸ್ಯ[ಬದಲಾಯಿಸಿ]

"http://kn.wikipedia.org/w/index.php?title=ಜೋಗಿ&oldid=328222" ಇಂದ ಪಡೆಯಲ್ಪಟ್ಟಿದೆ