ಜೈಮಿನಿ ಭಾರತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಲಕ್ಷ್ಮೀಶನ ಕೃತಿಯಾದ ಜೈಮಿನಿ ಭಾರತದಲ್ಲಿ ಮಹಾಭಾರತದ ಕಥೆಯನ್ನು ಹೇಳಿದರೂ ಇದರಲ್ಲಿ ವೀರ ರಸ ಪ್ರಧಾನವಾಗಿ ಪ್ರತಿಪಾದಿತವಾದರೂ ಮಿತವಾಗಿ ಭಕ್ತಿ ಮತ್ತು ಶೃಂಗಾರ ವರ್ಣನೆಗಳನ್ನೂ ಒಳಗೊಂಡಿದೆ. ಜೈಮಿನಿ ಭಾರತವು ಒಂದು ಕಥೆ ಎನ್ನುವುದಕ್ಕಿಂತ ಕಥಾಸಂಗ್ರಹವೆನ್ನಲು ಯೋಗ್ಯವಾಗಿದೆ. ಕಾವ್ಯದಲ್ಲಿ ಪಾಂಡವರ ಕಥೆ ಆನುಷಂಗಿಕವಾಗಿದ್ದು ಕೃಷ್ಣಚರಿತೆಯ ಪ್ರಕಾಶಕ್ಕೆ ಹೆಚ್ಚಿನ ಮಹತ್ವ ನೀಡಿರುವುದರಿಂದ ಇದನ್ನು ಕೃಷ್ಣಭಕ್ತರ ಕಥಾಗುಚ್ಛವಾಗಿ ನಿರೂಪಿಸಿದ್ದಾನೆ. ಲಕ್ಷೀಶನ "ಸಂಸ್ಕೃತ ಜೈಮಿನಿಭಾರತ"ದಲ್ಲಿ ಕಥೆಯ ಏಕತೆಗಿಂತ ಭಾಗವತ ದೃಷ್ಟಿಯ ಏಕತೆ ಇದರ ವಿಶೇಷವೆನ್ನಬಹುದು. ಈ ಜೈಮಿನಿಭಾರತವನ್ನು ಮೊದಲ ೧೦ ಪರ್ವಗಳನ್ನು ಕುಮಾರವ್ಯಾಸ ಕನ್ನಡಕ್ಕೆ ತಂದರೆ ಉಳಿದನ್ನು ತಿಮ್ಮಣಕವಿಯು ಕನ್ನಡದಲ್ಲಿ ಜೈಮಿನಿ ಭಾರತವನ್ನು ಮೂಡಿಸಿದ್ದಾರೆ.