ಜೂಲ್ಸ್ ವೆರ್ನ್ ಎಟಿವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂತರರಾಷ್ಟ್ರೀಯ ಬಾಹ್ಯಾಕಾಶ ತಾಣವನ್ನು ಸಮೀಪಿಸುತ್ತಿರುವ ಜೂಲ್ಸ್ ವೆರ್ನ್ ಎಟಿವಿ
ಅಂತರರಾಷ್ಟ್ರೀಯ ಬಾಹ್ಯಾಕಾಶ ತಾಣವನ್ನು ಸಮೀಪಿಸುತ್ತಿರುವ ಜೂಲ್ಸ್ ವೆರ್ನ್ ಎಟಿವಿ

ಜೂಲ್ಸ್ ವೆರ್ನ್ ಎಟಿವಿ (Jules Verne Automated Transfer Vehicle) ಮಾರ್ಚ್ ೯, ೨೦೦೮ರಂದು ಉಡಾಯಿಸಲಾದ ಒಂದು ಸ್ವಯಂಚಾಲಿತ ಬಾಹ್ಯಾಕಾಶ ನೌಕೆ.ವೈಜ್ಞಾನಿಕ ಲೇಖಕ ಜೂಲ್ಸ್ ವರ್ನ್‍ಯವರ ಹೆಸರನ್ನು ಇದಕ್ಕೆ ಇಡಲಾಗಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ತಾಣಯುರೋಪಿನ ಸದಸ್ಯ ರಾಷ್ಟ್ರಗಳಿಂದ ನಿರ್ಮಿತವಾದ ಈ ನೌಕೆಯು ತಾಣಕ್ಕೆ ಇಂಧನ, ನೀರು, ಗಾಳಿ ಮತ್ತಿತರ ಸರಕನ್ನು ಸರಬರಾಜು ಮಾಡುವ ಕಾರ್ಯವನ್ನು ಸಾಧಿಸಿತು. ಅಲ್ಲದೆ ಈ ನೌಕೆಯನ್ನು ಉಪಯೋಗಿಸಿ ತಾಣವನ್ನು ಇನ್ನೂ ಎತ್ತರದ ಕಕ್ಷೆಗೆ ಒಯ್ಯಲಾಗುವುದು. ಇದು ಏಪ್ರಿಲ್ ೩, ೨೦೦೮ರಂದು ತಾಣವನ್ನು ತಲುಪಿ, ಮಾನವ ನಿರ್ದೇಶನವಿಲ್ಲದೆಯೆ ಅದರೊಂದಿಗೆ ಸೇರಿತು. ನಾಲ್ಕು ತಿಂಗಳ ಕಾಲ ಅಲ್ಲಿದ್ದು, ನಂತರ ಕಳಚಿ ಭೂಮಿಗೆ ಬೀಳುವಂತೆ ಇದನ್ನು ಯೋಜಿಸಲಾಗಿದೆ.

ಇದರ ಹೆಸರು ಫ್ರಾನ್ಸ್ ದೇಶದ ಕಾಲ್ಪನಿಕ ವಿಜ್ಞಾನ ಕಥೆಗಾರ ಜೂಲ್ಸ್ ವೆರ್ನ್ ಅವನ ಸ್ಮರಣಾರ್ಥವಾಗಿ ಇಡಲಾಗಿದೆ.