ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈ
"ಜೆಹಾಂಗೀರ್ ಆರ್ಟ್ ಗ್ಯಾಲರಿ", ಮುಂಬೈನ ಒಂದು ಪ್ರತಿಷ್ಠಿತ ವರ್ಣಚಿತ್ರ, ಕಲಾಕಾರರ, ಶಿಲ್ಪ ಕಲಾವಿದರ, ಕಲಾರಸಿಕರ, ಹಾಗೂ ಪ್ರತಿಭಾವಂತ, ಉದಯೋನ್ಮುಖ ಕಲಾವಂತರ ಕನಸನ್ನು ನನಸಾಗಿಸುವ ಕಲಾಮಂದಿರ. ಹಳದಿ ಬಣ್ಣದ ಕಲ್ಲುಗಳಿಂದ ನಿರ್ಮಾಣಮಾಡಿರುವ, ಹೊರಗೆ ಚಿಕ್ಕದೆಂದು ತೋರಿಕೆಗೆ ಕಂಡರೂ, ಚೊಕ್ಕವಾಗಿ, ಸಮರ್ಪಕವಾಗಿ, ಅಚ್ಚುಕಟ್ಟಾಗಿ, ಸಜಾವಟ್ಟಾಗಿರುವ, ಈಗಾಗಲೇ ಪ್ರಸಿದ್ಧಿಪಡೆದ ಕಲಾನಿಪುಣರಿಗೆ, ಹಾಗೂ ಚಿತ್ರಕಲೆಯಲ್ಲಿ ಹೆಚ್ಚಿನದನ್ನು ಸಾಧಿಸಿ, ಅದನ್ನು ಕಲಾ-ರಸಿಕರಿಗೆ, ತೋರಿಸಬಯಸುವವರಿಗೆ, "ಕಲಾಕ್ಯಾನ್ ವಾಸ್," ನ್ನು ಮಾರಾಟಮಾಡುವರಿಗೆ, "ಕಲಾಕಾಶಿ" ಯ ಸ್ಥಾನವನ್ನು ಗಳಿಸಿದೆ.
೧೯೫೨ ರಲ್ಲಿ 'ಜೆಹಾಂಗೀರ್ ಆರ್ಟ್ ಗ್ಯಾಲರಿಯ ಸ್ಥಾಪನೆ' [ಬದಲಾಯಿಸಿ]
ಇಂತಹ, " ವಿಶ್ವವಿಖ್ಯಾತ-ಕಲಾಪ್ರದರ್ಶನ ಕೇಂದ್ರ ", ದ ಕಲ್ಪನೆ, ಬಂದಿದ್ದು, ಕನ್ನಡದಕಲಾತಪಸ್ವಿ, 'ಶ್ರೀ. ಕೆ. ಕೆ. ಹೆಬ್ಬಾರ್', ಹಾಗೂ, ಪ್ರಖಾತ ವಿಜ್ಞಾನಿ, ಮತ್ತು ಕಲಾವಿದ, 'ಶ್ರೀ.ಡಾ.ಹೋಮಿಭಾಭಾ, 'ರವರಿಗೆ. ಇವರಿಬ್ಬರ, ಆಸೆಯಕರೆಯಮೇರೆಗೆ 'ಜೆಹಾಂಗೀರ್ ಆರ್ಟ್ ಗ್ಯಾಲರಿ' ಅಸ್ತಿತ್ವಕ್ಕೆ ಬಂತು. 'ಸರ್. ಕವಾಸ್ ಜಿ ಜೆಹಾಂಗೀರ್,' ರವರ ಉದಾರ ಕಲಾಪೋಷಣೆಯ ಸಹಕಾರದಿಂದ, ೧೯೫೨ ರಲ್ಲಿ ಇದು ರೂಪುಗೊಂಡಿತು. ಈ ಪ್ರಖ್ಯಾತ ಕಲಾಮಂದಿರದ ನಿರ್ವಾಹಕರು, " ಬಾಂಬೆ ಆರ್ಟ್ ಸೊಸೈಟಿ,' ಯವರು. 'ಜೆಹಾಂಗೀರ್ ಆರ್ಟ್ಸ್ ಪ್ರದರ್ಶನಾಲಯ,' ದ ಪೂರ್ಣ ವೆಚ್ಚವನ್ನು 'ಸರ್ ಜೆಹಾಂಗೀರ್ ,' ರವರೇ ವಹಿಸಿಕೊಂಡರು. 'ಕಾಲಾಘೋಡ,' ಇಲಾಖೆಯಲ್ಲಿ ಸ್ಥಾಪಿಸಲಾದ ಈ " ಮಹಾಕಲಾ-ಪ್ರದರ್ಶನ ತಾಣ," ದಲ್ಲಿ ತಮ್ಮ ಕಲೆಯ ಪರಿಚಯಮಾಡಿಸಲು, ಆಸೆಯನ್ನು ಹೊತ್ತುಕೊಂಡು ಬರುವ ಕಲಾವಂತರಿಗೇನು ಕಡಿಮೆಯಿಲ್ಲ. ಪಕ್ಕದಲ್ಲೇ, ಸುಪ್ರಸಿದ್ಧ,"ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬೈ" ಇದೆ. "ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈ" ಮತ್ತು ೪ 'ಎಕ್ಸಿಬಿಶನ್ ಹಾಲ್,' ಗಳನ್ನು ಹೊಂದಿದೆ. 'ಭಾರಿ ಕಲೆಯ ಪೋಶಕ ಸಂಸ್ಥೆ,' ಯಾದ ಇಲ್ಲಿ, 'ಭಾರತೀಯ ಚಿತ್ರಕಲಾ ಪರಂಪರೆ'ಯನ್ನು ನಾವು ಕಾಣಬಹುದು.
'ಸಮೋವರ್ ಉಪಹಾರ ಗೃಹ' [ಬದಲಾಯಿಸಿ]
'ಸಮೋವರ್,' ಎಂಬ ಅತಿ-ಸುವ್ಯವಸ್ಥಿತ, ಅತ್ಯಂತ ಅಚ್ಚುಕಟ್ಟು, ಹಾಗೂ ಕಲಾವಂತರಿಗೆ, ಕುಳಿತು ಸಮಾಲೋಚಿಸಲು ಅನುಕೂಲಹೊಂದಿದ ಮೆಚ್ಚಿನ 'ಕೆಫೆ,' ಇದೆ. ' ೧೯೭೦ ರ ದಶಕದ,'ಸಮಾಜವಾದ,' ದ ಹೆಜ್ಜೆಯ ಗುರುತುಗಳನ್ನು ನಾವು ಇಲ್ಲಿ ಕಾಣಬಹುದು, ನಮಗೆ ಅತಿ ಹತ್ತಿರದಲ್ಲೇ, ಅತ್ಯಂತ ಸುಪ್ರಸಿದ್ಧ ಕಲಾವಿದನೊಬ್ಬನು/ನೊಬ್ಬಳು ಕುಳಿತು ಚಹಾಸೇವಿಸುತ್ತಿರುವ ದೃಷ್ಯ ಇಲ್ಲಿ ಸರ್ವೇಸಾಮಾನ್ಯ. ಇಲ್ಲಿ ಅಂತಹ ಪ್ರತಿಭಾನ್ವಿತ, ಕಲಾರಾಧಕರೆಲ್ಲಾ ಬಂದು, ತಮ್ಮ ಯೋಗದಾನವನ್ನು ಕೊಡುತ್ತಾರೆ. ಇಲ್ಲಿನ ಯಾವ 'ಕಲಾ-ಶಿಲ್ಪಪ್ರದರ್ಶನ,' ಗಳಿಗೂ, 'ಪ್ರವೇಶ ಶುಲ್ಕ'ವಿಲ್ಲ.
-