ಜೇಡ
ವಿಕಿಪೀಡಿಯ ಇಂದ
|
ಜೇಡ |
|||||||||||||
|---|---|---|---|---|---|---|---|---|---|---|---|---|---|
ಬಲೆ ನೇಯುತ್ತಿರುವ ಒಂದು ಜೇಡ
|
|||||||||||||
| ವೈಜ್ಞಾನಿಕ ವಿಂಗಡಣೆ | |||||||||||||
|
|||||||||||||
|
|
|||||||||||||
| 109 families, c.40,000 species | |||||||||||||
|
|
|||||||||||||
| Mesothelae Mygalomorphae Araneomorphae |
ಜೇಡಗಳು (ವರ್ಗ ಅರೇನಿ) ಗಾಳಿಯಿಂದ ಆಮ್ಲಜನಕ ಪಡೆದು ಉಸಿರಾಡುವ ಕೆಲಿಸೆರಾಟಾ ಉಪಸಂತತಿಗೆ (ಸಬ್‌ಫೈಲಮ್) ಸೇರಿರುವ ಎಂಟು ಕಾಲುಗಳನ್ನು ಹೊಂದಿರುವ, ಮತ್ತು ಕಲಿಸರಾಗಳು ವಿಷವನ್ನು ಒಳಹಾಕುವ ವಿಷದ ಹಲ್ಲುಗಳಾಗಿ ಮಾರ್ಪಾಡಾಗಿರುವ ಸಂಧಿಪದಿಗಳು. ಜೇಡಗಳು ವಿಶ್ವಾದ್ಯಂತ ಅಂಟಾರ್ಕ್‌ಟಿಕದ ಹೊರತಾಗಿ ಎಲ್ಲ ಖಂಡಗಳಲ್ಲೂ ಕಂಡುಬರುತ್ತವೆ, ಮತ್ತು ಗಾಳಿ ಹಾಗೂ ಸಾಗರ ವಾಸದ ಹೊರತಾಗಿ ಹೆಚ್ಚುಕಡಮೆ ಪ್ರತಿಯೊಂದು ಜೀವಿ ಪರಿಸ್ಥಿತಿ ಆವರಣದಲ್ಲೂ ನೆಲೆಗೊಂಡಿವೆ. ೨೦೦೮ರ ವೇಳೆಗೆ, ವರ್ಗೀಕರಣ ವಿಜ್ಞಾನಿಗಳಿಂದ ಸುಮಾರು ೪೦,೦೦೦ ಜೇಡ ಜಾತಿಗಳು, ಮತ್ತು ೧೦೯ ಕುಟುಂಬಗಳನ್ನು ದಾಖಲಿಸಲಾಗಿದೆ.